ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಕೊನೆಯ ಶ್ರಾವಣ ಶನಿವಾರ ಈ ದಿನ ಯಾವ ರಾಶಿಗೆ ಒಳಿತು ಆಗಲಿದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಕೃಷ್ಣ ಪಕ್ಷದ ಈ ದಿನ ಅಮಾವಸ್ಯಾ ತಿಥಿ ಮಖಾ ನಕ್ಷತ್ರ ಇದ್ದು ಇಂದು ಕೊನೆಯ ಶ್ರಾವಣ ಶನಿವಾರ ಆಗಿದೆ. ಹಾಗಾಗಿ ಇಂದು ಅತ್ಯುತ್ತಮ ವಾದ ದಿನವಾಗಿದ್ದು ಆಗಸ್ಟ್ 23 ನೇ ತಾರೀಖಿನ ಶನಿವಾವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ..

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಕೃಷ್ಣ ಪಕ್ಷದ , ಮಖಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ(Daily Horoscope) ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಮಖಾ ನಕ್ಷತ್ರ ಇದ್ದು ಇದರ ಅಧಿಪತಿ ಕೇತು ಆಗಿದ್ದು ಕೆಲವು ರಾಶಿಗಳಿಗೆ ಪರಿಣಾಮ ಬೀಳಲಿದೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನ ಆಗಲಿದೆ. ನಿಮ್ಮ ಕ್ರಿಯಾತ್ಮಕತೆ ಇಂದು ಬಹಳ ಚೆನ್ನಾಗಿ ಇರುತ್ತದೆ. ಆತ್ಮವಿಶ್ವಾಸ ವಿಶ್ವಾಸ ಕೂಡ ಚೆನ್ನಾಗಿ ಇದ್ದು ಜಯವನ್ನು ಸಾಧಿಸಲಿದ್ದೀರಿ.‌ ಪ್ರೇಮ, ಪ್ರೀತಿ ದಾಂಪತ್ಯ ವಿಚಾರವಾಗಿ ಒಳ್ಳೆಯ ದಿನ ಆಗಿರುವುದಿಲ್ಲ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಮನೆಯಲ್ಲಿ ಸ್ವಲ್ಪ ಕಿರಿ ಕಿರಿ ಉಂಟಾಗುವ ದಿನ ವಾಗಲಿದೆ. ಕೆಲಸ ಮನೆ ವಿಚಾರ ಎರಡೂ ನಿಭಾಯಿಸಲು ನಿಮಗೆ ಇಂದು ಕಷ್ಟ ಸಾಧ್ಯ ವಾಗ ಬಹುದು. ಆಸ್ತಿ ಪಾಸ್ತಿ ,ಟ್ಯಾಕ್ಸ್ ಇತ್ಯಾದಿ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳಬೇಕಾದ ದಿನ ಆಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಅತ್ಯುತ್ತಮ ವಾದ ದಿನ ಆಗಲಿದೆ. ಮನಸ್ಸಿಗೆ ನೆಮ್ಮದಿ, ಎಲ್ಲ ಕಡೆಯೂ ಯಶಸ್ಸು ಕಾಣುವಂತಹ ದಿನ ಆಗಲಿದೆ.‌ ಬಂಧು ಮಿತ್ರರಿಂದ ಸಹೋದರ- ಸಹೋದರಿಯರಿಂದ ನೆಮ್ಮದಿ ಸಿಗಲಿದೆ.

ಕಟಕ ರಾಶಿ: ಕಟಕ ರಾಶಿ ಯವರಿಗೆ ಮನೆಯಲ್ಲಿ ಸ್ವಲ್ಪ ಕಿರಿ ಕಿರಿ ಉಂಟಾಗುವ ದಿನ ಆಗಲಿದೆ.‌ ಸಂಸಾರದ ವಿಚಾರದಲ್ಲಿ ಹೆಚ್ಚಿನ ಜಾಗೃತೆಯನ್ನು ವಹಿಸಿಕೊಳ್ಳಬೇಕು. ಬೇರೆಯವರಿಂದ ನಿಮಗೆ ಟೀಕೆಗಳು ಕೇಳಿಬರಬಹುದು. ಹಣಕಾಸಿನ ವಿಚಾರದ ಬಗ್ಗೆಯೂ ಹೆಚ್ಚು ಕಾಳಜಿಯಿಂದ ಇರಬೇಕು.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಉತ್ತಮವಾದ ದಿನ ವಾಗಲಿದೆ. ಹಿಂದಿನ ಎರಡು ಮೂರು ದಿನ ಗಳಿಂದ ಮನಸ್ಸಿಗೆ ಕಿರಿ ಕಿರಿ ಇತ್ತು. ಅದೆಲ್ಲವನ್ನು ತಡೆದು ನಿಲ್ಲುವ ಆತ್ಮವಿಶ್ವಾಸ ನಿಮಗೆ ಹೆಚ್ಚಲಿದೆ.‌ ಆದರೆ ಅತೀ ಆತ್ಮವಿಶ್ವಾಸ ಬೇಡ. ಇದರಿಂದ ತೊಂದರೆ ಗೊಳ್ಳುವ ಸಾಧ್ಯತೆ ಕೂಡ ಜಾಸ್ತಿ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಸ್ವಲ್ಪ ಕ್ಷಿಷ್ಟಕರವಾದ ದಿನ ಆಗಲಿದೆ. ಮುಖ್ಯವಾದ ನಿರ್ಧಾರ ಗಳು ಇಂದು ಬೇಡ. ಯಾರ ಸಹಕಾರ ಕೂಡ ನಿಮಗೆ ಇಂದು ಪ್ರಾಪ್ತಿ ಯಾಗುವುದಿಲ್ಲ.‌. ನಿಮ್ಮ ಆತ್ಮೀಯರು ಕೂಡ ನಿಮ್ಮ ಯಾವುದೇ ನಿರ್ಧಾರಗಳಿಗೆ ತಲೆ ಬಾಗುವುದಿಲ್ಲ.ಎರಡು ದಿನಗಳ ನಂತರ ಎಲ್ಲವೂ ಸರಿ ಆಗಲಿದೆ

