Malaika Arora: ವಯಸ್ಸು 51 ಆದ್ರೂ ಈಕೆಯ ಸೌಂದರ್ಯಕ್ಕೆ ಯುವತಿಯರೇ ನಾಚಬೇಕು! ಮಲೈಕಾ ಹಾಟ್ ಫೋಟೋಸ್ ಮತ್ತೆ ವೈರಲ್
Malaika Arora Bold Look: ಬಾಲಿವುಡ್ ಕ್ವೀನ್ ಮಲೈಕಾ ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಅವರು ಧರಿಸಿದ್ದ ಸಿಂಪಲ್ ಆ್ಯಂಡ್ ಸ್ಟೈಲಿಶ್ ಲುಕ್ ನೆಟ್ಟಿಗರ ಗಮನ ಸೆಳೆಯಿತು.. ವೈಟ್ ವೆಸ್ಟ್ ಮತ್ತು ಓವರ್‌ಸೈಜ್ಡ್ ಬ್ಲೂ ಡೆನಿಮ್ಸ್ ಧರಿಸಿದ ಮಲೈಕಾ ಬಹಳಷ್ಟು ಬೋಲ್ಡ್ ಆಗಿ ಕಂಡಿದ್ದಾರೆ.
ಬಾಲಿವುಡ್ ನಟಿ ಮಲೈಕಾ ಅರೋರಾ ಇತ್ತೀಚೆಗೆ ತನ್ನ ಸಮ್ಮರ್ ಹಾಲಿಡೇ ಮುಗಿಸಿಕೊಂಡು ಮುಂಬೈಗೆ ವಾಪಸ್ಸಾಗಿದ್ದಾರೆ. ಇದೀಗ ಅವರು ಧರಿಸಿರುವ ವೈಟ್ ವೆಸ್ಟ್ ಮತ್ತು ಓವರ್‌ಸೈಜ್ಡ್ ಬ್ಲೂ ಡೆನಿಮ್ಸ್ ಲುಕ್ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಇನ್‌ಸ್ಟಾಗ್ರಾಮ್ ನಲ್ಲಿ ಮಲೈಕಾ ಫೋಟೋಗಳು ಈಗಾಗಲೇ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಫೈರ್ ಇಮೋಜಿಗಳೊಂದಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಅವರು ತಮ್ಮ ಲುಕ್‌ನ್ನು ಪರಿಪೂರ್ಣ ಗೊಳಿಸಲು ಒಂದು ಮಿನಿ ಲಕ್ಸುರಿ ಬ್ಯಾಗ್ ಕೂಡ ಕೈಯಲ್ಲಿ ಹಿಡಿದಿದ್ದರು. ಅವರ ಈ ಪರ್ಫೆಕ್ಟ್ ಲುಕ್ ಗೆ ನೆಟ್ಟಿಗರು ಫಿದಾ ಆಗಿದ್ದು 51 ವರ್ಷದ ನಟಿಯೂ ಯಂಗ್ ಲೇಡಿ ಎಂಬಂತೆ ಕಾಣುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿ ಲೈಕ್ ಕಮೆಂಟ್ ಗಳ ಸುರಿಮಳೆ ಗೈದಿದ್ದಾರೆ.
ಫ್ಯಾಷನ್ ಐಕಾನ್ ಎಂದೇ ಜನಪ್ರಿಯವಾಗಿರೋ ನಟಿ ಮಲೈಕಾ ಅರೋರಾ ತಮ್ಮ ಫಿಟ್‌ನೆಸ್ ಗೂ ಹೆಸರು ವಾಸಿಯಾಗಿದ್ದಾರೆ. 51 ವರ್ಷದಲ್ಲಿಯೂ ಮಲೈಕಾ 25 ರ ಯುವತಿಯ ಹಾಗೆ ಕಾಣುತ್ತಿದ್ದಾರೆ.
ಯಾವುದೇ ಮೇಕಪ್ ಇಲ್ಲದೆ ನಟಿ ಮಲೈಕಾ ನ್ಯಾಚುರಲ್ ಆಗಿ ಕಂಡಿದ್ದಾರೆ. ಫೋಟೋಗಳಲ್ಲಿ ಮಲೈಕಾ ಅರೋರಾ ತಮ್ಮ ಬೋಲ್ಡ್ ಸ್ಟೈಲ್‌ನಿಂದ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿ ಸಿದ್ದಾರೆ.
ನಟಿ ಮಲೈಕಾ ಹೌಸ್ ಫುಲ್, ದಬಾಂಗ್ 2, ವೆಲ್ಕಮ್ , ಕಾಂಟೆ, ಇಎಂಐ ಸೇರಿದಂತೆ ಹಿಟ್ ಚಿತ್ರ ಗಳಲ್ಲಿ ಅಭಿನಯಿಸಿ ಫೇಮ್ ಗಿಟ್ಟಿಸಿ ಕೊಂಡಿದ್ದಾರೆ. ಜೊತೆಗೆ ಮಾಡೆಲಿಂಗ್ ಕ್ಷೇತ್ರದಿಂದಲೂ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ.