ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pragya Jaiswal: ಬ್ಯಾಕ್ಲೆಸ್‌ ಡ್ರೆಸ್‌ನಲ್ಲಿ ಸೆಕ್ಸಿ ಫೋಸ್‌ ಕೊಟ್ಟ ನಟಿ; ಫೋಟೋ ನೋಡಿ

ನಟಿ‌ ಪ್ರಗ್ಯಾ ಜೈಸ್ವಾಲ್ ತನ್ನ ಅಧ್ಬುತ ಫ್ಯಾಷನ್‌ ಲುಕ್‌ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಅವರು ಧರಿಸಿರುವ ಟ್ರಾಪಿಕಲ್ ಲೀಫ್ ಪ್ರಿಂಟ್‌ನ ಬ್ಯಾಕ್ಲೆಸ್ ಡ್ರೆಸ್ ನ ಫೋಟೋಗಳು ಬಹಳಷ್ಟು ವೈರಲ್‌ ಆಗಿದ್ದು, ಇನ್‌ಸ್ಟಾಗ್ರಾಮ್ ನಲ್ಲಿ ಹೆಚ್ಚು ಲೈಕ್ಸ್‌ ವೀವ್ಸ್ ಪಡೆದಿದೆ.

Pragya Jaiswal
1/6

ಬಿಗ್ ಬಾಸ್ ಖ್ಯಾತಿಯ ಅಭಿಜಿತ್ ಅಭಿನಯದ 'ಮಿರ್ಚಿ ಲಾಂಟಿ ಕುರ್ರಾಡು' ಚಿತ್ರದ ಮೂಲಕ ಪ್ರಗ್ಯಾ ಜೈಸ್ವಾಲ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಆ ಬಳಿಕ ವರುಣ್ ತೇಜ್ ಜೊತೆಗೆ ನಟಿಸಿದ ‘ಕಂಚೆ’ ಸಿನಿಮಾದಲ್ಲಿ ಸೀತಾದೇವಿಯಾಗಿ ಅದ್ಭುತ ಅಭಿನಯ ಮಾಡಿ ಖ್ಯಾತಿ ಗಳಿಸಿದ್ದರು. ಸದ್ಯ ನಟಿ ಫ್ಲವರ್ ವಿನ್ಯಾಸದ ಬ್ಯಾಕ್ಲೆಸ್ ಡ್ರೆಸ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

2/6

'ಮಳೆ ನಿಂತ ಸಮಯ' ಎಂಬ ಕ್ಯಾಪ್ಷನ್‌ನೊಂದಿಗೆ ಪೋಸ್ಟ್‌ ಮಾಡಿರುವ ಈ ಫೋಟೋಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಪ್ರಗ್ಯಾಳ ಬೋಲ್ಡ್ ಲುಕ್‌ಗೆ ನೆಟಿಜನ್‌ಗಳು ಫೈರ್ ಇಮೋಜಿ ಹಾಗೂ ಲೈಕ್ಸ್ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

3/6

'ಗುಂಟುರೋಡು', 'ನಕ್ಷತ್ರಂ' ಮತ್ತು 'ಜಯ ಜಾನಕಿ ನಾಯಕಿ' ಅಂತಹ ಹಲವು ಹಿಟ್ ಸಿನಿಮಾ ಗಳೊಂದಿಗೆ ಟಾಲಿವುಡ್‌ನಲ್ಲಿ ಹೆಸರು ಗಳಿಸಿದ್ದರು. ತೆಲುಗಿನ ಹಲವು ನಟರೊಂದಿಗೆ ನಟಿಸಿರುವ ಪ್ರಗ್ಯಾ, ಅಖಂಡ ಸಿನಿಮಾದಲ್ಲಿ ಬಾಲಕೃಷ್ಣ ಜೊತೆಗೂ ನಟಿಸಿದ್ದಾರೆ.

4/6

ಇತ್ತೀಚೆಗಷ್ಟೇ ಬಾಲಿ ಪ್ರವಾಸ ತೆರಳಿದ್ದ ಪ್ರಗ್ಯಾ, ಅಲ್ಲಿನ ಬೀಚ್‌ ಮತ್ತು ಸೂರ್ಯಾಸ್ತದ ಬೆಳಕಿನಲ್ಲಿ ತೆಗೆದ ಫೋಟೋಗಳ ಮೂಲಕ ತಮ್ಮ ಹಾಲಿಡೇ ಎಂಜಾಯ್ ಮಾಡಿದ್ದ ಫೋಟೋ ಶೇರ್‌ ಮಾಡಿದ್ದರು.

5/6

ವೃತ್ತಿಪರ ಬದುಕಿನಲ್ಲಿ ಪ್ರಗ್ಯಾ ಕೊನೆಯದಾಗಿ “ಡಾಕು ಮಹಾರಾಜ್” ಎಂಬ ಆ್ಯಕ್ಷನ್ ಡ್ರಾಮಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಬಾಬಿ ಕೊಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ, ಶ್ರದ್ಧಾ ಶ್ರೀನಾಥ್ ಮೊದಲಾದವರು‌ ಅಭಿನಯಿಸಿದ್ದರು.

6/6

ಇದಕ್ಕೂ ಮೊದಲು, ಅವರು ಮುದಾಸ್ಸರ್ ಅಜೀಜ್ ನಿರ್ದೇಶನದ “ಖೇಲ್ ಖೇಲ್ ಮೇನ್” ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದರು. ಅಕ್ಷಯ್ ಕುಮಾರ್, ವಾಣಿ ಕಪೂರ್, ತಾಪ್ಸಿ ಪನ್ನು, ಮೊದಲಾದವರ ಜತೆ ಅವರು ನಿರ್ವಹಿಸಿದ್ದ ಪಾತ್ರಗಳು ಗಮನ ಸೆಳೆದಿವೆ.