Profile

Vishakha Bhat

vishakha@vishwavani.news

Articles
Mahakumbh: ಕುಂಭಮೇಳದಲ್ಲಿ ಮತ್ತೊಂದು ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

ಮಹಾಕುಂಭ ಮೇಳದಲ್ಲಿ ಮತ್ತೊಂದು ಭಾರೀ ದುರಂತ

ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಮತ್ತೊಂದು ಅವಘಡ ಸಂಭವಿಸಿದೆ. ಪ್ರಯಾಗ್‌ ರಾಜ್‌ನ ಸೆಕ್ಟರ್ 18 ರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯನ್ನು ನಂದಿಸಲು ಹಲವಾರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿವೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

Physical Assault:  ಗರ್ಭಿಣಿ ಮೇಲೆ ಲೈಂಗಿಕ ದೌರ್ಜನ್ಯ; ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಪಾಪಿಗಳು

ಚಲಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿ ಮೇಲೆ ಲೈಂಗಿಕ ದೌರ್ಜನ್ಯ!

ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಮಾನುಷ ಘಟನೆ ನಡೆದಿದ್ದು, ಚಲಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ರೈಲಿನಿಂದ ಹೊರಗಸೆಯಲಾಗಿದೆ. ಚಿಕಿತ್ಸೆಗಾಗಿ ವೆಲ್ಲೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎನ್ನಲಾಗಿದೆ.

Donald Trump: ಅಂತರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ ವಿರುದ್ಧವೇ ಡೊನಾಲ್ಡ್‌ ಟ್ರಂಪ್‌ ಸಮರ

ಅಂತರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ ಮೇಲೆ ನಿರ್ಬಂಧ ಹೇರಿದ ಟ್ರಂಪ್‌

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಂತರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ಗೆ ನಿರ್ಬಂಧ ಹೇರುವ ಆದೇಶಕ್ಕೆ ಟ್ರಂಪ್‌ ಸಹಿ ಹಾಕಿದ್ದಾರೆ. ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರವಾದ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಕಾನೂನು ಬಾಹಿರ ಹಾಗೂ ಆಧಾರ ರಹಿತ ಕ್ರಮ ತೆಗೆದುಕೊಂಡಿರುವುದಕ್ಕಾಗಿ ಟ್ರಂಪ್‌ ಈ ನಿರ್ಬಂಧವನ್ನು ಹೇರಿದ್ದೇವೆ ಎಂದು ಹೇಳಿದ್ದಾರೆ.

Sonu Sood : ಬಾಲಿವುಡ್‌ ನಟ ಸೋನು ಸೂದ್‌ಗೆ ಸಂಕಷ್ಟ; ಕೋರ್ಟ್‌ನಿಂದ ಅರೆಸ್ಟ್‌ ವಾರಂಟ್‌!

ನಟ ಸೋನು ಸೂದ್‌ ವಿರುದ್ಧ ಬಂಧನ ವಾರೆಂಟ್‌ ಜಾರಿ

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಜನಪ್ರಿಯ ನಟ ಸೋನು ಸೂದ್ ವಿರುದ್ಧ ಪಂಜಾಬ್‌ನ ಲುಧಿಯಾನದ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ಪ್ರಮುಖ ಪ್ರಕರಣದ ಸಾಕ್ಷಿ ಹೇಳಲು ಸೋನು ಸೂದ್‌ ನ್ಯಾಯಾಲಯದ ಎದುರು ಹಾಜರಾಗಬೇಕಿತ್ತು. ಆದರೆ ನಟ ಗೈರು ಹಾಜರಿದ್ದರು. ಇದರಿಂದ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.

Fighter Jet Crash: ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ಪತನ; ಇಬ್ಬರು ಪೈಲೆಟ್‌ಗಳು ಸೇಫ್‌

ವಾಯುಪಡೆ ಹೆಲಿಕಾಪ್ಟರ್‌ ಪತನ- ಪೈಲೆಟ್‌ಗಳು ಸೇಫ್‌!

