ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025:‌ ನಟಿ ಮೇಘಾ ಶೆಟ್ಟಿಯ ಪಾಸ್ಟೆಲ್‌ ಶೇಡ್‌ ಸಾದಾ ಸೀರೆ ಲುಕ್‌ಗೆ ಹುಡುಗರು ಫಿದಾ!

Star Saree Fashion 2025: ನಟಿ ಮೇಘಾ ಶೆಟ್ಟಿ ಉಟ್ಟಿರುವ ಪಾಸ್ಟೆಲ್‌ ಶೇಡ್‌ನ ಸಾದಾ ಸೀರೆಯು ಸೀರೆ ಪ್ರಿಯರನ್ನು ಮಾತ್ರವಲ್ಲ, ಫ್ಯಾನ್‌ ಫಾಲೋವಿಂಗ್‌ ಹುಡುಗರನ್ನು ಫಿದಾ ಆಗಿಸಿದೆ. ಅತ್ಯಾಕರ್ಷಕವಾಗಿ ಕಾಣಿಸುತ್ತಿರುವ ಈ ಲುಕ್‌ಗಾಗಿ ನೀವು ಮಾಡಬೇಕಾದ್ದೇನು? ಇಲ್ಲಿದೆ ಒಂದಿಷ್ಟು ಟಿಪ್ಸ್.

ಚಿತ್ರಗಳು: ಮೇಘಾ ಶೆಟ್ಟಿ, ನಟಿ., ಚಿತ್ರಕೃಪೆ: ಚಿದು ಇನ್‌ ಪ್ರೊಟ್ರೈಟ್ಸ್
1/5

ನಟಿ ಮೇಘಾ ಶೆಟ್ಟಿಯ (Actress Megha Shetty) ಪಾಸ್ಟೆಲ್‌ ಶೇಡ್‌ನ ಸಾದಾ ಸೀರೆಯ ಲುಕ್‌ಗೆ ಹುಡುಗರು ಫಿದಾ ಆಗಿದ್ದಾರೆ. ಹೌದು, ಮೇಘಾ ಶೆಟ್ಟಿ ಉಟ್ಟಿರುವ ತಿಳಿ ಗುಲಾಬಿಯ ಅಂದರೆ ಇಂಗ್ಲಿಷ್‌ ಕಲರ್‌ನ ಪಾಸ್ಟೆಲ್‌ ಶೇಡ್‌ನ ಸಾದಾ ಸೀರೆಯು ಸೀರೆ ಪ್ರಿಯರನ್ನು ಮಾತ್ರವಲ್ಲ, ಫ್ಯಾನ್‌ ಫಾಲೋವಿಂಗ್‌ ಹುಡುಗರನ್ನು ಫಿದಾ ಆಗಿಸಿದೆ. ಸಿಂಪಲ್ ಆದರೂ ನೋಡಲು ನ್ಯಾಚುರಲ್‌ ಆಗಿ ಕಾಣಿಸುತ್ತಿರುವ ಇವರ ಈ ಲುಕ್‌ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಮಾನಿನಿಯರ ಹಾಗೂ ಸೀರೆ ಪ್ರೇಮಿಗಳ ಗಮನ ಸೆಳೆದಿದೆ.

2/5

ತಿಳಿ ವರ್ಣದ ಸಾದಾ ಸೀರೆ

ಅಂದಹಾಗೆ, ಇತ್ತೀಚೆಗೆ ಟ್ರೆಂಡಿಯಾಗಿರುವ ಡಿಸೈನ್‌ನಲ್ಲಿರುವ ಚಿಕ್ಕ ಲೇಸ್‌ ಬಾರ್ಡರ್‌ ಹೊಂದಿರುವ ಮೇಘಾ ಶೆಟ್ಟಿ ಉಟ್ಟಿರುವ ಈ ಸೀರೆ ಕಂಪ್ಲೀಟ್‌ ಶಿಮ್ಮರ್‌ ಲುಕ್‌ ಹೊಂದಿದೆ. ತಕ್ಷಣಕ್ಕೆ ಸ್ಪೇಸ್‌ ಸಿಲ್ಕ್‌ನಂತೆಯೂ ಕಾಣಿಸುವ ಈ ಸೀರೆ ಜಿಮ್ಮಿ ಚೂ ಫ್ಯಾಬ್ರಿಕ್‌ನದ್ದು ಎನ್ನಲಾಗಿದೆ. ಸಾಯಿ ತನರ್ಯಾ ಬ್ರೈಡಲ್‌ ಬೋಟಿಕ್‌ನ ಡಿಸೈನರ್‌ ಸೀರೆ ಇದಾಗಿದ್ದು, ಮೇಘಾಗೆ ಐಶ್ವರ್ಯಾ ಸ್ಟೈಲಿಂಗ್‌ ಮಾಡಿದ್ದಾರೆ.

3/5

ಗ್ಲಾಮರಸ್‌ ಬ್ಲೌಸ್‌ ಮ್ಯಾಚಿಂಗ್‌

ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತಿರುವ ಈ ಸೀರೆ ಲುಕ್‌ಗೆ ಡಿಸೈನರ್‌ ಬ್ಲೌಸ್‌ ಮ್ಯಾಚ್‌ ಮಾಡಲಾಗಿದೆ. ಸ್ಲಿವ್‌ ಲೆಸ್‌ ಬ್ಲೌಸ್‌ಗೆ ಟಮ್ಮಿಯ ಭಾಗಕ್ಕೆ ತಾಗುವಂತೆ ಬೆಲ್ಟ್ ಶೈಲಿಯ ಎಕ್ಸ್ಟ್ರಾ ಪರ್ಲ್ಸ್ ಟಾಸೆಲ್ಸ್ ರೀತಿಯ ಡಿಸೈನ್‌ ಮಾಡಲಾಗಿದೆ. ಇದು ಗ್ಲಾಮರಸ್‌ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

4/5

ಸಿಂಪಲ್‌ ಮೇಕೋವರ್‌

ಇನ್ನು ಈ ಸೀರೆಗೆ ಹೊಂದುವಂತೆ ತೀರಾ ಸಿಂಪಲ್‌ ಮೇಕಪ್‌ ಮಾಡಲಾಗಿದೆ. ಇದರೊಂದಿಗೆ ವಿಂಟೇಜ್‌ ಲುಕ್‌ ನೀಡುವಂತಹ ಹ್ಯಾಂಗಿಂಗ್ಸ್ ಹಾಗೂ ಫಿಂಗರ್‌ರಿಂಗ್‌ ಮ್ಯಾಚ್‌ ಮಾಡಿರುವುದು ಸಿಂಪಲ್‌ ಕ್ಲಾಸಿ ಲುಕ್‌ ಕಲ್ಪಿಸಿದೆ.

5/5

ಮೇಘಾ ಶೆಟ್ಟಿಯ ಸೀರೆ ಲುಕ್‌ಗಾಗಿ 5 ಟಿಪ್ಸ್ ಫಾಲೋ ಮಾಡಿ

  • ಸಾದಾ ಶಿಮ್ಮರ್‌ ಲುಕ್‌ ಇರುವಂತಹ ಸೀರೆ ಆಯ್ಕೆ ಮಾಡಿ.
  • ಸಿಂಪಲ್‌ ಆಕ್ಸೆಸರೀಸ್‌ ಧರಿಸಿ.
  • ಮಿನಿಮಲ್‌ ಮೇಕಪ್‌ ಮಾಡಿ.
  • ಪಾಸ್ಟೆಲ್‌ ಶೇಡ್‌ ನಿಮ್ಮನ್ನು ಹೈಲೈಟ್‌ ಮಾಡುತ್ತದೆ.
  • ಟ್ರೆಂಡಿಯಾಗಿರುವ ಸೀರೆ ಕಲರ್ಸ್ ಆಯ್ಕೆ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author