Tanisha Kuppanda: ಹುಟ್ಟುಹಬ್ಬದ ದಿನ ಸಖತ್ ಹಾಟ್ ಆಗಿ ಕಾಣಿಸಿಕೊಂಡ ಬೆಂಕಿ ತನಿಷಾ
ಸೀರಿಯಲ್ಗಳ ಮೂಲಕ ಜನಪ್ರಿಯತೆ ಪಡೆದ ನಟಿ ತನಿಷಾಗೆ ಇನ್ಸ್ಟಾದಲ್ಲಿ ಅಪಾರ ಫಾಲೋವರ್ಸ್ ಇದ್ದಾರೆ. ಇದೀಗ ಇವರ ಹುಟ್ಟುಹಬ್ಬದ ಫೋಟೋ ಸಖತ್ ವೈರಲ್ ಆಗುತ್ತಿದೆ. ಬಾರ್ಬಿ ಡಾಲ್ ತರ ರೆಡಿಯಾಗಿ ಹಾಟ್ ಅವತಾರದಲ್ಲಿ ತನಿಷಾ ಮಿಂಚಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಯಾಗಿದ್ದ ನಟಿ ತನಿಷಾ ಕುಪ್ಪಂಡ ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಬೆಂಕಿ ತನಿಷಾ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಇವರು ಬರ್ತ್ ಡೇ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸೀರಿಯಲ್ಗಳ ಮೂಲಕ ಜನಪ್ರಿಯತೆ ಪಡೆದ ನಟಿ ತನಿಷಾಗೆ ಇನ್ಸ್ಟಾದಲ್ಲಿ ಅಪಾರ ಫಾಲೋವರ್ಸ್ ಇದ್ದಾರೆ. ಇದೀಗ ಇವರ ಹುಟ್ಟುಹಬ್ಬದ ಫೋಟೋ ಸಖತ್ ವೈರಲ್ ಆಗುತ್ತಿದೆ. ಬಾರ್ಬಿ ಡಾಲ್ ತರ ರೆಡಿಯಾಗಿ ಹಾಟ್ ಅವತಾರದಲ್ಲಿ ತನಿಷಾ ಮಿಂಚಿದ್ದಾರೆ.
ಕುಟುಂಬಸ್ಥರು, ಆಪ್ತ ಸ್ನೇಹಿತರ ಜೊತೆಗೆ ತನಿಷಾ ಕುಪ್ಪಂಡ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬಿಗ್‌ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಆಗಮಿಸಿ ವಿಶ್ ಮಾಡಿದ್ದಾರೆ. ಫ್ಯಾನ್ಸ್ ಕಡೆಯಿಂದ ಶುಭಾಷಯಗಳ ಮಹಾಪೂರವೇ ಹರಿದು ಬಂದಿದೆ.
ಕನ್ನಡ ಸೀರಿಯಲ್ ಮತ್ತು ಸಿನಿಮಾ ನಟಿಯಾಗಿ ತನಿಷಾ ಕುಪ್ಪಂಡ ಜನಪ್ರಿಯತೆ ಪಡೆದಿದ್ದಾರೆ. ಇವರು ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಭಾಗವಹಿಸಿದ್ದರು. 14ನೇ ವಾರ ಮನೆಯಿಂದ ಹೊರಬಿದ್ದಿದ್ದರು. ಮಂಗಳಗೌರಿ ಮದುವೆ, ಇಂತಿ ನಿಮ್ಮ ಆಶಾ, ಸತ್ಯ ಶಿವಂ ಸುಂದರಂ, ವಾರಸ್ದಾರ, ಸರಯೂ, ಸಾಕ್ಷಿ, ಪ್ರೀತಿ ಎಂದರೇನು ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಬೇರೆ ಭಾಷೆಯ ಸೀರಿಯಲ್‌ಗಳಲ್ಲಿಯೂ ನಟಿಸಿದ್ದಾರೆ. ದಂಡುಪಾಳ್ಯ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಇದಾದ ಬಳಿಕ ಬಾಡಿಗಾರ್ಡ್, ಉಂಡೆನಾಮ, ಪೆಂಟಗನ್ ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಕೋಣ ಸಿನಿಮಾದ ನಿರ್ಮಾಣದೊಂದಿಗೆ ಅದರಲ್ಲಿ ನಟಿಸುತ್ತಿದ್ದಾರೆ.