ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ವೈಬ್ರೆಂಟ್‌ ಆರೆಂಜ್‌ ಶರ್ಟ್ ಡ್ರೆಸ್‌ಗೆ ಸೈ ಎಂದ ನಟಿ ಪಾವನಾ

Star Fashion 2025: ವೈಬ್ರೆಂಟ್‌ ಆರೆಂಜ್‌ ಶೇಡ್‌ನ ಶರ್ಟ್ ಡ್ರೆಸ್‌ನಲ್ಲಿ, ಸ್ಯಾಂಡಲ್‌ವುಡ್‌ ನಟಿ ಪಾವನಾ ಕಾಣಿಸಿಕೊಂಡಿದ್ದು, ಸೀಸನ್‌ ಟ್ರೆಂಡ್‌ಗೆ ಸೈ ಎಂದಿದ್ದಾರೆ. ಅವರ ಈ ವೆಸ್ಟರ್ನ್‌ ಔಟ್‌ಫಿಟ್‌ ಚಾಯ್ಸ್ ಕುರಿತಂತೆ ಖುದ್ದು ಅವರೇ ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

ಚಿತ್ರಗಳು: ಪಾವನಾ, ಸ್ಯಾಂಡಲ್‌ವುಡ್‌ ನಟಿ., ಫೋಟೋಗ್ರಾಫಿ: ನಾಗರ್ಜುನ್‌ ಕೆ.ಕೆ.
1/5

ವೈಬ್ರೆಂಟ್‌ ಆರೆಂಜ್‌ ಶರ್ಟ್ ಡ್ರೆಸ್‌ನಲ್ಲಿ ಸ್ಯಾಂಡಲ್‌ವುಡ್‌ ನಟಿ ಪಾವನಾ ಕಾಣಿಸಿಕೊಂಡಿದ್ದು ಸೀಸನ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ. ನಟಿ ಪಾವನಾ ಧರಿಸಿರುವ ಈ ವೈಬ್ರೆಂಟ್‌ ಶೇಡ್‌ನ ಆರೆಂಜ್‌ ಶರ್ಟ್ ಅಸ್ಸೆಮ್ಮಿಟ್ರಿಕಲ್‌ ಡಿಸೈನ್‌ ಹೊಂದಿದ್ದು, ಬಲೂನ್‌ ಸ್ಲೀವ್‌ ಒಳಗೊಂಡಿದೆ. ಜತೆಗೆ ಫ್ರೀ & ಫಿಟ್‌ ವಿನ್ಯಾಸ ಹೊಂದಿದ್ದು. ಪಾವನಾಗೆ ಹೈ ಫ್ಯಾಷನ್‌ ಲುಕ್‌ ನೀಡಿದೆ.

2/5

ಇದು ಬಿಸ್ನೆಸ್‌ವೇರ್‌ ಎಂದ ಪಾವನಾ

ಪಾವನಾ ಹೇಳುವಂತೆ, ಈ ಆರೆಂಜ್‌ ಶರ್ಟ್ ಡ್ರೆಸ್‌, ಬಿಸ್ನೆಸ್‌ವೇರ್‌ ಕೆಟಗರಿಯಲ್ಲಿ ಟ್ರೆಂಡಿಯಾಗಿದೆ. ಅಲ್ಲದೇ, ನೋಡಲು ಕಾರ್ಪೋರೇಟ್‌ ಲುಕ್‌ ನೀಡುವುದರೊಂದಿಗೆ ನೂರು ಜನರ ಮಧ್ಯೆಯೂ ಹೈಲೈಟ್‌ ಮಾಡುತ್ತದೆ ಎನ್ನುತ್ತಾರೆ.

3/5

ಯೂನಿಕ್‌ ಆಕ್ಸೆಸರೀಸ್‌ ಸೆಲೆಕ್ಷನ್‌

ಶರ್ಟ್ ಡ್ರೆಸ್‌ ಜತೆಗೆ ಪಾವನಾ ಧರಿಸಿರುವ ಬಟರ್‌ ಫ್ಲೈ ಇಯರಿಂಗ್ಸ್ ಈ ಔಟ್‌ಫಿಟ್‌ಗೆ ಸಖತ್ತಾಗಿ ಮ್ಯಾಚ್‌ ಆಗಿದೆ. ಇನ್ನು ವೇಸ್ಟ್ ಬ್ಯಾಂಡ್‌ನಂತೆ ಕಾಣಿಸುವ ಬ್ಲ್ಯಾಕ್‌ ಕಲರ್‌ನ ಬೆಲ್ಟ್ ಕೂಡ ಇಡೀ ಡ್ರೆಸ್‌ ಲುಕ್ಕನ್ನು ರಾಯಲ್‌ ಆಗಿಸಿದೆ. ನೋಡಲು ಕ್ಲಾಸಿ ಲುಕ್‌ ಕಲ್ಪಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

4/5

ಪಾವನಾ ಫ್ಯಾಷನ್‌‌ ಸ್ಟೇಟ್‌ಮೆಂಟ್ಸ್

ಇನ್ನು, ಸಾಕಷ್ಟು ಬಾರಿ ಸೀರೆಯಲ್ಲಿ ಕಾಣಿಸಿಕೊಳ್ಳುವ ಪಾವನಾ, ಎಲ್ಲಾ ಬಗೆಯ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳಲ್ಲೂ ಆಕರ್ಷಕವಾಗಿ ಕಾಣಿಸುತ್ತಾರೆ. ಎಂದಿನಂತೆ ಈ ಬಾರಿಯೂ ಅವರು ಸಿಂಪಲ್‌ ಮೇಕಪ್‌ಗೆ ಓಕೆ ಎಂದಿದ್ದಾರೆ. ಇದು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

5/5

ಶರ್ಟ್ ಡ್ರೆಸ್ ಪ್ರಿಯರಿಗೆ ಪಾವನಾ 5 ಸಿಂಪಲ್‌ ಸಲಹೆ

  • ಶರ್ಟ್ ಡ್ರೆಸ್‌ಗಳು ಎಲ್ಲಾ ಬಾಡಿ ಮಾಸ್‌ ಇಂಡೆಕ್ಸ್ ಇರುವವರಿಗೂ ಹೊಂದುತ್ತವೆ.
  • ಬೆಲ್ಟ್ ಹಾಗೂ ಆಕ್ಸೆಸರೀಸ್‌ನಿಂದ ಈ ಡ್ರೆಸ್ಸನ್ನು ಮತ್ತಷ್ಟು ಆಕರ್ಷಕವಾಗಿಸಬಹುದು.
  • ವೈಬ್ರೆಂಟ್‌ ಶೇಡ್‌ನ ಡ್ರೆಸ್‌ಗಳು ಸದ್ಯ ಟ್ರೆಂಡ್‌ ಲಿಸ್ಟ್‌ನಲ್ಲಿವೆ.
  • ಮೇಕಪ್‌ ಲೈಟಾಗಿದ್ದರೇ ಡ್ರೆಸ್‌ ಅಂದವಾಗಿ ಕಾಣಿಸುವುದು.
  • ಡ್ರೆಸ್‌ನ ಅಸ್ಸೆಮ್ಮಿಟ್ರಿಕಲ್‌ ಡಿಸೈನ್‌ ವೆಸ್ಟರ್ನ್‌ ಟಚ್‌ ನೀಡುತ್ತದೆ.

ಶೀಲಾ ಸಿ ಶೆಟ್ಟಿ

View all posts by this author