ಫೋಟೊದಲ್ಲಿರುವ ತಮಿಳು ಸೂಪರ್ ಸ್ಟಾರ್ ಯಾರೆಂದು ಗುರುತಿಸಿ
ಪ್ರತಿಯೊಬ್ಬರಿಗೂ ಬಾಲ್ಯ ಜೀವನ ಸದಾ ನೆನಪುಳಿಯುವಂತದ್ದು. ಅದೇ ರೀತಿ ಸ್ಕ್ರೀನ್ ಮೇಲೆ ಮಾಸ್ ಆಗಿ ಫೈಟ್ ಮಾಡುವ ಸ್ಟಾರ್ ಸೆಲೆಬ್ರಿಟಿಗಳು ಕೂಡ ತಮ್ಮ ಬಾಲ್ಯದಲ್ಲಿ ಸಾಮಾನ್ಯ ಮಕ್ಕಳಂತೆ ಪೋಸ್ ನೀಡಿದ್ದ ಫೋಟೊಗಳು ವೈರಲ್ ಆಗುತ್ತಿರುತ್ತವೆ. ಈ ನಿಟ್ಟಿನಲ್ಲಿ ತಮಿಳಿನ ಸೂಪರ್ ಸ್ಟಾರ್ ನಟರೊಬ್ಬರ ಅಪರೂಪದ ಬಾಲ್ಯದ ಫೋಟೊ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾಲಿವುಡ್‌ನ ಸೂಪರ್ ಸ್ಟಾರ್ ಅಜಿತ್ ಅವರ ಬಾಲ್ಯದ ಫೋಟೊಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ.
ಸೆಲೆಬ್ರಿಟಿಗಳ ಫೋಟೊ ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಟ್ರೆಂಡ್ ಆಗುತ್ತವೆ. ಅಂತೆಯೇ ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ ಬಾಲ್ಯದ ಫೋಟೊ ವೈರಲ್ ಆಗಿವೆ. ನಟ ಅಜಿತ್ ಅವರ ಬಾಲ್ಯದ ಫೋಟೊಗಳು ಬಹಳ ಕ್ಯೂಟ್ ಆಗಿವೆ. 5-6 ವರ್ಷವಿರುವಾಗ, ಶಾಲೆಯಲ್ಲಿ ಸಹಪಾಠಿಗಳ ಜತೆಗೆ ಪೋಸ್ ನೀಡಿದ್ದ ಮುದ್ದಾದ ಫೋಟೊ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ನಟ ಅಜಿತ್ ಅವರ ಬಾಲ್ಯದ ಕೊಲೆಜ್ ಫೋಟೊ ಕೂಡ ವೈರಲ್ ಆಗಿದೆ. ಸ್ನೇಹಿತರು, ಫ್ಯಾಮಿಲಿ ಜತೆಗಿನ ಬ್ಲ್ಯಾಕ್ ಆ್ಯಂಡ್ ವೈಟ್ ಮತ್ತು ಕಲರ್ ಫೋಟೊಗಳು ಇವೆ. ಅವರ ಬಾಲ್ಯದ ಫೋಟೊ ವೈರಲ್ ಆಗುತ್ತಿದ್ದಂತೆ, ಸೂಪರ್‌ಸ್ಟಾರ್ ಅವರ ಆರಂಭಿಕ ಜೀವನದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚುತ್ತಿದೆ.
ನಟ ಅಜಿತ್ ಅವರಿಗೆ ನಟನೆಯ ಜತೆಗೆ ಕಾರು ರೇಸಿಂಗ್ ಬಗ್ಗೆಯು ಬಹಳ ಕ್ರೇಜ್ ಇತ್ತು. ಹೀಗಾಗಿ ಈ ಎರಡು ಕನಸುಗಳನ್ನು ಜತೆಯಾಗಿ ನನಸಾಗಿಸಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಸಿನಿಮಾ ಮತ್ತು ರೇಸಿಂಗ್ ಎರಡರ ಬಗ್ಗೆ ಸದಾ ಉತ್ಸಾಹದಿಂದಿದ್ದು ಎರಡನ್ನು ಕೂಡ ಸಮತೋಲನಗೊಳಿಸುವಲ್ಲಿ ನಿರಂತರವಾಗಿ ಯಶಸ್ವಿಯಾಗಿದ್ದಾರೆ. ಪರಿಣಾಮ ರೇಸಿಂಗ್‌ನ ಅನೇಕ ಸ್ಪರ್ಧೆಯಲ್ಲಿ ವಿಜೇತರಾಗುವ ಅವಕಾಶ ಕೂಡ ಇವರಿಗೆ ದೊರೆತಿದೆ.
ನಟ ಅಜಿತ್ ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗಿತ್ತು. ನಟನಾಗಬೇಕಂಬ ದೃಢನಿಶ್ಚಯ ಮತ್ತು ಕಠಿಣ ಪರಿಶ್ರಮದಿಂದಾಗಿ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಬಾಲ್ಯ ಜೀವನದಿಂದ ಹಿಡಿದು ಸೂಪರ್‌ಸ್ಟಾರ್ ಆಗುವವರೆಗಿನ ನಟ ಅಜಿತ್ ಅವರ ಅದ್ಭುತ ಪ್ರಯಾಣದ ಕುರಿತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳು ನಟ ಅಜಿತ್ ಈ ಅಪರೂಪದ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ನಮ್ಮ ಸೂಪರ್ ಸ್ಟಾರ್ ಅಜಿತ್ ಎಂದರೆ ಆಶ್ಚರ್ಯ ಎನಿಸುತ್ತೆ, ತೆರೆ ಮೇಲೆ ಮಾಸ್ ಹೀರೋ ಆಗಿದ್ದರೂ ಅವರ ಮನಸ್ಸು ಮಗುವಿನಂತೆ ಎನ್ನಲು ಈ ಫೋಟೊಗಳೇ ಸಾಕ್ಷಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಜಿತ್ ಫೋಟೊ ಕಂಡರೆ ನಮ್ಮ ಬಾಲ್ಯದ ನೆನಪು ಮರುಕಳಿಸುವಂತಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗಷ್ಟೇ ಅಜಿತ್ ಅಭಿನಯದ ʼಗುಡ್ ಬ್ಯಾಡ್ ಅಗ್ಲಿʼ ಚಿತ್ರ ರಿಲೀಸ್ ಆಗಿ ಅಭಿಮಾನಿಗಳು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.