ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shravana Shopping 2025: ಆಷಾಡದಲ್ಲೆ ಶುರುವಾಯ್ತು ಶ್ರಾವಣ ಮಾಸದ ಶಾಪಿಂಗ್!

Shravana Shopping 2025: ಆಷಾಡದಲ್ಲೆ ಶ್ರಾವಣ ಮಾಸದ ಶಾಪಿಂಗ್ ಎಲ್ಲೆಡೆ ಆರಂಭಗೊಂಡಿದೆ. ಮುಂಬರುವ ತಿಂಗಳಲ್ಲಿ ಸಾಲು ಸಾಲು ಹಬ್ಬ-ಹರಿದಿನಗಳನ್ನು ಆಚರಿಸುವವರು ಈಗಾಗಲೇ ಶಾಪಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾದಲ್ಲಿ, ಮಾರುಕಟ್ಟೆಯ ಚಿತ್ರಣ ಹೇಗಿದೆ? ‌ಈ ಕುರಿತ ವರದಿ ಇಲ್ಲಿದೆ.

ಚಿತ್ರಗಳು: ಮಿಂಚು
1/5

ಆಷಾಡ ಮಾಸ ಮುಗಿದಿಲ್ಲ! ಆಗಲೇ ಶ್ರಾವಣ ಮಾಸದ ಶಾಪಿಂಗ್ ಎಲ್ಲೆಡೆ ಆರಂಭಗೊಂಡಿದೆ. ಹೌದು, ಈ ವರ್ಷದ ಶ್ರಾವಣ ಮಾಸ ಆರಂಭವಾಗಿಲ್ಲ, ಆಗಲೇ ಎಲ್ಲೆಡೆ ಶಾಪಿಂಗ್ ಆರಂಭಗೊಂಡಿದೆ. ಪರಿಣಾಮ, ಮುಂಬರುವ ಫೆಸ್ಟೀವ್ ಸೀಸನ್‌ಗೆ ತಕ್ಕಂತೆ, ಎಲ್ಲೆಡೆ ಮಾರುಕಟ್ಟೆಗಳು ಕೂಡ ಸಜ್ಜಾಗಿವೆ.

2/5

ಪೂಜಾಲಂಕಾರ/ಗೃಹಾಲಂಕಾರ ಸಾಮಗ್ರಿಗಳು

ಹಬ್ಬದ ಸೀಸನ್‌ನಲ್ಲಿ ಗೃಹಾಲಂಕಾರ ಹಾಗೂ ಪೂಜಾಲಂಕಾರಕ್ಕೆ ಬಳಸುವ ನಾನಾ ಬಗೆಬಗೆಯ ಕೃತಕ ಹೂ ತೋರಣಗಳು, ಮಾವಿನ ಎಲೆಗಳು, ಬಾಳೆಯ ಕಂಬಗಳು, ದೀಪಗಳು, ಕೊಡುಗೆ ನೀಡುವಂತಹ ಅತ್ಯಾಕರ್ಷಕ ವಸ್ತುಗಳು ಸೇರಿದಂತೆ ನಾನಾ ಬಗೆಯವು ಮಾರುಕಟ್ಟೆಯಲ್ಲಿ ಬಿಕರಿಗೊಳ್ಳುತ್ತಿವೆ.

3/5

ಸೀರೆ ಅಂಗಡಿಗಳಲ್ಲಿ ಹೆಚ್ಚಾಯ್ತು ರಶ್

ಬಹುತೇಕ ಎಲ್ಲಾ ಸೀರೆ ಅಂಗಡಿಗಳಲ್ಲಂತೂ ಜನಜಂಗುಳಿ ಈ ಮೊದಲಿಗಿಂತ ಹೆಚ್ಚಾಗಿದೆ. ಕೇವಲ ಹೆಂಗಸರು ಮಾತ್ರವಲ್ಲ, ಇಡೀ ಕುಟುಂಬವೇ ಸೀರೆ ಸೆಂಟರ್, ಶಾಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಹಬ್ಬ ಸಮೀಪಿಸುತ್ತಿರುವಂತೆಯೇ ನಾನಾ ಬಗೆಯ ಸೀರೆಗಳಿಗೆ ಡಿಮ್ಯಾಂಡ್ ಹೆಚ್ಚಿದೆ ಎನ್ನುತ್ತಾರೆ ಸೀರೆ ಮಾರಾಟಗಾರರಾದ ರಾಘವ್.

4/5

ಆಭರಣಗಳ ಖರೀದಿ

ಮುಂಬರುವ ಹಬ್ಬಗಳಿಗೆ, ಈಗಲೇ ಬಂಗಾರ ಖರೀದಿ ಮಾಡುವ ಮಾನಿನಿಯರ ಸಂಖ್ಯೆ ಹೆಚ್ಚಾಗಿದೆ. ಇನ್ನು, ಬಂಗಾರ ಮಾತ್ರವಲ್ಲ, ಬೆಳ್ಳಿ ಪೂಜಾ ಸಾಮಗ್ರಿಗಳ ಖರೀದಿ ಭರಾಟೆಯೂ ಸಾಗಿದೆ. ಬೆಳ್ಳಿ ತಟ್ಟೆ, ಬಟ್ಟಲು, ದೇವಿಯ ಮುಖವಾಡ, ದೀಪ, ಮಂಗಳಾರತಿ ತಟ್ಟೆ ಹೀಗೆ ನಾನಾ ಸಾಮಗ್ರಿಗಳ ಮಾರಾಟದಲ್ಲಿ ಹೆಚ್ಚಳ ಕಂಡುಬರುತ್ತಿದೆ ಎನ್ನುತ್ತಾರೆ ಗಾಂಧಿ ಬಜಾರ್‌ನ ಆಭರಣ ಶಾಪ್‌ವೊಂದರ ಮಾಲೀಕರು.

5/5

ಗೃಹೋಪಯೋಗಿ ವಸ್ತುಗಳ ಖರೀದಿ

ಮುಂಬರುವ ಶ್ರಾವಣ ಮಾಸದಲ್ಲಿ, ಒಳ್ಳೆಯ ದಿನಗಳು ಹೆಚ್ಚಾಗಿರುವುದರಿಂದ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡುವವರು ಕೂಡ ಜಾಸ್ತಿಯಾಗಿದ್ದಾರೆ. ಅದರಲ್ಲೂ, ಅಡುಗೆ ಮನೆಯ ಎಲೆಕ್ಟ್ರಾನಿಕ್ ಐಟಂಗಳನ್ನು ಖರೀದಿಸುವವರು ಅಧಿಕಗೊಂಡಿದ್ದಾರೆ ಎನ್ನುತ್ತಾರೆ ಎಲಾಕ್ಟ್ರಾನಿಕ್ಸ್ ಶಾಪ್‌ವೊಂದರ ಮ್ಯಾನೇಜರ್ ದಿಗಂತ್.

ಶೀಲಾ ಸಿ ಶೆಟ್ಟಿ

View all posts by this author