ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rakshit Shetty Birthday: ಸಿಂಪಲ್ ಸ್ಟಾರ್‌ಗೆ ಬರ್ತ್‌ ಡೇ ಸಂಭ್ರಮ; ರಕ್ಷಿತ್ ಶೆಟ್ಟಿ ಕುರಿತು ನಿಮಗೆ ಗೊತ್ತಿರದ ಇಂಟ್ರಸ್ಟಿಂಗ್ ಸಂಗತಿಗಳು ಇಲ್ಲಿವೆ

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ರಕ್ಷಿತ್ ಶೆಟ್ಟಿ ಅವರು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್ ವುಡ್ ಸ್ಟಾರ್ ಗೆ ಸೆಲೆಬ್ರಿಟಿಗಳು, ಆತ್ಮೀಯರು, ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಈ ನಡುವೆ ರಕ್ಷಿತ್ ಶೆಟ್ಟಿ ಸಿನಿ ಜರ್ನಿ ಬಗ್ಗೆ ಕೆಲ ವಿಚಾರಗಳು ಮತ್ತೊಮ್ಮೆ ಹೈಲೈಟ್ ಆಗುತ್ತಿದೆ.

1/9

ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿನಿಮಾ ಅಲ್ಲದೇ ವೈಯಕ್ತಿಕ ವಿಚಾರವಾಗಿಯು ಸುದ್ದಿಯಲ್ಲಿರುತ್ತಾರೆ. ಅಪ್ಪಟ ಕರಾವಳಿ ಪ್ರತಿಭೆಯಾಗಿರುವ ಇವರು ನಟನಾಗಿ ನಿರ್ದೇಶಕರಾಗಿ ನಿರ್ಮಾಪಕರಾಗಿ ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.

2/9

ನಟ ರಕ್ಷಿತ್​​ ಶೆಟ್ಟಿ ಅವರು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್ ವುಡ್ ಬ್ಯಾಚುಲರ್ ಸ್ಟಾರ್ ಗೆ ಸೆಲೆಬ್ರಿಟಿಗಳು, ಆತ್ಮೀಯರು, ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಈ ನಡುವೆ ರಕ್ಷಿತ್ ಶೆಟ್ಟಿ ಸಿನಿ ಜರ್ನಿ ಬಗ್ಗೆ ಕೆಲ ಇಂಟ್ರಸ್ಟಿಂಗ್ ವಿಚಾರಗಳು ಸುದ್ದಿಯಲ್ಲಿವೆ.

3/9

ಮಂಗಳೂರು ಮೂಲದವರಾದ ನಟ ರಕ್ಷಿತ್ ಶೆಟ್ಟಿ ಅವರಿಗೆ ಮೊದಲಿನಿಂದಲೂ ಕ್ರಿಯೇಟಿವ್ ಆಗಿರೊದಂದ್ರೆ ಬಹಳ ಇಷ್ಟ. ಇಂಜಿನಿಯರ್ ಆಗಿ 2 ವರ್ಷಗಳ ಕಾಲ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ಸಿನಿಮಾ ಬ್ಯಾಕ್‌ಗ್ರೌಂಡ್ ಇಲ್ಲದೆಯೂ ನಟನಾಗಿ ಮಿಂಚಬೇಕು ಎಂಬ ಕನಸು ರಕ್ಷಿತ್ ಶೆಟ್ಟಿ ಅವರಿಗಿತ್ತು. ಹೀಗಾಗಿ ನಮ್ ಏರಿಯಾದಲ್ಲಿ ಒಂದು ದಿನ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ 2010ರಲ್ಲಿ ತೆರೆಕಂಡಿದ್ದು ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಬಳಿಕ 2012ರಲ್ಲಿ ತುಘಲಕ್ ಸಿನಿಮಾದಲ್ಲಿ ಕೂಡ ನಟ ರಕ್ಷಿತ್ ಶೆಟ್ಟಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು ಈ ಸಿನಿಮಾ ಕೂಡ ಫ್ಲಾಪ್ ಆಗಿತ್ತು.

4/9

ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಸಿನಿಮಾ ಮೂಲಕ ರಕ್ಷಿತ್ ಯುವ ಜನರ ಮನಗೆದ್ದರು. ಸ್ವ ನಿರ್ದೇಶನದಲ್ಲಿ ಉಳಿದವರು ಕಂಡಂತೆ ಸಿನಿಮಾ ಮಾಡಿದರು. ವಿಭಿನ್ನ ಕಥೆ ಹೊಂದಿದ್ದ ಈ ಸಿನಿಮಾ ಥಿಯೇಟರ್ ನಲ್ಲಿ ಯಶಸ್ಸು ಪಡೆಯಿತು.ಬಳಿಕ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಾಧಾರಣ ಯಶಸ್ಸು ಕಂಡಿತು. 2016ರಲ್ಲಿ ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾ ಕಾಲೇಜು ಯುವಕ ಯುವತಿಯರನ್ನು ಅತೀ ಹೆಚ್ಚು ಸೆಳೆದು ಬಾಕ್ಸ್ ಆಫೀಸ್ ಕಲೆಕ್ಷನ್‌ ಮಾಡಿತ್ತು.

5/9

ಇವರ ಉಳಿದವರು ಕಂಡಂತೆ ಸಿನಿಮಾಕ್ಕೆ 2015ರಲ್ಲಿ ನಾಲ್ಕು ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಚೊಚ್ಚಲ ನಿರ್ದೇಶಕ ಫಿಲ್ಮ್ ಫೇರ್ ಪ್ರಶಸ್ತಿ (ಸೌತ್) ಸಿಕ್ಕಿದ್ದು ಹೆಮ್ಮೆತಂದ ವಿಚಾರವಾಗಿದೆ.

6/9

2017ರಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಹ ಲಭಿಸಿದೆ. ಸಿನಿಮಾ ಜೊತೆಗೆ ಹೊಸ ಕಲಾವಿದರಿಗೆ ಅವಕಾಶ ನೀಡಲು ಪರಂವಃ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯ ಜವಾಬ್ದಾರಿ ಕೂಡ ರಕ್ಷಿತ್ ತೆಗೆದುಕೊಂಡಿದ್ದಾರೆ.

7/9

ಬ್ಯಾಚುಲರ್ ಪಾರ್ಟಿ, ಇಬ್ಬನಿ ತಬ್ಬಿದ ಇಳೆಯಲಿ, ಭೀಮ ಸೇನ ನಳ ಮಹರಾಜ, ಗರುಡ ಗಮನ ವೃಷಭ ವಾಹನ, ಗಾರ್ಗಿ, ಹಾಸ್ಟೆಲ್ ಹುಡುಗರು ಸೇರಿದಂತೆ ಇನ್ನು ಅನೇಕ ಸಿನಿಮಾ ಪ್ರೊಡ್ಯೂಸ್ ಮಾಡಿದ್ದಾರೆ..

8/9

ಸದ್ಯ ನಟ ರಕ್ಷಿತ್ ಶೆಟ್ಟಿ ಅವರು ರಿಚರ್ಡ್ ಆ್ಯಂಟನಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವನ್ನು ತಾವೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ.‌‌ಈ ಸಿನಿಮಾ ಬಳಿಕ ಚಾರ್ಲಿ 2, ಪುಣ್ಯಕೋಟಿ, ಮಾಲ್ಗುಡಿ ಡೇಸ್​ ಸಿನಿಮಾ ಮಾಡುತ್ತಾರೆ ಎಂಬ ವದಂತಿಗಳು ಕೂಡ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

9/9

ನಟ ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ​​ರಿಷಭ್ ಶೆಟ್ಟಿ ಅವರು ಇನ್ ಸ್ಟಾಗ್ರಾಮ್​ನಲ್ಲಿ ರಕ್ಷಿತ್ ಜೊತೆಗಿರುವ ಗಿಬ್ಲಿ ಫೋಟೋ ಹಂಚಿಕೊಂಡು ಶುಭ ಕೋರಿದ್ದು ಕೂಡ ವೈರಲ್ ಆಗಿದೆ. ನನ್ನ ಪಾಲಿಗೆ ನೀನು ಅತ್ಯಂತ ದೊಡ್ಡ ಶಕ್ತಿ. ಒಳ್ಳೆಯ ಮತ್ತು ಕಷ್ಟದ ದಿನಗಳಲ್ಲಿ ಸದಾ ನನ್ನ ಜೊತೆ ನಿಂತವನು ನೀನು, ಏರಿಳಿತದ ಪಯಣದಲ್ಲಿ ನನ್ನ ಕೈ ಬಿಡದೇ, ಜೊತೆಗಿದ್ದ ನಿನಗೆ ಧನ್ಯವಾದಗಳು. ನಿನ್ನ ಎಲ್ಲಾ ಕನಸುಗಳು ನನಸಾಗಲಿ, ಉತ್ತಮ ಆರೋಗ್ಯ, ಅಗಾಧ ಯಶಸ್ಸು ನಿನ್ನದಾಗಲಿ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಗಾ'' ಎಂದು ಬರೆದುಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಇನ್ನೊಬ್ಬ ಗೆಳೆಯರಾದ ಪ್ರಮೋದ್ ಶೆಟ್ಟಿ ಕೂಡ ರಕ್ಷಿತ್ ಜೊತೆಗಿನ ಫೋಟೊ ಹಂಚಿಕೊಂಡು ಶುಭಕೋರಿದ್ದಾರೆ.