ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aashka Goradia: ಒಂದು ಕಾಲದ ಪ್ರಖ್ಯಾತ ಕಿರುತೆರೆ ನಟಿ ಈಗ ಯಶಸ್ವಿ ಉದ್ಯಮಿ; ಈಕೆಯ ಒಟ್ಟು ಆದಾಯ ಎಷ್ಟಿದೆ ಗೊತ್ತಾ?

ಒಂದು ಕಾಲದಲ್ಲಿ ಟಿವಿ ವಾಹಿನಿಗಳ ಮೂಲಕ ಜನಪ್ರಿಯರಾಗಿದ್ದ ನಟಿ ಆಶ್ಕಾ ಗೊರಾಡಿಯಾ ಅವರು ತಮ್ಮ ಅದ್ಭುತ ಅಭಿನಯದಿಂದ ಸಾಕಷ್ಟು ಅವಕಾಶಗಳನ್ನು ಪಡೆದು ಫೇಮಸ್ ಆಗಿದ್ದರು. ಆದರೆ ಈಗ ಅವರು ಯಶಸ್ವಿ ಉದ್ಯಮಿಯಾಗಿ ಮುನ್ನಡೆಯುತ್ತಿದ್ದಾರೆ. ವ್ಯವಹಾರದಲ್ಲಿ ತೊಡಗಿದ್ದ ಇವರು 1200 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮಾಡಿದ್ದು ಕೇವಲ 23ನೇ ವಯಸ್ಸಿನಲ್ಲಿ ಸ್ವಂತ ಮನೆ, ಆಸ್ತಿಯನ್ನು ಸಹ ಹೊಂದಿದ್ದಾರೆ ಎಂದರೆ ಎಂತವರಿಗಾದರು ಅಚ್ಚರಿ ಎನಿಸಬಹುದು. ಅವರ ಬದುಕಿನ ಪಯಣವು ಅನೇಕರಿಗೆ ಪ್ರೇರಣೆದಾಯಕವಾಗಿದ್ದು ಅವರ ಕೆಲ ಆಸಕ್ತಿದಾಯಕ ಮಾಹಿತಿ ಇಲ್ಲಿದೆ

1/6

ಆಶ್ಕಾ ಗೊರಾಡಿಯಾ ಅವರು 2002ರಲ್ಲಿ 'ಅಚಾನಕ್ 37 ಸಾಲ್ ಬಾದ್' ಎಂಬ ಟೆಲಿವಿಶನ್ ಸೀರಿಸ್ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಬಾಭಿ ಮತ್ತು ತುಮ್ ಬಿನ್ ಜಾವೂನ್ ಕಹಾನ್‌ನಂತಹ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಇವರು ಫೇಮಸ್ ಆಗಿದ್ದಾರೆ.

2/6

2003 ರಲ್ಲಿ ಅವರು ಏಕ್ತಾ ಕಪೂರ್ ಅವರ ಕ್ಕುಸುಮ್ ಎಂಬ ಟಿವಿ ಧಾರವಾಹಿಯಲ್ಲಿ ಮನೆ ಮಾತಾದರು. ಇದಾದ ಬಳಿಕ ನಟಿ ಆಶ್ಕಾ ಅವರಿಗೆ ಅನೇಕ ಟಿವಿ ವಾಹಿನಿಗಳಲ್ಲಿ ಧಾರವಾಹಿ ಹಾಗೂ ಇತರ ಕಾರ್ಯಕ್ರಮಕ್ಕೆ ಆಫರ್ ಬರಲಾರಂಭಿಸಿತು. ಅವರು ಸಿಂಧೂರ್ ತೇರೆ ನಾಮ್ ಕಾ, ನಾಗಿನ್ ಮುಂತಾದ ಜನಪ್ರಿಯ ಸೀರಿಯಲ್ಸ್ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

3/6

ಧಾರವಾಹಿ ಮೂಲಕ ಖ್ಯಾತಿ ಪಡೆದ ಬಳಿಕ ನಟಿ ಆಶ್ಕಾ ಗೊರಾಡಿಯಾ ಅವರಿಗೆ ಅನೇಕ ರಿಯಾಲಿಟಿ ಶೋ ನಲ್ಲಿ ಕೂಡ ಪಾಲ್ಗೊಳ್ಳುವ ಅವಕಾಶ ಒಲಿದು ಬಂದಿದೆ. ಬಿಗ್ ಬಾಸ್ ಸೀಸನ್ 6, ಝಲಕ್ ದಿಖ್ಲಾ ಜಾ ಸೀಸನ್ 4, ನಾಚ್ ಬಲಿಯೆ ಸೀಸನ್ 8 ಮತ್ತು ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಕಿಲಾಡಿ 4 ನಂತಹ ವಿವಿಧ ರಿಯಾಲಿಟಿ ಶೋಗಳಲ್ಲಿ ಆಶಿಕಾ ಭಾಗವಹಿಸಿ ಖ್ಯಾತಿ ಪಡೆದಿದ್ದಾರೆ.

