Star Saree Fashion 2025: ನಟಿ ಭಾವನಾ ರಾವ್ ಗೋಲ್ಡನ್ ಲುಕ್‌ಗೆ ಸೀರೆ ಪ್ರಿಯರು ಫಿದಾ!
Star Saree Fashion 2025: ನಟಿ ಭಾವನಾ ರಾವ್ ಉಟ್ಟಿರುವ ಗೋಲ್ಡನ್ ಸೀರೆಯು ಅವರನ್ನು ಅತ್ಯಾಕರ್ಷಕವಾಗಿ ಬಿಂಬಿಸಿದೆ. ಅವರ ಈ ಲುಕ್‌ಗೆ ಅಭಿಮಾನಿಗಳು ಮಾತ್ರವಲ್ಲ, ಸೀರೆ ಪ್ರಿಯರು ಕೂಡ ಫಿದಾ ಆಗಿದ್ದಾರೆ. ಹಾಗಾದ್ರೆ, ಭಾವನಾರ ಈ ಲುಕ್ ಹೇಗಿದೆ? ಫ್ಯಾಷನ್ ವಿಮರ್ಶಕರು ಹೇಳುವುದೇನು? ಈ ಕುರಿತಂತೆ ಇಲ್ಲಿದೆ ವಿವರ.
ನಟಿ ಭಾವನಾ ರಾವ್ ಕಾಣಿಸಿಕೊಂಡಿರುವ ಅತ್ಯಾಕರ್ಷಕ ಗೋಲ್ಡನ್ ಸೀರೆ ಲುಕ್‌ಗೆ ಸೀರೆ ಪ್ರಿಯರು ಫಿದಾ ಆಗಿದ್ದಾರೆ. ಹೌದು, ನೋಡಲು ಸುಂದರವಾಗಿ ಕಾಣಿಸುತ್ತಿರುವ ಭಾವನಾರ ಈ ಲುಕ್ ಇದೀಗ ಅಭಿಮಾನಿಗಳಿಗೆ ಮಾತ್ರವಲ್ಲ, ಸೀರೆ ಪ್ರಿಯ ಮಾನಿನಿಯರಿಗೂ ಸಖತ್ ಇಷ್ಟವಾಗಿದೆ.
ಭಾವನಾ ಸೀರೆ ಪ್ರೇಮ
ಕಳೆದ ವಾರವಷ್ಟೇ ತಮ್ಮ ಮನೆಯ ಗೃಹಪ್ರವೇಶದಲ್ಲಿ ಕಂಪ್ಲೀಟ್ ಎಥ್ನಿಕ್ ಹಾಗೂ ಸೀರೆಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಭಾವನಾ ರಾವ್, ಇದೀಗ ಮತ್ತೊಮ್ಮೆ ತಮ್ಮ ಗೋಲ್ಡನ್ ಸೀರೆ ಲುಕ್‌ನ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಸೀರೆ ಪ್ರಿಯರನ್ನು ಸೆಳೆದಿದೆ.
ಭಾವನಾ ರಾವ್ ಫ್ಯಾಷನ್
ಅಂದಹಾಗೆ, ಸಾಕಷ್ಟು ಸಿನಿಮಾಗಳ ಮೂಲಕ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಭಾವನಾ ರಾವ್, ಗಾಳಿಪಟ ಚಿತ್ರದ ಮೂಲಕ ಖ್ಯಾತಿ ಗಳಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು, ಈ ಮಧ್ಯೆ ಬಾಲಿವುಡ್ ಸಿನಿಮಾ ಹಾಗೂ ವೆಬ್ ಸೀರೀಸ್ ಮೂಲಕವು ಕೆಲಕಾಲ ಬ್ಯುಸಿಯಾಗಿದ್ದರು. ಅಂದಹಾಗೆ, ಇವರು ಭರತನಾಟ್ಯ ಕಲಾವಿದೆ ಕೂಡ. ಅಲ್ಲದೇ ಆಗಾಗ್ಗೆ ಸಾಕಷ್ಟು ಫ್ಯಾಷನ್ ಫೋಟೋ ಶೂಟ್‌ಗಳಲ್ಲಿಯೂ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಭಾವನಾ ರಾವ್ ಗೋಲ್ಡನ್ ಸೀರೆ ಲುಕ್ ರಿವ್ಯೂ
ಭಾವನಾ ರಾವ್ ಉಟ್ಟಿರುವ ಗೋಲ್ಡನ್ ಸೀರೆಯು ಈ ಸೀಸನ್‌ನಲ್ಲಿ ಸಖತ್ ಟ್ರೆಂಡಿಯಾಗಿದೆ. ಕೇವಲ ಬ್ರೈಡಲ್ ಲುಕ್‌ನಲ್ಲಿ ಮಾತ್ರವಲ್ಲ, ಫ್ಯಾಮಿಲಿ ಹಾಗೂ ಗ್ರ್ಯಾಂಡ್ ಸಮಾರಂಭಗಳಲ್ಲೂ ಈ ಶೇಡ್‌ನ ಸೀರೆಗಳು ರಾಯಲ್ ಸೀರೆ ಕೆಟಗರಿಯಲ್ಲಿ ಟ್ರೆಂಡಿಯಾಗಿವೆ. ಇನ್ನು, ಅವರ ಜ್ಯುವೆಲರಿ ಮ್ಯಾಚಿಂಗ್, ಹೇರ್‌ಸ್ಟೈಲ್, ಹಣೆಯ ಬಿಂದಿ ಎಲ್ಲವೂ ಒಂದಕ್ಕೊಂದು ಮ್ಯಾಚ್ ಆಗಿದೆ.
ಇದು ಅವರನ್ನು ಪಕ್ಕಾ ಕನ್ನಡತಿಯಂತೆ ಬಿಂಬಿಸಿದೆ ಎಂದು ಫುಲ್ ಮಾರ್ಕ್ಸ್ ನೀಡಿದ್ದಾರೆ ಫ್ಯಾಷನ್ ವಿಮರ್ಶಕರು. ನಟಿ ಭಾವನಾ ರಾವ್ ಉಟ್ಟಿರುವ ಗೋಲ್ಡನ್ ಸೀರೆಯು ಅವರನ್ನು ಅತ್ಯಾಕರ್ಷಕವಾಗಿ ಬಿಂಬಿಸಿದೆ.