ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kareena Kapoor: ವೆಕೇಷನ್ ಮೂಡ್‌ನಲ್ಲಿ ಕರೀನಾ ಕಪೂರ್- ಲುಂಗಿ ಉಟ್ಟು ಬೋಲ್ಡ್‌ ಫೋಟೋಶೂಟ್

ಬಾಲಿವುಡ್ ನಟಿ ಕರೀನಾ ಕಪೂರ್ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿ ಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಫಾಲೋವರ್ಸ್ ಹೊಂದಿರುವ ಕರೀನಾ ಇತ್ತೀಚೆಗೆ ಜಾಲಿ ಟ್ರಿಪ್‌ ಕೈಗೊಂಡಿದ್ದಾರೆ. ಇಲ್ಲಿನ ಹಲವಾರು ಫೋಟೋಗಳನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ.

1/5

ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ತಮ್ಮ ಇತ್ತೀಚಿನ ಗ್ರೀಸ್‌ ಪ್ರವಾಸದ ಫೋಟೊಗಳಿಂದ ಸಾಕಷ್ಟು ಗಮನ ಸೆಳೆದಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಲವಾರು ಫೋಟೋ ಗಳನ್ನು ಹಂಚಿಕೊಂಡಿದ್ದು ಡಿಪ್ರೆಂಟ್ ಔಟ್ ಫಿಟ್‌ನಲ್ಲಿ ಕಂಗೊಳಿಸಿದ್ದಾರೆ.

2/5

ಬಾಲಿವುಡ್‌ನ ಟಾಪ್ ಲಿಸ್ಟ್ ನಟಿಯರಲ್ಲಿ ಕರೀನಾ ಕಪೂರ್ ಕೂಡ ಒಬ್ಬರು. ಅವರು ತಮ್ಮ ನಟನೆ ಮತ್ತು ಸೌಂದರ್ಯದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದು ಈ ಫೋಟೋಗಳಿಗೆ ಲಕ್ಷಾಂತರ ಕಮೆಂಟ್ ಲೈಕ್ಸ್ ಬಂದಿವೆ‌. ನಟಿ ಫೋಟೋಗಳೊಂದಿಗೆ “ಗ್ರೀಸ್‌ನಲ್ಲಿ ಲುಂಗಿ ಡ್ಯಾನ್ಸ್ ಮಾಡಿದೆ. ನಿಜಕ್ಕೂ ಮಜಾ ಆಯ್ತು'' ಎಂದು ಬರೆದುಕೊಂಡಿದ್ದಾರೆ.

3/5

ಚಿತ್ರಗಳಲ್ಲಿ ಕರೀನಾ ಹಳದಿ ಕಲರ್ ಬ್ರಾಲೆಟ್ ಹಾಗೂ ಚೆಕ್ಸ್‌ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಬೋಲ್ಡ್ ಲುಕ್‌ನಿಂದ ಎಲ್ಲರನ್ನೂ ರಂಜಿಸಿದ್ದಾರೆ. ಬಿಸಿಲಿನ ನಡುವೆ ಸನ್‌ಗ್ಲಾಸಸ್ ಮತ್ತು ಕ್ಯಾಪ್ ಧರಿಸಿ ತಮ್ಮ ವೆಕೆಶನ್ ಲುಕ್‌ ಅನ್ನು ಇನ್ನಷ್ಟು ಗ್ಲಾಮರ್‌ನಿಂದ ಹೆಚ್ಚಿಸಿದ್ದಾರೆ.

4/5

ನಟಿ ಗ್ರೀಸ್ ಪ್ರವಾಸಕ್ಕೆ ತಮ್ಮ ಪತಿ ಸೈಫ್ ಅಲಿ ಖಾನ್ ಮತ್ತು ಮಕ್ಕಳಾದ ತೈಮೂರ್ ಹಾಗೂ ಜೆಹ್ ಜೊತೆಯಲ್ಲೇ ತೆರಳಿದ್ದಾರೆ. ಇನ್ನಷ್ಟು ಗಮನ ಸೆಳೆದ ಫೋಟೋವೊಂದರಲ್ಲಿ ಕರೀನಾ ಬೇಜ್ ಮತ್ತು ಬ್ಲಾಕ್ ಮೊನೊಕಿನಿಯಲ್ಲಿ ಮಿಂಚಿದ್ದು, ತಮ್ಮ ಗ್ಲಾಮರ್ ಸೆನ್ಸ್ ಅನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

5/5

ಜಬ್ ವೀ ಮೆಟ್, ಕಭಿ ಖುಷಿ ಕಭಿ ಗಮ್, 3 ಇಡಿಯಟ್ಸ್, ಬಜರಂಗಿ ಭಾಯಿಜಾನ್, ಉಡ್ದಾ ಪಂಜಾಬ್ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ಕರೀನಾ ಸದ್ಯ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಜೊತೆಯಲ್ಲಿ ‘ದಾಯರಾ’ ಎಂಬ ಹೊಸ ಸಿನಿಮಾದಲ್ಲಿ ಅಭಿನಯಿಸಲು ತಯಾರಿ ನಡೆಸುತ್ತಿದ್ದಾರೆ.