ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Akhanda 2: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ʼಅಖಂಡ 2ʼ; ಬಾಲಯ್ಯ ಮಾಸ್ ಲುಕ್‌ಗೆ ಫ್ಯಾನ್ಸ್‌ ಫಿದಾ

ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ʼಅಖಂಡʼ ಚಿತ್ರದ ಮೂಲಕ ಭರ್ಜರಿ ಸಕ್ಸಸ್ ಕಂಡಿದ್ದರು. ಬಾಕ್ಸ್‌ ಆಫೀಸ್‌ನಲ್ಲಿಯೂ ಸಖತ್ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಈಗ ಅದೇ ಜೋಷ್‌ನಲ್ಲಿ 'ಅಖಂಡ 2ʼ ಬಿಡುಗಡೆಗೆ ಸಿದ್ದವಾಗಿದೆ. ಬಿಡುಗಡೆ ಮುನ್ನವೇ ನೂರು ಕೋಟಿ ರೂ. ಗಳಿಸಿದ ಆ್ಯಕ್ಷನ್ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

Nandamuri Balakrishna
1/6

ಟಾಲಿವುಡ್ ನಟ ನಂದಮೂರಿ ಕೃಷ್ಣ ಅಭಿನಯದ ‘ಅಖಂಡ 2’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಟೀಸರ್​​ನಲ್ಲಿ ಬಾಲಯ್ಯ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

2/6

ಈ ಟೀಸರ್‌ಗೆ ಬಂದ ಪ್ರತಿಕ್ರಿಯೆ ಜತೆಗೆ ಒಟಿಟಿ ಬಿಡುಗಡೆ ಬಗ್ಗೆಯೂ ಭಾರೀ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ ಅಮೆಜಾನ್‌ ಪ್ರೈಮ್ ವಿಡಿಯೊ‌‌ ಜತೆ ಮಾತುಕತೆ ನಡೆದಿದ್ದು ಇದರ ಸ್ಟ್ರೀಮಿಂಗ್ ಸುಮಾರು 100 ಕೋಟಿ ರೂ.ಗಳಿಗೆ ಮಾರಾಟವಾಗಿವೆ ಎನ್ನಲಾಗಿದೆ. ಹಿರಿಯ ನಟರೊಬ್ಬರ ಚಿತ್ರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತಕ್ಕೆ ಡೀಲ್ ಆಗಿದೆ.

3/6

ಈಗಾಗಲೇ ʼಅಖಂಡ 2’ ಟೀಸರ್ ಯುಟ್ಯೂಬ್‌ನಲ್ಲಿ ದಾಖಲೆ ಬ್ರೇಕ್ ಮಾಡುತ್ತಿದೆ. ನಂದಮೂರಿ  65ನೇ ವಯಸ್ಸಿನಲ್ಲಿ  ಮತ್ತೆ ಬಿಗ್ ಸ್ಕ್ರೀನ್‌ಗೆ ಹಿಂತಿರುಗುತ್ತಿದ್ದು ಅವರ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.‌ ಪ್ರತಿಯೊಂದು ಶಾಟ್‌ನಲ್ಲೂ ಕಂಡುಬರುವ ಅವರ ಉಗ್ರ ಸ್ಟೈಲ್ ಮತ್ತು ಹೈ-ಆ್ಯಕ್ಷನ್ ದೃಶ್ಯಗಳು ಮೋಡಿ ಮಾಡುವಂತಿದೆ.

4/6

ʼಅಖಂಡʼವೂ ಬಾಲಕೃಷ್ಣ ಅವರ ಸಿನಿ ಜರ್ನಿಯಲ್ಲಿ ಮಹತ್ವಪೂರ್ಣ ಯಶಸ್ಸು ಗಳಿಸಿದ್ದ ಚಿತ್ರ. ಬೊಯಪಾಟಿ ಶ್ರೀನು ನಿರ್ದೇಶಿಸಿದ್ದ ಈ ಚಿತ್ರವು ಆ್ಯಕ್ಷನ್ ದೃಶ್ಯಗಳಿಂದಲೇ ಭರ್ಜರಿ ಸದ್ದು ಮಾಡಿತ್ತು. ಈ ಯಶಸ್ಸಿನ ನಂತರ ಅಭಿಮಾನಿಗಳು ʼಅಖಂಡ 2ʼ ನಿರೀಕ್ಷೆಯಲ್ಲಿ ಇದ್ದರು. ಇದು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಬರುತ್ತಿದೆ.

5/6

ʼಅಖಂಡ 2ʼ ಚಿತ್ರದಲ್ಲೂ ಬಾಲಯ್ಯ ಡಬಲ್ ರೋಲ್ ಮಾಡಿದ್ದಾರೆ. ಟೀಸರ್‌ನಲ್ಲಿ  ಅಘೋರಿ ರೋಲ್‌ನ ಅಬ್ಬರ ಜೋರಾಗಿದೆ. ʼಅಖಂಡ 2’ ಸೆಪ್ಟೆಂಬರ್ 25ರಂದು ತೆರೆ ಕಾಣಲಿದ್ದು, ಬಾಕ್ಸ್ ಆಫೀಸ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ ಎರಡರಲ್ಲೂ ಹೊಸ ದಾಖಲೆ ಬರೆಯುವ ಸಾಧ್ಯತೆಯಿದೆ.

6/6

ಜಾರ್ಜಿಯಾದ ಅದ್ಭುತ ಲೋಕೇಶನ್‌ಗಳಲ್ಲಿ ಈ ಚಿತ್ರದ ಶೂಟಿಂಗ್ ನಡೆದಿದೆ. ಎಸ್.ಥಮನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಂತೋಷ್ ಡಿ ಡೆಟಕೆ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಹೆಸರಾಂತ ಸಾಹಸ ನಿರ್ದೇಶಕ ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ ಮಾಡಿದ್ದಾರೆ.