ಮುಜರಾಯಿಯಿಂದ ಇ-ಪ್ರಸಾದ: ಮನೆ ಬಾಗಿಲಿಗೆ ಬರಲಿದೆ 400 ದೇಗುಲಗಳ ಪ್ರಸಾದ
ಮುಜರಾಯಿ ಇಲಾಖೆ ಈಗಾಗಲೇ ಇದರ ಪ್ರಯೋಗ ನಡೆಸುತ್ತಿದ್ದು, ರಾಜ್ಯದ ಪ್ರಮುಖ 10 ದೇವಾಲಯಗಳ ಪ್ರಸಾದವನ್ನು ಆನ್ಲೈನ್ನಲ್ಲಿ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಈ ಇ-ಪ್ರಸಾದ ಸೇವೆಗೆ ಭಕ್ತಾದಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದುವರೆಗೂ ಅಂದಾಜು 25 ಸಾವಿರ ಭಕ್ತಾದಿಗಳು ಇ-ಪ್ರಸಾದ ಪಡೆದಿದ್ದಾರೆ.