ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Independence Day 2025: ಸ್ವಾತಂತ್ರ್ಯ ದಿನಾಚರಣೆಗೆ ನೀವು ನೋಡಲೇಬೇಕಾದ ಸಿನಿಮಾಗಳಿವು!

ಇಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ಸವಿ ದಿನವಾಗಿದ್ದು ದೇಶವೇ 79ನೇ ಸ್ವಾತಂತ್ರ್ಯ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ‌. ಅಂತೆಯೇ ಈ ದಿನ ದೇಶದೆಲ್ಲೆಡೆ ಧ್ವಜಾರೋಹಣ, ಪಥ ಸಂಚಲನ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯುತ್ತಿದೆ. ಈ ದಿನ ನೀವು ಕೂಡ ನಿಮ್ಮ ಕುಟುಂಬದ ಸಮ್ಮುಖದಲ್ಲಿ ವಿಭಿನ್ನವಾಗಿ ಕಳೆಯ ಬೇಕಾದರೆ ದೇಶಭಕ್ತಿ ಇರುವ ಸಿನಿಮಾಗಳನ್ನು ಫ್ಯಾಮಿಲಿ ಜೊತೆಗೆ ನೋಡಿ ಸಂಭ್ರಮಿಸಬಹುದು. ನೀವು ಮಿಸ್ ಮಾಡದೇ ನೋಡಬೇಕಾದ ದೇಶಭಕ್ತಿ ಕಥೆಯಾಧಾರಿತ ಸಿನಿಮಾ ಪಟ್ಟಿ ಇಲ್ಲಿದೆ.

1/11

ಬಾರ್ಡರ್ ಸಿನಿಮಾ:

ಬಾರ್ಡರ್ ಸಿನಿಮಾ 1997ರಲ್ಲಿ ತೆರೆ ಕಂಡಿದ್ದು ಇದು ಭಾರತ-ಪಾಕಿಸ್ತಾನ ಯುದ್ಧದ ಕಥೆಯನ್ನು ಸಿನಿಮಾ ಮೂಲಕ ಪ್ರೇಕ್ಷಕರಿಗೆ ತಿಳಿಸಲಾಗಿದೆ. ರಾಜಸ್ಥಾನದಲ್ಲಿ ನಡೆದ ಲೋಂಗೆವಾಲಾ ಕದನದಲ್ಲಿ ನಡೆದ ನೈಜ ಘಟನೆಗಳ ಸುತ್ತ ಈ ಸಿನಿಮಾದ ಕಥೆ ಸಾಗಲಿದ್ದು ನೋಡುಗರಿಗೆ ದೇಶಭಕ್ತಿಯ ನಿಜಾರ್ಥ ತಿಳಿಯಲಿದೆ.

2/11

ಲಗಾನ್:

2001ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಆಮಿರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ನಡೆ ಯುವ ಚಂಪಾನೇರ್ ಗ್ರಾಮಸ್ಥರು ಮತ್ತು ಬ್ರಿಟಿಷ್ ರೆಜಿಮೆಂಟ್ ನಡುವಿನ ಸಂಘರ್ಷವನ್ನು ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ್ದ ದೇಶೀಯತೆಯನ್ನು ಈ ಸಿನಿಮಾದಲ್ಲಿ ಅದ್ಭುತವಾಗಿ ತಿಳಿಸಲಾಗಿದೆ.

3/11

ದಿ ಲೆಜೆಂಡ್ ಆಫ್ ಭಗತ್ ಸಿಂಗ್:

2002ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿ ತಮ್ಮ ಪ್ರಾಣ ವನ್ನೇ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ ಜೀವನ ಕಥೆ ಯನ್ನು ಈ ಸಿನಿಮಾದಲ್ಲಿ ತಿಳಿಸಲಾಗಿದೆ.

4/11

ಸುಭಾಷ್ ಚಂದ್ರ ಬೋಸ್: ದಿ ಫಾರ್ಗಾಟನ್ ಹೀರೋ:

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಜೀವನ ಚರಿತ್ರೆಯ ಕುರಿತಾದ ಈ ಸಿನಿಮಾವು 2004ರಲ್ಲಿ ತೆರೆಕಂಡಿದೆ. ಬೋಸ್ ಅವರು ದೇಶದ ಸ್ವಾತಂತ್ರ್ಯ ಹೋರಾಟ ದಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸಿದರು ಎಂಬುದರ ಸುತ್ತ ಈ ಸಿನಿಮಾದ ಕಥೆ ಸಾಗಲಿದೆ.

5/11

ಮಂಗಲ್ ಪಾಂಡೆ , ದಿ ರೈಸಿಂಗ್

ಈ ಚಿತ್ರವು 2005ರಲ್ಲಿ ತೆರೆ ಕಂಡಿದೆ. 1857 ರ ಸಿಪಾಯಿ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ವಾತಂತ್ರ್ಯ ಹೋರಾಟ ಗಾರ ಮಂಗಲ್ ಪಾಂಡೆ ಅವರ ಜೀವನ ಚರಿತ್ರೆಯಾಗಿದೆ. ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ಮೊದಲ ಭಾರತೀಯ ಹೋರಾಟಗಾರ ಮಂಗಲ್ ಪಾಂಡೆ ಪಾತ್ರದಲ್ಲಿ ನಟ ಆಮಿರ್ ಖಾನ್ ಅದ್ಭುತವಾಗಿ ಅಭಿನಯಿಸಿ ದೇಶಭಕ್ತಿ ಯನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡಿ ದ್ದಾರೆ.

