ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಣ್ಣ-ತಂಗಿ, ಲವ್ ಬರ್ಡ್ಸ್ ಎರಡೂ ಪಾತ್ರದಲ್ಲೂ ಮಿಂಚಿದ್ದ‌ ಸೆಲೆಬ್ರಿಟಿಗಳು ಇವರೇ ನೋಡಿ!

ಕಥೆಗಳನ್ನು ಆಧರಿಸಿ ನಟ-ನಟಿಯರಿಗೆ ಸಿನಿಮಾದಲ್ಲಿ ವಿವಿಧ ರೀತಿಯ ಪಾತ್ರಗಳು ಸಿಗುವುದು ಸಾಮಾನ್ಯ. ಅಂತೆಯೆ ಕೆಲವು ಸಿನಿಮಾಗಳಲ್ಲಿ ಅಣ್ಣ-ತಂಗಿಯಾಗಿ ಅಭಿನಯಿಸಿ ಬಳಿಕ ಅದೇ ಜೋಡಿ ತೆರೆ ಮೇಲೆ ಹೀರೋ-ಹಿರೋಯಿನ್ ಆಗಿ ಮಿಂಚಿದ್ದೂ ಇದೆ. ಅಣ್ಣ-ತಂಗಿಯ ನಡುವಿನ ಬಾಂಧವ್ಯಕ್ಕೂ ಪ್ರೇಮಿಗಳ ನಡುವಿನ ಪ್ರೀತಿ ಅಭಿವ್ಯಕ್ತಿಗೂ ಸಾಕಷ್ಟು ವ್ಯತ್ಯಾಸವಿದೆ. ಹಾಗಿದ್ದರೂ ತೆರೆ ಮೇಲೆ ಕೆಲವು ಸೆಲೆಬ್ರಿಟಿಗಳು ಎರಡು ತರಹದ ಪಾತ್ರಕ್ಕೂ ಸೈ ಎಂದಿದ್ದು, ಅಂತಹ ಕೆಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಹಾಗಾದರೆ ಆ ಸಿನಿಮಾ ಯಾವುವು ಎನ್ನುವ ಮಾಹಿತಿ ಇಲ್ಲಿದೆ.

Lovers And Siblings In Films
1/6

ನಟ ಶಾರುಖ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನಲ್ಲಿ ಬಹಳ ಜನಪ್ರಿಯ ಜೋಡಿ. 2000ರಲ್ಲಿ ತೆರೆಕಂಡ ʼಜೋಶ್ʼ ಹಿಂದಿ ಚಿತ್ರದಲ್ಲಿ ಇವರು ಅವಳಿಗಳ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ʼಮೊಹಬ್ಬತೇನ್ʼ ಮತ್ತು ʼದೇವದಾಸ್ʼ ಚಿತ್ರದಲ್ಲಿ ಪ್ರೇಮಿಗಳ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಎಲ್ಲ ಚಿತ್ರಗಳು ಪ್ರೇಕ್ಷಕರ ಮನಗೆದ್ದಿದ್ದವು.

2/6

ಬಾಲಿವುಡ್ ಸ್ಟಾರ್‌ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ರಣವೀರ್ ಸಿಂಗ್ ʼಗುಂಡೇʼ ಚಿತ್ರದಲ್ಲಿ ಲವರ್ಸ್ ಪಾತ್ರದಲ್ಲಿ ಅಭಿನಯಿಸಿದ್ದರು. ಅದಾದ ಅನಂತರ ʼದಿಲ್ ಧಡಕ್ನೆ ದೋʼ ಚಿತ್ರದಲ್ಲಿ ಅಣ್ಣ-ತಂಗಿಯರಾಗಿ ಕಾಣಿಸಿಕೊಂಡಿದ್ದರು. ಬಳಿಕ 2018ರಲ್ಲಿ ʼಬಾಜಿರಾವ್ ಮಸ್ತಾನಿʼ ಬಾಲಿವುಡ್‌ ಚಿತ್ರದಲ್ಲಿ ಮತ್ತೆ ಗಂಡ-ಹೆಂಡತಿಯ ಪಾತ್ರದಲ್ಲಿ ನಟಿಸಿದ್ದರು. ಈ ಮೂಲಕ ಮೂರು ಸಿನಿಮಾಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿ ಹಿಟ್ ಲಿಸ್ಟ್ ಸೇರಿತು.

