ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion: ಕಾನ್ಸ್‌ ರೆಡ್‌ ಕಾರ್ಪೆಟ್‌ನಲ್ಲಿ ಹಾಲಿವುಡ್‌ ನಟ ಟಾಮ್‌ ಕ್ರೂಸ್‌ ಸ್ಟೈಲಿಂಗ್‌ಗೆ ಅಭಿಮಾನಿಗಳು ಫಿದಾ!

ವಯಸ್ಸು 60 ದಾಟಿದರೂ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಹ್ಯಾಂಡ್‌ಸಮ್‌ ಯುವಕನಂತೆ ಕಂಡ ಹಾಲಿವುಡ್‌ ನಟ ಟಾಮ್‌ ಕ್ರೂಸ್‌ ಸ್ಟೈಲಿಂಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಗಾದಲ್ಲಿ ಟಾಮ್‌ ಲುಕ್‌ ಹೇಗಿತ್ತು? ಫ್ಯಾಷನ್‌ ವಿಮರ್ಶಕರು ಇಲ್ಲಿ ವಿಶ್ಲೇಷಿಸಿದ್ದಾರೆ.

ಚಿತ್ರಗಳು: ಟಾಮ್‌ ಕ್ರೂಸ್‌, ಹಾಲಿವುಡ್‌ ನಟ
1/5

ಕ್ಯಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸಖತ್‌ ಆಗಿ ಕಾಣಿಸಿಕೊಂಡ ಹಾಲಿವುಡ್‌ ನಟ ಟಾಮ್‌ ಕ್ರೂಸ್‌ (Star Fashion) ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೌದು, ಜಾಗತಿಕ ಮಟ್ಟದಲ್ಲಿ ಹಾಲಿವುಡ್‌ ಸಿನಿಮಾಗಳ ಮೂಲಕ ಹೆಸರು ಮಾಡಿರುವ ನಟ ಟಾಮ್‌ ಕ್ರೂಸ್‌, ಜಾಗತಿಕ ಮಟ್ಟದಲ್ಲಿ ಎವರ್‌ಗ್ರೀನ್‌ ಹೀರೋ ಕೆಟಗರಿಗೆ ಸೇರುತ್ತಾರೆ. ಪ್ರತಿ ಸಿನಿಮಾಗಳಲ್ಲೂ ತಮ್ಮದೇ ಆದ ಲುಕ್‌ನಿಂದ ಅಭಿಮಾನಿಗಳನ್ನು ಸೆಳೆಯುತ್ತಲೇ ಇದ್ದಾರೆ.

2/5

ಟಾಮ್‌ ಅವರ ವಯಸ್ಸು 62. ಆದರೂ ಮುಖದ ಕಳೆ ಮಾತ್ರ ಇಂದಿಗೂ ಒಂಚೂರು ಮಾಸಿಲ್ಲ! ಇದೀಗ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ, ತಮ್ಮ ಸಿನಿಮಾ ಶೋ ಸಮಯದಲ್ಲಿ, ಟೀಮ್‌ನೊಂದಿಗೆ ವಾಕ್‌ ಮಾಡಿದ್ದು, ಎಲ್ಲರ ಮಧ್ಯೆ ಹೈಲೈಟ್‌ ಆಗಿದೆ. ನೂರಾರು ಸೆಲೆಬ್ರೆಟಿಗಳ ಮಧ್ಯೆಯೂ ಎಂದಿನಂತೆ ಚಿರಯುವಕನಂತೆ ಕಾಣಿಸಿಕೊಂಡಿದ್ದಾರೆ. ಇವರ ಈ ಲುಕ್‌ ಫ್ಯಾಷನ್‌ ಪ್ರಿಯರನ್ನು ಮಾತ್ರವಲ್ಲ, ಎಲ್ಲರನ್ನೂ ಆಕರ್ಷಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

