ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi Birthday: ಪ್ರಧಾನಿ ಮೋದಿಗೆ ದೊರಕಿರುವ ವಿಶೇಷ ವಿದೇಶಿ ಗೌರವಗಳು ಯಾವುದು ಗೊತ್ತೇ?

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಶ್ವದ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿರುವ ಮೋದಿಗೆ ವಿಶ್ವದಾದ್ಯಂತ ಹಲವಾರು ಗೌರವಗಳು ದೊರಕಿವೆ. ಅದರಲ್ಲಿ ವಿಶೇಷವಾಗಿರುವ 25 ವಿದೇಶಿ ಗೌರವಗಳ ಪಟ್ಟಿ ಇಲ್ಲಿದೆ.

1/8

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಿಶ್ವದ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿ ಅವರು ಗುರುತಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ವಿಶ್ವದಾದ್ಯಂತ ಹಲವಾರು ಗೌರವಗಳು ದೊರಕಿವೆ. ಅವುಗಳಲ್ಲಿ ಪ್ರಮುಖ 25 ವಿದೇಶಿ ಗೌರವಗಳು ಇಂತಿವೆ.

2/8

ಪ್ರಧಾನಿ ನರೇಂದ್ರ ಮೋದಿ ಅವರಿಗೆ 2016ರಲ್ಲಿ ಸೌದಿ ಅರೇಬಿಯಾದ ಅತ್ಯುನ್ನತ ನಾಗರಿಕ ಗೌರವವಾದ 'ಕಿಂಗ್ ಅಬ್ದುಲಜೀಜ್ ಸಾಶ್' ಪ್ರಶಸ್ತಿಯನ್ನು ನೀಡಲಾಯಿತು. ಅದೇ ವರ್ಷ ಅಫ್ಘಾನಿಸ್ತಾನವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಸ್ಟೇಟ್ ಆರ್ಡರ್ ಆಫ್ ಘಾಜಿ ಅಮೀರ್ ಅಮಾನುಲ್ಲಾ ಖಾನ್' ಅನ್ನು ಅವರಿಗೆ ನೀಡಿ ಗೌರವಿಸಿತ್ತು.

3/8

2018 ರಲ್ಲಿ ಅವರು ಪ್ಯಾಲೆಸ್ಟೈನ್ ನಿಂದ 'ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ಟೈನ್' ಪ್ರಶಸ್ತಿ, 2019ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ 'ಆರ್ಡರ್ ಆಫ್ ಜಾಯೆದ್' ಪ್ರಶಸ್ತಿ ಪಡೆದರು.

4/8

2019ರಲ್ಲಿ ರಷ್ಯಾ ಅವರಿಗೆ 'ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೋಸ್ತಲ್' ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ಅದೇ ವರ್ಷ ಮಾಲ್ಡೀವ್ಸ್ ಅವರಿಗೆ 'ಆರ್ಡರ್ ಆಫ್ ದಿ ಡಿಸ್ಟಿಂಗ್ವಿಶ್ಡ್ ರೂಲ್ ಆಫ್ ನಿಶಾನ್ ಇಝುದ್ದೀನ್', ಬಹ್ರೇನ್ ನಿಂದ ಪ್ರತಿಷ್ಠಿತ 'ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್' ಪ್ರಶಸ್ತಿಯನ್ನು ಸ್ವೀಕರಿಸಿದರು.

5/8

2020 ರಲ್ಲಿ ಅಮೆರಿಕ ಅವರಿಗೆ 'ಲೀಜನ್ ಆಫ್ ಮೆರಿಟ್' ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ, 2021 ರಲ್ಲಿ ಭೂತಾನ ಅವರಿಗೆ 'ಆರ್ಡರ್ ಆಫ್ ದಿ ಡ್ರಕ್ ಗಯಾಲ್ಪೊ' ಪ್ರಶಸ್ತಿಯನ್ನು ನೀಡಿತು. 2023 ರಲ್ಲಿ ಪಪುವಾ ನ್ಯೂ ಗಿನಿಯಾ ಅವರಿಗೆ 'ಎಬಾಕಲ್ ಪ್ರಶಸ್ತಿ', 'ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ' ಪ್ರಶಸ್ತಿಯನ್ನು ಪಡೆದರು.

6/8

2023 ರಲ್ಲಿ ಪಪುವಾ ನ್ಯೂ ಗಿನಿಯಾ ಅವರಿಗೆ 'ಆರ್ಡರ್ ಆಫ್ ಲೋಗೋಹು' ಪ್ರಶಸ್ತಿ, ಈಜಿಪ್ಟ್ ನಿಂದ 'ಆರ್ಡರ್ ಆಫ್ ನೈಲ್' ಪ್ರಶಸ್ತಿ, ಫ್ರಾನ್ಸ್ ನಿಂದ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್' ಪ್ರಶಸ್ತಿ, ಗ್ರೀಸ್ ನಿಂದ 'ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್' ಪ್ರಶಸ್ತಿಯನ್ನು ಸ್ವೀಕರಿಸಿದರು.

7/8

2024 ರಲ್ಲಿ ಡೊಮಿನಿಕಾ ಅವರಿಗೆ 'ಡೊಮಿನಿಕಾ ಅವಾರ್ಡ್ ಆಫ್ ಆನರ್' ಪ್ರಶಸ್ತಿ, ನೈಜೀರಿಯಾದಿಂದ 'ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್', ಗಯಾನಾದಿಂದ 'ದಿ ಆರ್ಡರ್ ಆಫ್ ಎಕ್ಸಲೆನ್ಸ್' ಪ್ರಶಸ್ತಿ, ಬಾರ್ಬಡೋಸ್ ನಿಂದ 'ಗೌರವ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್ ಪ್ರಶಸ್ತಿ, ಕುವೈತ್‌ನಿಂದ 'ಮುಬಾರಕ್ ಅಲ್-ಕಬೀರ್ ಆರ್ಡರ್' ಪ್ರಶಸ್ತಿ, ಮಾರಿಷಸ್ ನಿಂದ 'ದಿ ಗ್ರ್ಯಾಂಡ್ ಕಮಾಂಡರ್ ಆಫ್', ಆರ್ಡರ್ ಆಫ್ ದಿ ಸ್ಟಾರ್ ಅಂಡ್ ಕೀ ಆಫ್ ದಿ ಹಿಂದೂ ಮಹಾಸಾಗರ ಪ್ರಶಸ್ತಿಯನ್ನು ಸ್ವೀಕರಿಸಿದರು.

8/8

ಶ್ರೀಲಂಕಾದಿಂದ 2025ರಲ್ಲಿ ‘ಶ್ರೀಲಂಕಾ ಮಿತ್ರ ವಿಭೂಷಣ’ ಪ್ರಶಸ್ತಿ, ಸೈಪ್ರಸ್ ನಿಂದ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III’, ಘಾನಾದಿಂದ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ಪ್ರಶಸ್ತಿ, ಬ್ರೆಜಿಲ್ ನ ‘ದಿ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್’ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಸ್ವೀಕರಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author