ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿ, ಆರಿದ್ರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಆರಿದ್ರಾ ನಕ್ಷತ್ರ ಇದ್ದು ಇದರ ಅಧಿಪತಿ ರಾಹು ಆಗಿದ್ದಾನೆ. ಹೀಗಾಗಿ ಎಲ್ಲ ರಾಶಿಗೆ ರಾಹುವಿನ ಪ್ರಭಾವ ಬೀರಲಿದೆ. ಮೇಷ ರಾಶಿ ಯವರಿಗೆ ಅತ್ಯುತ್ತಮವಾದ ದಿನ ಆಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಮೀಡಿಯಾ ಪತ್ರಿಕೋದ್ಯಮದಲ್ಲಿ ಇರುವವರಿಗೆ ಉತ್ತಮ ದಿನವಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಖುಷಿಯಾಗಿ ದಿನವನ್ನು ಕಳೆಯುತ್ತೀರಿ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಸಂಸಾರದ ಬಗ್ಗೆ ಹೆಚ್ಚಿನ ಜವಾಬ್ದಾರಿಗಳು ಇರುತ್ತವೆ. ಅದೇ ರೀತಿ ಸಂಸಾರದ ಆರ್ಥಿಕ ಸುಭದ್ರತೆಯ ಬಗ್ಗೆ ಗಮನವನ್ನು ನೀಡಲಿದ್ದೀರಿ. ಪ್ರೀತಿ ಪಾತ್ರ ರೊಂದಿಗೂ ಉತ್ತಮ ಸಮಯವನ್ನು ಕಳೆಯಲಿದ್ದೀರಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಹಿಂದಿನ ಮೂರು ದಿನಗಳವರೆಗೆ ಇದ್ದ ಆತಂಕ ದೂರವಾಗಲಿದೆ. ಉತ್ತಮ ಗೋಚರಗಳು ಪ್ರಾಪ್ತಿ ಯಾಗಲಿದೆ. ಆದ್ದರಿಂದ ಚಂದ್ರನು ನಿಮಗೆ ಒಳ್ಳೆಯದನ್ನೇ ಮಾಡಲಿದ್ದು ಮನಸ್ಸಿಗೂ ನೆಮ್ಮದಿ ಸಿಗಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಸ್ವಲ್ಪ ಕಷ್ಟಕರವಾದ ದಿನ ವಾಗಲಿದೆ. ಮುಖ್ಯವಾದ ವಿಚಾರಗಳಲ್ಲಿ ನಿಮಗೆ ಬೇರೆಯವರಿಂದ ಸಹಕಾರ ಪ್ರಾಪ್ತಿ ಯಾಗುವುದಿಲ್ಲ. ಕೆಲವು ಮಿತ್ರತ್ವ ಗಳಲ್ಲಿ ಒಡಕು ಉಂಟಾಗಬಹುದು.ಹಣ ವೆಚ್ಚ ಆಗುವ ಸಾಧ್ಯತೆ ಕೂಡ ಇರಲಿದೆ. ಬಿಸಿನೆಸ್ ವ್ಯವಹಾರ ದಲ್ಲೂ ನಷ್ಟ ಆಗುವ ಸಾಧ್ಯತೆ ಇರುತ್ತದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಉತ್ತಮವಾದ ದಿನ ಆಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಬಹಳಷ್ಟು ಖುಷಿಯಿಂದ ಇರಲಿದ್ದೀರಿ. ಗುಂಪು ಕೆಲಸಗಳಲ್ಲಿ ಯಶಸ್ಸು ಹಾಗೂ ಇಷ್ಟಾರ್ಥ ಸಿದ್ದಿಯಾಗಲಿದೆ. ಧನ ಲಾಭವೂ ಕೂಡ ಆಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಮನಸ್ಸಿಗೆ ನೆಮ್ಮದಿ ಕೂಡ ಆಗಲಿದೆ. ಹಿಂದಿನ ಕೆಲವು ದಿನಗಳಲ್ಲಿ ಇದ್ದ ಸಮಸ್ಯೆಗಳು ಎಲ್ಲ ನಿವಾರಣೆ ಯಾಗುತ್ತದೆ. ಮುಂದಿನ ಮಾರ್ಗ ದರ್ಶನಗಳು ಕೂಡ ನಿಮಗೆ ಚೆನ್ನಾಗಿ ತಿಳಿಯಲಿದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಕಷ್ಟಕರವಾದ ದಿನ ಆಗಲಿದೆ. ಲಾಭದಾಯಕ ಇದ್ದರೂ ಎಲ್ಲವೂ ಕಾರ್ಯಗತ ವಾಗುವುದಿಲ್ಲ. ಎಲ್ಲದಕ್ಕೂ ಹಿರಿಯರ ದೇವರ ಆಶೀರ್ವಾದ ಪಡೆದು ಕೊಳ್ಳು ವುದನ್ನು ಮರೆಯ ಬೇಡಿ. ಇದರಿಂದ ನಿಮಗೆ ಒಳಿತು ಕೂಡ ಆಗಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಸ್ವಲ್ಪ ಕ್ಲಿಷ್ಟಕರವಾದ ದಿನ ಆಗಲಿದೆ. ಮುಖ್ಯವಾದ ವಿಚಾರ ಗಳಲ್ಲಿ ಬೇರೆಯವರ ಸಹಕಾರ ನಿಮಗೆ ಸಿಗುವುದಿಲ್ಲ. ನಿಮ್ಮ ಪ್ರೀತಿ ಪಾತ್ರ ರಿಂದ ಏನೋ ಒಂದು ಸಹಕಾರ ಉಂಟಾಗುವುದಿಲ್ಲ. ಮನಸ್ಸಿಗೂ ಬಹಳಷ್ಟು ಯೋಚನೆ ಗಳು ಕಾಡಲಿದ್ದು ಧ್ಯಾನ ದಿಗಳಿಂದ ಮುಕ್ತಿ ಪಡೆಯಿರಿ.
ಇದನ್ನು ಓದಿ:Daily Horoscope: ಮೃಗಶಿರ ನಕ್ಷತ್ರದ ಈ ದಿನ ನಿಮ್ಮ ಭವಿಷ್ಯ ಹೇಗಿದೆ?
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಉತ್ತಮ ದಿನ ಆಗಲಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ದಾಂಪತ್ಯ ಪ್ರೀತಿ ಪಾತ್ರರಿಂದ ಯಶಸ್ಸು ಅನ್ನು ಕಾಣಲಿದ್ದೀರಿ. ಉತ್ತಮವಾದ ದಿನ ನಿಮ್ಮದಾಗಲಿದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ಸಾಮಾಜಿಕ ಜೀವನದಲ್ಲಿ ಜಯ ಪ್ರಾಪ್ತಿ ಯಾಗಲಿದೆ. ನಿಮ್ಮ ಶತ್ರುಗಳು ನಿಮ್ಮನ್ನು ಹಿಮ್ಮೆ ಟ್ಟಲಿದ್ದು ಆತ್ಮವಿಶ್ವಾಸ ದಿಂದ ಮುಂದೆ ಹೋಗುತ್ತೀರಿ. ಮುಖ್ಯವಾದ ಕೆಲಸದಲ್ಲಿ ಇಂದು ಸಾಧಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಕಷ್ಟ ಕರವಾದ ದಿನವಾಗಲಿದೆ.ಮನಸ್ಸಿಗೆ ಯೋಚನೆಗಳು ಪ್ಲಾನ್ ಗಳು ತುಂಬಾ ಬರಲಿದೆ. ಆದರೆ ಇವೆಲ್ಲವೂ ಸರಿ ಮಾಡಲು ಸ್ವಲ್ಪ ಕಾಲಾವಕಾಶ ಬೇಕಾ ಗಲಿದೆ.. ಕೆಲವೇ ದಿನಗಳಲ್ಲಿ ಎಲ್ಲದಕ್ಕೂ ಪರಿಹಾರ ಸಿಗಲಿದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿ ಯಾಗಲಿದೆ. ಆದರೆ ಮನೆಯಲ್ಲಿ ಸ್ವಲ್ಪ ಕಿರಿ ಕಿರಿ ಯಾಗುವ ಸಾಧ್ಯತೆ ಇರುತ್ತದೆ. ಸಂಸಾರದ ಬಗ್ಗೆಯೂ ಹೆಚ್ಚಿನ ಜವಾಬ್ದಾರಿ ಅಗತ್ಯ ಇರುತ್ತದೆ..ದಿನ ನಿತ್ಯ ಶ್ಲೋಕ ಪಠಣ,ಧ್ಯಾನ ಇತ್ಯಾದಿ ಅಭ್ಯಾಸ ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡು ಕೊಳ್ಳಿ.