Bhavana Ramanna: ಅವಳಿ ಮಕ್ಕಳಿಗೆ ತಾಯಿಯಾಗುತ್ತಿರುವ ಭಾವನಾಗೆ ಸೀಮಂತ ಶಾಸ್ತ್ರ; ಫೋಟೋಸ್ ನೋಡಿ
ನಟಿ ಭಾವನಾ ರಾಮಣ್ಣ ಐವಿಎಫ್ ಮೂಲಕ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದಾರೆ. ಅವರಿಗೆ ಇದೀಗ ಏಳು ತಿಂಗಳುಗಳು ತುಂಬಿದ್ದು, ಸೀಮಂತ ಶಾಸ್ತ್ರವನ್ನು ನೆರವೇರಿಸಲಾಗಿದೆ. ಸಂಪ್ರದಾಯದಂತೆ ಸೀಮಂತ ನಡೆದಿದೆ. ಅದರ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ತಮ್ಮ 40ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ಗರ್ಭ ಧರಿಸಿದ್ದಾರೆ. ಇದೀಗ ಅವರು ಏಳು ತಿಂಗಳ ಗರ್ಭಿಣಿಯಾಗಿದ್ದು ಸೀಮಂತ ಶಾಸ್ತ್ರ ನಡೆದಿದೆ. ಅವರ ನಿವಾಸದಲ್ಲೇ ಸೀಮಂತ ನಡೆದಿದ್ದು, ಕೆಲ ಆಪ್ತರಷ್ಟೇ ಆಗಮಿಸಿ ಶುಭ ಹಾರೈಸಿದ್ದಾರೆ. ಭಾವನಾ ಅವಳಿ ಮಕ್ಕಳಿಗೆ ಶೀಘ್ರದಲ್ಲೇ ಜನ್ಮ ನೀಡಲಿದ್ದಾರೆ.
ಭಾವನಾ ಅವಳಿ ಮಕ್ಕಳಿಗೆ ಶೀಘ್ರದಲ್ಲೇ ಜನ್ಮ ನೀಡಲಿದ್ದಾರೆ. ಮತ್ತೈದೆಯರು ಭಾವನಾಗೆ ಮಡಿಲು ತುಂಬುವ ಶಾಸ್ತ್ರ ಮಾಡಿ ಸಿಹಿ ತಿನ್ನಿಸಿದ್ದಾರೆ. ಭಾವನಾ ಹಸಿರು ಸೀರೆಯುಟ್ಟು ಕಂಗೊಳಿಸಿದ್ದಾರೆ.
ಭಾವನಾ ರಾಮಣ್ಣ ಅವರ ಸೀಮಂತ ಶಾಸ್ತ್ರದಲ್ಲಿ ಗಾಯಕಿ ಅರ್ಚನಾ ಉಡುಪ ಭಾಗಿಯಾಗಿದ್ದರು. ಅಲ್ಲದೇ ಲೋಕದ ಕಣ್ಣಿಗೆ ರಾಧೆಯು ಕೂಡ ಎಂಬ ಹಾಡನ್ನು ಹಾಡಿದ್ದಾರೆ.
ಸೀಮಂತ ಕಾರ್ಯಕ್ರಮದಲ್ಲಿ ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಭಾಗವಹಿಸಿದ್ದರು. ಸಂಪ್ರದಾಯದಂತೇ ಭಾವನಾ ಅವರ ಸೀಮಂತ ನಡೆದಿದೆ.
ಭಾವನಾ ರಾಮಣ್ಣ ಅವರಿಗೆ ಈಗಾಗಲೇ 45 ವರ್ಷ ವಯಸ್ಸಾಗಿದ್ದು, ಐವಿಎಫ್ ಚಿಕಿತ್ಸೆ ಮೂಲಕ ಗರ್ಭಿಣಿಯಾಗಿದ್ದಾರೆ. ವೈ ದ್ಯಕೀಯ ವರದಿಗಳ ಪ್ರಕಾರ, ಅವರ ಡೆಲಿವರಿ ದಿನಾಂಕವನ್ನು ನವೆಂಬರ್ 2025ರ ಸುಮಾರಿಗೆ ನಿಗದಿಪಡಿಸಲಾಗಿದೆ.