Navaratri Fashion 2025: ನವರಾತ್ರಿಯ ಹಸಿರು ಬಣ್ಣದಲ್ಲಿ ಅಂದವಾಗಿ ಕಾಣಿಸಿಕೊಳ್ಳುವುದು ಹೇಗೆ?
Navaratri Fashion 2025: ಈ ನವರಾತ್ರಿಗೆ ಫ್ಯಾಷನ್‌ಲೋಕವು ನಾನಾ ಬಗೆಯ ಹಸಿರು ಬಣ್ಣದ ಸೀರೆಗಳನ್ನು ಹಾಗೂ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿದೆ. ಟ್ರೆಡಿಷನಲ್ ಸೀರೆಯಿಂದಿಡಿದು ಕಂಟೆಂಪರರಿ ಡಿಸೈನ್‌ನವು ಬಂದಿವೆ. ನವರಾತ್ರಿಯ ಹಸಿರು ವರ್ಣದ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳುವುದು ಹೇಗೆ? ಯಾವ ಬಗೆಯಲ್ಲಿ ಸ್ಟೈಲಿಂಗ್ ಮಾಡಿದರೇ ಅಂದವಾಗಿ ಕಾಣಿಸಬಹುದು? ಈ ಕುರಿತಂತೆ ಫ್ಯಾಷನಿಸ್ಟಾಗಳು ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.
ನವರಾತ್ರಿಯ ಹಸಿರು ವರ್ಣದಲ್ಲಿ ನೀವೂ ಹಸಿರುಮಯವಾಗಬಹುದು. ಹೌದು, ಹಾಗೆನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಬಾರಿ ನವರಾತ್ರಿಯಲ್ಲಿ ಮೂರು ಬಗೆಯ ಹಸಿರು ವರ್ಣಗಳು ಬಂದಿವೆ. ಟ್ರೆಡಿಷನಲ್ ಹಸಿರು, ಗಿಣಿ ಹಸಿರು ಹಾಗೂ ಪೀಕಾಕ್ ಗ್ರೀನ್. ಇದೀಗ ನಾವು ಹೇಳ ಹೊರಟಿರುವುದು ಟ್ರೆಡಿಷನಲ್ ಹಸಿರು ಬಣ್ಣದ ಬಗ್ಗೆ ಎನ್ನುತ್ತಾರೆ ಅವರು.
ಹಸಿರು ವರ್ಣದಲ್ಲಿ ಅಂದದ ಲುಕ್
ಈ ನವರಾತ್ರಿಗೆ ಫ್ಯಾಷನ್‌ಲೋಕವು ನಾನಾ ಬಗೆಯ ಹಸಿರು ಬಣ್ಣದ ಸೀರೆಗಳನ್ನು ಹಾಗೂ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿದೆ. ಟ್ರೆಡಿಷನಲ್ ಸೀರೆಯಿಂದಿಡಿದು ಕಂಟೆಂಪರರಿ ಡಿಸೈನ್‌ನವು ಬಂದಿವೆ.
ಅಷ್ಟು ಮಾತ್ರವಲ್ಲದೇ, ಸ್ಟೈಲಿಸ್ಟ್‌ಗಳು ಮಹಿಳೆಯರು ತಮ್ಮ ಬಳಿಯಿರುವ ಹಸಿರು ಸೀರೆಯಲ್ಲೇ ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು ಅಥವಾ ವಾರ್ಡ್‌ರೋಬ್‌ನಲ್ಲಿರುವ ಹಸಿರು ಔಟ್‌ಫಿಟ್‌ಗೆ ಹೇಗೆ ಹೊಸ ಲುಕ್ ನೀಡಬಹುದು ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.
ಹಸಿರು ಸೀರೆಗೆ ನಯಾ ರೂಪ
ಈಗಾಗಲೇ ನಿಮ್ಮ ಬಳಿ ರೇಷ್ಮೆಯ ಹಸಿರು ಸೀರೆ ಇದ್ದಲ್ಲಿ ಹೊಸ ಶೈಲಿಯಲ್ಲಿ ಡ್ರೇಪಿಂಗ್ ಮಾಡಿ. ಇಲ್ಲವೇ ಹಳೆಯ ಬ್ಲೌಸನ್ನು ಬದಲಿಸಿ ಹೊಸ ಡಿಸೈನರ್ ಬ್ಲೌಸ್ ಧರಿಸಿ. ಆಗ ಸೀರೆಗೆ ಹೊಸ ಲುಕ್ ದೊರೆಯುವುದು.
ಹಸಿರು ಬಣ್ಣದ ಸೀರೆಯ ಮೇಕೋವರ್
ಜ್ಯುವೆಲರಿಗಳನ್ನು ಡಿಫರೆಂಟ್ ಆಗಿ ಇರುವುದನ್ನು ಧರಿಸಿ. ಪ್ರತಿನಿತ್ಯದ ಹೇರ್‌ಸ್ಟೈಲ್ ಹೊರತಾಗಿ ಹೊಸತನ್ನು ಪ್ರಯೋಗ ಮಾಡಿ. ಹಣೆಗೆ ಅಗಲವಾದ ಬಿಂದಿ ಇಡಿ. ಹೂ ಮುಡಿಯಿರಿ. ಟ್ರೆಡಿಷನಲ್ ಮೇಕಪ್ ಇರಲಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಟ್ರೆಂಡಿಯಾಗಿರುವ ಹಸಿರು ಬಣ್ಣದ ಡಿಸೈನರ್‌ವೇರ್ಸ್
ಈ ಸೀಸನ್‌ನಲ್ಲಿ ಎಲ್ಲೆಲ್ಲಿ ನೋಡಿದರೂ ಈ ಶೇಡ್‌ನ ಗಾಗ್ರ, ಲೆಹೆಂಗಾ, ಶರಾರಾ, ಗಾಗ್ರ, ಚೂಡಿದಾರ್ ಸೆಟ್, ಸೆಲ್ವಾರ್ ಸೆಟ್, ಅನಾರ್ಕಲಿ, ಲಾಂಗ್ ಕುರ್ತಾ, ಲಾಂಗ್ ಸ್ಕರ್ಟ್ ಸೆಟ್, ಸೆಮಿ ಎಥ್ನಿಕ್ ಡಿಸೈನರ್‌ವೇರ್‌ಗಳು ಆವರಿಸಿಕೊಂಡಿವೆ. ಅವರವರ ಆಯ್ಕೆ ತಕ್ಕಂತೆ ಚೂಸ್ ಮಾಡಿ, ಧರಿಸಬಹುದು. ಎಥ್ನಿಕ್‌ವೇರ್‌ಗೆ ಯಾವ ಬಗೆಯ ಹೇರ್‌ಸ್ಟೈಲ್ ಆದರೂ ಓಕೆ ಎನ್ನುತ್ತಾರೆ ಡಿಸೈನರ್ಸ್.