ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Vinay Bhat

mevinaybhat11@gmail.com

Articles
Kiccha Sudeep: ಮುಗಿಯದ ನಟ್ಟು-ಬೋಲ್ಟ್ ವಿವಾದ: ಕಿಚ್ಚನ ಹೇಳಿಕೆಗೆ ತಿರುಗೇಟು ಕೊಟ್ಟ ಡಿಕೆಶಿ

ಮುಗಿಯದ ನಟ್ಟು-ಬೋಲ್ಟ್ ವಿವಾದ: ಕಿಚ್ಚನ ಹೇಳಿಕೆಗೆ ಡಿಕೆಶಿ ತಿರುಗೇಟು

ಡಿಕೆ ಶಿವಕುಮಾರ್ ಅವರು ಕೆಲಸ ಸತ್ಯಗಳನ್ನು ತಿಳಿದುಕೊಂಡು ಮಾತನಾಡಿದ್ರೆ ನಮ್ಗೆ ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತಿತ್ತು. ಅವರ ಈ ಹೇಳಿಕೆ ಚಿತ್ರರಂಗದಲ್ಲಿ ಅನೇಕ ಮಂದಿಯ ಮನಸ್ಸಿಗೆ ನೋವಾಗಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಇದೀಗ ಡಿಕೆಶಿ ಸುದೀಪ್ ಅವರ ಈ ಹೇಳಿಕೆಗೆ ಮತ್ತೆ ತಿರುಗೇಟು ಕೊಟ್ಟಿದ್ದಾರೆ.

Bhagya Lakshmi Serial: ಪೂಜಾ-ಕಿಶನ್ ಮದುವೆ ಆಗಬಾರದೆಂದು ಉಪವಾಸ ಕೂತ ಮೀನಾಕ್ಷಿ

ಪೂಜಾ-ಕಿಶನ್ ಮದುವೆ ಆಗಬಾರದೆಂದು ಉಪವಾಸ ಕೂತ ಮೀನಾಕ್ಷಿ

ಭಾಗ್ಯ ಮನೆಯಲ್ಲೂ ಈ ಮದುವೆ ಬೇಡ ಎಂದು ಭಾಗ್ಯ ತಂದೆ ಪಟ್ಟುಹಿಡಿದು ನಿಂತಿದ್ದಾರೆ. ಈ ನಿಶ್ಚಿತಾರ್ಥ ಆರಂಭ ಆದಾಗಿನಿಂದ ನಮಗೆ ಅವಮಾನ, ಕೊಂಕು ಮಾತುಗಳು ಬರೀ ಇದೇ ನಡೆಯುತ್ತಿದೆ.. ಆ ಮನೆಯಲ್ಲಿ ತುಂಬಾ ಜನಕ್ಕೆ ಈ ಮದುವೆ ಆಗಬಾರದು ಅಂತಾನೆ ಇದೆ. ಈ ಮದುವೆ ಆಗೋದು ಯಾಕೊ ಸರಿ ಕಾಣುತ್ತಿಲ್ಲ.. ಇದನ್ನ ನಿಲ್ಲಿಸಿ ಬಿಡೋಣ ಎಂದು ಭಾಗ್ಯ ತಂದೆ ಹೇಳಿದ್ದಾರೆ.

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರಬಂದ ಸ್ಟಾರ್ ನಟಿ: ಕಾರಣವೇನು?

ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರಬಂದ ಸ್ಟಾರ್ ನಟಿ

ಕನ್ನಡ ಚಿತ್ರರಂಗದಿಂದ ದೂರವಾಗಿದ್ದ ಶ್ವೇತಾ ಅವರು ಕಳೆದ ವರ್ಷ ಲಕ್ಷ್ಮೀ ನಿವಾಸ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರ ಎದುರು ಬಂದಿದ್ದರು. ಈ ಸೀರಿಯಲ್‌ನಿಂದ ಉತ್ತಮ ಹೆಸರನ್ನು ಕೂಡ ಅವರು ಸಂಪಾದಿಸಿದ್ದರು. ಲಕ್ಷ್ಮೀ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಶ್ವೇತಾ ಅವರು ಈ ಧಾರಾವಾಹಿಯ ಕೇಂದ್ರಬಿಂದು ಎನ್ನುವಂತೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.

Kannada Serial TRP: ಟಿಆರ್​ಪಿಯಲ್ಲಿ ದಾಖಲೆ ಬರೆದ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ

TRPಯಲ್ಲಿ ದಾಖಲೆ ಬರೆದ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ನಾಯಕನಾಗಿ ತ್ರಿವಿಕ್ರಮ್ ಹಾಗೂ ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ. ಸಂಜೆ 7.30ಕ್ಕೆ ಪ್ರಸಾರವಾಗುತ್ತಿರುವ ಈ ಸೀರಿಯಲ್‌ ಇದೀಗ ಈವರೆಗೆ ಅತಿ ಹೆಚ್ಚು ಟಿವಿಆರ್‌ ದಾಖಲಿಸಿದೆ.

Dhanraj Achar: ದರ್ಶನ್ ಭೇಟಿ ಕೊಟ್ಟ ದೇವಾಲಯದಲ್ಲಿ ಧನರಾಜ್ ಆಚಾರ್ ಕುಟುಂಬ

ದರ್ಶನ್ ಭೇಟಿ ಕೊಟ್ಟ ದೇವಾಲಯದಲ್ಲಿ ಧನರಾಜ್ ಕುಟುಂಬ

ಧನರಾಜ್ ಆಚಾರ್ ತಮ್ಮ ಕುಟುಂಬದ ಜೊತೆ ವರ್ಷಕ್ಕೆ 30 ದಿನ ಮಾತ್ರ ತೆರೆದಿರುವ ಕೇರಳದ ಕೊಣ್ಣುರು ಸಮೀಪದಲ್ಲಿರುವ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ವಿಶೇಷ ಎಂದರೆ ಮೊನ್ನೆಯಷ್ಟೇ ಇದೇ ದೇವಸ್ಥಾನಕ್ಕೆ ಪತ್ನಿ ವಿಜಯಲಕ್ಷ್ಮೀ ಜೊತೆಗೆ ದರ್ಶನ್‌ ಕೂಡ ಬಂದು ಶಿವ ದೇಗುಲಕ್ಕೆ ತೆರಳಿ ಪೂಜೆ ಮಾಡಿಸಿದ್ದರು.

Akhila Pajimannu: ಮೂರೇ ವರ್ಷಕ್ಕೆ ಮುರಿದುಬಿತ್ತು ಅಖಿಲಾ ಪಜಿಮಣ್ಣು ದಾಂಪತ್ಯ: ಕನ್ನಡ ಕೋಗಿಲೆ ಗಾಯಕಿ ವಿಚ್ಛೇದನಕ್ಕೆ ಅರ್ಜಿ

ಮೂರೇ ವರ್ಷಕ್ಕೆ ಮುರಿದುಬಿತ್ತು ಅಖಿಲಾ ಪಜಿಮಣ್ಣು ದಾಂಪತ್ಯ

ಕನ್ನಡ ಕೋಗಿಲೆ ಸಿಂಗಿಂಗ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಗಾಯಕಿ ಅಖಿಲಾ ಪಜಿಮಣ್ಣು 2022ರಲ್ಲಿ ಧನಂಜಯ್ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆದರೀಗ ಈ ಸಂಬಂಧ ಮೂರೇ ವರ್ಷಕ್ಕೆ ಮುರಿದುಬಿದ್ದಿದೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್‌ ಶರ್ಮ ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು.

