ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gowri Look 2025: ಗೌರಿ ಹಬ್ಬದ ಲುಕ್‌ಗೆ ಇಲ್ಲಿದೆ 7 ಟಿಪ್ಸ್

ಗೌರಿ ಹಬ್ಬದಂದು ಟ್ರೆಡಿಷನಲ್ ಉಡುಗೆ ಹಾಗೂ ಸೀರೆಗಳಿಗೆ ಸೈ ಎನ್ನಿ. ಆಗ ನೀವು ಥೇಟ್ ಗೌರಿಯಂತೆ ಕಂಗೊಳಿಸುವಿರಿ. ನಿಮ್ಮ ಈ ಲುಕ್‌ಗಾಗಿ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್
1/5

ಟ್ರೆಡಿಷನಲ್ ಲುಕ್‌ನಲ್ಲಿ ರೆಡಿಯಾಗಿ

ಹಬ್ಬದಂದು ಹೆಣ್ಣು ಮಕ್ಕಳು ಥೇಟ್ ಗೌರಿಯಂತೆ ಟ್ರೆಡಿಷನಲ್ ಲುಕ್‌ನಲ್ಲಿ ರೆಡಿಯಾಗಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು ಅವರು ಹೇಳುವುದರಲ್ಲೂ ಅರ್ಥವಿದೆ. ಫೆಸ್ಟೀವ್ ಸೀಸನ್‌ಗಳಲ್ಲಿ ಆಯಾ ಹಬ್ಬಕ್ಕೆ ಸೂಟ್ ಆಗುವಂತೆ ಸಿಂಗರಿಸಿಕೊಳ್ಳುವುದರಿಂದ ನಮ್ಮ ಸಂಸ್ಕೃತಿಯನ್ನು ಕಾಪಾಡುವುದರೊಂದಿಗೆ ಹೆಣ್ಣು ಮಕ್ಕಳು ಕೂಡ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ.

2/5

ಟ್ರೆಡಿಷನಲ್ ಉಡುಗೆಗಳಿಗೆ ಪ್ರಾಮುಖ್ಯತೆ ನೀಡಿ

ಸದ್ಯಕ್ಕೆ ವೆಸ್ಟರ್ನ್ ಔಟ್‌ಫಿಟ್ ಮರೆತುಬಿಡಿ. ಹಬ್ಬದಂದು ಕಂಪ್ಲೀಟ್ ಎಥ್ನಿಕ್ ಲುಕ್ ನೀಡುವ ಲಂಗ-ದಾವಣಿ, ರೇಷ್ಮೆ ಸೀರೆಯನ್ನು ಚೂಸ್ ಮಾಡಿ. ಇದು ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುತ್ತದೆ. ಇದು ಗೌರಿ ಲುಕ್‌ಗೆ ಹೊಂದುತ್ತದೆ. ಇದೀಗ ಟ್ರೆಂಡಿಯಾಗಿರುವ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಬಹುದು. ಇಲ್ಲವೇ ಮನೆಯ ವಾರ್ಡ್‌ರೋಬ್‌ನಲ್ಲಿರುವ ಗ್ರ್ಯಾಂಡ್ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿಕೊಳ್ಳಿ. ಒಂದು ಪಿನ್ ಸೆರಗು ಹಾಕುವ ಬದಲು ಫ್ಲೀಟ್ಸ್ ಸೆರಗನ್ನು ಮಾಡಿ. ನಿಮ್ಮ ಪರ್ಸನಾಲಿಟಿಗೆ ಹೊಂದುವಂತಹ ಸೀರೆಗಳನ್ನೇ ಉಡಿ. ಲಕ್ಷಣವಾಗಿ ಕಾಣಿಸುವಂತೆ ಸೀರೆ ಉಡಿ. ಗ್ಲಾಮರ್ ಲುಕ್ ಬೇಡ. ಸ್ಲೀವ್‌ಲೆಸ್‌ ಬ್ಲೌಸ್ ಅವಾಯ್ಡ್ ಮಾಡಿ.

3/5

ಕಮರ್ಬಾಂದ್ / ಸೊಂಟದ ಪಟ್ಟಿ ಧರಿಸಿ

ಇಡೀ ಸೀರೆಗೆ ಮೆರಗು ನೀಡುವ ಕಮರ್ಬಾಂದ್ ಅಥವಾ ಬಂಗಾರ ವರ್ಣದ ಸೊಂಟದಪಟ್ಟಿಯನ್ನು ಧರಿಸಿ. ಟ್ರೆಡಿಷನಲ್ ಲುಕ್ ಬೇಕಿದ್ದಲ್ಲಿ ಫಂಕಿ ಸೊಂಟದ ಪಟ್ಟಿ ಬದಲು ಆದಷ್ಟೂ ಟ್ರೆಡಿಷನಲ್ ಲುಕ್ ಇರುವಂತದ್ದನ್ನೇ ಧರಿಸಬೇಕು. ರೇಷ್ಮೆ ಸೀರೆ ಅಥವಾ ಲಂಗ ದಾವಣಿಗೆ ಟ್ರಡಿಷನಲ್ ಲುಕ್ ನೀಡಲು ನೆಕ್ಲೇಸ್, ಹಾರ, ಜುಮಕಿ, ಮಾಟಿ, ಜಡೆ ಬಿಲ್ಲೆ, ಮಾಂಗ್ಟೀಕಾ, ಕೈತುಂಬಾ ಗಾಜಿನ ಬಳೆಗಳು, ಕಾಲ್ಗೆಜ್ಜೆ, ಬಾಜುಬಂದ್ ಸೇರಿದಂತೆ ದೇವತೆಯ ಲುಕ್ ನೀಡುವಂತಹ ಆಭರಣಗಳನ್ನು ಧರಿಸಿ. ಎಲ್ಲವೂ ಸೀರೆಗೆ ಮ್ಯಾಚ್ ಆಗುವಂತಿರಬೇಕು ಎಂಬುದು ಗಮನದಲ್ಲಿರಲಿ.

4/5

ಕೂದಲಿಗೆ ಹೂವನ್ನು ಮುಡಿಯಿರಿ

ಉಡುಗೆ ಹೊರತುಪಡಿಸಿದಲ್ಲಿ, ಹಬ್ಬದಂದು ನೀವು ಮಾಡುವ ಹೇರ್‌ಸ್ಟೈಲ್ ಪ್ರಮುಖ ಪಾತ್ರವಹಿಸುತ್ತದೆ. ಫಂಕಿ ಹೇರ್‌ಸ್ಟೈಲ್ ಬದಲು ಜಡೆ ಹೆಣೆದು, ಹೂವುಗಳನ್ನು ಧರಿಸಿ. ಉದಾಹರಣೆಗೆ ಮಲ್ಲಿಗೆ ದಿಂಡು, ಕನಕಾಂಬರವನ್ನು ಜಡೆಗೆ ಮುಡಿಯಬಹುದು. ಇಲ್ಲವಾದಲ್ಲಿ ಜಡೆ ಬಿಲ್ಲೆಯನ್ನೂ ಕೂಡ ಧರಿಸಬಹುದು. ಇದು ಆಕರ್ಷಕವಾಗಿ ಕಾಣುತ್ತದೆ.

5/5

ಕೈತುಂಬಾ ಬಳೆ ಧರಿಸಿ

ಕೈ ತುಂಬಾ ಬಳೆ ಧರಿಸಿದಾಗ ಟ್ರೆಡಿಷನಲ್ ಲುಕ್ ಮತ್ತಷ್ಟು ಹೈಲೈಟಾಗುತ್ತದೆ. ಸೀರೆಯ ಮ್ಯಾಚಿಂಗ್‌ಗೆ ಹೊಂದುವಂತೆ ಗಾಜಿನ ಬಳೆಗಳನ್ನು ಧರಿಸಿದಲ್ಲಿ ನೋಡಲು ಆಕರ್ಷಕವಾಗಿ ಕಾಣುತ್ತದೆ. ಅಗಲವಾದ ಇಲ್ಲವೇ ಆಕರ್ಷಕವಾದ ಬಿಂದಿ ಹಣೆಗೆ ಇಟ್ಟಾಗ ಗೌರಿ ಲುಕ್ ಕಂಪ್ಲೀಟ್ ಆಗುತ್ತದೆ. ಮುಖದ ಕಳೆ ಹೆಚ್ಚಾಗುತ್ತದೆ. ಮೇಕಪ್ ಕೂಡ ನೋಡಲು ಪ್ಲೆಸೆಂಟ್ ಆಗಿರಲಿ. ಕಣ್ಣಿಗೆ ಕಾಡಿಗೆ ಹಣೆಗೆ ಬಿಂದಿ ಗೌರಿ ಹಬ್ಬದ ಕಳೆ ಹೆಚ್ಚಿಸುವುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಶೀಲಾ ಸಿ ಶೆಟ್ಟಿ

View all posts by this author