ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಪ್ಲೀಟೆಡ್‌ ವೈಟ್‌ ಡ್ರೆಸ್‌ನಲ್ಲಿ ಚೀನಿ ಹುಡುಗಿಯಂತೆ ಕಂಡ ನಟಿ ಭಾವನಾ ಮೆನನ್‌

ಬಹುಭಾಷಾ ನಟಿ ಭಾವನಾ ಮೆನನ್‌ (Bhavana Menon) ವೈಟ್‌ ಕಾಲರ್‌ ಟಾಪ್‌ ಹಾಗೂ ಪ್ರಿಂಟೆಡ್‌ ಪ್ಲೀಟ್‌ ಸ್ಕರ್ಟ್‌ನಲ್ಲಿ ಚೀನಿ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿರುವ ಉಡುಗೆ ಯಾವುದು? ಸ್ಟೈಲಿಂಗ್‌ ಯಾರದ್ದು? ಈ ಎಲ್ಲದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಭಾವನಾ ಮೆನನ್‌, ನಟಿ., ಫೋಟೋಗ್ರಾಫಿ: ಜಾಗರ್‌ ಆಟೋಂನಿ
1/5

ಚೀನಿ ಹುಡುಗಿಯಂತೆ ಕಾಣಿಸಿಕೊಂಡ ಭಾವನಾ

ನಟಿ ಭಾವನಾ ಮೆನನ್‌ ವೈಟ್‌ ಕಾಲರ್‌ ಟಾಪ್‌ ಹಾಗೂ ಪ್ರಿಂಟೆಡ್ ಪ್ಲೀಟೆಡ್‌ ಡ್ರೆಸ್‌ನಲ್ಲಿ ಚೀನಿ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ.‌

2/5

ಶ್ವೇತ ವರ್ಣದ ಔಟ್‌ಫಿಟ್‌ನಲ್ಲಿ ಭಾವನಾ

ಹೌದು, ಡಿಫರೆಂಟ್‌ ಲುಕ್‌ ನೀಡುವ ತಿಳಿ ಶ್ವೇತ ವರ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಬಹುಭಾಷಾ ನಟಿ ಭಾವನಾ ಮೆನನ್‌, ಡಿಫರೆಂಟ್‌ ಸ್ಟೈಲಿಂಗ್‌ನಲ್ಲಿ ಪೋಸ್‌ ನೀಡಿದ್ದಾರೆ. ನೋಡಲು ಥೇಟ್‌ ಚೀನಾದ ಯುವತಿಯಂತೆ ಕಾಣಿಸಿಕೊಂಡಿದ್ದಾರೆ.

3/5

ಬೆಂಗಳೂರಿನ ಸೊಸೆ ಭಾವನಾ ಮೆನನ್‌

ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ನಟಿಸಿರುವ ನಟಿ ಭಾವನಾ ಮೆನನ್‌, ಇತ್ತೀಚೆಗೆ ಫ್ಯಾಷನ್‌ ಶೂಟ್‌ಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. 2017ರಲ್ಲಿ ತಮ್ಮ ಕಿಡ್ನಾಪ್‌ ಪ್ರಕರಣದ ನಂತರ ಸಾಕಷ್ಟು ಕುಗ್ಗಿ ಹೋಗಿದ್ದ ಭಾವನಾ ಮೆನನ್‌, ಬೆಂಗಳೂರಿನ ಮೂಲದ ನಿರ್ಮಾಪಕರೊಬ್ಬರನ್ನು ಮದುವೆಯಾದರು. ಕೆಲಕಾಲ ಚಿಕ್ಕ ಬ್ರೇಕ್‌ ತೆಗೆದುಕೊಂಡ ನಂತರ ಮತ್ತೊಮ್ಮೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.

4/5

ಭಾವನಾ ಮೆನನ್‌ ಡ್ರೆಸ್‌ ವಿಶೇಷತೆ

ಅಂದಹಾಗೆ, ಈ ಉಡುಪು ನೋಡಲು ಕೊರಿಯನ್‌ ಡ್ರೆಸ್‌ನಂತೆ ಕಂಡರೂ ಇದು ಅದಲ್ಲ! ವೆಸ್ಟರ್ನ್‌ಲೇಡಿ ಲೆಬೆಲ್‌ನ ಕಾಲರ್‌ ನೆಕ್‌ಲೈನ್‌ ಇರುವಂತಹ ಶ್ವೇತ ವರ್ಣದ ಪೆಪ್ಲಮ್‌ ಶೈಲಿಯ ಟಾಪ್‌ ಹಾಗೂ ಮಲ್ಟಿಪಲ್‌ ಪ್ಲೀಟ್ಸ್ ಇರುವಂತಹ ಪ್ರಿಂಟೆಡ್‌ ಲಾಂಗ್‌ ಸ್ಕರ್ಟ್ ಚೀನಿ ಹುಡುಗಿಯರ ಔಟ್‌ಫಿಟ್‌ನಂತಿದೆ. ಇನ್ನು, ಭಾವನಾ ಮೆನನ್‌ ಅವರನ್ನು ಪ್ರಿಯಾಂಕಾ ಅವರ ಸ್ಟೈಲಿಂಗ್‌ ಮನಮೋಹಕವಾಗಿ ಬಿಂಬಿಸಿದೆ.

5/5

ಒಟ್ಟಾರೆ ಈ ಮಾನ್ಸೂನ್‌ ಸೀಸನ್‌ನಲ್ಲಿ ಭಾವನಾ ಅವರ ಈ ಔಟ್‌ಫಿಟ್‌ ಡಿಫರೆಂಟ್‌ ಲುಕ್‌ ಬಯಸುವ ಫ್ಯಾಷನ್‌ ಪ್ರಿಯರಿಗೆ ಇಷ್ಟವಾಗಿದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

ಶೀಲಾ ಸಿ ಶೆಟ್ಟಿ

View all posts by this author