Malaika Arora: ಮತ್ತೆ ಬಿಕಿನಿಯಲ್ಲಿ ಹಾಟ್ ಫೋಟೋಶೂಟ್ ಮಾಡಿಸಿಕೊಂಡ ನಟಿ ಮಲೈಕಾ ಅರೋರಾ!
ಬಾಲಿವುಡ್‌ನ ಸ್ಟೈಲ್ ಕ್ವೀನ್ ಮಲೈಕಾ ಅರೋರಾ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರ ವಾಗಿಯೂ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಸದಾ ಸಕ್ರಿಯರಾಗಿರುವ ಇವರು ಈ ಭಾರಿ ಮಸ್ತ್ ಜಾಲಿ ಟ್ರಿಪ್ ಕೈಗೊಂಡಿದ್ದಾರೆ. ಇವರ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
ನಟಿ ಮಲೈಕಾ ಅರೋರಾ ಅವರು ಇತ್ತೀಚೆಗಷ್ಟೆ ಇಟಲಿಯ ಪ್ರಸಿದ್ಧ ಸ್ಥಳಗಳಿಗೆ ತಮ್ಮ ಮಗ ಅರ್ಹಾನ್ ಜೊತೆಗೆ ತೆರಳಿದ್ದಾರೆ. ಇಲ್ಲಿ ಕಳೆದ ಸುಂದರ ಕ್ಷಣಗಳ ಫೋಟೊವನ್ನು ನಟಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಟಿ ಮಲೈಕಾ ಅರೋರಾ ರಜಾ ದಿನಗಳನ್ನು ಬಹಳಷ್ಟು ಎಂಜಾಯ್ ಮಾಡಿದ್ದಾರೆ. ನಟಿ ಬಿಕಿನಿ ಧರಿಸಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ತನ್ನ ಗ್ಲಾಮರಸ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳು ನೆಟ್ಟಿಗರ ಗಮನ ಸೆಳೆದಿದೆ.
51 ವರ್ಷವಾದರೂ ಯಂಗ್ ಲೇಡಿಯಂತೆ ಇರುವ ಮಲೈಕಾ ಪಿಂಕ್ ಬಿಕಿನಿಯಲ್ಲಿ ತಮ್ಮ ಫಿಟ್ ಫಿಗರ್‌ನ್ನು ತೋರ್ಪಡಿಸಿದ್ದಾರೆ. ವಿಭಿನ್ನ ಡಿಸೈನ್ ಇರುವ ಬಿಕಿನಿಯಲ್ಲಿ ನಟಿ ಮಲೈಕಾ ಅವರು ಹಾಟ್ ಆಗಿ ಕಂಡಿದ್ದಾರೆ
ಮಲೈಕಾ ಪಿಂಕ್ ಬಿಕಿನಿಯೊಂದಿಗೆ ಹೊಂದುವ ಸೆರಾಂಗ್ ಧರಿಸಿ ಬೀಚ್ ಲುಕ್‌ಗೆ ಡಿಪ್ರೆಂಟ್ ಆದ ಟಚ್ ನೀಡಿದ್ದಾರೆ. ಇಟಲಿಯ ಪ್ರಸಿದ್ದ ಸ್ಥಳಗಳಲ್ಲಿ ಅವರು ತಮ್ಮ ಮಗ ಅರ್ಹಾನ್ ಜೊತೆ ರಜೆಯನ್ನು ಆನಂದಿಸುತ್ತಿರುವ ದೃಶ್ಯಗಳು ಕಣ್ತುಂಬಿಕೊಳ್ಳುವಂತಿವೆ.
ಮಲೈಕಾ ಹಾಟೆಸ್ಟ್ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ..ಕೂಲಿಂಗ್ ಗ್ಲಾಸ್ ಧರಿಸಿ ನಟಿ ಮಲೈಕಾ ಬೋಲ್ಡ್ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.. ನೆಟ್ಟಿಗರೊಬ್ಬರು "ಹಾಟ್ ನೆಸ್ ರಿಲೋಡ್" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ಮಲೈಕಾ ಹೌಸ್ ಫುಲ್, ದಬಾಂಗ್ 2, ವೆಲ್ಕಂ, ಕಾಂಟೆ, ಇಎಂಐ ಸೇರಿದಂತೆ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಜೊತೆಗೆ ಮಾಡೆಲಿಂಗ್ ಕ್ಷೇತ್ರದಿಂದಲೂ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇತ್ತೀಚೆಗೆ ಹೆಚ್ಚಾಗಿ ಐಟಂ ಡ್ಯಾನ್ಸ್ ಹಾಗೂ ಟೆಲಿವಿಷನ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.