Star Fashion 2025: ಸಮಂತಾ ಡಿಸೈನರ್ ಕುರ್ತಾದಲ್ಲಿ ನಟ ಕಾರ್ತಿಕ್ ಜಯರಾಮ್ ಸಖತ್ ಲುಕ್
Star Fashion 2025: ಅಪರ್ಣಾ ಸಮಂತಾ ಡಿಸೈನ್‌ನ ಫೆಸ್ಟೀವ್ ಸೀಸನ್‌ಗೆ ಬಿಡುಗಡೆಗೊಂಡ ಹ್ಯಾಂಡ್ ಎಂಬ್ರಾಯ್ಡರಿ ವೈಟ್ ಕುರ್ತಾದಲ್ಲಿ ನಟ ಹಾಗೂ ಮಾಡೆಲ್ ಕಾರ್ತಿಕ್ ಜಯರಾಂ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತಂತೆ ಖುದ್ದು ಡಿಸೈನರ್ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.
ಶ್ವೇತ ವರ್ಣದ ಹ್ಯಾಂಡ್ ಎಂಬ್ರಾಯ್ಡರಿ ಕುರ್ತಾದಲ್ಲಿ ನಟ ಹಾಗೂ ಮಾಡೆಲ್ ಕಾರ್ತಿಕ್ ಜಯರಾಮ್, ಸಖತ್ ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಂಡಿದ್ದಾರೆ.
ಅಪರ್ಣಾ ಸಮಂತಾ ಡಿಸೈನರ್‌ವೇರ್‌ನಲ್ಲಿ ಜೆಕೆ
ಹೌದು, ಸೆಲೆಬ್ರೆಟಿ ಡಿಸೈನರ್ ಅಪರ್ಣಾ ಸಮಂತಾ ಈಗಾಗಲೇ ತಮ್ಮ ಫ್ಯಾಷನ್ ಬ್ರಾಂಡ್‌ನಲ್ಲಿ ಹಬ್ಬದ ಸ್ಪೆಷಲ್ ಡಿಸೈನರ್‌ವೇರ್‌ಗಳಲ್ಲಿ, ನಾನಾ ವೈವಿಧ್ಯಮಯ ಎಕ್ಸ್‌ಕ್ಲೂಸಿವ್ ಮೆನ್ಸ್ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ. ಈ ಧಿರಿಸುಗಳಲ್ಲೊಂದಾದ ಅತ್ಯಾಕರ್ಷಕ ಹ್ಯಾಂಡ್ ಎಂಬ್ರಾಯ್ಡರಿ ಹೊಂದಿರುವ ವೈಟ್ ವಿಶೇಷ ಕುರ್ತಾದಲ್ಲಿ ನಟ ಹಾಗೂ ಮಾಡೆಲ್ ಕಾರ್ತಿಕ್ ಜಯರಾಂ ಸಖತ್ ಆಗಿ ಕಾಣಿಸಿಕೊಂಡು ಪೋಸ್ ನೀಡಿದ್ದಾರೆ. ಇದು ಈಗಾಗಲೇ ಮೆನ್ಸ್ ಫ್ಯಾಷನ್ ಲೋಕದಲ್ಲಿ ಟ್ರೆಂಡಿಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.
ಡಿಸೈನರ್ ಅಪರ್ಣಾ ಹೇಳುವುದೇನು?
ಡಿಸೈನರ್ ಅಪರ್ಣಾ ಡಿಸೈನ್‌ನ ಫೆಸ್ಟೀವ್ ಸೀಸನ್‌ನ ಈ ಕುರ್ತಾ, ಕಲಾತ್ಮಕ ಹ್ಯಾಂಡ್ ಎಂಬ್ರಾಯ್ಡರಿ ಹೊಂದಿರುವುದು ಈ ಔಟ್‌ಫಿಟ್ ಅನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಇದು ಡಿಸೈನರ್‌ನ ಕ್ರಿಯೇಟಿವಿಟಿಗೆ ಸಾಕ್ಷಿ ಎನ್ನಬಹುದು. ಅದರಲ್ಲೂ ಜೆಕೆ ಧರಿಸಿರುವ ಈ ವೈಟ್ ಕುರ್ತಾ ಹ್ಯಾಂಡ್ ವೀವ್ಡ್ ಫ್ಯಾಬ್ರಿಕ್ ಆಗಿದೆ. ಅಲ್ಲದೇ, ಇದರ ವೀವಿಂಗ್ ಹಾಗೂ ಸಿದ್ಧಪಡಿಸುವ ಕಾರ್ಯಕ್ಕೆ ಸುಮಾರು ಒಂದೆರೆಡು ತಿಂಗಳಾಗಿದೆಯಂತೆ. ಬ್ಲ್ಯೂ ಹಾಗೂ ಅಕ್ವಾ ಬ್ಲ್ಯೂ ಶೇಡ್‌ನ ದಾರದಿಂದ ಕುರ್ತಾ ಮೇಲೆ ಕಲಾತ್ಮಕ ಹ್ಯಾಂಡ್ ಎಂಬ್ರಾಯ್ಡರಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ ಡಿಸೈನರ್ ಅಪರ್ಣಾ.
ಜೆಕೆ ಕುರ್ತಾ ಲವ್
ಇನ್ನು, ಈ ವೈಟ್ ಕುರ್ತಾದಲ್ಲಿ ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಂಡಿರುವ ಜೆಕೆ ಹೇಳುವುದು ಹೀಗೆ, ಕೆಲವೊಂದು ಡಿಸೈನರ್‌ವೇರ್‌ಗಳು ಕೇವಲ ಧರಿಸುವುದಕ್ಕೆ ಮಾತ್ರವಲ್ಲ, ಅದು ಸೆಲೆಬ್ರೇಷನ್‌ಗೂ ನಾಂದಿ ಹಾಡುತ್ತವೆ. ಅದರಲ್ಲೂ ಡಿಸೈನರ್‌ಗಳ ಕ್ರಿಯೇಟಿವಿಟಿಯನ್ನು ಇವು ಹೈ ಲೈಟ್ ಮಾಡುತ್ತವೆ. ಅಂತಹ ಔಟ್‌ಫಿಟ್‌ಗಳಲ್ಲಿ ಈ ಡಿಸೈನರ್‌ವೇರ್ ಕೂಡ ಒಂದು ಎಂದು ಪ್ರಶಂಸಿಸಿದ್ದಾರೆ ನಟ ಜೆಕೆ.
ಡಿಸೈನರ್ ಅಪರ್ಣಾ ಸಿಂಪಲ್ ಟಿಪ್ಸ್
ಡಿಸೈನರ್ ಅಪರ್ಣಾ ಅವರು ಹೇಳುವಂತೆ, ಇಂತಹ ಡಿಸೈನರ್ ಕುರ್ತಾಗಳನ್ನು ಹಬ್ಬದ ಸಂಭ್ರಮದಲ್ಲಿ ಧರಿಸಬಹುದು. ಬೆಳಗ್ಗೆಯಾದರೂ ಸರಿಯೇ ಸಂಜೆಯಾದರೂ ಸರಿಯೇ ಆಕರ್ಷಕವಾಗಿ ಕಾಣಿಸುತ್ತವೆ. ಇವುಗಳೊಂದಿಗೆ ಪಟಿಯಾಲ ಪ್ಯಾಂಟ್ ಹಾಗೂ ಪೆನ್ಸಿಲ್ ಪ್ಯಾಂಟ್ ಮ್ಯಾಚ್ ಮಾಡಬಹುದು ಎಂದು ಸಲಹೆ ನೀಡುತ್ತಾರೆ.