Kiccha Sudeep: ಕಮಲ್ ಹಾಸನ್ ವಿಚಾರದಲ್ಲಿ ಶಿವಣ್ಣನ ಟಾರ್ಗೆಟ್ ಮಾಡಿದ್ರು: ಕಿಚ್ಚ ಸುದೀಪ್

ಶಿವಣ್ಣನ ಟಾರ್ಗೆಟ್ ಮಾಡಿದ್ರು: ಕಿಚ್ಚ ಸುದೀಪ್

ಕಮಲ್ ಹಾಸನ್ ವಿಚಾರದಲ್ಲಿ ಶಿವಣ್ಣನ ಬಗ್ಗೆ ಎಲ್ಲರೂ ತುಂಬಾ ಮಾತನಾಡಿದ್ರು, ಅವರು ಹೇಳಬಹುದಿತ್ತು.. ಮಾತನಾಡಬಹುದಿತ್ತು ಅಂತೆಲ್ಲ ಹೇಳಿದ್ರು.. ಆದ್ರೆ ಶಿವಣ್ಣನಂತಹ ಮೃದುವಾದ ಮಗುವಿನಂತಹ ವ್ಯಕ್ತಿಯನ್ನು ನಾನು ಇದುವರೆಗೆ ನೋಡಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

Kiccha Sudeep: ಡಿಕೆ ಶಿವಕುಮಾರ್ ನಟ್ಟು-ಬೋಲ್ಟ್ ಹೇಳಿಕೆಗೆ ಖಡಕ್ ತಿರುಗೇಟು ಕೊಟ್ಟ ಕಿಚ್ಚ ಸುದೀಪ್

ಡಿಕೆಶಿ ನಟ್ಟು-ಬೋಲ್ಟ್ ಹೇಳಿಕೆಗೆ ಕಿಚ್ಚ ಸುದೀಪ್ ಖಡಕ್ ತಿರುಗೇಟು

ನಾವು ಓಡಾಡೊ ಕಾರುಗಳ ನಟ್ಟು-ಬೋಲ್ಟ್ ಕೂಡ ಕೈಟ್ ಇರಬೇಕು.. ಅದಕ್ಕೆ ಮೆಕಾನಿಕ್ ಹತ್ರ ಹೋಗಬೇಕು ಆ ಮೆಕಾನಿಕ್ಗೆ ಮಾತ್ರ ಕಾರಿನ ನಟ್ಟು-ಬೋಲ್ಟ್ ವಿಚಾರ ಗೊತ್ತಿರುತ್ತೆ.. ಹೀಗಾಗಿ ಚಿತ್ರರಂಗದ ವಿಚಾರ ಚಿತ್ರರಂಗದಲ್ಲಿ ಇರುವವರಿಗೆ ಮಾತ್ರ ಗೊತ್ತು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

Gold Suresh: ಗೋಲ್ಡ್ ಸುರೇಶ್ ವಂಚನೆ ಕೇಸ್​ಗೆ ಬಿಗ್ ಟ್ವಿಸ್ಟ್

ಗೋಲ್ಡ್ ಸುರೇಶ್ ವಂಚನೆ ಕೇಸ್​ಗೆ ಬಿಗ್ ಟ್ವಿಸ್ಟ್

ಮೈನುದ್ದೀನ್ ಎಂಬುವರಿಗೆ ಗೋಲ್ಡ್ ಸುರೇಶ್ ಕೇಬಲ್ ಚಾನೆಲ್‌ ಸೆಟಪ್‌ ಮಾಡಿಕೊಡಬೇಕಿತ್ತು. ಇದರ ಸಲುವಾಗಿ ನಡೆದ ವ್ಯವಹಾರದಲ್ಲಿ ಗೋಲ್ಡ್ ಸುರೇಶ್‌ ವಂಚನೆ ಎಸಗಿದ್ದಾರೆ, ತಮಗೆ ವಾಪಸ್ ಬರಬೇಕಿದ್ದ ಹಣವನ್ನ ಗೋಲ್ಡ್ ಸುರೇಶ್ ನೀಡಿಲ್ಲ ಎಂದು ಮೈನುದ್ಧೀನ್ ಆರೋಪಿಸಿದ್ದಾರೆ.

