ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cannes 2025: ಕಾನ್ಸ್‌ ಫಿಲ್ಮ್ ಫೆಸ್ಟಿವಲ್‌ಗೆ ನಟಿ ಆಲಿಯಾ ಭಟ್ ಗ್ರ್ಯಾಂಡ್ ಎಂಟ್ರಿ

2025ರ ಕಾನ್ಸ್‌ ಚಲನಚಿತ್ರೋತ್ಸವ ಮೇ 24ರಂದು ಕೊನೆಗೊಂಡಿದ್ದು, ಈ ಬಾರಿ ಬಾಲಿವುಡ್​​, ಹಾಲಿವುಡ್ ಅನೇಕ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅಂತೆಯೇ ಬಾಲಿವುಡ್ ನಟಿ ಆಲಿಯಾ ಭಟ್ ‌ಕೂಡ ಕಾಣಿಸಿಕೊಂಡಿದ್ದಾರೆ. ನಟಿ ಆಲಿಯಾ ಭಟ್ ಎರಡನೇ ಬಾರಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದು ಮಾಡರ್ನ್ ಲುಕ್ ಮೂಲಕ ಕಂಗೊಳಿಸಿದ್ದಾರೆ.

Cannes 2025_ Alia Bhatt
1/5

78ನೇ ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ನಟಿ ಆಲಿಯಾ ಭಟ್ ಗುಸ್ಸಿ ವಿನ್ಯಾಸಗೊಳಿಸಿದ ಡ್ರೆಸ್‌ನಲ್ಲಿ ಕ್ಯೂಟಾಗಿ ಕಾಣಿಸಿಕೊಂಡಿದ್ದಾರೆ. ಅವರು ಬ್ರೇಲೆಟ್ ಸ್ಕರ್ಟ್ ಮತ್ತು ಶಾಲು ಧರಿಸಿ ವಿಭಿನ್ನವಾಗಿ ಮಿಂಚಿದ್ದಾರೆ. ಸಿಲೂ ಯೆಟ್ ಮಾದರಿಯ ವಿಶಿಷ್ಟ ಸ್ಕರ್ಟ್‌ಗೆ ಸಾಕಷ್ಟು ಸ್ಟೋನ್ ವರ್ಕ್ ಮಾಡಲಾಗಿದ್ದು, ನಟಿ ಆಲಿಯಾ ಭಟ್ ಲುಕ್‌ಗೆ ಹೊಸ ಮೆರುಗು ನೀಡಿದಂತಾಗಿದೆ.

2/5

78ನೇ ಕಾನ್ಸ್‌ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನ ಸಮಾರೋಪ ಸಮಾರಂಭಕ್ಕಾಗಿ ಅನೇಕ ಗಣ್ಯರು ಆಗಮಿಸಿದ್ದರು. ಇದರಲ್ಲಿ ನಟಿ ಆಲಿಯಾ ಭಟ್ ವಿಭಿನ್ನವಾಗಿ ಹೈಲೈಟ್ ಆಗಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಆಲಿಯಾ ಭಟ್ ಲುಕ್ ಅನೇಕ ಜನರ ಗಮನ ಸೆಳೆಯುವಂತೆ ಮಾಡಿದೆ. ಸಂಪೂರ್ಣವಾಗಿ ಜಿಜಿ ಮೊನೊ ಗ್ರಾಮ್ ಕಸೂತಿಯೊಂದಿಗೆ ಮಾಡಲಾದ ಈ ಡ್ರೆಸ್ ಬಹಳ ದುಬಾರಿ ಮೊತ್ತಾದ್ದಾಗಿದೆ.

