ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kim Sharma: 'ಮೊಹಬ್ಬತೇನ್' ನಟಿ ಕಿಮ್ ಶರ್ಮಾ ಬಿಕಿನಿ ಫೋಟೊಗಳಿಗೆ ಫ್ಯಾನ್ಸ್‌ ಫಿದಾ

2000ರ ಬಾಲಿವುಡ್‌ ಸೂಪರ್‌ಹಿಟ್ ಚಿತ್ರ 'ಮೊಹಬ್ಬತೇನ್' ಮೂಲಕ ಗಮನ ಸೆಳೆದ ನಟಿ ಕಿಮ್ ಶರ್ಮಾ, ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಟ್ ಬೀಚ್‌ ಫೋಟೊ ಪೋಸ್ಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೆಷನ್ ಕ್ರಿಯೇಟ್ ಮಾಡಿದ್ದಾರೆ. ಫೋಟೊಗಳಲ್ಲಿ ಕಿಮ್ ಶರ್ಮಾ ಕೆಂಪು ಬಿಕಿನಿಯಲ್ಲಿ ಪೋಸ್‌ ನೀಡಿದ್ದಾರೆ.

Kim Sharma
1/5

ನಟಿ ಕಿಮ್ ಶರ್ಮಾ ವೆಕೇಶನ್ ಮೂಡ್‌ನಲ್ಲಿದ್ದು ಸ್ಪೇನ್‌ನಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗೆ ಪೋಸ್ಟ್ ಮಾಡಿದ ಫೋಟೊಗಳಲ್ಲಿ ಕಿಮ್ ಶರ್ಮಾ ಕೆಂಪು ಬಿಕಿನಿಯಲ್ಲಿ ಹಾಟ್ ಪೋಸ್ ನೀಡಿದ್ದಾರೆ.

2/5

ಕಿಮ್ ಶರ್ಮಾ ಬಿಕಿನಿ ಧರಿಸಿ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚು ಮಾಡಿದ್ದಾರೆ. ಫೋಟೊದಲ್ಲಿ ತಮ್ಮ ಟೋನ್ಡ್ ಫಿಟ್ ಫಿಗರ್ ಅನ್ನು ತುಂಬಾ ಆತ್ಮವಿಶ್ವಾಸದೊಂದಿಗೆ ಪ್ರದರ್ಶಿಸಿದ್ದಾರೆ. ಬಿಕಿನಿಯೊಂದಿಗೆ ಅವರು ಡಾರ್ಕ್ ಸನ್‌ಗ್ಲಾಸ್‌ ಧರಿಸಿದ್ದು, ಅವರ ಗ್ಲಾಮರ್ ಲುಕ್‌ಗೆ ಹೊಂದಿಕೊಂಡಿದೆ. ಇನ್‌ಸ್ಟಾಗ್ರಾಮ್ ಫೋಟೊ ಶೇರ್ ಮಾಡಿದ ಅವರು 'ಸ್ಪೇನ್ ಸಮ್ಮರ್' ಎಂದು ಬರೆದು ತಮ್ಮ ರಜೆಯ ಮೋಹಕತೆ ವ್ಯಕ್ತಪಡಿಸಿದ್ದಾರೆ.

3/5

ಈ ಹಿಂದೆ ಅವರು ಕಪ್ಪು ಬಿಕಿನಿ ಧರಿಸಿರುವ ಫೋಟೊಗಳನ್ನೂ ಶೇರ್ ಮಾಡಿದ್ದರು. ಈ ಫೋಟೊಗಳು ಈಗ ಬಹಳಷ್ಟು ವೈರಲ್ ಆಗಿವೆ. ಇಂದಿಗೂ ತಮ್ಮ ಸ್ಟೈಲಿಷ್ ಲುಕ್‌ಗಳ ಮೂಲಕ ಜನಮನ ಸೆಳೆಯುತ್ತಿರುವ ಕಿಮ್ ಶರ್ಮಾ, ತನ್ನ ಫ್ಯಾಷನ್ ಮತ್ತು ಫಿಟ್‌ನೆಸ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

4/5

ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿರುವ ‌ಅವರು 2000ರಲ್ಲಿ ರಿಲೀಸ್‌ ಆದ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ 'ಮೊಹಬ್ಬತೇನ್' ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿ ಶಾರುಖ್ ಖಾನ್, ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರಂತಹ ದೊಡ್ಡ ಕಲಾವಿದರೊಂದಿಗೆ ಅವರು ತೆರೆ ಹಂಚಿಕೊಂಡಿದ್ದಾರೆ.

5/5

'ಮೊಹಬ್ಬತೇನ್' ಚಿತ್ರದ ನಂತರ ಕಿಮ್ ಶರ್ಮಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ʼಖಡ್ಗಂʼ, ʼತುಮ್ ಸೇ ಅಚ್ಛಾ ಕೌನ್ ಹೈʼ, ʼಫಿದಾʼ, ʼಲೇಡಿಸ್ ಟೈಲರ್ʼ ಚಿತ್ರದಲ್ಲಿ ನಟಿಸಿದ್ದಾರೆ. ಅವರು ಕೊನೆಯದಾಗಿ 2011ರ 'ಲೂಟ್' ಚಿತ್ರದ ಮೂಲಕ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ನಂತರ ಅವರು ಸಿನಿ ರಂಗದಿಂದ ದೂರವಿದ್ದಾರೆ.