Bhagya Lakshmi Serial: ಆಗಿರೋದು ಎಂಗೇಜ್ಮೆಂಟ್ ಅಷ್ಟೆ, ಮದುವೆ ಆಗಲ್ಲ ಎಂದ ಆದೀಶ್ವರ್

ಆಗಿರೋದು ಎಂಗೇಜ್ಮೆಂಟ್ ಅಷ್ಟೆ, ಮದುವೆ ಆಗಲ್ಲ ಎಂದ ಆದೀಶ್ವರ್

ಎಲ್ಲರೂ ಹೊರಡಲು ಮುಂದಾದಾಗ ಆದೀಶ್ವರ್ ಭಾಗ್ಯ ಬಳಿ ಬಂದು, ತುಂಬಾ ಖುಷಿ ಪಡಬೇಡಿ.. ಆಗಿರೋದು ಎಂಗೇಜ್ಮೆಂಟ್ ಅಷ್ಟೇ ಮದುವೆ ಆಗುತ್ತೆ ಅನ್ನೋ ಆಸೆನ ಬಿಟ್ಟುಬಿಡಿ ಎಂದು ಹೇಳಿದ್ದಾನೆ. ಈ ಮಾತು ಕೇಳಿ ಭಾಗ್ಯಾಗೆ ಆಘಾತವಾಗಿದೆ.

Aishwarya Bapsure: ರಾಕೇಶ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ ಬಸ್ಪುರೆ

ರಾಕೇಶ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ ಬಸ್ಪುರೆ

Aishwarya Bapsure Marriage: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಯಾರೇ ನೀ ಮೋಹಿನಿ ನಟಿ ಐಶ್ವರ್ಯಾ ಬಸ್ಪುರೆ ರಾಕೇಶ್ ಎಂಬುವರನ್ನ ವಿವಾಹವಾಗಿದ್ದಾರೆ. ಈ ಜೋಡಿ ಬೆಂಗಳೂರಿನಲ್ಲಿ ಸಪ್ತಪದಿ ತುಳಿದಿದ್ದಾರೆ. ಇವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Mokshitha Pai: ಒಂದೇ ವೇದಿಕೆ ಮೇಲೆ ಜೊತೆಯಾಗಿ ಕಾಣಿಸಿಕೊಂಡ ಉಗ್ರಂ ಮಂಜು-ಮೋಕ್ಷಿತಾ ಪೈ

ಜೊತೆಯಾಗಿ ಕಾಣಿಸಿಕೊಂಡ ಉಗ್ರಂ ಮಂಜು-ಮೋಕ್ಷಿತಾ ಪೈ

ಮೋಕ್ಷಿತಾ ಪೈ ಅವರು ಫ್ಯಾಷನ್ ಶೋ ಒಂದಕ್ಕೆ ಜಡ್ಜ್ ಆಗಿ ಹೋಗಿದ್ದು, ಇದರ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋದ ವಿಶೇಷತೆ ಎಂದರೆ ಇದರಲ್ಲಿ ಉಗ್ರಂ ಮಂಜು ಕೂಡ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ನಡವೆ ದೊಡ್ಡ- ದೊಡ್ಡ ಗಲಾಟೆ ನಡೆಯುತ್ತಲೇ ಇತ್ತು.

Bhagya Lakshmi Serial: ಕೊನೆಗೂ ನಡೆಯಿತು ಪೂಜಾ-ಕಿಶನ್ ಎಂಗೇಜ್ಮೆಂಟ್: ಮದುವೆ ನಿಲ್ಲಿಸುವೆ ಎಂದ ಕನ್ನಿಕಾ ಗ್ಯಾಂಗ್