6/11

ಚಕ್ ದೇ ಇಂಡಿಯಾ

ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿಯ ಬಗ್ಗೆ ಈ ಸಿನಿಮಾದಲ್ಲಿ ತಿಳಿಸಲಾಗಿದೆ. ನಮ್ಮ ನಡುವಿನ ಭಿನ್ನಾಭಿ ಪ್ರಾಯಗಳು ಮತ್ತು ವೈಮನಸ್ಸುಗಳ ನಂತರವೂ ನಾವು ಐಕ್ಯತೆಯಿಂದ ಹೇಗೆ ಒಗ್ಗಟ್ಟಾಗಿರಬಹುದು ಎಂಬುದನ್ನು ಈ ಚಲನಚಿತ್ರದಲ್ಲಿ ತಿಳಿಸಲಾಗಿದೆ. 2007ರಲ್ಲಿ ತೆರೆಕಂಡ ಈ‌ ಸಿನಿಮಾದಲ್ಲಿ ನಟ ಶಾರುಖ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

7/11

ಉರಿ ದಿ ಸರ್ಜಿಕಲ್ ಸ್ಟ್ರೈಕ್:

ಈ ಚಿತ್ರವು 2016 ರಲ್ಲಿ ಭಾರತ ನೇತೃತ್ವದ ಪಾಕಿಸ್ತಾನದ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್‌ನ ನೈಜ ಘಟನೆಗಳನ್ನು ಆಧರಿಸಿ ಸಿನೆಮಾ ರೂಪಕ್ಕೆ ತೆರೆತರಲಾಗಿದೆ. 2019ರಲ್ಲಿ ತೆರೆ ಕಂಡ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕೂಡ ಆಗಿದೆ.

8/11

ಮುತ್ತಿನ ಹಾರ:

ಈ ಚಿತ್ರವು 1990ರಂದು ರಿಲೀಸ್ ಆಗಿದ್ದು ವಿಷ್ಣುವರ್ಧನ್ ಮತ್ತು ಸುಹಾಸಿನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಭಾರತೀಯ ಸೇನೆಯಲ್ಲಿನ ಯೋಧನೊಬ್ಬನ ದೇಶಭಕ್ತಿ ಮತ್ತು ತ್ಯಾಗದ ಕಥೆಯನ್ನು ಹೇಳುತ್ತಿದ್ದು ರಾಷ್ಟ್ರೀಯ ಭಾವೈಕ್ಯತೆ ಸಿನಿಮಾದಲ್ಲಿ ಅದ್ಭುತವಾಗಿ ತೆರೆ ಮೇಲೆ ತರಲಾಗಿದೆ.

9/11

ವೀರಪ್ಪ ನಾಯ್ಕ:

1999ರಲ್ಲಿ ಈ ಸಿನಿಮಾ ತೆರೆ ಕಂಡಿದ್ದು ಇದರಲ್ಲಿ ವಿಷ್ಣುವರ್ಧನ್ ಅವರು ರಾಷ್ಟ್ರ ಪ್ರೇಮ ಹೊಂದಿರುವ ಗಾಂಧೀವಾದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ವಜ ತಯಾರಿಸುವುದು, ದೇಶದ ಮುಂದೆ ಯಾರು ದೊಡ್ಡವರಲ್ಲ, ತನ್ನ ಮಗನಿಂದಲೇ ದೇಶ ದ್ರೋಹವಾಗುತ್ತಿದ್ದು ಅರಿತು ಆತನನ್ನು ಕೊಂದು ಜೈಲಿಗೆ ಹೋಗುವ ಪಾತ್ರದಲ್ಲಿ ನಟ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದಾರೆ.

10/11

ಕಿತ್ತೂರು ಚೆನ್ನಮ್ಮ:

ಹಿರಿಯ ನಟಿ ಸರೋಜಾ ದೇವಿ ಮತ್ತು ಡಾ.ರಾಜ್​ಕುಮಾರ್ ಅಭಿನಯದ ಈ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ಚೆನ್ನಮ್ಮಳ ಜೀವನಕತೆಯನ್ನು ಸಾರಲಾಗಿದೆ. ಬಿ.ಆರ್.ಪಂತುಲು ಅವರು ಈ ಸಿನಿಮಾ ನಿರ್ಮಿಸಿ ನಿರ್ದೇಶಿಸಿದ್ದು 1961ರಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಬಾಲಿವುಡ್ ನಲ್ಲಿ ರಂಗ್ ದೆ ಬಸಂತಿ, ಲಕ್ಷ್ಯ, ರಾಝಿ , ಆರ್ ಆರ್ ಆರ್ ಇತರೆ ಸಿನಿಮಾ ಕೂಡ ದೇಶಭಕ್ತಿ ವಿಚಾರವನ್ನು ಪ್ರೇಕ್ಷಕರಿಗೆ ಮನತಲುಪುವಂತೆ ಕೂಡ ಮಾಡಿದ್ದಾರೆ.

11/11

ಸ್ಯಾಂಡಲ್‌ವುಡ್‌ನ ದಾಸ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ 2012ರಲ್ಲಿ ರಿಲೀಸ್‌ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲೂ ಫುಲ್ ಸೌಂಡ್ ಮಾಡಿತ್ತು. ಕಿಚ್ಚ ಸುದೀಪ್ ಈ ಚಿತ್ರಕ್ಕೆ ನಿರೂಪಣೆ ಮಾಡಿದ್ದರು. ಜಯಪ್ರದಾ ಇಲ್ಲಿ ಕಿತ್ತೂರು ಚೆನ್ನಮ್ಮನಾಗಿಯೇ ಅಭಿನಯಿಸಿದ್ದರು.