ತುಲಾ ರಾಶಿ: ತುಲಾ ರಾಶಿ ಅವರಿಗೆ ಉತ್ತಮವಾದ ದಿನ ಆಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆದರೆ ಮಿತ್ರರೂ ದೂರವಾಗುವ ಸಂದರ್ಭ ಬರಬಹುದು.‌ ಹಾಗಾಗಿ ಬಹಳ ತಾಳ್ಮೆಯಿಂದ ಯಿಂದ ವರ್ತಿಸಲು ಕಲಿಯಿರಿ.

ಇದನ್ನು ಓದಿ:Daily Horoscope: ಪುಷ್ಯ ನಕ್ಷತ್ರದ ಅಧಿಪತಿ ಶನಿ ಯಾವ ರಾಶಿಗೆ ಒಳಿತು ಮಾಡಲಿದೆ?

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮ ವಾದ ದಿನ ಆಗಲಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಮನೆಯ ಜವಾಬ್ದಾರಿ ಗಳು ಕೂಡ ಹೆಚ್ಚಾಗಬಹುದು. ಹಾಗಾಗಿ ಎರಡು ಕೆಲಸಗಳನ್ನು ಸರಿಯಾಗಿ ನಿಭಾಯಿಸಲು ಯೋಜನೆ ಹಾಕಿಕೊಳ್ಳಿ

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಭಾಗ್ಯೋದಯ ವಾದ ದಿನ ಆಗಲಿದೆ. ಹಿಂದಿನ ಮೂರು ದಿನಗಳಲ್ಲಿ ಬಹಳ ಕಷ್ಟಕರ ಇತ್ತು. ಇದೀಗ ಏನು ಮಾಡಬೇಕು ಎನ್ನುವುದಕ್ಕೆ ಪರಿಹಾರ ಸಿಗಲಿದೆ. ಉತ್ತಮ ವಾದ ದಿನ ನಿಮಗೆ ಒದಗಿ ಬರಲಿದೆ.

ಮಕರ ರಾಶಿ: ಮಕರ ರಾಶಿ ಅವರಿಗೆ ಕ್ಲಿಷ್ಟಕರ ವಾದ ದಿನ ವಾಗಲಿದೆ. ಕೆಲವೊಂದು ವಿಚಾರಗಳಲ್ಲಿ ಏನು ಮಾಡಬೇಕು ಎಂಬುದು ತೋಚುವುದಿಲ್ಲ. ಕೆಲವೊಮ್ಮೆ ಮನಸ್ಸಿಗೆ ಕಿರಿ-ಕಿರಿ ನೋವು ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ. ಇವತ್ತು ಸ್ವಲ್ಪ ಕಷ್ಟಕರವಾದ ದಿನ ನಿಮಗೆ ಆಗಲಿದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಉತ್ತಮ ದಿನ ವಾಗಲಿದೆ. ಪ್ರೀತಿ ಪಾತ್ರರಿಂದ ಆಪ್ತರಿಂದ ನೆಮ್ಮದಿ ಕೂಡ ಸಿಗಲಿದೆ.ಅನೇಕ ರೀತಿಯಲ್ಲಿ ನಿಮಗೆ ಸಹಕಾರ ಸೌಭಾಗ್ಯ ಪ್ರಾಪ್ತಿ ಯಾಗಲಿದೆ. ಉತ್ತಮ ಯಶಸ್ಸು ನಿಮಗೆ ಸಿಗಲಿದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಸಾಮಾಜಿಕ ಚಟುವಟಿಕೆ ಗಳಲ್ಲಿ ಆತ್ಮವಿಶ್ವಾಸ ಇಂದು ಜಾಸ್ತಿ ಯಾಗಲಿದೆ.‌ ವೈರಿಗಳು ನಿಮ್ಮನ್ನು ಹಿಮ್ಮೆಟ್ಟಿಸುವ ಸಾಧ್ಯತೆ ಇರುತ್ತದೆ.‌ಆದರೆ ಅತೀಯಾದ ಆತ್ಮ ವಿಶ್ವಾಸ ಇಟ್ಟು ಕೊಳ್ಳಲು ಹೋಗಬೇಡಿ. ದಿನ ನಿತ್ಯ ಶ್ಲೋಕ ಪಠಣ ಅಭ್ಯಾಸ ಮಾಡಿ ದೇವರ ಆರಾಧನೆ ಮಾಡಿದರೆ ನಿಮಗೆ ಉತ್ತಮ ಫಲ ಕೂಡ ಸಿಗಲಿದೆ.

ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ

View all posts by this author