ಕೊನೆಗೂ ನಡೆಯಿತು ಪೂಜಾ-ಕಿಶನ್ ಎಂಗೇಜ್ಮೆಂಟ್

ಪೂಜಾ-ಕಿಶನ್ ಎಂಗೇಜ್ಮೆಂಟ್ ನಡೆದು ಹೋಗಿದೆ.. ಇನ್ನೇನು ಮದುವೆ ಕಾರ್ಯಗಳು ಶುರುವಾಗಲಿದೆ. ಆದರೆ, ಇದನ್ನು ತಪ್ಪಿಸಲು ಈಗ ಕನ್ನಿಕಾ-ಆದೀ ಗ್ಯಾಂಗ್ಗೆ ಮೀನಾಕ್ಷಿ ಕೂಡ ಬಂದಿದ್ದು, ಇವರು ಏನು ಮಾಡುತ್ತಾರೆ ಎಂಬುದು ನೋಡಬೇಕಿದೆ. ಮತ್ತೊಂದೆಡೆ ಮೀನಾಕ್ಷಿ ಈ ಮದುವೆ ಹೇಗೆ ಆಗುತ್ತೆ ಅಂತ ನಾನೂ ನೋಡ್ತೀನಿ ಎಂದು ಕೋಪದಲ್ಲಿ ಹೇಳಿರುವುದು ಭಾಗ್ಯ ತಂದೆಯ ಕಿವಿಗೆ ಬಿದ್ದಿದೆ.

Mahanati Season 2: ಮಹಾನಟಿ ಎರಡನೇ ಸೀಸನ್​ಗೆ ಆಯ್ಕೆ ಆದ ಸ್ಪರ್ಧಿಗಳು ಯಾರೆಲ್ಲ: ಇಲ್ಲಿದೆ ಲಿಸ್ಟ್

ಮಹಾನಟಿ ಎರಡನೇ ಸೀಸನ್​ಗೆ ಆಯ್ಕೆ ಆದ ಸ್ಪರ್ಧಿಗಳು ಯಾರೆಲ್ಲ

Mahanati Season 2: ಮಹಾನಟಿ ಶೋನ ಎರಡನೇ ಸೀಸನ್ ಫೈನಲ್ ರೌಂಡ್ನಲ್ಲಿ ಒಟ್ಟಾರೆಯಾಗಿ 16 ಸ್ಪರ್ಧಿಗಳು ಆಯ್ಕೆ ಆಗಿದ್ದಾರೆ. ಕಲೆಯನ್ನು ಹೊರಹಾಕಲಾಗದೆ, ಸರಿಯಾದ ವೇದಿಕೆ ಸಿಗದೇ ಒದ್ದಾಡುತ್ತಿರುವ ಅನೇಕ ಕಲಾವಿದರಿಗೆ ಈ ಶೋ ದಾರಿದೀಪವಾಗಲಿದೆ.

Karna Serial: ಕರ್ಣ ಧಾರಾವಾಹಿ ಪ್ರಸಾರವಾಗದ ಬಗ್ಗೆ ನಮ್ರತಾ ಗೌಡ ಹೇಳಿದ್ದೇನು?

ಕರ್ಣ ಧಾರಾವಾಹಿ ಪ್ರಸಾರವಾಗದ ಬಗ್ಗೆ ನಮ್ರತಾ ಗೌಡ ಹೇಳಿದ್ದೇನು?

ತನ್ನ ಪ್ರೊಮೋ ಮೂಲಕವೇ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿ ನೋಡಲು ವೀಕ್ಷಕರು ಕಾದು ಕುಳಿತಿದ್ದರು. ಆದರೆ ವೀಕ್ಷಕರು ಹಾಗೂ ಅಭಿಮಾನಿಗಳ ಆಸೆಗೆ ಈಗ ತಣ್ಣೀರು ಎರಚಿದಂತಾಗಿದೆ. ಇದರ ನಡುವೆ ಈ ಧಾರಾವಾಹಿಯ ಕಲಾವಿದರು ಅಭಿಮಾನಿಗಳ ಬಳಿ ಕ್ಷಮೆ ಕೇಳುತ್ತಿದ್ದಾರೆ. ನಮ್ರತಾ ಗೌಡ ಅವರು, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡು ವೀಕ್ಷಕರಿಗೆ ಕೈ ಮುಗಿದು ಕ್ಷಮೆ ಕೇಳಿದ್ದಾರೆ.

