Disha Patani: ವೈಟ್ ಡೀಪ್ ನೆಕ್ ಡ್ರೆಸ್‌ನಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ಹಾಟ್ ಲುಕ್!
Disha Patani Look: 'ಎಂ. ಎಸ್. ಧೋನಿ: ಅನ್ ಟೋಲ್ಡ್ ಸ್ಟೋರಿ', 'ಭಾಘಿ', 'ಕಲ್ಕಿ ' ಸಿನಿಮಾ ದಿಂದ ಖ್ಯಾತಿ ಪಡೆದ ನಟಿ ದಿಶಾ ಪಟಾನಿ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಮಾಡರ್ನ್ ಹಾಗೂ ಸ್ಟೈಲಿಶ್ ಲುಖ್ ಅನ್ನು ಹೆಚ್ಚು ಇಷ್ಟ ಪಡುವ ನಟಿ ದಿಶಾ ಪಟಾನಿ ಅವರು ಬಾಲಿವುಡ್ ಹಾಗೂ ತೆಲುಗು ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಆಗಾಗ ಫೋಟೊ ಶೂಟ್ ಮಾಡಿಸಿಕೊಳ್ಳುವುದನ್ನು ಹೆಚ್ಚು ಇಷ್ಟ ಪಡುವ ಇವರು ಈ ಬಾರಿ ಹೊಸ ಲುಕ್ ನಲ್ಲಿ ಅಭಿಮಾನಿಗಳ ಮನ ಸೆಳೆಯುತ್ತಿದ್ದಾರೆ.
2015ರಲ್ಲಿ ತೆರೆಕಂಡ ತೆಲುಗಿನ ಲೋಫರ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಇವರು ಅನೇಕ ದೊಡ್ಡ ನಟರ ಜೊತೆಗೆ ತೆರೆ ಹಂಚಿಕೊಂಡು ಅಪಾರ ಅಭಿ ಮಾನಿಗಳ ಮನಗೆದ್ದಿದ್ದಾರೆ. ನೋಡಲು ಮಾಡರ್ನ್ ಆಗಿರುವ ಇವರು ವಿಭಿನ್ನ ಮಾದರಿ ಫೋಟೊ ಶೂಟ್ ಮಾಡಿಸಿಕೊಳ್ಳುವ ಮೂಲವು ಹೆಚ್ಚು ಫೇಮಸ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಹಳ ಆ್ಯಕ್ಟಿವ್ ಆಗಿರುವ ನಟಿ ದಿಶಾ ಪಟಾನಿ ಅವರು ಫೋಟೊ ಶೂಟ್ ಮಾಡಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಪ್ರವಾಸಕ್ಕೆ ಹೋದಾಗ ಇತರ ಸಿನಿಮಾ ಸಂಬಂಧಿತ ಕಾರ್ಯಕ್ರಮಕ್ಕೆ ಹೋಗುವಾಗ ಫೋಟೊ ಶೂಟ್ ಮಾಡಿಸಿಕೊಳ್ಳುವುದು ಇತ್ಯಾದಿ ಯನ್ನು ನಟಿ ದಿಶಾ ಅವರು ಆಗಾಗ ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ವೈಟ್ ಕಲರ್ (ಶ್ವೇತ ವರ್ಣದ) ಥೀಂ ನಲ್ಲಿ ಕಾಣಿಸಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ನಟಿ ದಿಶಾ ಪಟಾನಿ ಅವರು ವೈಟ್ ಕಲರ್ ಕಾರ್ಸೆಟ್ ವಿನ್ಯಾಸದ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಕಂಡಿದ್ದಾರೆ. ಈ ಡ್ರೆಸ್ ನ ಮೇಲ್ಭಾಗವನ್ನು ಕಾರ್ಸೆಟ್‌ನಂತೆ ವಿನ್ಯಾಸಗೊಳಿಸಲಾಗಿದ್ದು ನಟಿ ದಿಶಾ ಅವರು ಯಂಗ್ ಲುಕ್ ನಿಂದ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ವೈಟ್ ಕಲರ್ ಲೇಯರ್ಡ್ ಬಟ್ಟೆಯಿಂದ ಈ ಡ್ರೆಸ್ ತಯಾರಿಸಿದ್ದು ಇದು ಇತ್ತೀಚಿನ ಟ್ರೆಂಡಿ ಡ್ರೆಸ್ ಆಗಿದೆ. ಸದ್ಯ ಅವರ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆದ ಫೋಟೊದಲ್ಲಿ ನಟಿ ದಿಶಾ ಅವರು ಡೀಪ್ ನೆಕ್ ಹೊಂದಿದ್ದ ವೈಟ್ ಕಲರ್ ಸ್ಟೈಲಿಶ್ ಲೇಸ್ ವಿನ್ಯಾಸದ ಕಾರ್ಸೆಟ್ ಗೌನ್ ನಲ್ಲಿ ಬೋಲ್ಡ್ ಆಗಿ ಕಂಡಿದ್ದಾರೆ. ಸಿಂಪಲ್ ಮೇಕಪ್ , ಶೈನಿಂಗ್ ಲಿಪ್ ಸ್ಟಿಕ್ ಹಾಗೂ ಬನ್ ಮಾದರಿಯ ಕೇಶ ವಿನ್ಯಾಸವು ನಟಿ ದಿಶಾ ಅವರ ಗ್ಲಾಮರಸ್ ಲುಕ್ ಗೆ ಹೊಸ ಮೆರುಗು ನೀಡಿದೆ. ಇದರಲ್ಲಿ ಲೇಸ್ ವಿನ್ಯಾಸವಿದ್ದ ಕಾರಣ ದಿಶಾ ಅವರು ಈ ಡ್ರೆಸ್ ನಲ್ಲಿ ಸೆಕ್ಸಿ ಲುಕ್ ನಲ್ಲಿ ನೆಟ್ಟಿಗರ ಗಮನ ಸೆಳೆದಿದ್ದು ಇವರ ಫೋಟೊಗಳು ಇಂಟರ್ನೆಟ್ ನಲ್ಲಿ ಸಂಚಲನ ಉಂಟುಮಾಡುತ್ತಿದೆ.
ನಟಿ ದಿಶಾ ಪಟಾನಿ ಅವರು ಒಂದು ಫೋಟೊದಲ್ಲಿ ವಿಭಿನ್ನವಾಗಿ ಪೋಸ್ ನೀಡಿದ್ದು ಅವರ ಮಾಡೆಲಿಂಗ್ ಸ್ಟೈಲಿಶ್ ಲುಕ್ ಅಭಿಮಾನಿಗಳ ಮನಕದಿಯುವಂತಿದೆ. ಇವರು ಈ ಫೋಟೊ ಶೂಟ್ ಅನ್ನು ಬ್ಯಾಕ್ ಗ್ರೌಂಡ್ ಥೀಂ ನಲ್ಲಿ ಕೂಡ ಮಾಡಿದ್ದು ಅವರ ಎಕ್ಸ್ ಪ್ರೆಶನ್ ಲುಕ್ ಗಳು ಫೋಟೊ ದಲ್ಲಿ ಸ್ಟೈಲಿಶ್ ಮಾರ್ಡನ್ ತರ ಕಾಣುತ್ತಿದೆ. ಲೈಟ್ ಪಿಂಕ್ ಬ್ಯಾಕ್ ಗ್ರೌಂಡ್ ಥೀಂನಲ್ಲಿ ನಟಿ ದಿಶಾ ಅವರು ಬೋಲ್ಡ್ ಲುಕ್ ನಿಂದಾಗಿ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.
ಉತ್ತರ ಪ್ರದೇಶದ ಬರೇಲಿ ಮೂಲದವರಾದ ನಟಿ ದಿಶಾ ಪಟಾನಿ ಅವರು ಲಕ್ನೋದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ನ 2 ನೇ ವರ್ಷದಲ್ಲಿ ಪದವಿ ಮಾಡುತ್ತಿರುವಾಗಲೇ ಅವರಿಗೆ ಪಾಂಡ್ಸ್ ಫೆಮಿನಾ ಮಿಸ್ ಇಂಡಿಯಾ ಇಂದೋರ್ 2013ರ ಮೊದಲ ರನ್ನರ್ ಅಪ್ ಆಗಿ ಪ್ರಸಿದ್ಧಿ ಪಡೆದಿದ್ದರು. ಈ ಮೂಲಕ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ದೊರಕಿಸಿ ಕೊಟ್ಟಿದೆ. ಅವರ ನಟನೆಯ ಕಲ್ಕಿ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಕಲ್ಕಿ ಪಾರ್ಟ್ 2 ನಲ್ಲಿಯೂ ಇವರು ಅಭಿನಯಿಸಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.