ಲಂಡನ್: ಮೊಹಮ್ಮದ್ ಸಿರಾಜ್ (86ಕ್ಕೆ 4) ಹಾಗೂ ಪ್ರಸಿಧ್ ಕೃಷ್ಣ (62ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿ ಹಾಗೂ ಯಶಸ್ವಿ ಜೈಸ್ವಾಲ್ (51 ರನ್) ಅವರ ಅರ್ಧಶತಕದ ಬಲದಿಂದ ಭಾರತ ತಂಡ ಐದನೇ ಟೆಸ್ಟ್ ಪಂದ್ಯದ(IND vs ENG) ಎರಡನೇ ದಿನ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿದೆ. ಭಾರತ ತಂಡವನ್ನು (India) ಪ್ರಥಮ ಇನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಆಲ್‌ಔಟ್ ಮಾಡಿದ ಬಳಿಕ ಇಂಗ್ಲೆಂಡ್ (England) ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 247 ರನ್‌ಗಳಿಗೆ ಆಲ್‌ಔಟ್ ಆಯಿತು. ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ 18 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿ 52 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆದಿದೆ. ಮೋಡ ಕವಿದ ವಾತಾವರಣ ಹಾಗೂ ಬಿಸಿಲಿನ ಸಮ್ಮಿಶ್ರಣದಿಂದ ಎರಡನೇ ದಿನ ಬ್ಯಾಟಿಂಗ್‌ಗೆ ವಿಕೆಟ್ ಸ್ವಲ್ಪ ಕಠಿಣವಾಗಿತ್ತು. ಈ ಕಾರಣದಿಂದಲೇ ಎರಡೂ ತಂಡಗಳಿಂದ 16 ವಿಕೆಟ್‌ಗಳನ್ನು ಉರುಳಿದವು.
23 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡದ ಪರ ಯಶಸ್ವಿ ಜೈಸ್ವಾಲ್ ಆಕ್ರಮಣಕಾರಿ ಆರಂಭವನ್ನು ಪಡೆದರು. ಕೇವಲ 7 ರನ್ ಗಳಿಸಿ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಜೈಸ್ವಾಲ್, ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ಬೌಲರ್‌ಗಳಿಗೆ ಬೆವರಿಳಿಸಿದರು. ಅವರು ಆಡಿದ 49 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 51 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ (11) ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ನೈಟ್ ವಾಚ್‌ಮ್ಯಾನ್ ಆಗಿ ಆಕಾಶ್ ದೀಪ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
IND vs ENG: ಜೋ ರೂಟ್-ಪ್ರಸಿಧ್ ಕೃಷ್ಣ ನಡುವೆ ಮಾತಿನ ಚಕಮಕಿ! ವಿಡಿಯೊ ವೈರಲ್
ಇದಕ್ಕೂ ಮುನ್ನ ಇಲ್ಲಿನ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 204 ರನ್‌ಗಳಿಗೆ ಎರಡನೇ ದಿನದಾಟವನ್ನು ಆರಂಭಿಸಿದ ಭಾರತ ತಂಡ, ಅರ್ಧ ಗಂಟೆಯಲ್ಲಿಯೇ ಆಲ್‌ಔಟ್ ಆಯಿತು. ವಾಷಿಂಗ್ಟನ್ ಸುಂದರ್ (26 ರನ್) ಹಾಗೂ ಕರುಣ್ ನಾಯರ್ (57) ಅವರು ವಿಕೆಟ್ ಒಪ್ಪಿಸಿದ ಬಳಿಕ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಬಹುಬೇಗ ಔಟ್ ಆದರು. ಆ ಮೂಲಕ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 69.4 ಓವರ್‌ಗಳಿಗೆ 224 ರನ್‌ಗಳಿಗೆ ಆಲ್‌ಔಟ್ ಆಯಿತು. ಭಾರತದ ಪರ ಕರುಣ್ ನಾಯರ್ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಸಾಯಿ ಸುದರ್ಶನ್ 38 ರನ್‌ಗಳನ್ನು ಕಲೆ ಹಾಕಿದ್ದರು. ಇಂಗ್ಲೆಂಡ್ ತಂಡದ ಪರ ಗಸ್ ಅಟ್ಕಿನ್ಸನ್ ಅವರು 5 ವಿಕೆಟ್ ಸಾಧನೆ ಮಾಡಿದರು.
Stumps on Day 2 at the Oval 🏟️
— BCCI (@BCCI) August 1, 2025
Yashasvi Jaiswal's unbeaten half-century takes #TeamIndia to 75/2 in the 2nd innings and a lead of 52 runs 👌👌
Scorecard ▶️ https://t.co/Tc2xpWNayE#ENGvIND pic.twitter.com/uj8q4k9Q3H
IND vs ENG: ಭಾರತದ ಎದುರು 5 ವಿಕೆಟ್ ಕಿತ್ತು ಐತಿಹಾಸಿಕ ದಾಖಲೆ ಬರೆದ ಗಸ್ ಅಟ್ಕಿನ್ಸನ್!
247 ರನ್ ಕಲೆ ಹಾಕಿದ ಇಂಗ್ಲೆಂಡ್
ಭಾರತವನ್ನು 224 ರನ್‌ಗಳಿಗೆ ಆಲ್‌ಔಟ್ ಮಾಡಿದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ತಂಡ, ಬೆನ್ ಡಕೆಟ್ ಹಾಗೂ ಝ್ಯಾಕ್ ಕ್ರಾವ್ಲಿ ಅವರು ಬ್ಯಾಟಿಂಗ್ ಬಲದಿಂದ ಉತ್ತಮ ಆರಂಭ ಪಡೆದಿತ್ತು. ಆದರೆ, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿಧ್ ಕೃಷ್ಣ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಆಂಗ್ಲರು, ಪ್ರಥಮ ಇನಿಂಗ್ಸ್‌ನಲ್ಲಿ 51.2 ಓವರ್‌ಗಳಿಗೆ 247 ರನ್‌ಗಳಿಗೆ ಆಲ್‌ಔಟ್ ಆಯಿತು. ಆದರೂ ಪ್ರಥಮ ಇನಿಂಗ್ಸ್‌ನಲ್ಲಿ ಅವರು 23 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆದಿದ್ದರು.
IND vs ENG: ಭಾರತದ ಎದುರು 5 ವಿಕೆಟ್ ಕಿತ್ತು ಐತಿಹಾಸಿಕ ದಾಖಲೆ ಬರೆದ ಗಸ್ ಅಟ್ಕಿನ್ಸನ್!
ಇಂಗ್ಲೆಂಡ್‌ಗೆ ಭರ್ಜರಿ ಆರಂಭ
ಇಂಗ್ಲೆಂಡ್ ತಂಡದ ಪರ ಇನಿಂಗ್ಸ್ ಆರಂಭಿಸಿದ ಝ್ಯಾಕ್ ಕ್ರಾವ್ಲಿ ಹಾಗೂ ಬೆನ್ ಡಕೆಟ್ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಈ ಇಬ್ಬರೂ ಮುರಿಯದ ಮೊದಲನೇ ವಿಕೆಟ್‌ಗೆ 92 ರನ್‌ಗಳನ್ನು ಕಲೆ ಹಾಕುವ ಮೂಲಕ ಇಂಗ್ಲೆಂಡ್‌ಗೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಈ ವೇಳೆ ಮಾರಕ ಬೌಲಿಂಗ್ ದಾಳಿಯನ್ನು ನಡೆದಿದ್ದ ಆಕಾಶ್ ದೀಪ್ ಅವರು, 43 ರನ್ ಗಳಿಸಿಗ್ ಬೆನ್ ಡಕೆಟ್ ಅವರನ್ನು ಔಟ್ ಮಾಡಿ ಭಾರತದ ಕಮ್‌ಬ್ಯಾಕ್‌ಗೆ ನೆರವು ನೀಡಿದರು.
Thumbs up to the current 𝙡𝙚𝙖𝙙𝙞𝙣𝙜 𝙬𝙞𝙘𝙠𝙚𝙩 𝙩𝙖𝙠𝙚𝙧 of the #ENGvIND series 🔥#WTC27 📝: https://t.co/SNl4Ym0dTV pic.twitter.com/XwJu29ZaVF
— ICC (@ICC) August 1, 2025
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದ ಝ್ಯಾಕ್ ಕ್ರಾವ್ಲಿ 57 ಎಸೆತಗಳಲ್ಲಿ 64 ರನ್‌ಗಳನ್ನು ಗಳಿಸಿ ದೊಡ್ಡ ಮೊತ್ತವನ್ನು ಕಲೆ ಹಾಕುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, ಪ್ರಸಿಧ್ ಕೃಷ್ಣ ತಮ್ಮ ಬುದ್ದಿವಂತಿಕೆಯ ಎಸೆತದಲ್ಲಿ ಔಟ್ ಮಾಡಿದರು. ನಂತರ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆ ಕಂಡಿದ್ದ ಒಲ್ಲಿ ಪೋಪ್ (22 ರನ್) ಹಾಗೂ ಜೋ ರೂಟ್ (29) ಅವರನ್ನು ಮೊಹಮ್ಮದ್ ಸಿರಾಜ್ ತಮ್ಮ ಮಾರಕ ದಾಳಿಯಿಂದ ಔಟ್ ಮಾಡಿದರು. ಬಳಿಕ ಕ್ರೀಸ್‌ಗೆ ಬಂದ ಜಾಕೋಬ್ ಬೆಥೆಲ್ (6) ಅವರನ್ನುಕೂಡ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದರು.
ಒಂದು ತುದಿಯಲ್ಲಿ ನಿಂತು ಕೊನೆಯವರೆಗೂ ಬ್ಯಾಟ್ ಮಾಡಿದ ಹ್ಯಾರಿ ಬ್ರೂಕ್ 64 ಎಸೆತಗಳಲ್ಲಿ 53 ರನ್ ಗಳಿಸಿದರು. ಆದರೆ, ಕೊನೆಯಲ್ಲಿ ಮೊಹಮ್ಮದ್ ಸಿರಾಜ್ ಔಟ್ ಮಾಡಿದರು. ಆ ಮೂಲಕ ಸಿರಾಜ್ 4 ವಿಕೆಟ್ ಸಾಧನೆ ಮಾಡಿದರು. ಇವರಿಗೆ ಸಾಥ್ ನೀಡಿದ್ದ ಕನ್ನಡಿಗ ಪ್ರಸಿಧ್ ಕೃಷ್ಣ ಕೂಡ 4 ವಿಕೆಟ್ ಕಿತ್ತರು.