3/6

ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಕೂಡ ವಿಭಿನ್ನ ಪಾತ್ರಗಳಲ್ಲಿ ಸಿನಿಮಾ ಮಾಡಿ ಗಮನ ಸೆಳೆದಿದ್ದಾರೆ. ಇವರಿಬ್ಬರು ʼದೇಸಿ ಬಾಯ್ಸ್; ಹಿಂದಿ ಚಿತ್ರದಲ್ಲಿ ಮುದ್ದಾದ ಜೋಡಿಯಾಗಿ ನಟಿಸಿದ್ದರು. ಅನಂತರ ʼರೇಸ್ 2ʼ ಸಿನಿಮಾದಲ್ಲಿ ಕಸಿನ್ಸ್ ಆಗಿ ಅಭಿನಯಿಸಿದ್ದರು. ʼರೇಸ್ 2ʼ ಬಾಕ್ಸ್ ಆಫೀಸ್ ಭರ್ಜರಿ ಕಲೆಕ್ಷನ್ ಮಾಡಿತ್ತು.

4/6

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಅರ್ಜುನ್ ರಾಂಪಾಲ್ ಕೂಡ ಎರಡು ವಿಭಿನ್ನ ಜಾನರ್ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ʼಓಂ ಶಾಂತಿ ಓಂʼ ಚಿತ್ರದಲ್ಲಿ ಇವರು ಜೋಡಿಯಾಗಿ ನಟಿಸಿದ್ದರು. ಅನಂತರ ತೆರೆಕಂಡ ʼಹೌಸ್‌ಫುಲ್ʼ ಚಿತ್ರದಲ್ಲಿ ಅಣ್ಣ-ತಂಗಿ ಪಾತ್ರದಲ್ಲಿ ಕಾನಿಸಿಕೊಂಡಿದ್ದರು. ಈ ಎರಡು ಸಿನಿಮಾಗಳು ಹಿಟ್ ಆಗಿವೆ.

5/6

ʼಮುಜೆ ಕುಚ್ ಕೆಹನಾ ಹೈʼ ಸಿನಿಮಾದಲ್ಲಿ ನಟ ತುಷಾರ್ ಕಪೂರ್ ಮತ್ತು ಕರೀನಾ ಕಪೂರ್ ಲವರ್ಸ್ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ದೊಡ್ಡ ಮಟ್ಟಿಗೆ ಯಶಸ್ಸು ಕಂಡಿತು. ಬಳಿಕ 2003ರಲ್ಲಿ ತೆರೆಕಂಡ ʼಗೋಲ್ಮಾಲ್ 3ʼ ಸಿನಿಮಾದಲ್ಲಿ ಮತ್ತೆ ಇದೇ ಜೋಡಿ ಅಣ್ಣ-ಅತ್ತಿಗೆಯ ಪಾತ್ರವನ್ನು ನಿರ್ವಹಿಸಿತು. ಈ ಸಿನಿಮಾ 147 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.

6/6

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ಜೂಹಿ ಚಾವ್ಲಾ ʼಮಿಸ್ಟರ್ & ಮಿಸೆಸ್ ಖಿಲಾಡಿʼ ಚಿತ್ರದಲ್ಲಿ ಜೋಡಿಯಾಗಿ ನಟಿಸಿ ಜನ ಮನಗೆದ್ದರು. ಬಳಿಕ ಅವರು ʼಏಕ್ ರಿಶ್ತಾ: ದಿ ಬಾಂಡ್ ಆಫ್ ಲವ್ʼ ಸಿನಿಮಾದಲ್ಲಿ ಒಡಹುಟ್ಟಿದವರ ಪಾತ್ರದಲ್ಲಿ ಕಾಣಿಸಿಕೊಂಡರು.