ಭಾರತೀಯ ವಾಯುಪಡೆಯ ಮಿರಾಜ್ 2000 ಯುದ್ಧ ವಿಮಾನವು ಮಧ್ಯ ಪ್ರದೇಶದ ಶಿವಪುರಿಯ ಕರೈರಾ ಪ್ರದೇಶದಲ್ಲಿ ಪತನಗೊಂಡಿದೆ. ಯುದ್ಧ ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಒಬ್ಬ ಪೈಲೆಟ್‌ಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Dadasaheb Phalke Award: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಹಗರಣ ಬಯಲು- ಸಂಸ್ಥಾಪಕ ಅನಿಲ್ ಮಿಶ್ರಾ ಮತ್ತು ಪುತ್ರನ ವಿರುದ್ಧ FIR

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲಿ ಗೋಲ್‌ಮಾಲ್‌

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲಿ ಅಕ್ರಮ ಎಸಗಿದ ಆರೋಪ ಮೇಲೆ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಮಿಶ್ರಾ ಮತ್ತು ಅವರ ಪುತ್ರ ಅಭಿಷೇಕ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

Aircraft collide: ನಿಲುಗಡೆ ಮಾಡಿದ್ದ ಡೆಲ್ಟಾ ವಿಮಾನಕ್ಕೆ ಜಪಾನ್ ಏರ್ಲೈನ್ಸ್ ವಿಮಾನ ಡಿಕ್ಕಿ; ವಿಡಿಯೋ ಇಲ್ಲಿದೆ

ನಿಲುಗಡೆ ಮಾಡಿದ್ದ ಡೆಲ್ಟಾ ವಿಮಾನಕ್ಕೆ ಮತ್ತೊಂದು ಏರ್‌ಕ್ರಾಫ್ಟ್‌ ಡಿಕ್ಕಿ

ವಾಷಿಂಗ್ಟನ್‌ನ ಸಿಯಾಟಲ್-ಟಕೋಮಾ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಿಮಾನಕ್ಕೆ ಜಪಾನ್ ಏರ್‌ಲೈನ್ಸ್‌ ವಿಮಾನವು ಡೆಲ್ಟಾ ಏರ್‌ಲೈನ್ಸ್‌ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಘಟನೆಯ ಬಗ್ಗೆ ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್‌ ಮಾಡಿ ತಿಳಿಸಿದ್ದಾರೆ.

Toll Pass: 3 ಸಾವಿರ ರೂ ಪಾವತಿಸಿದರೆ ವರ್ಷಪೂರ್ತಿ ಟೋಲ್‌ ಫ್ರೀ ಪ್ರಯಾಣ- ಕೇಂದ್ರದಿಂದ ಬಂಪರ್‌ ಆಫರ್‌

3 ಸಾವಿರ ರೂ. ಪಾವತಿಸಿ... ವರ್ಷಪೂರ್ತಿ ಟೋಲ್‌ ಫ್ರೀ ಪ್ರಯಾಣ ನಿಮ್ಮದಾಗಿಸಿ!

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿಯ ಟೋಲ್‌ ಪಾಸ್‌ಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಪಾಸ್‌ಗಳ ಮೂಲಕ 3000 ಸಾವಿರ ಪಾವತಿ ಮಾಡಿದರೆ ವಾರ್ಷಿಕ ಟೋಲ್‌ ಪಾಸ್‌ಗಳು ದೊರೆಯಲಿವೆ. 30,000 ಮುಂಗಡ ಪಾವತಿಯೊಂದಿಗೆ 15 ವರ್ಷಗಳವರೆಗೆ 'ಜೀವಮಾನದ ಪಾಸ್' ಖರೀದಿಸುವ ಆಯ್ಕೆಯೂ ಕೂಡ ಇರಲಿದೆ.

Shehbaz Sharif : ಶಾಂತಿ ಮಂತ್ರ ಪಠಿಸಿದ ಪಾಕಿಸ್ತಾನ- ಭಾರತದ ಜೊತೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದ ಪಾಕ್‌ ಪ್ರಧಾನಿ

ಭಾರತದ ಜೊತೆ ಶಾಂತಿ ಮಾತುಕತೆ ಪಾಕ್‌ ಒಲವು

ಕಾಶ್ಮೀರ ಸೇರಿದಂತೆ ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳನ್ನು ಪಾಕಿಸ್ತಾನ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಬಯಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಕಾಶ್ಮೀರ ಒಗ್ಗಟ್ಟಿನ ದಿನ”ದಂದು ಮುಜಫರಾಬಾದ್‌ನಲ್ಲಿ ನಡೆದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಶಾಸಕಾಂಗ ಸಭೆಯ ವಿಶೇಷ ಅಧಿವೇಶನದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

Illegal immigrants: ಕೈ ಕಾಲುಗಳಿಗೆ ಸರಪಳಿ, ಕೋಳ ಹಾಕಿ ಕರೆತಂದರು, ಟ್ರಂಪ್‌ ಸರ್ಕಾರದ ವಿರುದ್ಧ ವಲಸಿಗರ ಆರೋಪ!

