ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Malaika Arora: ವಯಸ್ಸು 52...ಪತಿಗೆ ಡಿವೋರ್ಸ್‌, ಬಾಯ್‌ಫ್ರೆಂಡ್‌ ಜೊತೆ ಬ್ರೇಕ್‌ ಅಪ್‌- ಈಗ ಎರಡನೇ ಮದ್ವೆಗೆ ಪ್ಲ್ಯಾನ್‌!

Malaika Arora: ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ತಮ್ಮ ವಿಶೇಷ ಅಭಿನಯದ ಜೊತೆಗೆ ಗ್ಲಾಮರ್‌ನಿಂದ ಹೆಚ್ಚು ಪ್ರಸಿದ್ಧರಾದ ಇವರು ಸಿನಿಮಾ ಮಾತ್ರವಲ್ಲದೆ ರಿಯಾಲಿಟಿ ಶೋ ಮೂಲಕವು ಖ್ಯಾತಿ ಪಡೆದಿದ್ದರು. ಇದೀಗ ನಟಿ ಮಲೈಕಾ ಅವರು ತಮ್ಮ 52ನೇ ವಯಸ್ಸಿಗೆ ಎರಡನೇ ವಿವಾಹವಾಗುತ್ತಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

1/5

ನಟಿ ಮಲೈಕಾ ಅವರು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದು ತಮ್ಮ ಎರಡನೇ ವಿವಾಹದ ಬಗ್ಗೆ ಉಂಟಾದ ಅನೇಕ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ. ಮಲೈಕಾ ಅರೋರ ಅವರು ತಮ್ಮ 25ನೇ ವಯಸ್ಸಿನಲ್ಲಿ (1998) ನಟ-ನಿರ್ಮಾಪಕ ಅರ್ಬಾಜ್ ಖಾನ್ ಅವರೊಂದಿಗೆ ಪ್ರೇಮ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಬ್ಬರಿಗೂ ಅರ್ಹಾನ್ ಖಾನ್ ಹೆಸರಿನ ಮಗ ಕೂಡ ಇದ್ದಾರೆ.

2/5

ನಟಿ ಮಲೈಕಾ ಬಹಳ ಚಿಕ್ಕ ವಯಸ್ಸಿನಲ್ಲಿ ಮದುವೆಯಾದ ಕಾರಣ ಬಳಿಕ ಅಷ್ಟಾಗಿ ಸಿನಿಮಾದಲ್ಲಿ ಮಿಂಚಲು ಅವರಿಗೆ ಸಾಧ್ಯ ವಾಗಲಿಲ್ಲ ಎನ್ನಬಹುದು. ಹಾಗಿದ್ದರೂ ಅವರು ತಮ್ಮ ಪತಿಯ ಜೊತೆಗೆ ದಾಂಪತ್ಯ ಜೀವನದಲ್ಲಿ ಖುಷಿ ಕಂಡಿದ್ದರು. 18 ವರ್ಷಗಳ ಕಾಲ ಒಟ್ಟಿಗೆ ಇದ್ದ ಇವರು ಬಳಿಕ ವೈಮ ನಸ್ಸು ಮೂಡಿದ್ದ ಕಾರಣ 2016 ರಲ್ಲಿ ವಿಚ್ಛೇದನವನ್ನು ಪಡೆದು ದೂರಾದರು.

3/5

2023 ರಲ್ಲಿ ಅರ್ಬಾಜ್ ಖಾನ್ ಅವರು ಮೇಕಪ್ ಕಲಾವಿದೆ ಶುರಾ ಖಾನ್ ಅವರನ್ನು ಮರು ಮದುವೆ ಯಾಗಿದ್ದಾರೆ. ಆದರೆ ಮಲೈಕಾ ಮಾತ್ರವೇ ವಿಚ್ಛೇದನದ ಬಳಿಕ ಒಂಟಿಯಾಗಿ ಜೀವನ ಕಳೆದಿದ್ದಾರೆ. ಈ ಮೂಲಕ ಅವರು ತನಗಿಂತ 12 ವರ್ಷ ಕಿರಿಯ ನಟ ಅರ್ಜುನ್ ಕಪೂರ್ ಅವರೊಂದಿಗೆ ಆರು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು ಎಂದು ಸುದ್ದಿಯಾಗಿತ್ತು. ಆದರೆ ಸಿಂಗಮ್ ಅಗೈನ್ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಅವರು ಒಂಟಿಯಾಗಿದ್ದೇನೆ ಎಂಬುದನ್ನು ತಿಳಿಸಿದ್ದರು.

4/5

ಮಲೈಕಾ ಅವರು ತಮ್ಮ ಮರುವಿವಾಹದ ಬಗ್ಗೆ ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿ, ನಾನು ಎಲ್ಲರಲ್ಲಿಯೂ ಒಂದು ಮನವಿ ಮಾಡುತ್ತೇನೆ, ಮದುವೆಯಾಗಲು ನೀವು ಸರಿಯಾಗಿ ಸಮಯ ತೆಗೆದುಕೊಳ್ಳಿ. ಇತರರ ಒತ್ತಡಕ್ಕೆ ಒಳಗಾಗಿ ಬೇಗ ಮದುವೆಯಾಗುವ ಅಗತ್ಯವಿಲ್ಲ. ಜೀವನವನ್ನು ಮೊದಲು ಅರ್ಥಮಾಡಿಕೊಳ್ಳಿ ಬಳಿಕ ನಿಮ್ಮ ಮನಸ್ಸಿಗೆ ಒಪ್ಪುವವರನ್ನು ಮದುವೆಯಾಗಿ ಎಂದಿದ್ದಾರೆ.

5/5

ಬಳಿಕ ಮರುವಿವಾಹದ ಬಗ್ಗೆ ಸಂದರ್ಶಕಿ ಪ್ರಶ್ನೆ ಮಾಡಿದ್ದು ಅದಕ್ಕೆ ನಟಿ ಮಲೈಕಾ ಉತ್ತರಿಸಿ, ಮರು ವಿವಾಹದ ಯೋಚನೆ ಸದ್ಯಕ್ಕೆ ಇಲ್ಲ. ಎಂದಿಗೂ ಕೇಳಬೇಡಿ, ನಾನು ಪ್ರೀತಿಯನ್ನು ನಂಬುತ್ತೇನೆ. ಆದ್ದರಿಂದ ಮದುವೆ ವಿಚಾರ ಸದ್ಯಕ್ಕೆ ನನ್ನ ಯೋಚನೆಯಲ್ಲಿ ಇಲ್ಲ ಎಂದು ಅವರು ಹೇಳಿದರು. ನಟಿ ಮಲೈಕಾ ಅವರು ಅರ್ಜುನ್ ಕಪೂರ್ ಜೊತೆ ಬ್ರೇಕಪ್ ಆದ ನಂತರ ಸಿಂಗಲ್ ಎಂದು ತಮ್ಮ ಇನ್‌ ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ.