ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saree Fashion 2025: ಅಜ್ಜಿ ಕಾಲದ ಡಿಸೈನ್‌ನ ಸೀರೆಗೂ ನೀಡಬಹುದು ನ್ಯೂ ಲುಕ್

ಅಜ್ಜಿ ಉಡುತ್ತಿದ್ದ ರೆಟ್ರೋ ಡಿಸೈನ್‌ನ ಸೀರೆಗಳನ್ನು ಇದೀಗ ಹುಡುಗಿಯರು ಇಷ್ಟಪಡಲಾರಂಭಿಸಿದ್ದಾರೆ. ಹಳೆಯ ಸೀರೆಯನ್ನು ಹೊಸ ಬಗೆಯಲ್ಲಿ ಡ್ರೇಪಿಂಗ್ ಹಾಗೂ ಸ್ಟೈಲಿಂಗ್ ಮಾಡಿ ಉಡಲಾರಂಭಿಸಿದ್ದಾರೆ. ಅದು ಹೇಗೆ? ಈ ಕುರಿತಂತೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್
1/5

ಹೊಸ ಲುಕ್ ನೀಡಿ

ಅಜ್ಜಿ ಉಡುತ್ತಿದ್ದ ಓಲ್ಡ್ ಫ್ಯಾಷನ್‌ನ ಡಿಸೈನ್ ಸೀರೆಗಳಿಗೂ ಇದೀಗ ಕಾಲ ಬಂದಿದೆ. ಹೌದು, ಕಾಲೇಜಿಗೆ ಹೋಗುವ ಹುಡುಗಿಯರು, ಕಚೇರಿಗೆ ತೆರಳುವ ಮಾನಿನಿಯರು ಇವನ್ನು ಉಡಲಾರಂಭಿಸಿದ್ದಾರೆ. ಇಲ್ಲವೇ ಇವಕ್ಕೆ ಹೊಸ ಸ್ಟೈಲಿಂಗ್ ಮೂಲಕ ಹೊಸ ರೂಪ ನೀಡಿದ್ದಾರೆ. ಒಟ್ಟಿನಲ್ಲಿಅಜ್ಜಿ ಕಾಲದ ಡಿಸೈನ್ ಸೀರೆಗೆ ಹೊಸ ಟಚ್ ದೊರಕಿದೆ. ಅಂದಹಾಗೆ, ಹಳೆಯ ಅಜ್ಜಿ ಕಾಲದ ಡಿಸೈನ್‌ನ ಸೀರೆಗಳಿದ್ದಲ್ಲಿ, ಅದಕ್ಕೆ ನೀವು ಹೊಸ ಲುಕ್ ನೀಡಬಹುದು. ಉಡುವ ಸ್ಟೈಲ್ ಬದಲಾಯಿಸಿ. ಇಲ್ಲವೇ ಹೊಸ ರೀತಿಯಲ್ಲಿ ಸುತ್ತಿಕೊಳ್ಳಿ. ಇದು ನೋಡಲು ವಿಭಿನ್ನವಾಗಿ ಕಾಣುತ್ತದೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ರಿಯಾ. ಈ ಕುರಿತಂತೆ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

2/5

ಇಂಡೋ-ವೆಸ್ಟರ್ನ್ ಬ್ಲೌಸ್ ಮಿಕ್ಸ್ ಮ್ಯಾಚ್ ಮಾಡಿ

ನೀವು ಅಜ್ಜಿ ಕಾಲದ ಡಿಸೈನ್‌ನ ಸೀರೆಗೂ ಇಂಡೋ-ವೆಸ್ಟರ್ನ್ ಲುಕ್ ನೀಡಬಹುದು. ಹೌದು, ನಾನಾ ಬಗೆಯ ಹೊಸ ಶೈಲಿಯ ಕ್ರಾಪ್ ಟಾಪ್, ಬಾಡಿಕಾನ್ ಟಾಪ್ ಸೇರಿದಂತೆ ನಾನಾ ಬಗೆಯ ವೆಸ್ಟರ್ನ್ ಲುಕ್ ನೀಡುವ ಬ್ಲೌಸ್ ಧರಿಸಿ, ಹೊಸ ಲುಕ್ ನೀಡಬಹುದು.

3/5

ಬೇಕಾದಲ್ಲಿ ಡಿಸೈನರ್‌ವೇರ್ ರೂಪ ನೀಡಿ

ಹಳೆ ಡಿಸೈನ್‌ನ ಸೀರೆ ಉಟ್ಟು ಬೇಸರವಾದಲ್ಲಿ, ಲಾಂಗ್ ಸ್ಕರ್ಟ್ಸ್ ಹಾಗೂ ಪಟಿಯಾಲದಂತಹ ಪ್ಯಾಂಟ್‌ನಂತೆ ಹೊಲೆಸಿ ಹೊಸ ರೂಪ ನೀಡಬಹುದು. ಗೌನ್ ಶೈಲಿಯಲ್ಲಿ ಸ್ಲಿವ್ಲೆಸ್ ಟಾಪ್ ಕೂಡ ಹೊಲೆಸಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಗಾಗ್ರ ಶೈಲಿಯಲ್ಲೂಇವನ್ನು ಹೊಲಿಸಬಹುದು ಎನ್ನುತ್ತಾರೆ ಡಿಸೈನರ್ ಶೈಲಾ.

4/5

ಆಕ್ಸೆಸರೀಸ್ ಹೀಗಿರಲಿ

ಇಂತಹ ಸೀರೆಗಳಿಗೆ ಆದಷ್ಟೂ ಟ್ರೈಬಲ್ ಹಾಗೂ ಆ್ಯಂಟಿಕ್ ಡಿಸೈನ್‌ನ ಆಕ್ಸೆಸರೀಸ್ ಸೂಟ್ ಆಗುತ್ತವೆ. ಜತೆಗೆ ಬ್ಲಾಕ್ ಹಾಗೂ ವೈಟ್ ಮೆಟಲ್ನ ಆಕ್ಸೆಸರೀಸ್ ಹೊಂದುತ್ತವೆ. ಹಾಗಾಗಿ ಉಡುವ ಸೀರೆಯ ಬಾರ್ಡರ್ ಹಾಗೂ ಚೆಕ್ಸ್ ನೋಡಿಕೊಂಡು ಆಕ್ಸೆಸರೀಸ್ ಧರಿಸುವುದು ಉತ್ತಮ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಇನ್ನು, ಅಜ್ಜಿ ಕಾಲದ ಡಿಸೈನ್‌ನ ಸೀರೆಗಳು ಇಂದು ಮಾಡೆಲ್‌ಗಳಿಗೂ ಪ್ರಿಯವಾಗತೊಡಗಿವೆ. ಈ ಸೀರೆಗಳಿಗೆ ತಕ್ಕಂತೆ ಆಕ್ಸೆಸರೀಸ್ ಮ್ಯಾಚ್ ಮಾಡಿದಲ್ಲಿ, ಮತ್ತಷ್ಟು ಸುಂದರವಾಗಿ ಕಾಣಿಸುವುದು ಎನ್ನುತ್ತಾರೆ ಫ್ಯಾಷನಿಸ್ಟಾ ರಿಚಾ.

5/5

ಹೊಸ ಲುಕ್ ನೀಡಿ ನೋಡಿ

* ಟೀನೇಜ್ ಹುಡುಗಿಯರಾದಲ್ಲಿಆದಷ್ಟೂ ಟ್ರೆಂಡಿ ಆಕ್ಸೆಸರೀಸ್ ಧರಿಸಿ.

* ಈ ಸೀರೆಗಳಿಗೆ ಮಿಕ್ಸ್ ಮ್ಯಾಚ್ ಬ್ಲೌಸ್ ಧರಿಸಬಹುದು.

* ಇಂಡೋ-ವೆಸ್ಟರ್ನ್ ಲುಕ್ ನೀಡಿ, ಹೊಸತನ ಮೂಡಿಸುವುದು.

ಶೀಲಾ ಸಿ ಶೆಟ್ಟಿ

View all posts by this author