Star Fashion 2025: ರ‍್ಯಾಪರ್ ಇಶಾನಿಯ ಬಿಂದಾಸ್ ಫ್ಯಾಷನ್
ಹೊಸ ಮ್ಯೂಸಿಕ್ ಆಲ್ಬಂನಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ, ರ‍್ಯಾಪರ್ ಇಶಾನಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವುಗಳ ಪ್ರಮೋಷನ್ ವಿಡಿಯೊಗಳಲ್ಲಿ ಅಲ್ಟ್ರಾ ಮಾಡರ್ನ್ ಲುಕ್ ನೀಡುವ ಔಟ್‌ಫಿಟ್‌ಗಳನ್ನು ಧರಿಸಿದ್ದಾರೆ. ಈ ಕುರಿತಂತೆ ಇಲ್ಲಿದೆ ವಿವರ.
ಹೊಸ ಮ್ಯೂಸಿಕ್ ಆಲ್ಬಂ
ಹೊಸ ಮ್ಯೂಸಿಕ್ ಆಲ್ಬಂನಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ, ರ‍್ಯಾಪರ್ ಇಶಾನಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಹೊಸ ಆಲ್ಬಂನಲ್ಲಿ, ಅದರಲ್ಲೂ ಅವುಗಳ ಪ್ರಮೋಷನ್ ವಿಡಿಯೊಗಳಲ್ಲಿ ತೀರಾ ಬಿಂದಾಸ್ ಲುಕ್ ನೀಡುವಂತಹ ಅಲ್ಟ್ರಾ ಮಾಡರ್ನ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿದ್ದು, ಫಾಲೋವರ್‌ಗಳನ್ನು ಸೆಳೆದಿದೆ.
ಇಶಾನಿ ಮ್ಯೂಸಿಕ್ ಲವ್
ಅಂದಹಾಗೆ ಇಶಾನಿ ಮೊದಲಿಗೆ ಕನ್ನಡದ ರ‍್ಯಾಪರ್ ಎಂದೇ ಗುರುತಿಸಿಕೊಂಡರು. ನಂತರ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಇಲ್ಲಿನ ಜನತೆಗೆ ಹತ್ತಿರವಾದರು. ಅವರ ಆಂಗ್ಲ ಮಿಶ್ರಿತ ಕನ್ನಡ ಸಾಂಗ್‌ನಿಂದಾಗಿ ಎಲ್ಲರ ಮಧ್ಯೆ ವಿಭಿನ್ನವಾಗಿ ಕಾಣಿಸಿಕೊಂಡರು. ಅವರು ತಮ್ಮ ಹೆಚ್ಚು ಸಮಯ ದುಬೈನಲ್ಲಿಯೇ ಕಳೆದಿದ್ದರೂ, ಇದೀಗ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಜತೆಗೆ ಆಗಾಗ್ಗೆ ಕನ್ನಡ ಸೇರಿದಂತೆ ಇಂಗ್ಲಿಷ್‌ನ ರ‍್ಯಾಪ್ ಸಾಂಗ್‌ಗಳನ್ನು ಬಿಡುಗಡೆಗೊಳ್ಳಿಸುತ್ತಿರುತ್ತಾರೆ. ತಮ್ಮದೇ ಆದ ಅಭಿಮಾನಿ ವರ್ಗವನ್ನೂ ಗಳಿಸಿಕೊಂಡಿದ್ದಾರೆ.
ಇಶಾನಿ ಬಿಂದಾಸ್ ಫ್ಯಾಷನ್ ಪ್ರಿಯೆ
ಇದೀಗ ಆಂಗ್ಲ ಭಾಷೆಯ ಮ್ಯೂಸಿಕ್ ಆಲ್ಬಂ ವಿಡಿಯೊಗಳಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿರುವ ಇಶಾನಿ ಫ್ಯಾಷನ್ ಸ್ಟೇಟ್ಮೆಂಟ್ಸ್ ಇತರರಿಗಿಂತ ಕಂಪ್ಲೀಟ್ ಡಿಫರೆಂಟ್ ಆಗಿದೆಯಂತೆ. “ನನ್ನದು ಸದಾ ಬಿಂದಾಸ್ ಫ್ಯಾಷನ್! ಸೀಸನ್‌ಗೆ ತಕ್ಕಂತೆ ಎನ್ನುವುದಕ್ಕಿಂತಲೂ ಮಾರ್ಡನ್ ಲುಕ್ ನನಗಿಷ್ಟ. ಬೆಚ್ಚಗಿಡುವ ಜಾಕೆಟ್ಸ್, ವೈವಿಧ್ಯಮಯ ಕೋ -ಆರ್ಡ್ ಸೆಬಾಡಿಕಾನ್ ಡ್ರೆಸ್, ಸ್ಕರ್ಟ್ಸ್, ಟೋರ್ನ್ ಪ್ಯಾಂಟ್ಸ್ ಹೀಗೆ ಎಲ್ಲ ಬಗೆಯ ಮಾಡರ್ನ್ ಔಟ್‌ಫಿಟ್‌ಗಳು ನನ್ನ ಫ್ಯಾಷನ್ ಲಿಸ್ಟ್‌ನಲ್ಲಿವೆ” ಎನ್ನುತ್ತಾರೆ ಇಶಾನಿ.
ಜೆನ್ ಜಿ ಹುಡುಗಿಯರಿಗೆ ಇಶಾನಿ ನೀಡಿರುವ 5 ಟಿಪ್ಸ್
* ನಿಮ್ಮ ಬಾಡಿಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಔಟ್‌ಫಿಟ್ ಧರಿಸಿ.
* ಸೀಸನ್‌ಗೆ ನಿಮ್ಮ ಸ್ಟೈಲಿಂಗ್ ಮ್ಯಾಚ್ ಮಾಡಿ.
* ಮಾನ್ಸೂನ್‌ನಲ್ಲಿ ಲೇಯರ್ ಲುಕ್‌ಗೆ ಆದ್ಯತೆ ನೀಡಿ.
* ಬಿಂದಾಸ್ ಸ್ಟೈಲ್‌ಸ್ಟೇಟ್‌ಮೆಂಟ್‌ಗಾಗಿ ವೆಸ್ಟರ್ನ್ ವೇರ್ಸ್ ಧರಿಸಿ.
* ಟ್ರೆಂಡ್‌ಗೆ ತಕ್ಕಂತೆ ಬದಲಾಗುವ ಬದಲು, ನಿಮಗೇನು ಬೆಸ್ಟ್? ಎಂಬುದನ್ನು ಕಂಡುಕೊಳ್ಳಿ.
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿ ಗಮನ ಸೆಳೆದ ರ‍್ಯಾಪರ್ ಇಶಾನಿ ಮೂಲತಃ ಮೈಸೂರಿನವರು. ಆದರೆ ಅವರು ಹುಟ್ಟಿದ್ದು ದುಬೈನಲ್ಲಿ. ನಂತರ ಲಾಸ್ ಏಂಜಲಿಸ್‌ನಲ್ಲಿ ಬೆಳೆದವರು. ರ‍್ಯಾಪರ್ ಆಗಿ ಅನೇಕ ಗೀತೆಗಳನ್ನು ಹಾಡಿದ್ದಾರೆ. ಬಿಗ್ ಬಾಸ್ ಮೂಲಕ ಕರ್ನಾಟಕದ ಜನತೆಗೆ ಇನ್ನಷ್ಟು ಹತ್ತಿರವಾದರು.