Public Attack On CM: ರೇಖಾ ಗುಪ್ತಾ ಒಬ್ಬರೇ ಅಲ್ಲ ಸಾರ್ವಜನಿಕ ದಾಳಿಗೆ ಒಳಗಾದ ಮುಖ್ಯಮಂತ್ರಿಗಳು ಇವರು
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಬುಧವಾರ ಬೆಳಗ್ಗೆ ಜನ ಸಂಪರ್ಕ ಸಭೆಯ ವೇಳೆ ಸಾರ್ವಜನಿಕ ದಾಳಿಗೆ ಒಳಗಾಗಿದ್ದಾರೆ. ಇವರೊಬ್ಬರೇ ಅಲ್ಲ ಈ ಹಿಂದಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೂ ಸಾರ್ವಜನಿಕ ದಾಳಿಯಾಗಿತ್ತು. ಇವರು ಸೇರಿ ಇನ್ನು ಮೂವರು ಮುಖ್ಯಮಂತ್ರಿಗಳು ಸಾರ್ವಜನಿಕರಿಂದ ಏಟು ತಿಂದಿದ್ದಾರೆ. ಅವರು ಯಾರು ಎನ್ನುವ ಕುರಿತು ಇಲ್ಲಿದೆ ಮಾಹಿತಿ.
ಜನ ಸಂಪರ್ಕ ಸಭೆಯ ವೇಳೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಗುಜರಾತ್‌ನ ರಾಜ್‌ಕೋಟ್ ನಿವಾಸಿ ರಾಜೇಶ್ ಸಕ್ರಿಯಾ ದಾಳಿ ನಡೆಸಿರುವುದು ಈಗ ದೇಶಾದ್ಯಂತ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಇವರು ಮಾತ್ರವಲ್ಲ ಈ ಹಿಂದಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಸಾರ್ವಜನಿಕರಿಂದ ಏಟು ತಿಂದಿದ್ದಾರೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಸಾರ್ವಜನಿಕ ದಾಳಿ ನಡೆದಿದೆ. ರೇಖಾ ಗುಪ್ತಾ ಬುಧವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಈ ದಾಳಿ ನಡೆದಿದೆ. ಬಳಿಕ ರೇಖಾ ಗುಪ್ತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲು ದೆಹಲಿ ಪೊಲೀಸ್ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಲವು ಬಾರಿ ಸಾರ್ವಜನಿಕ ದಾಳಿಯನ್ನು ಎದುರಿಸಿದ್ದಾರೆ. 2016 ರಲ್ಲಿ ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಜಾಬ್ ಸಂಘಟನೆಯ ಮಹಿಳೆಯೊಬ್ಬರು ಕೇಜ್ರಿವಾಲ್ ಮೇಲೆ ಕಪ್ಪು ಮಸಿ ಎರಚಿದ್ದರು.
2014ರಲ್ಲಿ ಸುಲ್ತಾನ್ಪುರಿಯಲ್ಲಿ ಪ್ರಚಾರ ನಡೆಸುತ್ತಿದ್ದಾಗ ಆಟೋರಿಕ್ಷಾ ಚಾಲಕನೊಬ್ಬ ಕೇಜ್ರಿವಾಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದ. ಇನ್ನು ಬೆಸ-ಸಮ ಯೋಜನೆ ಜಾರಿ ಕುರಿತ ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕರ ಪೈಕಿ ಓರ್ವ ಅವರ ಮೇಲೆ ಶೂ ಎಸೆದಿದ್ದರು. ರೋಡ್ ಶೋ ವೇಳೆ ಕೂಡ ಅವರ ಮೇಲೆ ಹಲ್ಲೆಯಾಗಿತ್ತು.
2014ರಲ್ಲಿ ಹರಿಯಾಣ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್ ಸಿಂಗ್ ಹೂಡಾ ಅವರ ಮೇಲೆ ಉದ್ಯೋಗ ಸಮಸ್ಯೆಯಿಂದ ಹತಾಶೆಗೊಂಡ ಯುವಕನೊಬ್ಬ ದಾಳಿ ನಡೆಸಿದ್ದ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭೂಪಿಂದರ್ ಸಿಂಗ್ ಹೂಡಾ ಅವರಿಗೆ ಕಪಾಳಮೋಕ್ಷ ಮಾಡಿದ್ದನು.
ಆಂಧ್ರಪ್ರ ದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಮೇಲೆ 2018ರಲ್ಲಿ ವಿಶಾಖಪಟ್ಟಣಂ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಮೇಲೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವಿರೋಧ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದರು.