ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ishita Dutta: ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ನ ಈ ನಟಿ; ಅಮ್ಮ- ಮಗಳ ಫೋಟೋಗೆ ದೃಷ್ಟಿ ತೆಗೀರಿ ಎಂದ ನೆಟ್ಟಿಗರು

ಬಾಲಿವುಡ್ ನಟಿ ಇಶಿತಾ ದತ್ತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ನಟಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಮಗಳ ಆಗಮನದಿಂದ ಇಶಿತಾ ಹಾಗೂ ವತ್ಸಲ್ ಶೆಠ್‌ ಕುಟುಂಬಸ್ಥರು ಸಂತಸಗೊಂಡಿದ್ದಾರೆ. ದಂಪತಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ.

Ishita Dutta
1/6

ದೃಶ್ಯಮ್’ ಖ್ಯಾತಿಯ ನಟಿ ಇಷಿತಾ ದತ್ತಾ ಮತ್ತು ನಟ ವತ್ಸಲ್ ಸೇಠ್‌ ಎರಡನೇ ಮಗುವಿಗೆ ಪೋಷಕರಾದ್ದಾರೆ. ಈ ಜೋಡಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದು ಈ ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಕೊಂಡಿದ್ದಾರೆ. ದಂಪತಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ..

2/6

ಇಷಿತಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಸ್ಪತ್ರೆಯಲ್ಲಿ ತೆಗೆದಿರುವ ಒಂದು ಹೃದಯಸ್ಪರ್ಶಿ ಫೋಟೋವನ್ನು ಹಂಚಿ ಕೊಂಡಿದ್ದಾರೆ. ಫೋಟೋದಲ್ಲಿ ಇಷಿತಾ, ವತ್ಸಲ್ ಮತ್ತು ಅವರ ನವಜಾತ ಮಗು ಜೊತೆ ಫೋಟೋ ತೆಗೆದಿರುವ ದೃಶ್ಯ ಇದೆ

3/6

ಫೋಟೋ ಜೊತೆಗೆ ನಟಿ ಕ್ಯಾಪ್ಷನ್‌ನಲ್ಲಿ ಎರಡು ಹೃದಯಗಳಿಂದ ನಾಲ್ಕು ಹೃದಯಗಳಾಗಿದೆ... ನಮ್ಮ ಕುಟುಂಬ ಈಗ ಸಂಪೂರ್ಣವಾಗಿದ್ದು ಹೆಣ್ಣುಮಗು ಆಗಮಿಸಿದೆ ಎಂದು ಬರೆದುಕೊಂಡಿದ್ದಾರೆ..

4/6

ಇಶಿತಾ ದತ್ತಾ ಎರಡನೇ ಮಗುವಿನ ಆಗಮನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೃಢಪಡಿಸಿದ್ದರು. ಇಶಿತಾ ದತ್ತಾ ತಮ್ಮ ಪತಿ ವತ್ಸಲ್ ಸೇಠ್ ಅವರೊಂದಿಗೆ ಕೆಲವು ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡು "9 ವರ್ಷ ಗಳಿಂದ ನಾವು ಒಬ್ಬರನ್ನೊಬ್ಬರು ತಿಳಿದಿದ್ದೇವೆ. 8ವರ್ಷಗಳಿಂದ ನಿನ್ನನ್ನು ಪ್ರೀತಿಸುತ್ತಿದ್ದೇನೆ. ಶೀಘ್ರದಲ್ಲೇ ನಮ್ಮ ಹೃದಯಗಳು ಮತ್ತೆ ಬೆಳೆಯುತ್ತವೆ ಎಂದು ಈ ಹಿಂದೆ ಬರೆದುಕೊಂಡಿದ್ದರು.

5/6

ಇಶಿತಾ ದತ್ತಾ ಟಿವಿ ಕಾರ್ಯಕ್ರಮವಾದ ರಿಶ್ತೋಂ ಕಾ ಸೌದಾಗರ್ : ಬಾಜೀಗರ್' ನಲ್ಲಿ ವತ್ಸಲ್ ಸೇಠ್ ಅವರೊಂದಿಗೆ ಕೆಲಸ ಮಾಡಿದ್ದರು. ಇಲ್ಲಿಂದಲೇ ಇವರಿಬ್ಬರ ನಡುವೆ ಪ್ರೀತಿ ಆರಂಭವಾಯಿತು.ಇಶಿತಾ ದತ್ತಾ ಮತ್ತು ವತ್ಸಲ್ ಸೇಠ್ 28 ನವೆಂಬರ್ 2017 ರಂದು ಮುಂಬೈನಲ್ಲಿ ವಿವಾಹವಾದರು. ಮತ್ತು 18 ಜುಲೈ 2023ರಂದು ಅವರಿಗೆ ಮಗ ಜನಿಸಿದನು.

6/6

ಇಶಿತಾ ದತ್ತಾ ಅಜಯ್ ದೇವಗನ್ ಅಭಿನಯದ 'ದೃಶ್ಯಂ' ಸಿನಿಮಾದಲ್ಲಿ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದು ಫಿರಂಗಿ' ಮತ್ತು 'ಬ್ಲಾಂಕ್' ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇನ್ನು ದೃಶ್ಯಮ್ 3’ನಲ್ಲಿ ಅಜಯ್ ದೇವಗನ್, ತಬು ಮತ್ತು ಶ್ರೀಯಾ ಸರಣ್ ಜೊತೆಗೆ ಮತ್ತೆ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.