ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mala Sinha: ಐಟಿ ರೇಡ್‌ ವೇಳೆ ಹೇಳಿದ ಒಂದೇ ಸುಳ್ಳಿನಿಂದ ಈ ನಟಿಯ ಜೀವನವೇ ಹಾಳಾಯ್ತು; ಅಷ್ಟಕ್ಕೂ ಆಗಿದ್ದೇನು?

ನಟಿ ಮಾಲಾ ಸಿನ್ಹಾ ಹಿಂದಿ, ಬೆಂಗಾಲಿ ಮತ್ತು ನೇಪಾಳಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 1960 ಮತ್ತು 70ರ ದಶಕದ ಪ್ರಮುಖ ನಟಿಯಾಗಿದ್ದ ಅವರು ಧರ್ಮೇಂದ್ರ, ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ ಸೇರಿದಂತೆ ಅನೇಕ ದೊಡ್ಡ ಕಲಾವಿದರೊಂದಿಗೆ ಕೆಲಸ ಮಾಡಿದ್ದಾರೆ. ಆದರೆ ಇವರು ಆಡಿದ ಒಂದೇ ಸುಳ್ಳು ಮಾತಿನಿಂದ ಅವರ ಜೀವನದ ದಿಕ್ಕನ್ನು ಬದಲಾಇತ್ತು. ಅಷ್ಟಕ್ಕೂ ಆಗಿದ್ದೇನು ಎನ್ನುವ ವಿವರ ಇಲ್ಲಿದೆ.

Mala Sinha
1/5

ಭಾರತೀಯ ಚಲನಚಿತ್ರೋದ್ಯಮದಲ್ಲಿ ತನ್ನ ನಟನೆ ಮತ್ತು ಸೌಂದರ್ಯದಿಂದ ಗುರುತಿಸಿಕೊಂಡಿದ್ದ ಮಾಲಾ ಸಿನ್ಹಾ ಈಗ ಸಿನಿಮಾ ಕ್ಷೇತ್ರದಿಂದ ದೂರಾಗಿದ್ದಾರೆ. ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಎಂಬ ಹೆಸರು ಮಾಲಾ ಸಿನ್ಹಾ ಅವರಿಗೆ ಇತ್ತು.

2/5

1978ರ ಸಂದರ್ಭ ಮಾಲಾ ಸಿನ್ಹಾ ತಮ್ಮ ವೃತ್ತಿಜೀವನದಲ್ಲಿ ಖ್ಯಾತಿ ಗಳಿಸುತ್ತಿರುವಾಗಲೇ ಇದ್ದಕ್ಕಿದ್ದಂತೆ ಒಂದು ದಿನ ಆದಾಯ ತೆರಿಗೆ ಇಲಾಖೆ ಅವರ ಮನೆಯ ಮೇಲೆ ದಾಳಿ ನಡೆಸಿತು. ಈ ವೇಳೆ ಮಾಲಾ ಅವರ ಮನೆಯ ಸ್ನಾನಗೃಹದ ಗೋಡೆಯಲ್ಲಿ ರಾಶಿಗಟ್ಟಲೆ ನೋಟುಗಳು ಪತ್ತೆಯಾದವು.

3/5

ಈ ಪ್ರಕರಣ ನ್ಯಾಯಾಲಯಲ್ಲಿ ಚರ್ಚೆಯಾದಾಗ ಮಾಲಾ ಸಿನ್ಹಾ ಹೇಳಿದ ಮಾತು ಎಲ್ಲರಿಗೂ ಆಘಾತವನ್ನುಂಟು ಮಾಡಿತು. ವೇಶ್ಯಾವಾಟಿಕೆಯ ಮೂಲಕ ಈ ಹಣವನ್ನು ಗಳಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು. ಈ ಒಂದು ಸುಳ್ಳು ಅವರ ಚಿತ್ರರಂಗದ ಪ್ರಯಾಣವನ್ನೇ ನಶಿಸುವಂತೆ ಮಾಡಿದೆ.

4/5

ವರದಿಗಳ ಪ್ರಕಾರ, ಮಾಲಾ ಸಿನ್ಹಾ ಅವರ ತಂದೆ ಈ ಹೇಳಿಕೆ ನೀಡಲು ಸಲಹೆ ನೀಡಿದ್ದರು ಎನ್ನುವ ಸುದ್ದಿ ಕೂಡ ಹಬ್ಬಿತ್ತು. ಇದರಿಂದಾಗಿ ರಾತ್ರೋರಾತ್ರಿ ಕೆಲವು ಚಿತ್ರಗಳಿಂದ ನಟಿಯನ್ನು ಹೊರಗಿಡಲಾಯಿತು. ಆ ಬಳಿಕ ಅವರಿಗೆ ಚಿತ್ರರಂಗದಲ್ಲಿ ಕೆಲಸ ಸಿಗುವುದು ಕೂಡ ಕಷ್ಟ ಎನ್ನುವ ಮಟ್ಟಿಗೆ ಪರಿಸ್ಥಿತಿ ಬದಲಾಗಿ ಹೋಗಿತ್ತು.

5/5

1954ರಲ್ಲಿ 'ಬಾದ್‌ಶಾ' ಚಿತ್ರದ ಮೂಲಕ ಮಾಲಾ ಸಿನ್ಹಾ ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಮಾಲಾ ಸಿನ್ಹಾ 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ 2018ರಲ್ಲಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಕೂಡ ಇವರಿಗೆ ಲಭಿಸಿತ್ತು.