ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anusha Rai: ವಿಯಾಟ್ಮಂನಲ್ಲಿ ಬಿಗ್ ಬಾಸ್ ಬೆಡಗಿ ಅನುಷಾ ರೈ ಭರ್ಜರಿ ಮಸ್ತಿ: ಫೋಟೋ ನೋಡಿ

ಅನುಷಾ ರೈ ಫಾರಿನ್ ಟ್ರಿಪ್ ಹೋಗಿರುವುದು ವಿಯಾಟ್ಮಂಗೆ. ವಿಯಾಟ್ಮಂನ ಸುಂದರ ತಾಣಕ್ಕೆ ಇವರು ಭೇಟಿ ನೀಡಿ ಫೋಟೋ ತೆಗೆಸಿಕೊಂಡಿದ್ದಾರೆ. ಅನುಷಾ ಒಬ್ಬರೇ ಹೋಗಿರುವುದಿಲ್ಲ.. ರಜಿತ್ ಕಿಶನ್ ಫ್ಯಾಮಿಲಿ ಕೂಡ ಇಲ್ಲಿಗೆ ಟ್ರಿಪ್ ಹೋಗಿದ್ದು, ಅವರ ಜೊತೆ ಅನುಷಾ ಕಾಣಿಸಿಕೊಂಡಿದ್ದಾರೆ.

Anusha Rai
1/5

ಬಿಗ್ ಬಾಸ್​ ಕನ್ನಡ ಸೀಸನ್ 11 ಮುಗಿದ ಬಳಿಕ ಬಹುತೇಕ ಹೆಚ್ಚಿನ ಸ್ಪರ್ಧಿಗಳು ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಹೆಚ್ಚಿನವರು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದರೆ ಅನುಷಾ ರೈ ಮಾತ್ರ ಹೆಚ್ಚೇನು ಕಾಣಿಸಿಕೊಂಡಿಲ್ಲ. ಒಮ್ಮೆ ಮಹಾಕುಂಭ ಮೇಳಕ್ಕೆ ತೆರಳಿ, ರಾಮ ಜನ್ಮ ಭೂಮಿ ಅಯೋಧ್ಯೆಗೆ ತೆರಳಿ, ರಾಮಲಲ್ಲಾ ದರ್ಶನ ಪಡೆದು ಬಂದಿದ್ದರು.

2/5

ಇತ್ತೀಚೆಗಷ್ಟೆ ಬಿಗ್ ಬಾಸ್ ರಂಜಿತ್- ಮಾನಸ ಅವರ ಮದುವೆಯಲ್ಲಿ ಮುದ್ದಾಗಿ ಅನುಷಾ ಕಾಣಿಸಿಕೊಂಡಿದ್ದರು. ಇದೀಗ ಅನುಷಾ ರೈ ವಿದೇಶಿ ಪ್ರವಾಸ ಮಾಡಿದ್ದಾರೆ. ಇದರ ಫೋಟೊ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.

3/5

ಅನುಷಾ ರೈ ಫಾರಿನ್ ಟ್ರಿಪ್ ಹೋಗಿರುವುದು ವಿಯಾಟ್ಮಂಗೆ. ವಿಯಾಟ್ಮಂನ ಸುಂದರ ತಾಣಕ್ಕೆ ಇವರು ಭೇಟಿ ನೀಡಿ ಫೋಟೋ ತೆಗೆಸಿಕೊಂಡಿದ್ದಾರೆ. ಅನುಷಾ ಒಬ್ಬರೇ ಹೋಗಿರುವುದಿಲ್ಲ.. ರಜಿತ್ ಕಿಶನ್ ಫ್ಯಾಮಿಲಿ ಕೂಡ ಇಲ್ಲಿಗೆ ಟ್ರಿಪ್ ಹೋಗಿದ್ದು, ಅವರ ಜೊತೆ ಅನುಷಾ ಕಾಣಿಸಿಕೊಂಡಿದ್ದಾರೆ.

4/5

ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ಗುರುತಿಸಿಕೊಂಡಿರುವ ಅನುಷಾ ರೈ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಸೀರಿಯಲ್​ಗಳಲ್ಲಿ ಅಭಿನಯಿಸಿದ್ದಾರೆ. 2017ರಲ್ಲಿ ಬಿಡುಗಡೆಯಾದ ಮಹಾನುಭಾವರು ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟರು. ಆ ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.

5/5

ಸದ್ಯ ಅನುಷಾ ರೈ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೋಮಲ್ ಕುಮಾರ್ ಮತ್ತು ಮೇಘನಾ ರಾಜ್ ಜೊತೆಗೆ ಅನುಷಾ ರೈ, ಸಿರಿ ಸಂಗೀತ ಬಾರ್ ಆಂಡ್ ರೆಸ್ಟೋರೆಂಟ್ ಅನ್ನೋ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದು ಈ ವರ್ಷದಲ್ಲಿ ಅವರ ಮೊದಲ ಸಿನಿಮಾ ಅಂತೆ.