Star Saree Fashion 2025: ಬ್ಲ್ಯಾಕ್ ಸೀರೆಯಲ್ಲಿ ಮನಮೋಹಕವಾಗಿ ಕಂಡ ಜಿಂಕೆ ಮರಿ ನಂದಿತಾ ಶ್ವೇತಾ
Star Saree Fashion 2025: ಜಿಂಕೆ ಮರಿನಾ ಹಾಡಿನ ಮೂಲಕ ಜನಪ್ರಿಯಗೊಂಡಿದ್ದ ನಟಿ ನಂದಿತಾ ಶ್ವೇತಾ ಬ್ಲ್ಯಾಕ್ ಸೀರೆಯಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಸ್ಟೈಲಿಂಗ್‌ಗೆ ಅಭಿಮಾನಿಗಳು ಮನಸೋತಿದ್ದಾರೆ. ಅವರ ಲುಕ್ ಹೇಗಿದೆ? ಖುದ್ದು ಅವರೇ ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.
ಬ್ಲ್ಯಾಕ್ ಸೀರೆಯಲ್ಲಿ ಜಿಂಕೆ ಮರಿ ಖ್ಯಾತಿಯ ನಟಿ ನಂದಿತಾ ಶ್ವೇತಾ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಲೂಸ್ ಮಾದ ಜತೆಗೆ ನಟಿಸಿದ ನಂದ ಲವ್ಸ್ ನಂದಿತಾ ಸಿನಿಮಾದ ಜಿಂಕೆ ಮರಿನಾ… ಹಾಡಿನ ಮೂಲಕ ಜನಪ್ರಿಯಗೊಂಡಿದ್ದ ನಟಿ ನಂದಿತಾ ಶ್ವೇತಾ, ಸದ್ಯ ಬ್ಲ್ಯಾಕ್ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಸ್ಟೈಲಿಂಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಕುರಿತಂತೆ ಅವರೇ ಮಾತನಾಡಿದ್ದಾರೆ.
ವಿಶ್ವವಾಣಿ ನ್ಯೂಸ್: ಸೀರೆಯಲ್ಲಿ ಸಖತ್ ಆಗಿ ಕಾಣಿಸುತ್ತೀದ್ದೀರಾ? ಏನಿದರ ಸೀಕ್ರೆಟ್?
ನಂದಿತಾ ಶ್ವೇತಾ: ಸೀರೆ ಎಂಬುದು ನಮ್ಮ ದೇಸಿ ಫ್ಯಾಷನ್! ನಮ್ಮ ಪರ್ಸನಾಲಿಟಿಗೆ ಹೊಂದುವಂತಹ ಸೀರೆಯನ್ನು ಆಯ್ಕೆ ಮಾಡಿ ಉಟ್ಟಾಗ ಅತ್ಯಾಕರ್ಷಕವಾಗಿ ಕಾಣಿಸುವುದು ಗ್ಯಾರಂಟಿ.
ವಿಶ್ವವಾಣಿ ನ್ಯೂಸ್: ನೀವು ಸೀರೆ ಪ್ರಿಯರಾ?
ನಂದಿತಾ ಶ್ವೇತಾ: ಖಂಡಿತಾ. ಆಗಾಗ್ಗೆ ನಾನು ಸೀರೆಯಲ್ಲೂ ಕಾಣಿಸಿಕೊಳ್ಳಲು ಬಯಸುತ್ತೇನೆ.
ವಿಶ್ವವಾಣಿ ನ್ಯೂಸ್: ಮಾನ್ಸೂನ್‌ನಲ್ಲಿ ಸೀರೆ ಪ್ರಿಯರಿಗೆ ನೀವು ಹೇಳುವುದೇನು?
ನಂದಿತಾ ಶ್ವೇತಾ: ಸೀರೆಗೆ ಸೀಸನ್ ಎಂಬುದಿಲ್ಲ! ದೇಸಿ ಲುಕ್ ಬೇಕಾದಾಗಲೆಲ್ಲಾ ಉಡಬಹುದು.
ವಿಶ್ವವಾಣಿ ನ್ಯೂಸ್: ಈ ಸೀರೆಯಲ್ಲಿ ನಿಮಗಿಷ್ಟವಾದುದೇನು?
ನಂದಿತಾ ಶ್ವೇತಾ: ಸೀರೆಯ ಸ್ಟೈಲಿಂಗ್ ಹಾಗೂ ಔಟ್‌ಲುಕ್
ವಿಶ್ವವಾಣಿ ನ್ಯೂಸ್: ನಿಮ್ಮ ಫಾಲೋವರ್ಸ್‌ಗೆ ನೀವು ಸೀರೆ ಫ್ಯಾಷನ್ ಬಗ್ಗೆ ನೀಡುವ 3 ಟಿಪ್ಸ್ ಏನು?
ನಂದಿತಾ ಶ್ವೇತಾ:
- ನಿಮ್ಮ ಬಾಡಿ ಮಾಸ್ ಇಂಡೆಕ್ಸ್‌ಗೆ ಹೊಂದುವಂತಹ ಸೀರೆ ಉಟ್ಟುಕೊಳ್ಳಿ.
- ಸೀರೆಗೆ ತಕ್ಕಂತೆ ಸ್ಟೈಲಿಂಗ್ ಮಾಡಿ, ನೋಡಿ.
- ನಿಮ್ಮ ಅಭಿಲಾಷೆಗೆ ಅನುಗುಣವಾಗಿ ಸೀರೆಯನ್ನು ಡ್ರೇಪಿಂಗ್ ಮಾಡಿ. ಮೇಕಪ್ ಮಾಡಿ.