ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MiG-21 Fighter Jets: ಮಿಗ್-21 ಫೈಟರ್ ಜೆಟ್‌ ಸೆಪ್ಟೆಂಬರ್ ವೇಳೆಗೆ ನಿವೃತ್ತಿ

1963ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ್ದ ಮಿಗ್-21 ಫೈಟರ್ ಜೆಟ್‌ ಸೆಪ್ಟೆಂಬರ್ ವೇಳೆಗೆ ನಿವೃತ್ತಿಯಾಗಲಿದೆ. ಹಲವು ದಶಕಗಳಿಂದ ದೇಶ ಸೇವೆ ಮಾಡಿರುವ ಈ ಫೈಟರ್ ಜೆಟ್‌ಗೆ ವಿದಾಯ ಹೇಳಲು ಸಮಾರಂಭವನ್ನು ಆಯೋಜಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಷ್ಯಾದಲ್ಲಿ ಜನ್ಮ ತಳೆದ ಈ ಫೈಟರ್ ಜೆಟ್ ಭಾರತೀಯ ಸೇನೆಯಲ್ಲಿ ಸಲ್ಲಿಸಿರುವ ಸೇವೆಯ ಕಿರು ನೋಟ ಇಲ್ಲಿದೆ.

1/5

ಭಾರತೀಯ ವಾಯುಪಡೆಯನ್ನು ಸೇರಿ ಹಲವು ದಶಕಗಳ ಕಾಲ ದೇಶ ಸೇವೆಯನ್ನು ಮಾಡಿದ ರಷ್ಯಾ ನಿರ್ಮಿತ ಮಿಗ್ -21 ಬೈಸನ್ ಫೈಟರ್ ಜೆಟ್‌ಗಳನ್ನು ಭಾರತೀಯ ವಾಯುಪಡೆ (IAF) ಈ ವರ್ಷದ ಸೆಪ್ಟೆಂಬರ್ ವೇಳೆಗೆ ನಿವೃತ್ತಗೊಳಿಸಲಿದೆ. ಹಲವಾರು ಪ್ರಮುಖ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಈ ವಿಮಾನವನ್ನು ಗೌರವಿಸಲು ಔಪಚಾರಿಕ ವಿದಾಯ ಸಮಾರಂಭವನ್ನು ಆಯೋಜಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

2/5

ಮಿಗ್ -21 ಬೈಸನ್ ಫೈಟರ್ ಜೆಟ್‌ಗಳನ್ನು ಸೋವಿಯತ್ ಮಿಕೋಯಾನ್- ಗುರೆವಿಚ್ ಬ್ಯೂರೋ ಅಭಿವೃದ್ಧಿಪಡಿಸಿದ್ದು, ಇದು 1963ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದೆ. ಭಾರತದ ಮೊದಲ ಸೂಪರ್‌ಸಾನಿಕ್ ಜೆಟ್ ಆಗಿದೆ. ಭಾರತೀಯ ವಾಯುಪಡೆಯು 870ಕ್ಕೂ ಹೆಚ್ಚು ಮಿಗ್-21 ವಿಮಾನಗಳನ್ನು ನಿರ್ವಹಿಸಿದೆ.

3/5

ಮಿಗ್-21 ಬಿಸ್‌ನ ನವೀಕೃತ ಆವೃತ್ತಿಯಾದ ಮಿಗ್-21 ಬೈಸನ್ 1976ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಯಿತು. ಪಾಕಿಸ್ತಾನದೊಂದಿಗಿನ 1965 ಮತ್ತು 1971ರ ಯುದ್ಧಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಮಿಗ್-21 ಫೈಟರ್ ಜೆಟ್ 1990ರ ದಶಕದ ಮಧ್ಯಭಾಗದಲ್ಲಿ ತನ್ನ ನಿವೃತ್ತಿಯನ್ನು ನಿರ್ಧರಿಸಿತ್ತು.

4/5

ವಿವಿಧ ರೂಪದಲ್ಲಿ 11,000ಕ್ಕೂ ಹೆಚ್ಚು ಘಟಕಗಳನ್ನು ಉತ್ಪಾದಿಸಲಾಗುತ್ತಿದ್ದ ಈ ಫೈಟರ್ ಜೆಟ್ ಕೈಗೆಟುಕುವ ದರ, ಹೆಚ್ಚು ಚುರುಕು ಮತ್ತು ಸೂಪರ್ ಸಾನಿಕ್ ಸಾಮರ್ಥ್ಯದಿಂದಾಗಿ ಏಷ್ಯಾ, ಆಫ್ರಿಕಾ ಮತ್ತು ಪೂರ್ವ ಯುರೋಪಿನಾದ್ಯಂತ ವಾಯುಪಡೆಗಳಲ್ಲಿ ತನ್ನ ಸ್ಥಾನ ಪಡೆದಿತ್ತು. ಭಾರತೀಯ ಸೇನೆಯು ಈ ಜೆಟ್‌ಗಳ ನಿವೃತ್ತಿಗೆ ಮೊದಲೇ ದಿನ ನಿಗದಿಪಡಿಸಿದ್ದರೂ ತೇಜಸ್ ಎಂಕೆ 1 ಎ ವಿಮಾನಗಳ ವಿತರಣೆಯಲ್ಲಿನ ವಿಳಂಬದಿಂದಾಗಿ ಅವುಗಳ ಸೇವಾ ಅವಧಿಯನ್ನು ವಿಸ್ತರಿಸಲಾಗಿತ್ತು.

5/5

2019ರ ಬಾಲಕೋಟ್ ವೈಮಾನಿಕ ದಾಳಿಯ ಸಮಯದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ ಮಿಗ್ -21 ಬೈಸನ್ ಅನ್ನು ಹಾರಿಸಿದ್ದರು. ಮಿಗ್ -21ರ ಬೈಸನ್ ರೂಪಾಂತರ ಮಾತ್ರ ಇಂದು ಕಾರ್ಯನಿರ್ವಹಿಸುತ್ತಿದೆ. ಕಳೆದ ಆರು ದಶಕಗಳಲ್ಲಿ 400ಕ್ಕೂ ಹೆಚ್ಚು ಮಿಗ್ -21 ವಿಮಾನಗಳು ಅಪಘಾತಕ್ಕೀಡಾಗಿದ್ದು ಇದರಲ್ಲಿ ಸುಮಾರು 200 ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಹೀಗಾಗಿ ಈ ವಿಮಾನಕ್ಕೆ 'ಹಾರುವ ಶವಪೆಟ್ಟಿಗೆ' ಎಂದು ಕರೆಯಲಾಗುತ್ತದೆ.

ವಿದ್ಯಾ ಇರ್ವತ್ತೂರು

View all posts by this author