ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಸಿಂಹ ರಾಶಿಗೆ ರವಿ ಪ್ರವೇಶ; ಯಾರಿಗೆಲ್ಲ ಉತ್ತಮ ಫಲವಿದೆ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಕೃಷ್ಣ ಪಕ್ಷದ ನವಮಿ ತಿಥಿ, ರೋಹಿಣಿ ನಕ್ಷತ್ರದ ಈ ದಿನದಂದು ರವಿ ಸಿಂಹ ರಾಶಿಯಲ್ಲಿ ಪ್ರವೇಶ ಮಾಡುತ್ತಿದ್ದು, ವರ್ಷಕ್ಕೊಮ್ಮೆ ನಡೆಯುವ ಅವರೂಪದ ಕ್ಷಣ ಇದಾಗಿದೆ. ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Daily Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಕೃಷ್ಣ ಪಕ್ಷದ ನವಮಿ ತಿಥಿ, ರೋಹಿಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ (Daily Horoscope) ತಿಳಿಸಿದ್ದಾರೆ.

ಮೇಷ ರಾಶಿ: ಇಂದು ರವಿ ಸಿಂಹ ರಾಶಿಗೆ ಬರುವ ಕಾರಣ ಮೇಷ ರಾಶಿಯವರ ಮನಸ್ಸಿಗೆ ಕ್ಲೇಶ ಉಂಟಾಗಲಿದೆ. ನಿಮ್ಮ ಕ್ರಿಯಾತ್ಮಕತೆ ಕೆಲಸ ಕಾರ್ಯಕ್ಕೆ ತೊಂದರೆ ಆಗಲಿದೆ. ಧನಾಗಮಕ್ಕೆ ಸಮಸ್ಯೆ ಆಗಲಿದೆ. ಪ್ರೇಮ, ಪ್ರೀತಿ ಸಂಬಂಧದಲ್ಲಿ ಕ್ಲೇಶ ಉಂಟಾಗಲಿದೆ. ಮಕ್ಕಳಿಂದ ತೊಂದರೆ ಉಂಟಾಗಲಿದೆ. ಈ ಬಗ್ಗೆ ಹೆಚ್ಚಿನ ಗಮನವನ್ನು ಪೋಷಕರು ನೀಡಬೇಕು.

ವೃಷಭ ರಾಶಿ: ಕೋರ್ಟ್ ಕೆಲಸ ಕಾರ್ಯ ಬಾಕಿ ಇರುವ ವೃಷಭ ರಾಶಿಯವರಿಗೆ ಸದ್ಯಕ್ಕೆ ಯಶಸ್ಸು ಸಿಲಾರದು. ಒಂದು ತಿಂಗಳಿನವರೆಗೂ ಸಾಕಷ್ಟು ಸಮಸ್ಯೆ ಅನುಭವಿಸಲಿದ್ದೀರಿ, ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ರಿಯಲ್ ಎಸ್ಟೇಟ್, ಇರಿಗೇಶನ್ ಇತ್ಯಾದಿ ಡಿಪಾರ್ಟ್‌ಮೆಂಟ್‌ನಲ್ಲಿ ಇರುವವರಿಗೆ ಉತ್ತಮ ದಿನವಾಗಲಿದೆ. ಒತ್ತಡ ಕೂಡ ಅಷ್ಟೇ ಹೆಚ್ಚಾಗಿರಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಅತ್ಯುತ್ತಮ ದಿನವಾಗಿದೆ. ಮನಸ್ಸಿಗೆ ನೆಮ್ಮದಿ, ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಗತಿ ಸಾಧ್ಯವಾಗಲಿದೆ. ಮಾಧ್ಯಮ ರಂಗದಲ್ಲಿ ಇರುವವರು, ಕಮ್ಯೂನಿಕೇಶನ್, ಮಾಸ್ ಮಿಡಿಯಾ ಇತ್ಯಾದಿಯಲ್ಲಿ ಇರುವವರಿಗೆ ಈ ತಿಂಗಳು ಬಹಳ ಅತ್ಯುತ್ತಮವಾಗಿದೆ. ಕಾರ್ಯಕ್ಷೇತ್ರದಲ್ಲಿ ಬಹಳ ದೊಡ್ಡ ಬದಲಾವಣೆ ಆಗಲಿದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಬಹಳ ಕಷ್ಟದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇರಲಾರದು. ಹಣಕಾಸಿನ ವಿಚಾರದಲ್ಲಿ ವೆಚ್ಚ ಹೆಚ್ಚಾಗಲಿದೆ. ಮನೆಯಲ್ಲಿ ಯಾರಾದರೂ ದೊಡ್ಡವರ ಜತೆ ನಿಮಗೆ ವೈಮನಸ್ಸು ಮೂಡುವ ಸಾಧ್ಯತೆ ಇದೆ. ಹೀಗಾಗಿ ಬಹಳ ತಾಳ್ಮೆಯಿಂದ ನಡೆದುಕೊಳ್ಳಬೇಕು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಅಷ್ಟು ಶುಭಕರವಾದ ದಿನವಲ್ಲ. ನಿಮ್ಮ ಗುಣ ಮತ್ತು ಅವಗುಣ ಎಲ್ಲವೂ ಕೂಡ ನಿಮಗೆ ಸಾಕಷ್ಟು ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ. ಕೆಲವೊಬ್ಬರು ನಿಮ್ಮ ಬಗ್ಗೆ ಟೀಕೆ ಮಾಡಬಹುದು. ಆದರೆ ಅದನ್ನು ನೀವು ತಾಳ್ಮೆಯಿಂದ ಸ್ವೀಕರಿಸಬೇಕು. ಮುಂಗೋಪವನ್ನು ಆದಷ್ಟು ಹಿಡಿತದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಮರ್ಯಾದೆ ಕೂಡ ಉಳಿಯಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ರವಿಯು ಸಿಂಹ ರಾಶಿ ಪ್ರವೇಶಿಸುದರಿಂದ ಯಾವುದೇ ಶುಭ ಫಲ ಸಿಗಲಾರದು. ಅಂದುಕೊಂಡ ಕೆಲಸ ಕಾರ್ಯ ಯಾವುದು ಕೂಡ ಸದ್ಯಕ್ಕೆ ಈಡೇರಲಾರದು. ಕೆಲ ಅನಿರೀಕ್ಷಿತ ಸಮಸ್ಯೆ ಕೂಡ ನಿಮ್ಮನ್ನು ಕಾಡಲಿದ್ದು ಎಲ್ಲದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು.

ತುಲಾ ರಾಶಿ: ತುಲಾ ರಾಶಿಯವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಹಿಂದಿನ ದಿನಗಳಲ್ಲಿ ಇದ್ದ ಮನಸ್ಸಿನ ಬೇಸರ ಇತರೆ ಸಮಸ್ಯೆ ಬಗೆಹರಿಯಲಿದೆ. ಇಷ್ಟಾರ್ಥ ಸಿದ್ಧಿಯಾಗಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಾಮಾಜಿಕ ಮಾಧ್ಯಮ ರಂಗದಲ್ಲಿ ಕೆಲಸ ಮಾಡುವವರು, ಜಾಹೀರಾತು ರಂಗದಲ್ಲಿ ಇರುವವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಪ್ರೇಮ, ಪ್ರೀತಿ ಇತ್ಯಾದಿ ಸಂಬಂಧದಲ್ಲಿ ವೈಮನಸ್ಸು ಮೂಡಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಹಿಂದಿನ ದಿನಗಳಲ್ಲಿ ಇದ್ದ ಮನಸ್ಸಿನ ಬೇಸರ ಬಗೆಹರಿಯಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಸಹೋದರರು ಹಾಗೂ ಬಂಧುಗಳಿಂದ ಅತೀ ಹೆಚ್ಚು ಸಹಕಾರ ನಿಮಗೆ ಸಿಗಲಿದೆ. ಕೆಲಸದಲ್ಲಿ ಗೌರವ ಪ್ರಾಪ್ತಿಯಾಗಲಿದೆ, ವೇತನ ಹೆಚ್ಚಾಗಲಿದೆ.