ಸರಪಳಿ, ಕೋಳ ಹಾಕಿ ವಲಸಿಗರನ್ನು ಅಮೆರಿಕದಿಂದ ಕರೆ ತರಲಾಯ್ತಾ? ಅಸಲಿಯತ್ತೇನು?

ಅಮೆರಿಕದಿಂದ ಗಡಿಪಾರಾದ ವಲಸಿಗರು ಭಾರತಕ್ಕೆ ಮರಳಿದ್ದು, ಅಮೆರಿಕ ಸರ್ಕಾರ ತಮ್ಮನ್ನು ಹೇಗೆ ನಡೆಸಿಕೊಂಡಿದೆ ಎಂದು ಕೆಲವರು ಆರೋಪಿಸಿದ್ದಾರೆ. ಅಮೃತಸರದಲ್ಲಿ ಇಳಿದ ನಂತರವೇ ಕೈ, ಕಾಲುಗಳಿಗೆ ಹಾಕಿದ್ದ ಸಂಕೋಲೆಗಳನ್ನು ಬಿಚ್ಚಲಾಯಿತು ಎಂದು ಹೇಳಿದ್ದಾರೆ.

Bangladesh Unrest: ಬಾಂಗ್ಲಾದಲ್ಲಿ ಮತ್ತೆ ಕಿಡಿ ಹೊತ್ತಿಸಿದ ಶೇಖ್‌ ಹಸೀನಾ ಭಾಷಣ; ಉದ್ರಿಕ್ತರಿಂದ  ಮುಜಿಬುರ್ ರೆಹಮಾನ್ ನಿವಾಸ ಧ್ವಂಸ

ಬಾಂಗ್ಲಾದಲ್ಲಿ ಮತ್ತೆ ಹಿಂಸಾಚಾರ, ಶೇಖ್‌ ಹಸೀನಾ ತಂದೆಯ ನಿವಾಸಕ್ಕೆ ಬೆಂಕಿ

ತಣ್ಣಗಾಗಿದ್ದ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಭಾಷಣದಿಂದ ಆಕ್ರೋಶಗೊಂಡ ಉದ್ವಿಕ್ತರ ಗುಂಪೊಂದು ಢಾಕಾದಲ್ಲಿರುವ ಅವರ ತಂದೆ ಹಾಗೂ ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಸ್ಮಾರಕ ಮತ್ತು ಅವರ ನಿವಾಸವನ್ನು ಧ್ವಂಸಗೊಳಿಸಿದೆ

Physical Assault : ಮೂವರು ಶಿಕ್ಷಕರಿಂದಲೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಶಿಕ್ಷಕರಿಂದಲೇ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್‌

ಪಾಠ ಹೇಳಿಕೊಡುವ ಶಿಕ್ಷಕರೇ ರಕ್ಕಸರಾಗಿ ವಿದ್ಯಾರ್ಥನಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ತಮಿಳು ನಾಡಿನಲ್ಲಿ ನಡೆದಿದೆ. ಬಾಲಕಿಯ ತಾಯಿಯ ದೂರಿನ ಆಧಾರದ ಮೇಲೆ ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Indian Migrants: ಪಂಜಾಬ್‌ ಏರ್‌ಪೋರ್ಟ್‌ಗೆ ಬಂದಿಳಿದ ಅಮೆರಿಕದಿಂದ ಗಡಿಪಾರಾದ 205 ಭಾರತೀಯರು

ಅಮೆರಿಕದಿಂದ ಗಡಿಪಾರಾದ 205 ಭಾರತೀಯರು ಭಾರತಕ್ಕೆ

205 ಭಾರತೀಯರನ್ನು ಟ್ರಂಪ್‌ ಸರ್ಕಾರ ಗಡಿಪಾರು ಮಾಡಿದ್ದು, ಅಮೆರಿಕದಿಂದ ಗಡಿಪಾರಾದ ಭಾರತೀಯ ಪ್ರಜೆಗಳು ಪಂಜಾಬ್‌ನ ಅಮೃತಸರದಲ್ಲಿ ಬಂದಿಳಿದಿದ್ದಾರೆ. ವಲಸಿಗರಲ್ಲಿ 79 ಪುರುಷರು, 25 ಮಹಿಳೆಯರು ಮತ್ತು 13 ಮಕ್ಕಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

Delhi Election 2025: ದೆಹಲಿಯಲ್ಲಿ ಮತದಾನದ ವೇಳೆ ಬಿಜೆಪಿ- ಆಪ್‌  ಕಾರ್ಯಕರ್ತರ ನಡುವೆ ಮಾರಾಮಾರಿ

ದೆಹಲಿಯಲ್ಲಿ ಬಿಜೆಪಿ - ಆಪ್‌ ಕಾರ್ಯಕರ್ತರ ನಡುವೆ ಬಿಗ್‌ಫೈಟ್‌

ದೆಹಲಿಯ ವಿಧಾನ ಸಭಾ ಚುನಾವಣೆಯ ವೇಳೆ ಆಮ್‌ ಆದ್ಮಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಎರಡೂ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿದ್ದಾರೆ. ದೆಹಲಿಯ ಸೀಲಾಂಪುರದಲ್ಲಿ ನಕಲಿ ಮತದಾನ ನಡೆದಿದೆ ಎನ್ನುವ ಆರೋಪ ಬಿಜೆಪಿ ಮಾಡಿದೆ.

Delhi Election 2025: ವೋಟ್‌ ಮಾಡಿ ಶೇ.50ರಷ್ಟು ರಿಯಾಯಿತಿ ಪಡೆಯಿರಿ! ಡೆಲ್ಲಿ ಮತದಾರರಿಗೆ ವಿಶೇಷ ಆಫರ್‌

ವೋಟ್‌ ಮಾಡಿದ್ರೆ ಸ್ಪೆಷಲ್‌ ರಿಯಾಯಿತಿ! ಏನಿದು ಈ ಸ್ಟೋರಿ?

ದೆಹಲಿಯಲ್ಲಿ ಚುನಾವಣೆ ನಡೆಯುತ್ತಿದ್ದು, ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಚೇಂಬರ್ ಆಫ್ ಟ್ರೇಡ್ಸ್ ಅಂಡ್ ಇಂಡಸ್ಟ್ರೀಸ್ ವಿನೂತನ ಪ್ರಯತ್ನವೊಂದನ್ನು ಮಾಡಿದ್ದು, ಮತ ಚಲಾಯಿಸಿದವರಿಗೆ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ. ಮತ ಹಾಕಿದ ಸಾಕ್ಷಿಗಾಗಿ ಶಾಯಿ ಹಚ್ಚಿದ ಬೆರಳನ್ನು ತೋರಿಸಿದರೆ ರಿಯಾಯಿತಿ ದೊರೆಯಲಿದೆ.

Donald Trump:  ಗಾಜಾ ಪಟ್ಟಿಯ ಸಂಪೂರ್ಣ ಜವಾಬ್ದಾರಿ ನಮ್ಮದು ಎಂದ ಟ್ರಂಪ್‌! ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆ

ಗಾಜಾ ಪಟ್ಟಿ ಇನ್ನು ಅಮೆರಿಕದ ವಶಕ್ಕೆ? ಟ್ರಂಪ್‌ ಹೇಳಿದ್ದೇನು?

ಗಾಜಾ ಪಟ್ಟಿಯನ್ನು ನಾವು ಸ್ವಾಧೀನಪಡಿಸಿಕೊಂಡು ಇಡೀ ನಗರವನ್ನು ಅಭಿವೃದ್ಧಿ ಮಾಡುತ್ತೇವೆ. ಗಾಜಾದ ಮಾಲೀಕತ್ವವು ನಮ್ಮಲ್ಲೇ ಇರುತ್ತದೆ ಎಂದು ಅಮೆರಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್‌ರಿಂದ ಈ ಹೇಳಿಕೆ ಬಂದಿದೆ.

PM Modi at Mahakumbh :   ಮಹಾಕುಂಭ ಮೇಳದಲ್ಲಿ ಪ್ರಾಧಾನಿ ಮೋದಿ;  ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ

ಮಹಾ ಕುಂಭ ಮೇಳದಲ್ಲಿ ಪ್ರಾಧಾನಿ ಮೋದಿ ಪುಣ್ಯ ಸ್ನಾನ

ಪ್ರಧಾನಿ ನರೇಂದ್ರ ಮೋದಿ ಅವರು ಮಹಾಕುಂಭ ಮೇಳಕ್ಕೆ ಆಗಮಿಸಿದ್ದು, ತ್ರಿವೇಣಿಯಲ್ಲಿ ಪುಣ್ಯ ಸ್ನಾನ ಮಾಡಿದರು. ರುದ್ರಾಕ್ಷಿ ಮಾಲೆ ಹಿಡಿದು ಸೂರ್ಯನಿಗೆ ನಮಸ್ಕಾರ ಮಾಡುತ್ತಾ ಮಂತ್ರೋಚ್ಛಾರಣೆ ಮಾಡಿ ಮೂರು ಬಾರಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದರು.

Delhi Election 2025 : ಬಿಗಿ ಭದ್ರತೆಯ ನಡುವೆ ದೆಹಲಿಯಲ್ಲಿ  ಮತದಾನ ಆರಂಭ

ದೆಹಲಿಯಲ್ಲಿ ಆರಂಭವಾದ ಮತದಾನ

ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ. ಒಟ್ಟು 70 ವಿಧಾನ ಸಭಾ ಕ್ಷೇತ್ರಗಳಿದ್ದು, ಈ ಬಾರಿ ಆಡಳಿತಾ ರೂಢ ಆಮ್‌ ಆದ್ಮಿ ಪಕ್ಷ ಹಾಗೂ ಬಿಜೆಪಿ, ಕಾಂಗ್ರೆಸ್‌ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. 70 ಸ್ಥಾನಗಳಿಗೆ ಒಟ್ಟು 699 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 1.56 ಕೋಟಿ ಮತದಾರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

Delhi Election 2025 : ನೀತಿ ಸಂಹಿತೆ ಇದ್ದರೂ ತಡರಾತ್ರಿವರೆಗೆ ಚುನಾವಣಾ ಪ್ರಚಾರ;  ಆಪ್‌  ಶಾಸಕನ ಮೇಲೆ ದಾಖಲಾಯಿತು ಎಫ್‌ಐಆರ್‌

ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆಪ್‌ ಶಾಸಕನ ಮೇಲೆ ಎಫ್‌ಐಆರ್‌

ಓಖ್ಲಾದ ಹಾಲಿ ಶಾಸಕನಾಗಿರುವ‌ ಅಮಾನತುಲ್ಲಾ ಖಾನ್ ಅವರು ಚುನಾವಣೆಗೆ ಒಂದು ದಿನ ಮೊದಲು ತಡರಾತ್ರಿ ವರೆಗೂ ಪ್ರಚಾರ ಮಾಡುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಮಂಗಳವಾರ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

Delhi Election 2025: ಚುನಾವಣೆಗೆ ಸಜ್ಜಾದ ದೆಹಲಿ; ಮೂರನೇ ಬಾರಿಗೆ ಹ್ಯಾಟ್ರಿಕ್‌ ಬಾರಿಸುತ್ತಾ ಆಪ್‌?

ನಾಳೆ ಡೆಲ್ಲಿ ಚುನಾವಣೆ; ಕಣದಲ್ಲಿರುವ ಪ್ರಮುಖರು ಯಾರು?

ಬುಧವಾರ ದೆಹಲಿಯಲ್ಲಿ ವಿಧಾನ ಸಭಾ ಚುನಾವಣಾ ನಡೆಯಲಿದ್ದು, ಬಿಜೆಪಿ ಹಾಗೂ ಆಮ್‌ ಆದ್ಮಿ ಪಕ್ಷದ ನಡುವೆ ಕದನ ಜೋರಾಗಿದೆ. ದೆಹಲಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಈ ಬಾರಿ ಗೆಲುವು ಸಾಧಿಸುತ್ತಾ? ಇಲ್ಲಾ ಮೂರನೇ ಬಾರಿಗೂ ದೆಹಲಿ ಜನ ಕೇಜ್ರಿವಾಲ್‌ ಕೈ ಹಿಡಿಯುತ್ತಾರಾ ಎಂಬ ಕುತೂಹಲಕ್ಕೆ ಶನಿವಾರ ತೆರೆ ಬೀಳಲಿದೆ.