Karna Serial: ಲೈವ್ ಬಂದು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಕಿರಣ್ ರಾಜ್

ಲೈವ್ ಬಂದು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಕಿರಣ್ ರಾಜ್

ಡಾಕ್ಟರ್ ಕರ್ಣ ಆಗಿ ಕಿರಣ್ ರಾಜ್ ಅವರನ್ನು ಟಿವಿ ಪರೆದೆ ಮೇಲೆ ಮತ್ತೆ ನೋಡಲು ವೀಕ್ಷಕರು ಕಾದು ಕುಳಿತಿದ್ದರು. ಆದರೆ ವೀಕ್ಷಕರು ಹಾಗೂ ಅಭಿಮಾನಿಗಳ ಆಸೆಗೆ ಈಗ ತಣ್ಣೀರು ಎರಚಿದಂತಾಗಿದೆ. ಇದರ ಬೆನ್ನಲ್ಲೇ ಕಿರಣ್ ರಾಜ್ ಕೂಡ ಲೈವ್ ಬಂದು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

Bhagya Lakshmi Serial: ಪೂಜಾ-ಕಿಶನ್ ಎಂಗೇಜ್ಮೆಂಟ್​ಗೆ ಮತ್ತೊಂದು ಸಂಕಷ್ಟ: ಹೊಸ ಪಾತ್ರಧಾರಿ ಎಂಟ್ರಿ

ಪೂಜಾ-ಕಿಶನ್ ಎಂಗೇಜ್ಮೆಂಟ್​ಗೆ ಮತ್ತೊಂದು ಸಂಕಷ್ಟ

ಪೂಜಾ-ಕಿಶನ್ ಎಂಗೇಜ್ಮೆಂಟ್ ತಡೆಯಲು ಕನ್ನಿಕಾ-ಆದೀ ಮಾಡಿದ ಮಾಸ್ಟರ್ ಪ್ಲ್ಯಾನ್ ರಾಮ್ದಾಸ್ಗೆ ಗೊತ್ತಾಗಿ ಫ್ಲಾಫ್ ಆಗಿದೆ. ಬಳಿಕ ಎಂಗೇಜ್ಮೆಂಟ್ ದಿನ ಇನ್ನೇನು ಉಂಗುರ ಬದಲಾಯಿಸಬೇಕು ಎನ್ನುವಷ್ಟರಲ್ಲಿ ಮತ್ತೊಂದು ಹೊಸ ಪಾತ್ರ ಎಂಟ್ರಿ ಆಗಿದ್ದು, ಈ ಎಂಗೇಜ್ಮೆಂಟ್ ನಡೆಯಲ್ಲ ಎಂದು ಹೇಳಿದ್ದಾರೆ.

Karna Serial: ಕರ್ಣ ಧಾರಾವಾಹಿಗೆ ಸ್ಟೇ ಆರ್ಡರ್: ಭವ್ಯಾ ಗೌಡಾಗೆ ಎದುರಾಯ್ತು ಸಂಕಷ್ಟ

ಕರ್ಣ ಧಾರಾವಾಹಿಗೆ ಸ್ಟೇ ಆರ್ಡರ್: ಭವ್ಯಾ ಗೌಡಾಗೆ ಎದುರಾಯ್ತು ಸಂಕಷ್ಟ

ಕರ್ಣ ಧಾರಾವಾಹಿ ದಿಢೀರ್ ಟೆಲಿಕಾಸ್ಟ್ ಆಗದಿರಲು ಭವ್ಯಾ ಗೌಡ ಅವರೇ ಕಾರಣ ಎಂಬ ಮಾತು ಕೇಳಿಬಂದಿತ್ತು. ಭವ್ಯಾ ಅವರು ಕರ್ಣ ಸೀರಿಯಲ್ನಿಂದ ಹೊರನಡೆದಿದ್ದಾರೆ ಎಂಬ ಗಾಸಿಪ್ ಹಬ್ಬಿತು. ಇದೀಗ ಅಸಲಿ ವಿಚಾರ ತಿಳಿದುಬಂದಿದ್ದು, ಈ ಧಾರಾವಾಹಿ ಪ್ರಸಾರ ಕಾಣಬಾರದು ಎಂದು ಸ್ಟೇ ತರಲಾಗಿದೆ.

