Navaratri Grey Colour Tips 2025: ಬೂದು ಬಣ್ಣದಲ್ಲೂ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳಿ
Navaratri Grey Colour Tips 2025: ಡಲ್ ಎಂದೆನಿಸಿಕೊಳ್ಳುವ ಬೂದು ಬಣ್ಣದಲ್ಲೂ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್. ಸ್ಟೈಲಿಸ್ಟ್‌ಗಳ ಪ್ರಕಾರ, ಬೂದು ವರ್ಣ, ತೀರಾ ಡಲ್ ಕಲರ್. ಒಂದಿಷ್ಟು ಸ್ಟೈಲಿಂಗ್‌ನಲ್ಲಿ ಬದಲಾವಣೆ ತಂದಲ್ಲಿ, ಈ ಕಲರ್‌ನಲ್ಲೂ ಹೇಗೆಲ್ಲಾ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು ಎನ್ನುವ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಡಲ್ ಎಂದು ಹೇಳುವ ಬೂದು ಬಣ್ಣದಲ್ಲೂ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಸ್ಟೈಲಿಸ್ಟ್‌ಗಳ ಪ್ರಕಾರ, ಬೂದು ವರ್ಣ, ತೀರಾ ಡಲ್ ಕಲರ್. ಒಂದಿಷ್ಟು ಸ್ಟೈಲಿಂಗ್‌ನಲ್ಲಿ ಬದಲಾವಣೆ ತಂದಲ್ಲಿ, ಈ ಕಲರ್‌ನಲ್ಲೂ ಹೇಗೆಲ್ಲಾ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು ಎನ್ನುವ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಬೂದು ಬಣ್ಣದ ಸೀರೆ ಸ್ಟೈಲಿಂಗ್
ಸ್ಟೈಲಿಸ್ಟ್‌ಗಳು ಹೇಳುವಂತೆ, ಬೂದು ಬಣ್ಣದ ಸೀರೆಗಳನ್ನು ಇಷ್ಟಪಡುವವರು ಹಾಗೂ ಆಯ್ಕೆ ಮಾಡುವವರು ತೀರಾ ಕಡಿಮೆ ಎನ್ನಲಾಗಿದೆ. ಹಾಗಾಗಿ ಈ ಶೇಡ್ನ ಸೀರೆಗಳ ಕಲೆಕ್ಷನ್ ಮಹಿಳೆಯರ ಬಳಿ ತೀರಾ ಕಡಿಮೆ ಇರುತ್ತದಂತೆ. ಸೋ, ಉಟ್ಟ ಹಳೆಯ ಸೀರೆಯನ್ನೇ ಉಟ್ಟು ಸಂಭ್ರಮಿಸಲು ಇಚ್ಛಿಸುವವರು ನಯಾ ಲುಕ್ ನೀಡಬಹುದು.
ಬೂದು ಬಣ್ಣದ ಸೀರೆಯ ಮೇಕೋವರ್
ಬಾರ್ಡರ್ ಬಣ್ಣದ ಸೀರೆಯಾದಲ್ಲಿ, ಬಾರ್ಡರ್‌ಗೆ ಮ್ಯಾಚ್ ಆಗುವಂತಹ ಸ್ಟೇಟ್‌ಮೆಂಟ್ ಜ್ಯುವೆಲರಿಗಳನ್ನು ಧರಿಸಬಹುದು. ಬ್ಲಾಕ್ ಅಥವಾ ಆಕ್ಸಿಡೈಸ್ಡ್ ಆಭರಣಗಳನ್ನು ಧರಿಸಿಕೊಳ್ಳಬಹುದು. ಶಿಫಾನ್, ಜಾರ್ಜೆಟ್ ಸೀರೆಯಾದಲ್ಲಿ ಕ್ಯಾಶುವಲ್ ಲುಕ್ ನೀಡುವುದು ಉತ್ತಮ. ಸಿಂಪಲ್ ಲುಕ್ ನೀಡಬಹುದು. ಹೇರ್‌ಸ್ಟೈಲ್ ಸೀರೆಯ ಸ್ಟೈಲಿಂಗ್ ತಕ್ಕಂತಿರಲಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಬೂದು ಬಣ್ಣದ ಡಿಸೈನರ್‌ವೇರ್‌ಗಳ ಮೇಕೋವರ್
ಇನ್ನು, ಬೂದು ವರ್ಣದ ಡಿಸೈನರ್‌ವೇರ್ಸ್‌ಗೆ ಆಯಾ ಡಿಸೈನ್‌ಗೆ ತಕ್ಕಂತೆ ಸ್ಟೈಲಿಂಗ್ ಮಾಡಿ. ಬಂಗಾರದ ಆಭರಣಗಳಿಗಿಂತ ಟೆರ್ರಾಕೋಟಾ, ಆಕ್ಸಿಡೈಸ್ಡ್ ಜ್ಯುವೆಲರಿಗಳು ಮ್ಯಾಚ್ ಆಗುತ್ತವೆ. ಟ್ರೆಡಿಷನಲ್ ಲುಕ್ ನೀಡಬೇಕಾದಲ್ಲಿ ಆದಷ್ಟೂ ಮೇಕಪ್‌ನಲ್ಲಿ ಕಾಜಲ್, ಐ ಲೈನರ್ ಸೇರಿಸಿಕೊಳ್ಳಿ. ಬ್ಲಾಕ್ ಬಿಂದಿ ಮ್ಯಾಚ್ ಮಾಡಿ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ ಪ್ರಿಯಾ.
ಮೇಕೋವರ್ ಟಿಪ್ಸ್
- ಬೂದು ವರ್ಣದ ಸೀರೆಗಳಿಗೆ ಬ್ಲಾಕ್ ಮೆಟಲ್ ಜ್ಯುವೆಲ್ಸ್ ಬೆಸ್ಟ್ ಮ್ಯಾಚಿಂಗ್.
- ಕಾಂಟ್ರಾಸ್ಟ್ ಮ್ಯಾಚಿಂಗ್ ಈ ವರ್ಣಕ್ಕೆ ಹೊಂದುವುದಿಲ್ಲ, ನೆನಪಿರಲಿ.
- ಪಾರ್ಟಿವೇರ್ ಸೀರೆಗಳು ಈ ವರ್ಣದಲ್ಲಿ ಲಭ್ಯ. ಅವಕ್ಕೆ ಟ್ರೆಡಿಷನಲ್ ಲುಕ್ ನೀಡುವ ಬ್ಲೌಸ್ ಧರಿಸಿ, ಉಡಿ.