3/5

ಲೋರಿಯಲ್ ಪ್ಯಾರಿಸ್‌ನ ಜಾಗತಿಕ ಬ್ರ್ಯಾಂಡ್‌ನ ಅಂಬಾಸಿಡರ್ ಆಗಿ ನಟಿ ಆಲಿಯಾ ಭಟ್ ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದು, ಈ ಲುಕ್ ಅವರ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವವನ್ನೇ ಹೈಲೆಟ್ ಮಾಡಿದೆ. ಸಿಂಪಲ್ ಮೇಕಪ್ ಹಾಗೂ ಫ್ರೀ ಹೇರ್ ಸ್ಟೈಲ್‌ನಿಂದ ನಟಿ ಆಲಿಯಾ ಭಟ್ ನ್ಯಾಚುರಲ್ ಆಗಿ ಕಂಡಿದ್ದಾರೆ. ಗುಸ್ಸಿಯ ಈ ಕಸ್ಟಮ್ ವಿನ್ಯಾಸವು ಭಾರತದ ಶ್ರೀಮಂತ ಪರಂಪರೆ ಮತ್ತು ಕರಕುಶಲತೆಯಿಂದ ಸ್ಫೂರ್ತಿ ಪಡೆದು ಮಾಡಲಾಗಿದ್ದು, ಈ ಆಲಿಯಾ ಭಟ್ ಅಪ್ಸರೆಯಂತೆ ಕಂಗೊಳಿಸಿದ್ದಾರೆ‌.

4/5

ಆಲಿಯಾ ಕಾನ್ಸ್‌ ಫೆಸ್ಟಿವಲ್ ಜತೆಗೆ ಫ್ರಾನ್ಸ್‌ನ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಫೋಟೊ ಕೂಡ ವೈರಲ್ ಆಗಿದೆ. ಆಲಿಯಾ ಫ್ರೆಂಚ್ ರಿವೇರಿಯಾಕ್ಕೆ ಭೇಟಿ ನೀಡಿದ್ದು, ಈ ವೇಳೆ ಹಳದಿ ಬಣ್ಣದ ಸ್ಕರ್ಟ್ ಧರಿಸಿದ್ದರು. ತಲೆಗೆ ಡಿಸೈನ್ ಸ್ಕಾರ್ಫ್, ಬ್ಲ್ಯಾಕ್ ಕೂಲಿಂಗ್ ಗ್ಲಾಸ್ ಧರಿಸಿದ್ದ ಇವರ ಮಾಡರ್ನ್ ಲುಕ್ ಅಭಿಮಾನಿಗಳನ್ನು ಮನ ಸೋಲುವಂತೆ ಮಾಡಿದೆ. ಸಿಂಪಲ್ ಮೇಕಪ್‌ಗೆ ಡಾರ್ಕ್ ಲಿಪ್ ಸ್ಟಿಕ್ ಹಾಕಿದ್ದು, ಅವರ ಮಾಡರ್ನ್ ಲುಕ್ ಸಖತ್ ಕಿಕ್ ನೀಡುವಂತಿದೆ‌.

5/5

ಕಾನ್ಸ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸೆಲೆಬ್ರಿಟಿಗಳು, ಚಲನಚಿತ್ರ ನಿರ್ಮಾಪಕರು, ಉದ್ಯಮಿಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳ ಸಂಗಮವಾಗಿದೆ. ನಟಿ ಐಶ್ವರ್ಯಾ ರೈ ಬಚ್ಚನ್, ಪಾಯಲ್ ಕಪಾಡಿಯಾ, ಕರಣ್ ಜೋಹರ್, ನೀರಜ್ ಘಯ್ವಾನ್, ಜಾಹ್ನವಿ ಕಪೂರ್, ಗುನೀತ್ ಮೊಂಗಾ, ನಿತಾಂಶಿ ಗೋಯೆಲ್, ಇಶಾನ್ ಖಟ್ಟರ್, ಛಾಲ್ಯತ್ ಖಟ್ಟರ್, ಛಾಲಿ ಪಾಸ್‌ಲಿ ನಿಶಾರ್ ಪರೇಖ್, ಅದಿತಿ ರಾವ್ ಹೈದರಿ, ತಿಲೋತಮಾ ಶೋಮ್, ಪಲ್ಲವಿ ಜೋಶಿ, ಜಾಕ್ವೆಲಿನ್ ಫೆರ್ನಾಂಡಿಸ್, ಊರ್ವಶಿ ರೌಟೇಲಾ, ಮೌನಿ ರಾಯ್, ತಾನಿಯಾ ಶ್ರಾಫ್, ಪಾರುಲ್ ಗುಲಾಟಿ ಸೇರಿದಂತೆ ಅನೇಕ ತಾರೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.