Arvind Kejriwal: ಕೇಜ್ರಿವಾಲ್‌ಗೆ ಚುನಾವಣಾ ಆಯೋಗ ಠಕ್ಕರ್‌; ಆರೋಪಗಳಿಗೆ ಮಣಿಯುವುದಿಲ್ಲ ಎಂದು ಟ್ವೀಟ್‌

ಚುನಾವಣಾ ಆಯೋಗದಿಂದ ಕೇಜ್ರಿವಾಲ್‌ಗೆ ಎಚ್ಚರಿಕೆ

ಅರವಿಂದ್‌ ಕೇಜ್ರಿವಾಲ್‌ ಅವರ ಹೇಳಿಕೆಗೆ ಮುಖ್ಯ ಚುನಾವಣಾ ಆಯೋಗ ಇದೀಗ ಪ್ರತ್ಯುತ್ತರ ನೀಡಿದ್ದು, ಇಸಿಐ ಮೇಲೆ ಅಪಪ್ರಚಾರ ಮಾಡುತ್ತಿರುವುದು ಹಾಗೂ ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಆರೋಪಗಳಿಗೆ ಮಣಿಯುವುದಿಲ್ಲ ಎಂಬ ಖಡಕ್‌ ಎಚ್ಚರಿಕೆಯನ್ನು ನೀಡಿದೆ.

Begging Ban: ಭೋಪಾಲ್‌ನಲ್ಲಿ ಭಿಕ್ಷಾಟನೆ ನಿಷೇಧ- ಕಟ್ಟುನಿಟ್ಟಿನ ನಿಗಾ ವಹಿಸಲು ಜಿಲ್ಲಾಧಿಕಾರಿ ಆದೇಶ

ಇನ್ಮುಂದೆ ಭಿಕ್ಷಾಟನೆ ಬ್ಯಾನ್‌! ಭೋಪಾಲ್‌ನಲ್ಲಿ ಖಡಕ್‌ ಕಾನೂನು

ಭೋಪಾಲ್‌ನಲ್ಲಿ ಭಿಕ್ಷಾಟನೆಯನ್ನು ನಿಲ್ಲಿಸುವ ಸಲುವಾಗಿ ಭೋಪಾಲ್ ಜಿಲ್ಲಾಧಿಕಾರಿ ಕೌಶಲ್ಯೇಂದ್ರ ವಿಕ್ರಮ್ ಸಿಂಗ್ ಸೋಮವಾರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಪ್ರದೇಶಗಳಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದ್ದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ, 2,500 ರೂ. ವರೆಗೆ ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

UCC: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಗುಜರಾತ್‌ ಸರ್ಕಾರ ಸಜ್ಜು- ಐವರು ಸದಸ್ಯರ ಸಮಿತಿ ರಚನೆ

ಗುಜರಾತ್‌ನಲ್ಲೂ ಶೀಘ್ರವೇ ಏಕರೂಪ ನಾಗರಿಕ ಸಂಹಿತೆ ಜಾರಿ

ಗುಜರಾತ್‌ ಸರ್ಕಾರ ಯುಸಿಸಿಯನ್ನು ಜಾರಿ ಮಾಡಲಿದೆ ಎಂದು ತಿಳಿದು ಬಂದಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮಂಗಳವಾರ ಏಕರೂಪ ನಾಗರಿಕ ಸಂಹಿತೆ ಕರಡು ಸಿದ್ಧಪಡಿಸಲು ಮತ್ತು ಕಾನೂನು ರೂಪಿಸಲು ಐದು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದಾರೆ.

Narendra Modi : ನಾಳೆ ಮಹಾಕುಂಭ ಮೇಳದಲ್ಲಿ ಪ್ರಧಾನಿ ಮೋದಿ ಅಮೃತ ಸ್ನಾನ

ನಾಳೆ ಕುಂಭಮೇಳಕ್ಕೆ ಪ್ರಧಾನಿ ಮೋದಿ ಭೇಟಿ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೆ. 5 ರಂದು ತೆರಳಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ಪ್ರಯಾಗ್‌ರಾಜ್ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಮಹಾ ಕುಂಭವನ್ನು ತಲುಪಲಿದ್ದಾರೆ.