ನಾಳೆ ಮಹಿಳಾ ಏಷ್ಯಾಕಪ್ ಫೈನಲ್; ಭಾರತ-ಶ್ರೀಲಂಕಾ ಮಧ್ಯೆ ಪ್ರಶಸ್ತಿ ಕಾದಾಟ
Women's Asia Cup 2026 Final: ಭಾರತದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ದೀಪ್ತಿ ಶರ್ಮಾ, ರಾಧಾ ಯಾದವ್ ಮತ್ತು ಶ್ರೀ ಚರಣಿ ಅವರು ಭರವಸೆಯ ಆಟಗಾರ್ತಿಯರಾಗಿದ್ದಾರೆ. ಮಧ್ಯಮವೇಗಿ ರೇಣುಕಾ ಸಿಂಗ್ ಅವರು ಉತ್ತಮ ಆರಂಭ ನೀಡುವ ಸಮರ್ಥ ಬೌಲರ್. ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಪವರ್‌ಪ್ಲೇಯಲ್ಲಿ ಬೌಲರ್‌ಗಳನ್ನು ಎದುರಿಸುತ್ತಿರುವ ರೀತಿ ಅಮೋಘವಾಗಿದೆ.