ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
ಹೋರ್ತಿ ಶ್ರೀರೇವಣಸಿದ್ದೇಶ್ವರ ದೇವಾಲಯ ಪ್ರವಾಸಿ ತಾಣವಾಗಲಿ

ಹೋರ್ತಿ ಶ್ರೀರೇವಣಸಿದ್ದೇಶ್ವರ ದೇವಾಲಯ ಪ್ರವಾಸಿ ತಾಣವಾಗಲಿ

ಭೂತಾಯಿಗೆ ನೀವು ಎಲ್ಲರೂ ಒಗ್ಗಟಾಗಿ ಒಂದು ಹನಿ ನೀರು ಕೊಡಿ ಈ ಬರಡು ಭೂಮಿ ಕ್ಯಾಲಿ ಪೋರ್ನಿಯಾ ಆಗುತ್ತದೆ ಎಂಬ ಅವರ ನುಡಿಗಳಿಂದ ಪುಳಕಿತರಾದ ಜಿಲ್ಲಾ ರಾಜಕೀಯ ಮುಖಂಡರು ಪಕ್ಷ ಭೇದ ಮರೆತು ನೀರಾವರಿಗಾಗಿ ಛಲತೊಟ್ಟು ಬರಡು ಭೂಮಿಗೆ ಇಂದು ನೀರು ಒದಗಿಸಿ ಬಣಗುಟ್ಟುವ ಬಂಜರ ಭೂಮಿಗೆ ನೀರು ಹರಿಸಿರುವುದರಿಂದ ಕ್ಷೀಪ್ರ ಗಿಡಮರಗಳು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.

Gubbi News: ರಸ್ತೆ ಬದಿ ಗಿಡ ನೆಟ್ಟ ಯುವಕರ ತಂಡ : ಪರಿಸರ ಕಾಳಜಿ ಕುರಿತು ಜಾಗೃತಿ

ರಸ್ತೆ ಬದಿ ಗಿಡ ನೆಟ್ಟ ಯುವಕರ ತಂಡ : ಪರಿಸರ ಕಾಳಜಿ ಕುರಿತು ಜಾಗೃತಿ

ಮಳೆಗಾಲದಲ್ಲಿ ಸಸಿ ನೆಟ್ಟು ಪೋಷಿಸುವ ಪಣ ತೊಟ್ಟ ಯುವಕರು ಸಾರ್ವಜನಿಕ ಸ್ಥಳದಲ್ಲಿ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹಸಿರೇ ಉಸಿರು ಎಂಬ ವಾಕ್ಯಗಳು ಶಾಲಾ ಆವರಣದಲ್ಲಿ ಅಷ್ಟೇ ಕಾಣಸಿಗುತ್ತದೆ. ಈ ನಿಟ್ಟಿನಲ್ಲಿ ಈ ಗ್ರಾಮೀಣ ಯುವಕರು ಶಾಲಾ ಆವರಣ ಹೊರತಾಗಿ ರಸ್ತೆ ಬದಿ, ದೇವಸ್ಥಾನ ಸ್ಥಳ, ಕೆರೆ ಪಕ್ಕ, ಸರ್ಕಾರಿ ಸ್ಥಳ ಹೀಗೆ ಅನೇಕ ಭಾಗದಲ್ಲಿ ಸಸಿ ನೆಡುವ ಹಾಗೂ ಪೋಷಿಸುವ ಹೊಣೆ ಹೊರಲು ನಮ್ಮ ತಂಡ ಸಜ್ಜಾಗಿದೆ

ಆ.3ರಂದು ವಿದ್ಯುತ್ ವ್ಯತ್ಯಯ

ವಿದ್ಯುತ್ ವ್ಯತ್ಯಯ

ಬೆಸ್ಕಾಂ ಚಿ.ನಾ.ಹಳ್ಳಿ ಉಪಕೇಂದ್ರ ಎಫ್-೧೭ ದುರ್ಗದಕೆರೆ ಐಪಿ ಪೂರಕದ ೧೧೦/೧೧ ಲಿಂಕ್ ಲೈನ್ ನಿರ್ವಹಣಾ ಕಾಮಾಗಾರಿ ಮತ್ತು ಎಫ್-೦೨ ಚಿ.ನಾ.ಹಳ್ಳಿ ಟೌನ್ ಪೂರಕದ ಲೈನ್ ಕ್ರಾಸಿಂಗ್ ಹಮ್ಮಿ ಕೊಂಡಿರುವ ಕಾರಣ ಆ.೩ ರಂದು ಬೆಳಗ್ಗೆ ೧೦ ರಿಂದ ಸಂಜೆ ೫.೩೦ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Chikkaballapur News: ಚಿತ್ರಾವತಿ ಅಣೆಕಟ್ಟ ನಿರ್ಮಾಣ ಆಗಲು ಮೂಲಕ ಕಾರಣ ಜಿ.ವಿ.ಶ್ರೀರಾಮರೆಡ್ಡಿ: ಜಯರಾಮರೆಡ್ಡಿ

ಚಿತ್ರಾವತಿ ಅಣೆಕಟ್ಟಿಗೆ ದಿವಂಗತ ಎಸ್.ಎಂ.ಕೃಷ್ಣ ಹೆಸರು ನಾಮಕರಣಕ್ಕೆ ವಿರೋಧ

ಗಡಿ ಭಾಗವಾಗಿರುವ ಬಾಗೇಪಲ್ಲಿ, ಗುಡಿಬಂಡೆಯ ಜನರಿಗೆ ನೀರಿಗೆ ಸಮಸ್ಯೆಯಾಗಬಾರದೆಂದು ಮುಂದಾ ಲೋಚನೆ ಮಾಡಿ, ಸುಮಾರು ೧೯೯೮ ರ ಸಮಯದಲ್ಲಿ ಶ್ರೀರಾಮರೆಡ್ಡಿಯವರೇ ಚಿತ್ರಾವತಿ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದರು. ಈ ಡ್ಯಾಂ ನಿರ್ಮಾಣದ ಸಮಯ ದಲ್ಲಿ ಪಕ್ಕದ ಆಂಧ್ರದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

Chikkaballapur News: ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗ ಮಂಜೂರು ಮಾಡಲು ಮನವಿ

ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗ ಮಂಜೂರು ಮಾಡಲು ಮನವಿ

ನಮ್ಮ ಸಮುದಾಯದ ಆರಾಧ್ಯ ದೈವವಾದ ಕೈವಾರ ತಾತಯ್ಯ ನವರ ಪುತ್ಥಳಿ ನಿರ್ಮಾಣಕ್ಕಾಗಿ ನಮ್ಮ ಸಮುದಾಯದ ಮುಖಂಡರಾದ ಜಿ.ಟಿ.ಶ್ರೀನಿವಾಸ್ ಎಂಬುವವರು ತಮಗೆ ಸೇರಿದ ಗುಡಿಬಂಡೆ ಸ.ನಂ ೨೫೯/೩ ರಲ್ಲಿ ಜಾಗ ನೀಡಿದ್ದರು. ಈ ಸ.ನಂ ನಲ್ಲಿ ಅ ಖರಾಬು ೯ ಗುಂಟೆ ಹಾಗೂ ಬ ಖರಾಬು ೨ ಗುಂಟೆ ಇದೆ. ಈ ಜಾಗವನ್ನು ಈ ಹಿಂದೆಯೇ ಶ್ರೀ ವೆಂಕಟೇಶ್ವರ ಚಿತ್ರ ಮಂದಿರದ ಉದ್ದೇಶಕ್ಕಾಗಿ ಭೂ ಪರಿವರ್ತನೆ ಯಾಗಿರುತ್ತದೆ.

Chikkaballapur News: ಚಿತ್ರಾವತಿ ಜಲಾಶಯಕ್ಕೆ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿವತಿಯಿಂದ ಬೃಹತ್ ಪ್ರತಿಭಟನೆ

ಪಟ್ಟಣದ ಗೂಳೂರು ವೃತ್ತದಿಂದ ಹೊರಟ ಪ್ರತಿಭಟನೆಕಾರರು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಉಸ್ತು ವಾರಿ ಸಚಿವ ಎಂ.ಸಿ.ಸುಧಾಕರ್ ಹಾಗೂ ಜನಪ್ರತಿ ನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು, ತದನಂತರ ಪಟ್ಟಣದ ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಪುತ್ಥಳಿ ಮುಂದೆ ಬಾಗೇಪಲ್ಲಿ ಚಿತ್ರಾವತಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.

APMC: ನಗರದಲ್ಲಿನ ಹೂವಿನ ಮಾರ್ಕೆಟ್ ಎಪಿಎಂಸಿಗೆ ಸ್ಥಳಾಂತರಿಸಿ

ನಗರದಲ್ಲಿನ ಹೂವಿನ ಮಾರ್ಕೆಟ್ ಎಪಿಎಂಸಿಗೆ ಸ್ಥಳಾಂತರಿಸಿ

ಇಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಲೋಕೇಶ ಗೌಡ ಮಾತನಾಡುತ್ತಾ, ಹೂವಿನ ಮಾರುಕಟ್ಟೆ ನಗರದಲ್ಲಿ ಮೇಲಿನ ಅಂತಸ್ಥಿನ ಮೇಲಿದ್ದು ರೈತರು ತಾವು ಬೆಳದ ಹೂವಿನ ಚೀಲಗಳನ್ನು ಮೇಲೆ ಸ್ಥಿತಿಗೆ ಕೊಂಡೊಯ್ಯಲ ಕಷ್ಟಕರವಾಗಿದೆ. ಅಲ್ಲಿನ ಮಧ್ಯವರ್ತಿ ಗಳು ತಮ್ಮ ಇಷ್ಟ ಬಂದಂತೆ ಕಮಿಷನ್ ತಗೊಳ್ಳುತ್ತಿದ್ದಾರೆ.ಅಲ್ಲಿನ ವರ್ತಕರು ಕೃಷಿ ಉತ್ಪನ್ನ ಮಾರುಕಟ್ಟೆ ಪರವಾನಿಗೆ ನವೀಕರಿಸಿಕೊಂಡಿಲ್ಲ.

ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಸಾವು

ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಸಾವು

ಬೆಂಗಳೂರು ಕಡೆಯಿಂದ ಗೌರಿಬಿದನವರಿಗೆ ಬರುತ್ತಿದ್ದ ನಗರದ ವಿನಾಯಕ ನಗರ ನಿವಾಸಿ ಸುಬ್ರಮಣ್ಣ s/o ಹರ್ಷ ೨೭ ಮೃತ ಯುವಕ ,ನಂದೀಶಪ್ಪ s/oಲಂಕೇಶ್ ಅಲ್ಲಿಯಸ್ (ಲಂಕಿ) ೨೮ ಕಲ್ಲಿನಾಯಕನಹಳ್ಳಿ ಗ್ರಾಮ. ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿ ಹರ್ಷ ಮತ್ತು ಲಂಕೇಶ್  ಮೃತಪಟ್ಟಿದ್ದು, ಹರ್ಷ ಜೊತೆ  ದ್ವಿಚಕ್ರ ಹಿಂಬದಿ ಸೀಟ್ನಲ್ಲಿ ಕುಳಿತಿದ್ದ ದೀಪಕ್ ೨೮ ರವರನ್ನು  ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

Mass Varamahalakshmi Puja: ಕೈವಾರದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

ಶ್ರದ್ಧಾಭಕ್ತಿಯಿಂದ ನಡೆದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠದ ಟ್ರಸ್ಟ್ ನ ವತಿ ಯಿಂದ ಸಭಾಂಗಣದಲ್ಲಿ ಶ್ರಾವಣ ಮಾಸದ ಶ್ರಾವಣ ಶುಕ್ರವಾರದಂದು ಏರ್ಪಡಿಸಲಾಗಿದ್ದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯು ವಿಜೃಂಭಣೆಯಿAದ, ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಪ್ರಾತ:ಕಾಲ ಘಂಟನಾದ, ಸುಪ್ರಭಾತ ಹಾಗೂ ಗೋಪೂಜೆಯೊಂದಿಗೆ ಪೂಜೆಗಳು ಆರಂಭವಾಯಿತು.

Viral Video: ಬೆಂಗಳೂರಿಗೆ ಭಾವನಾತ್ಮಕ ವಿದಾಯ ಹೇಳಿದ ವಿದೇಶಿ ಮಹಿಳೆ; ವಿಡಿಯೊ ನೋಡಿ

ಬೆಂಗಳೂರನ್ನು ಮೆಚ್ಚಿದ ವಿದೇಶಿ ಮಹಿಳೆ

ಕೆಲವು ದಿನಗಳ ಹಿಂದೆ ನೋಯ್ಡಾದ ಯುವಕನೊಬ್ಬ ಬೆಂಗಳೂರಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಟ್ಟ ಅನುಭವಗಳ ಬಗ್ಗೆ ಹಂಚಿಕೊಂಡಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ವಿದೇಶಿ ಮಹಿಳೆಯೊಬ್ಬರು ಬೆಂಗಳೂರಿನಲ್ಲಿನ ತಮ್ಮ ಸುಂದರ ಅನುಭವಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನಗರವನ್ನು ತೊರೆಯುವಾಗ ಭಾವುಕರಾಗಿರುವ ಅವರು ಇದನ್ನು ಸಾಮಾಜಿಕ ಮಾಧ್ಯಮದ ಮೂಲಕ ಹೇಳಿಕೊಂಡಿದ್ದಾರೆ.

Prajwal Revanna Case: ಪ್ರಜ್ವಲ್‌ ರೇವಣ್ಣಗೆ ಶಿಕ್ಷೆ ಸುದ್ದಿ ತಿಳಿದು ಕಣ್ಣೀರಿಟ್ಟ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಪ್ರಜ್ವಲ್‌ಗೆ ಶಿಕ್ಷೆ ಸುದ್ದಿ ತಿಳಿದು ಕಣ್ಣೀರಿಟ್ಟ ಎಚ್‌.ಡಿ. ದೇವೇಗೌಡ

Prajwal Revanna Case: ಅತ್ಯಾಚಾರ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆಯನ್ನು ಬೆಂಗಳೂರಿನ ಜನಪ್ರತಿನಿಧಿಗ ಕೋರ್ಟ್‌ ವಿಧಿಸಿದೆ. ಒಂದೆಡೆ ಕೋರ್ಟ್‌ನಲ್ಲಿ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸುತ್ತಿದ್ದರೆ, ಮತ್ತೊಂದೆಡೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಟಿವಿ ನೋಡುತ್ತಾ ಕಣ್ಣೀರಿಟ್ಟಿದ್ದಾರೆ.

AICC's legal conclave: ಅಂಬೇಡ್ಕರ್, ನೆಹರು ಆದರ್ಶಗಳನ್ನು ಹಿಂತಿರುಗಿ ನೋಡಬೇಕಿದೆ: ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್, ನೆಹರು ಆದರ್ಶಗಳನ್ನು ಹಿಂತಿರುಗಿ ನೋಡಬೇಕಿದೆ: ಸಿದ್ದರಾಮಯ್ಯ

CM Siddaramaiah: ನವದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ನಡೆದ ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್.ಟಿ.ಐ. ವಾರ್ಷಿಕ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಭಾರತದ ಸಂವಿಧಾನವು ಕೇವಲ ಒಂದು ಕಾನೂನು ದಾಖಲೆಯಲ್ಲ, ಆದರೆ ಇದು ಈ ರಾಷ್ಟ್ರದ ಅತ್ಯಂತ ಅನಾನುಕೂಲಕರ ಪರಿಸ್ಥಿತಿಯಲ್ಲಿರುವ ನಾಗರಿಕರೊಂದಿಗೆ ಮಾಡಿಕೊಂಡಿರುವ ನೈತಿಕ ಒಪ್ಪಂದವಾಗಿದೆ ಎಂದು ತಿಳಿಸಿದ್ದಾರೆ.

Yadgir News: ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಲಾಕ್ ಮಾಡಿ ಜಮೀನು ಕೆಲಸಕ್ಕೆ ಹೋದ ಸಹಾಯಕಿ!

ಮಕ್ಕಳನ್ನು ಅಂಗನವಾಡಿಯಲ್ಲಿ ಲಾಕ್ ಮಾಡಿ ಜಮೀನು ಕೆಲಸಕ್ಕೆ ಹೋದ ಸಹಾಯಕಿ

Yadgir News: ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಲಾಕ್ ಮಾಡಿ ಸಹಾಯಕಿ ಜಮೀನು ಕೆಲಸಕ್ಕೆ ಹೋದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬುದೂರ್ ಗ್ರಾಮದ ಕೇಂದ್ರ-1 ರಲ್ಲಿ‌ ಜರುಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

Actress Ramya: ಪ್ರಜ್ವಲ್‌ ರೇವಣ್ಣಗೆ ಶಿಕ್ಷೆ; ಕಾನೂನು ಎಲ್ಲರಿಗೂ ಒಂದೇ ಎಂದ ನಟಿ ರಮ್ಯಾ

ಪ್ರಜ್ವಲ್‌ ರೇವಣ್ಣಗೆ ಶಿಕ್ಷೆ; ಕಾನೂನು ಎಲ್ಲರಿಗೂ ಒಂದೇ ಎಂದ ನಟಿ ರಮ್ಯಾ

Prajwal Revanna News: ಅತ್ಯಾಚಾರ ಪ್ರಕರಣಲ್ಲಿ ಪ್ರಜ್ವಲ್‌ ರೇವಣ್ಣ ದೋಷಿ ಎಂದು ಶುಕ್ರವಾರ ಕೋರ್ಟ್‌ ತೀರ್ಪು ನೀಡಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದ ನಟಿ ರಮ್ಯಾ, ʼಎಲ್ಲ ಮಹಿಳೆಯರಿಗೂ ನ್ಯಾಯ ಸಂದಿದೆ. ವೆಲ್​ಡನ್ ಹೈಕೋರ್ಟ್ʼ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಇದೀಗ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದ್ದಾರೆ.

Prajwal Revanna Case: ಜೀವಾವಧಿ ಶಿಕ್ಷೆ; ಪ್ರಜ್ವಲ್‌ ರೇವಣ್ಣ ಮುಂದಿನ ಆಯ್ಕೆ ಏನು?

ಜೀವಾವಧಿ ಶಿಕ್ಷೆ; ಪ್ರಜ್ವಲ್‌ ರೇವಣ್ಣ ಮುಂದಿನ ಆಯ್ಕೆ ಏನು?

Prajwal Revanna Case: ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣಗೆ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಇದರಿಂದ ಮಾಜಿ ಸಂಸದ ಜೀವನಪರ್ಯಂತ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಬಂದಿದೆ. ಸದ್ಯ ಪ್ರಜ್ವಲ್‌ ರೇವಣ್ಣ ಮುಂದಿರುವ ಆಯ್ಕೆಗಳೇನು ಎನ್ನುವ ಕುರಿತ ಮಾಹಿತಿ ಇಲ್ಲಿದೆ.

Organ Transport: ಬೆಂಗಳೂರು ಮೆಟ್ರೋದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಣೆ; ಇತಿಹಾಸದಲ್ಲೇ ಮೊದಲು!

ಬೆಂಗಳೂರು ಮೆಟ್ರೋದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಣೆ!

Namma Metro: ಬೆಂಗಳೂರಿನ ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಯಿಂದ ಆರ್.ಆರ್.ನಗರದ ಸ್ಪರ್ಶ ಆಸ್ಪತ್ರೆಗೆ ನಮ್ಮ ಮೆಟ್ರೋದಲ್ಲಿ ಮಾನವ ಯಕೃತ್ತನ್ನು ಸಾಗಿಸಲಾಗಿದೆ. ಒಬ್ಬ ವೈದ್ಯ ಮತ್ತು ಏಳು ಸಿಬ್ಬಂದಿ, ಶುಕ್ರವಾರ ರಾತ್ರಿ 8:38ಕ್ಕೆ ಯಕೃತ್ತನ್ನು ನಮ್ಮ ಮೆಟ್ರೋದಲ್ಲಿ ಸಾಗಿಸಿದ್ದಾರೆ. ಮೆಟ್ರೋ ಇತಿಹಾಸದಲ್ಲೇ ಮೊದಲ ಬಾರಿ ಅಂಗಾಂಗ ಸಾಗಿಸಲಾಗಿದೆ.

Prajwal Revanna Case: ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

Physical abuse Case: ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಶಿಕ್ಷೆಯ ಅವಧಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ಪ್ರಕಟಿಸಿದೆ. ಕೆಆರ್‌ ನಗರದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಪ್ರಕಟಿಸಿದ್ದಾರೆ. ನಿನ್ನೆಯೇ ಅವರು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

Brahman Mahasangh: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಜ್ಯ ಮಾಧ್ಯಮ ವಕ್ತಾರರಾಗಿ ಶಶಿಕಿರಣ್ ದೇಶಪಾಂಡೆ ನೇಮಕ

ಬ್ರಾಹ್ಮಣ ಮಹಾಸಂಘದ ರಾಜ್ಯ ಮಾಧ್ಯಮ ವಕ್ತಾರರಾಗಿ ಶಶಿಕಿರಣ್ ದೇಶಪಾಂಡೆ ನೇಮಕ

Shashikiran Deshpande: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಕರ್ನಾಟಕ ರಾಜ್ಯದ ಮಾಧ್ಯಮ ವಕ್ತಾರನ್ನಾಗಿ ಶಶಿಕಿರಣ್ ದೇಶಪಾಂಡೆ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ್ ತಿಳಿಸಿದ್ದಾರೆ. ಇವರ ಸೇವಾವಧಿ 2028 ಮಾರ್ಚ್‌ 31 ರವೆರೆಗೆ ಇರಲಿದೆ.

NIA Raid: ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದಲ್ಲಿ ಮಂಗಳೂರಿನ 14 ಕಡೆ ಎನ್‌ಐಎ ದಾಳಿ

ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದಲ್ಲಿ ಮಂಗಳೂರಿನ 14 ಕಡೆ ಎನ್‌ಐಎ ದಾಳಿ

Suhas Shetty Murder Case: ಹಿಂದುತ್ವ ಕಾರ್ಯಕರ್ತ, ರೌಡಿಶೀಟರ್‌ ಸುಹಾಸ್‌ ಶೆಟ್ಟಿ ಕೊಲೆಗೆ ಸಂಬಂಧಿಸಿ ಇದುವರೆಗೆ 11 ಆರೋಪಿಗಳನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ. ನಂತರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿತ್ತು. ಇದೀಗ ಮಂಗಳೂರಿನ 14 ಕಡೆ ಎನ್‌ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

Murder Case: ಮಾವನನ್ನೇ ಕೊಂದ ಅಳಿಯ; ಶವ ಸುಟ್ಟು ಹಾಕಲು ಪತ್ನಿ, ಮಗಳು ನೆರವು!

ಮಾವನನ್ನೇ ಕೊಂದ ಅಳಿಯ; ಶವ ಸುಟ್ಟು ಹಾಕಲು ಪತ್ನಿ, ಮಗಳು ನೆರವು!

Murder Case: ಬೆಂಗಳೂರು ನಗರದ ಕಾಡುಗೋಡಿಯಲ್ಲಿ ಹತ್ಯೆ ನಡೆದಿದೆ. ದೇವನಹಳ್ಳಿ ಮೂಲದ ಬಾಬು ಕೊಲೆಯಾದ ವ್ಯಕ್ತಿ. ಪೊಲೀಸರ ವಿಚಾರಣೆ ವೇಳೆ ಅಳಿಯ ಹಾಗೂ ಪತ್ನಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Prajwal Revanna Case: ಪ್ರಜ್ವಲ್‌ ರೇವಣ್ಣ ಶಿಕ್ಷೆಯ ಪ್ರಮಾಣ ಕುರಿತ ವಿಚಾರಣೆ ಪೂರ್ಣ, ಇಂದು ಮಧ್ಯಾಹ್ನ 2.45ಕ್ಕೆ ಆದೇಶ

ಪ್ರಜ್ವಲ್‌ ಶಿಕ್ಷೆ ಪ್ರಮಾಣ ಕುರಿತು ವಿಚಾರಣೆ, ಮಧ್ಯಾಹ್ನ 2.45ಕ್ಕೆ ಆದೇಶ

Physical Abuse: ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಜ್ವಲ್‌ ರೇವಣ್ಣನ ಶಿಕ್ಷೆ ಪ್ರಮಾಣದ ಕುರಿತು ವಿಚಾರಣೆ ನಡೆಯಿತು. ವಿಚಾರಣೆಯ ಬಳಿಕ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ಪ್ರಕರಣದ ಆದೇಶವನ್ನು ಕಾಯ್ದಿರಿಸಿ ಮಧ್ಯಾಹ್ನ 2.45ಕ್ಕೆ ಆದೇಶ ನೀಡುವುದಾಗಿ ತಿಳಿಸಿದರು.

Boy Death: ನಾಪತ್ತೆಯಾಗಿದ್ದ 4 ವರ್ಷದ ಬಾಲಕ ಶವವಾಗಿ ಬಾವಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ 4 ವರ್ಷದ ಬಾಲಕ ಶವವಾಗಿ ಬಾವಿಯಲ್ಲಿ ಪತ್ತೆ

ಬಳ್ಳಾರಿ (Bellary news) ಜಿಲ್ಲೆಯ ಸಿರಗುಪ್ಪ ತಾಲೂಕಿನ ರವಿಹಾಳ ರವಿಹಾಳ ಗ್ರಾಮದ ವೀರೇಶ್ ಪುತ್ರ ಸಿರಿ (4) ಶವವಾಗಿ ಬಾವಿಯಲ್ಲಿ ಪತ್ತೆಯಾಗಿದ್ದಾನೆ. ಎರಡು ದಿನದ ಹಿಂದೆ ಬಾಲಕ ನಾಪತ್ತೆಯಾಗಿದ್ದ. ನಿನ್ನೆ ಸಂಜೆ ಬಾವಿಯಲ್ಲಿ ಸ್ಥಳೀಯರು ಶವ ತೇಲುತ್ತಿರುವುದನ್ನು ನೋಡಿದ್ದಾರೆ.

lokayukta Raid: ತಿಂಗಳಿಗೆ 15,000 ರೂ. ಸಂಬಳ ಪಡೆಯುವ ಸರ್ಕಾರಿ ನೌಕರ; 24 ಮನೆಗಳು, 30 ಕೋಟಿ ಆಸ್ತಿಯ ಒಡೆಯ..!

15,000 ಸಂಬಳ ಪಡೆಯುತ್ತಿದ್ದ ಗುಮಾಸ್ತನ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ..?

ಕೊಪ್ಪಳದ ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್‌ನಲ್ಲಿ (ಕೆಆರ್‌ಐಡಿಎಲ್) ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಕಳಕಪ್ಪ ನಿಡಗುಂದಿ ಮೇಲೆ ಲೋಕಾಯುಕ್ತ ದಾಳಿಯಾಗಿದ್ದು, ₹30 ಕೋಟಿಗೂ ಅಧಿಕ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿದೆ. ಕೊಪ್ಪಳದಲ್ಲಿ ಕೆಲಸ ಮಾಡುತ್ತಿದ್ದ ಕಲಕಪ್ಪ, ತಿಂಗಳಿಗೆ 15,000 ರೂ. ವೇತನ ಪಡೆಯುತ್ತಿದ್ದರೂ, 24 ಮನೆಗಳು, ನಾಲ್ಕು ಪ್ಲಾಟ್‌ಗಳು, ಮತ್ತು 40 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಈ ಆಸ್ತಿಗಳು ಆತ, ಆತನ ಪತ್ನಿ ಮತ್ತು ಅವರ ಸಹೋದರನ ಹೆಸರಿನಲ್ಲಿವೆ.

ದಿಲ್ಲಿಯಿಂದ ಮಂಡ್ಯಕ್ಕೆ ಹಾರಿ ಬಂದ ಪಾರಿವಾಳ

ದಿಲ್ಲಿಯಿಂದ ಮಂಡ್ಯಕ್ಕೆ ಹಾರಿ ಬಂದ ಪಾರಿವಾಳ

ಮಾಲೀಕನನ್ನು ಹುಡುಕಿಕೊಂಡು ದೆಹಲಿ ಯಿಂದ ಮಂಡ್ಯಕ್ಕೆ ಬರುವ ಮೂಲಕ ಒಂದು ವರ್ಷ ವಯಸ್ಸಿನ ಅಭಿಮನ್ಯು ಹೆಸರಿನ ಪಾರಿವಾಳ ವಿಶೇಷ ದಾಖಲೆ ನಿರ್ಮಿಸಿದೆ. ಕೇವಲ ಒಂದು ವರ್ಷದ ಸಾಕು ಪಾರಿವಾಳವೊಂದು ಇಷ್ಟು ದೂರ ಕ್ರಮಿಸಿ ವಾಪಸಾಗುವ ಮೂಲಕ ದಾಖಲೆ ಪುಸ್ತಕ ಸೇರಿದೆ.

Loading...