4/6

ನಟಿ ಆಶ್ಕಾ ಅವರು 2018 ರಲ್ಲಿ ಅಹಮದಾಬಾದ್‌ನಲ್ಲಿ ಮೇಕಪ್ ಬ್ರ್ಯಾಂಡ್ ಕಾಸ್ಮೆಟಿಕ್ ಅನ್ನು ಪ್ರಾರಂಭಿಸಿದರು. ಈ ಬ್ರ್ಯಾಂಡ್ ಅವರ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯಮ ಕ್ಷೇತ್ರದ ಯಶಸ್ಸನ್ನು ಸಹ ನೀಡಿತು. 2019ರಲ್ಲಿ ದಯಾನ್ ಹಾಗೂ ಕಿಚನ್ ಚಾಂಪಿಯನ್ ಸೀಸನ್ 5 ನಲ್ಲಿ ಸ್ಪರ್ಧಿಯಾಗಿ ಕೊನೆದಾಗಿ ಕಾಣಿಸಿಕೊಂಡರು. ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲ ಹೊಂದಿದ್ದ ನಟಿ ಆಶ್ಕಾ ಅವರು 2021 ರಲ್ಲಿ ನಟನೆಯಿಂದ ನಿವೃತ್ತಿ ಹೊಂದುವುದಾಗಿ ಕೂಡ ಅಧಿಕೃತವಾಗಿ ಘೋಷಿಸಿದ್ದರು.

5/6

2018ರಲ್ಲಿ ರೆನೀ ಕಾಸ್ಮೆಟಿಕ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಮೊದಲ ಬ್ರ್ಯಾಂಡ್ ಆಗಿ ಪರಿಚಯಿಸ ಲಾಯಿತು. 50 ಲಕ್ಷ ರೂ. ಆರಂಭಿಕ ಹೂಡಿಕೆ ಮಾಡಿ ತನ್ನ ಉತ್ಪನ್ನವನ್ನು ಆನ್‌ಲೈನ್‌ ನಲ್ಲಿ ಮಾತ್ರ ಮಾರಾಟ ಮಾಡಿತು. ಅಮೆಜಾನ್, ಫ್ಲಿಪ್‌ಕಾರ್ಟ್, ನೈಕಾ ಮತ್ತು ಮಿಂತ್ರಾ ಮುಂತಾದ ಡಿಜಿಟಲ್ ಪ್ಲ್ಯಾಟ್ ಫಾರ್ಮ್ ನಲ್ಲಿ ಖ್ಯಾತಿ ಪಡೆಯಿತು.

6/6

ರೆನೀ ಕಾಸ್ಮೆಟಿಕ್ ಬ್ರ್ಯಾಂಡ್ ಪ್ರಾರಂಭವಾದ ಮೊದಲ ಎರಡು ವರ್ಷಗಳಲ್ಲಿ 100 ಕೋಟಿ ರೂ. ಆದಾಯವನ್ನು ಗಳಿಸಿತು. 2024ರಲ್ಲಿ ರೆನೀ ಬ್ರ್ಯಾಂಡ್ ಒಟ್ಟು 1,200 ರಿಂದ 1,400 ಕೋಟಿ ರೂ.ಆದಾಯ ಗಳಿಸಿದೆ ಎಂದು ಕೂಡ ವರದಿಯಾಗಿದೆ. ಒಟ್ಟಿನಲ್ಲಿ ನಟಿ ಆಶ್ಕಾ ಅವರು ನಟನೆ ಯಿಂದ ದೂರ ಉಳಿದರು ಯಶಸ್ವಿ ಉದ್ಯಮಿಯಾಗಿ ಸಾವಿರಾರು ಕೋಟಿ ಒಡತಿಯಾಗಿದ್ದು ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.