ಇದನ್ನು ಓದಿ:Daily Horoscope: ಕೃಷ್ಣ ಜನ್ಮಾಷ್ಟಮಿ ದಿನ ಯಾವ ರಾಶಿಗೆಲ್ಲ ಶುಭ ಫಲವಿದೆ?

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಈ ದಿನ ಭಾಗ್ಯ ಸ್ಥಾನದಲ್ಲಿ ರವಿ ಬಂದ ಕಾರಣ ನೀವು ಮಾಡುತ್ತಿರುವ ಕೆಲಸದಲ್ಲಿನ ಒಳಿತು ಕೆಡುಕಿನ ಬಗ್ಗೆ ಅರಿವಾಗಲಿದೆ. ನಿಮ್ಮ ಕೆಲಸದಲ್ಲಿ ತೊಡಕುಗಳಿದ್ದರೆ ಅದು ನಿಮ್ಮ ಗಮನಕ್ಕೆ ಬರುವಂತಹ ದಿನವಾಗಲಿದೆ. ಹೊಸ ಸಮಸ್ಯೆ, ಸವಾಲನ್ನು ಕೂಡ ಅತ್ಯಂತ ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆ ನಿಮಗೆ ಇರಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಸಿಂಹ ರಾಶಿಯಲ್ಲಿ ರವಿ ಬರುವುದರಿಂದ ಕೆಲವೊಂದಿಷ್ಟು ಮನಸ್ಸಿನ ನೋವು, ತಳಮಳ ಗೊಂದಲ ಇತ್ಯಾದಿ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಸಮಸ್ಯೆ ಕಂಡುಬಂದರೂ ಕೂಲಂಕುಷವಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಿ.

ಕುಂಭರಾಶಿ: ಕುಂಭ ರಾಶಿಯವರಿಗೆ ಈ ದಿನ ಸಪ್ತಮ ಸ್ಥಾನಕ್ಕೆ ರವಿ ಬರುವ ಕಾರಣ, ನಿಮ್ಮ ದಾಂಪತ್ಯ ಜೀವನದಲ್ಲಿ ಕೆಲವೊಂದಿಷ್ಟು ಇರಿಸು ಮುರಿಸು ಆಗುವ ಸಾಧ್ಯತೆ ಇದೆ. ಕೆಲವೊಂದಿಷ್ಟು ಮನಸ್ಥಾಪ, ಗೊಂದಲ ಉಂಟಾಗಲಿದ್ದು ಎಲ್ಲವನ್ನು ಆಯಾ ಕಾಲಕ್ಕೆ ಬಗೆಹರಿಸಿಕೊಳ್ಳಬೇಕು. ಯಾವುದನ್ನು ದೀರ್ಘಾವಧಿಯ ಕಾಲಕ್ಕೆ ಮುಂದುವರಿಸಿಕೊಂಡು ಹೋಗುವುದು ಉತ್ತಮವಲ್ಲ.

ಮೀನ ರಾಶಿ: ಮೀನ ರಾಶಿಯವರಿಗೆ ಈ ದಿನ ಅದೃಷ್ಟದ ಬಾಗಿಲು ತೆರೆಯಲಿದೆ. ಮನಸ್ಸಿಗೆ ನೆಮ್ಮದಿ, ಆತ್ಮವಿಶ್ವಾಸ ವೃದ್ಧಿ, ಧನಾಗಮವಾಗಲಿದೆ. ಅಂದುಕೊಂಡ ಕೆಲಸ ಕಾರ್ಯ ನಿರ್ವಿಘ್ನವಾಗಿ ಸಾಗಲಿದೆ. ಕೆಲಸದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಆರೋಗ್ಯ ಸಮಸ್ಯೆಗಳು ಕೂಡ ಬಹಳ ಬೇಗ ಬಗೆಹರಿಯಲಿದೆ.

ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ

View all posts by this author