Karna Serial: ಕರ್ಣ ಧಾರಾವಾಹಿಯಿಂದ ದಿಢೀರ್ ಹೊರಬಂದ್ರಾ ಭವ್ಯಾ ಗೌಡ?: ಎಲ್ಲ ಪೋಸ್ಟ್ ಡಿಲೀಟ್

ಕರ್ಣ ಧಾರಾವಾಹಿಯಿಂದ ದಿಢೀರ್ ಹೊರಬಂದ್ರಾ ಭವ್ಯಾ ಗೌಡ?

ಭವ್ಯಾ ಗೌಡ ಅವರು ಕರ್ಣಾ ಧಾರಾವಾಹಿಯಿಂದ ದಿಢೀರ್ ಹೊರಬಂದಿದ್ದಾರೆ. ಇದಕ್ಕೆ ಪುಷ್ಠಿ ಎಂಬಂತಹ ಅನೇಕ ವಿಷಯಗಳು ಕೂಡ ಕಣ್ಣ ಮುಂದೆ ಕಾಣುತ್ತಿದೆ. ಭವ್ಯಾ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಕರ್ಣ ಧಾರಾವಾಹಿ ಕುರಿತ ಕೆಲ ಪೋಸ್ಟ್‌ಗಳನ್ನ ಹಂಚಿಕೊಂಡಿದ್ದರು. ಆದರೀಗ ಕರ್ಣಗೆ ಸಂಬಂಧಿಸಿದ ಪೋಸ್ಟ್‌ಗಳನ್ನೆಲ್ಲಾ ಭವ್ಯಾ ಡಿಲೀಟ್ ಮಾಡಿದ್ದಾರೆ.

Karna Serial: ವೀಕ್ಷಕರಿಗೆ ಶಾಕ್: ಇಂದು ಪ್ರಸಾರ ಕಾಣಲ್ಲ ಬಹುನಿರೀಕ್ಷಿತ ಕರ್ಣ ಧಾರಾವಾಹಿ: ಕಾರಣವೇನು?

ಇಂದು ಪ್ರಸಾರ ಕಾಣಲ್ಲ ಬಹುನಿರೀಕ್ಷಿತ ಕರ್ಣ ಧಾರಾವಾಹಿ

ಕರ್ಣನ ಆಗಮನಕ್ಕಾಗಿ ವೀಕ್ಷಕರು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಜೂನ್‌ 16 ರಿಂದ ರಾತ್ರಿ 8ಕ್ಕೆ ಕರ್ಣ ಬರಲಿದ್ದಾನೆ ಅಂತ ಅನೌನ್ಸ್ ಆದಮೇಲೆ ವೀಕ್ಷಕರು ಈ ದಿನಕ್ಕಾಗಿ ಕಾದು ಕುಳಿತಿದ್ದರು. ಆದರೆ, ಇಂದು ಈ ಧಾರಾವಾಹಿ ಪ್ರಸಾರ ಕಾಣುವುದಿಲ್ಲ ಎಂಬ ಶಾಕ್ ಅನ್ನು ಝೀ ಕನ್ನಡ ಅಭಿಮಾನಿಗಳಿಗೆ ನೀಡಿದೆ.

Anushree: ಮದುವೆ ಸುದ್ದಿ ಬೆನ್ನಲ್ಲೇ ಹೊಸ ದುಬಾರಿ ಕಾರು ಖರೀದಿಸಿದ ಅನುಶ್ರೀ

ಮದುವೆ ಸುದ್ದಿ ಬೆನ್ನಲ್ಲೇ ಹೊಸ ದುಬಾರಿ ಕಾರು ಖರೀದಿಸಿದ ಅನುಶ್ರೀ

2025 ರಲ್ಲಿ ಮದುವೆಯಾಗುತ್ತೇನೆ ಎಂದು ಅನುಶ್ರೀ ಹೇಳಿದ್ದಾರೆ. ಇದರ ಮಧ್ಯೆ ಅನುಶ್ರೀ ದುಬಾರಿ ಕಾರೊಂದನ್ನು ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಹೌದು, ಅನುಶ್ರೀ ಅವರು ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು ಖರೀದಿ ಮಾಡಿದ್ದಾರೆ.