3/5

ಅಂದಹಾಗೆ, ಟಾಮ್‌ ಕ್ರೂಸ್‌ ಮೊದಲ ಬಾರಿ ಸಿನಿಮಾ ಡೈರೆಕ್ಟರ್‌ ಕ್ರಿಸ್ಟೋಫರ್‌ ಜತೆ ಕಾಣಿಸಿಕೊಂಡರು. ತಮ್ಮ ಸಿನಿಮಾ ʼಮಿಷನ್‌ ಇಂಪಾಸಿಬಲ್‌: ಫೈನಲ್‌ ರೆಕನಿಂಗ್‌ʼ ಶೋಗೂ ಮುನ್ನವೇ ನಗುನಗುತ್ತಾ ಕೈ ಬೀಸಿ ಪೋಸ್‌ ನೀಡಿದರು. ಅವರು ಧರಿಸಿದ್ದ ಮರೂನ್‌ ರೆಡ್‌ ಶೇಡ್‌ನ ಮಾನೋಕ್ರೋಮ್‌ ಔಟ್‌ಫಿಟ್‌ ಅವರ ಸಿಂಪ್ಲಿಸಿಟಿಯನ್ನು ಹೈಲೈಟ್‌ ಮಾಡಿತು. ಕಾಲರ್‌ ಮರೂನ್‌ ಟೀ ಶರ್ಟ್‌ ಹಾಗೂ ಎವಿಯೇಟರ್‌ ಸನ್‌ಗ್ಲಾಸ್‌ ಅವರನ್ನು ಮತ್ತಷ್ಟು ಯಂಗ್‌ ಆಗಿ ಬಿಂಬಿಸಿತು. ಇದು ಟಾಮ್‌ ಕ್ರೂಸ್‌ ಅವರ ಮೊದಲ ದಿನದ ಲುಕ್‌ ಆಗಿತ್ತು ಎಂದಿವೆ ಕಾನ್ಸ್‌ ಮೂಲಗಳು.

4/5

ಮತ್ತೊಮ್ಮೆ, ಬ್ಲ್ಯಾಕ್‌ ಬೋ ಇರುವಂತಹ ಬ್ಲ್ಯಾಕ್‌ & ವೈಟ್‌ ಟುಕ್ಸಡೋ ಪವರ್‌ ಸೂಟ್‌ನಲ್ಲಿ ಕಾಣಿಸಿಕೊಂಡ ಟಾಮ್‌ ಕ್ರೂಸ್‌ ಅವರು ಕೊರಿಯನ್‌ ಸ್ಟೈಲ್‌ನಲ್ಲಿ ಹಾರ್ಟ್‌ ಸಿಂಬಲ್‌ ಮಾಡುತ್ತಾ ಅಭಿಮಾನಿಗಳಿತ್ತ ಹೂ ನಗೆ ಚೆಲ್ಲಿದರು.

5/5

ಹಾಲಿವುಡ್‌ ಸಿನಿಮಾಗಳ ಮೂಲಕ ಜಗತ್ತಿನ ಮನೆಮನೆಗಳಲ್ಲೂ ಅಭಿಮಾನಿಗಳನ್ನು ಗಳಿಸಿರುವ ಟಾಮ್‌ ಕ್ರೂಸ್‌ ಅವರ ಫ್ಯಾಷನ್‌ ಸ್ಟೇಟ್‌ಮೆಂಟ್‌ ತೀರಾ ಸಿಂಪಲ್‌. ಹೆಚ್ಚೆಂದರೆ ಸೂಟ್‌ ಧರಿಸುತ್ತಾರೆ. ಇಲ್ಲವೇ ಸದಾ ಸಿಂಪಲ್‌ ಟೀ ಶರ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಒಂದೊಂದು ಸಿನಿಮಾ ರಿಲೀಸ್‌ ಆದಾಗಲೂ ಅವರ ಫ್ಯಾಷನ್‌ ಸ್ಟೇಟ್‌ಮೆಂಟ್‌ಗೆ ಬಳಸಿದ ಔಟ್‌ಫಿಟ್‌ಗಳು ಫ್ಯಾಷನ್‌ ಲೋಕದಲ್ಲಿ ಬಿಡುಗಡೆಗೊಳ್ಳುತ್ತವೆ ಹಾಗೂ ಹಿಟ್‌ ಲಿಸ್ಟ್‌ಗೆ ಸೇರುತ್ತವೆ ಎನ್ನುವ ಫ್ಯಾಷನ್‌ ವಿಮರ್ಶಕರು, ಕಾನ್ಸ್‌ನಲ್ಲಿನ ಟಾಮ್‌ ಅವರ ಪ್ರತಿ ಲುಕ್‌ಗೂ 5 ಸ್ಟಾರ್‌ ನೀಡಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author