Alia Bhatt: ವೆಕೇಷನ್ ಮೂಡ್‌ನಲ್ಲಿ ಆಲಿಯಾ ಭಟ್- ಬಿಕಿನಿ ಫೋಟೋಶೂಟ್ ಹೇಗಿದೆ ಗೊತ್ತಾ?
Alia Bhatt's Bikini Look: ಬಾಲಿವುಡ್ ನ ಕ್ಯುಟ್ ನಟಿ ಅಲಿಯಾ ಭಟ್ ಚಿತ್ರರಂಗದ ಹೆಮ್ಮೆಯ ನಟಿ ಎನಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಸಕ್ರಿಯರಾಗಿರುವ ಇವರು ತಮ್ಮ ಫೋಟೋ- ವಿಡಿಯೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ಭಾರಿಯೂ ಅವರು ಹಾಟ್ ಆ್ಯಂಡ್ ನ್ಯಾಚುರಲ್ ಲುಕ್ ನಲ್ಲಿ ಕಂಗೊಳಿಸಿದ್ದಾರೆ. ಸದ್ಯ ಅವರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಾ ಇದೆ.
ತಮ್ಮ ಬ್ಯುಸಿ ಸಿನಿಮಾ ಪ್ರಾಜೆಕ್ಟ್‌ಗಳ ನಡುವೆಯೂ ನಟಿ ಮಸ್ತ್ ವೆಕೇಷನ್ ಎಂಜಾಯ್ ಮಾಡಿದ್ದು ಕುಟುಂಬದೊಂದಿಗೆ ಟ್ರಿಪ್ ತೆರಳಿದ್ದಾರೆ. ಬೀಚ್ ಬಳಿ ಸಂದರ ಕ್ಷಣ ಕಳೆದಿರುವ ಅವರು ಕೆಲವು ಫೋಟೋ ಶೇರ್ ಮಾಡಿದ್ದಾರೆ. ಅವರ ಇತ್ತೀಚಿನ ಇನ್‌ಸ್ಟಾ ಗ್ರಾಮ್ ಫೋಟೋಗಳು ಸದ್ಯ ಅಭಿ ಮಾನಿಗಳ ಹೃದಯ ಕೂಡ ಗೆದ್ದಿವೆ.
ಆರೆಂಜ್ ಬಿಕಿನಿಯಲ್ಲಿ ನಟಿ ಆಲಿಯಾ ಭಟ್ ಪೋಸ್ ನೀಡಿದ್ದಾರೆ. ಆರೆಂಜ್ ಬಿಕಿನಿ ಧರಿಸಿ, ಯಾವುದೇ ಫಿಲ್ಟರ್ ಇಲ್ಲದೇ, ಮೇಕಪ್ ಇಲ್ಲದ ನೈಸರ್ಗಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. "ಸಮುದ್ರದ ಉಪ್ಪು ಮತ್ತು ಸಾಗರದ ತಂಗಾಳಿ” ಎಂಬ” ಎಂಬ ಕ್ಯಾಪ್ಷನ್ ನೀಡಿದ್ದು ಅವರ ಹಾಲಿಡೇ ವೈಬ್ಸ್ ಸ್ಪಷ್ಟವಾಗಿ ತೋರಿಸುತ್ತಿದೆ..
ಆಲಿಯಾ ಈ ಟ್ರಿಪ್‌ಗೆ ತಮ್ಮ ತಾಯಿ ಸೋನಿ ರಾಜ್ದಾನ್, ಅಕ್ಕ ಶಾಹೀನ್ ಭಟ್ ಹಾಗೂ ಶಾಹೀನ್ ಅವರ ಬಾಯ್‌ಫ್ರೆಂಡ್ ಇಶಾನ್ ಮೆಹ್ರಾ ಜೊತೆ ಹೋಗಿದ್ದಾರೆ. ಅವರ ಫ್ಯಾಮಿಲಿ ಬಾಂಧವ್ಯದ ಕ್ಷಣಗಳು ಹಾಗೂ ಬೀಚ್ ಫೋಟೋಗಳು ಅಭಿಮಾನಿಗಳಿಗೆ ಬಹಳಷ್ಟು ಖುಷಿ ನೀಡಿದೆ
ಆರೆಂಜ್ ಬಿಕಿನಿಯ ಜೊತೆಗೆ ಅಲಿಯಾ ಇನ್ನೂ ಹಲವು ಸ್ಟೈಲಿಷ್ ಬೀಚ್ ಲುಕ್‌ಗಳನ್ನು ಹಂಚಿ ಕೊಂಡಿದ್ದಾರೆ. ಬ್ಲ್ಯಾಕ್ ಮೋನೋಕಿನಿ ಲುಕ್ ನಲ್ಲೂ ಆಲಿಯಾ ಬಹಳ ಹಾಟ್ ಆಗಿ ಕಂಡಿದ್ದಾರೆ.
ಬ್ಲೂ ಬಿಕಿನಿ, ಹಾಗೂ ಕ್ಯಾಂಡಿಡ್ ಶಾಟ್ಸ್ ಲುಕ್ , ಮೇಕಪ್ ಇಲ್ಲದ ಸೆಲ್ಫಿಗಳು ಅವರ ನೈಸರ್ಗಿಕ ಸೌಂದರ್ಯವನ್ನು ಇನ್ನಷ್ಟು ಹೈಲೈಟ್ ಮಾಡಿದ್ದು ಫ್ಯಾನ್ಸ್ ಲೈಕ್ಸ್ ಕಾಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ
ಅಲಿಯಾ ಭಟ್‌ನ ಈ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು "ನ್ಯಾಚುರಲ್ ಬ್ಯೂಟಿ", "ಕ್ವೀನ್ ಆಫ್ ಹಾರ್ಟ್ಸ್" ಎಂದು ಪ್ರತಿಕ್ರಿಯೆ ನೀಡಿದ್ದಾರೆ.