Bhagya Lakshmi Serial: ಪೂಜಾ-ಕಿಶನ್ ಎಂಗೇಜ್ಮೆಂಟ್ ಕ್ಯಾನ್ಸಲ್?: ಸಕ್ಸಸ್ ಆಯ್ತು ಆದೀ-ಕನ್ನಿಕಾ ಪ್ಲ್ಯಾನ್?

ಪೂಜಾ-ಕಿಶನ್ ಎಂಗೇಜ್ಮೆಂಟ್ ಕ್ಯಾನ್ಸಲ್?

ಕನ್ನಿಕಾ ಆದೀ ಬಳಿ ಬಂದು, ಈ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡೋಣ, ಈ ಸಂಬಂಧ ಬೇಡ ಎಂದು ಅವರೇ ಬಂದು ಹೇಳ್ತಾರ ನೋಡು ಅಣ್ಣ, ಅ ಥರದ ಶಾಕ್ ಕೊಟ್ಟು ಬಂದಿದ್ದೇನೆ ಎಂದು ಹೇಳುತ್ತಾಳೆ. ಅತ್ತ ಭಾಗ್ಯ ಮನೆಯಲ್ಲಿ ಟೆನ್ಶನ್ ಶುರುವಾಗಿದೆ.

Sarigamapa: ಅಪ್ಪು ಸಮಾಧಿ ಮೇಲೆ ಟ್ರೋಫಿ ಇಟ್ಟು ಆಶೀರ್ವಾದ ಪಡೆದ ಸರಿಗಮಪ ವಿನ್ನರ್ ಶಿವಾನಿ ಸ್ವಾಮಿ

ಅಪ್ಪು ಸಮಾಧಿ ಮೇಲೆ ಟ್ರೋಫಿ ಇಟ್ಟು ಆಶೀರ್ವಾದ ಪಡೆದ ಶಿವಾನಿ

ಶಿವಾನಿ ಸ್ವಾಮಿ ಕಷ್ಟದಿಂದ ಮೇಲೆ ಬಂದವರು. ಅವರ ಪ್ರತಿಭೆಯನ್ನು ಗುರುತಿಸಿ ಝೀ ಕನ್ನಡ ಸರಿಗಮಪ ಶೋಗೆ ಅವಕಾಶ ನೀಡಿತು. ಈ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡು ವಿನ್ ಆದರು. ಇದೀಗ ವಿನ್ನರ್‌ ಆದ ಬಳಿಕ ಶಿವಾನಿ ಅವರು ಡಾ. ರಾಜ್‌ಕುಮಾರ್ ಸ್ಮಾರಕದಲ್ಲಿರುವ ಪವರ್ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಬಂದಿದ್ದಾರೆ.

Karna Serial: ಇಂದಿನಿಂದ ತ್ರಿಕೋನ ಪ್ರೇಮಕಥೆಯ ಬಹುನಿರೀಕ್ಷಿತ ಕರ್ಣ ಧಾರಾವಾಹಿ ಆರಂಭ

ಇಂದಿನಿಂದ ತ್ರಿಕೋನ ಪ್ರೇಮಕಥೆಯ ಕರ್ಣ ಧಾರಾವಾಹಿ ಆರಂಭ

ಝೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಹೊಸ ಕರ್ಣ ಧಾರಾವಾಹಿ ಶುರುವಾಗಲಿದೆ. ಈಗಾಗಲೇ ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿರುವ ಕರ್ಣ ಧಾರಾವಾಹಿ ಇಂದು ರಾತ್ರಿ 8 ಗಂಟೆಯಿಂದ ಪ್ರಸಾರ ಕಾಣಲಿದೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ ಕೇವಲ ಒಂದೇ ಒಂದು ಪ್ರೊಮೋ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿದೆ.