ವೀಣಾ ಭಟ್
ಬೆಂಗಳೂರಿನ ಕೆಲವು ಬೀದಿಗಳುದ್ದಕ್ಕೂ ಪಿಂಕ್ ಬಣ್ಣದ ಹೊಳೆಯೇ ಹರಿದಿದೆ! ಒಮ್ಮೆಗೇ ಅರಳಿನಿಂತ ಈ ದೊಡ್ಡ ಹೂವುಗಳ ಚಂದ ನೋಡುವುದೇ ಒಂದು ಮಧುರಾನುಭವ.
ಹೋಳಿ ಹಬ್ಬ ಮುಗಿದಿದೆ. ಆದರೆ ಬೆಂಗಳೂರು ರಸ್ತೆಗಳಲ್ಲೆಲ್ಲ ಗುಲಾಬಿ ರಂಗು ಇನ್ನೂ ಹರಡಿದೆ, ಬೆಂಗಳೂರು ಪಿಂಕ್ ಸಿಟಿ ಆಗಿ ನಿವಾಸಿಗಳನ್ನು ಆಕರ್ಷಿಸುತ್ತಿದೆ, ಜೊತೆಗೆ ಮನಸ್ಸಿಗೆ ಖುಷಿ ನೀಡುತ್ತಿದೆ. ಎಲ್ಲೆಲ್ಲೂ ಸೌಂದರ್ಯವೆ! ಹೇಗೆ ಅಂತೀರಾ? ಟಬೆಬುಯಾ ರೋಸಿಯಾ ಎಂದು ಕರೆಯಲ್ಪಡುವ ಪಿಂಕ್ ಹೂವು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಅರಳಿ ನಿಂತಿದೆ. ಇದನ್ನು ರೋಸಿ ಟ್ರಂಪೆಟ್ ಟ್ರೀ ಎಂದೂ ಕರೆಯುತ್ತಾರೆ. ಹಿಂದಿಯಲ್ಲಿ ಇದನ್ನು ‘ಬಸಂತ್ ರಾಣಿ’ ಎಂದು ಕರೆಯಲಾಗುತ್ತದೆ. ಟಬೆಬುಯಾ ಸಸ್ಯ ಶಾಸ್ತ್ರದ ಬಿಗ್ನೋ ನಿಯೇಸಿ ಕುಟುಂಬಕ್ಕೆ ಸೇರಿದೆ.
ಇದು ಮೂಲತಃ ಪೆರು ದೇಶದ ಹೂವು. ಈ ಗುಲಾಬಿ ಬಣ್ಣದ ಹೂಗಳು ಕಾಲಕ್ಕನುಗುಣ ವಾಗಿ ಅರಳುತ್ತವೆ. ಈ ಜಾತಿಯ ಮರಗಳು ದಕ್ಷಿಣ ಮೆಕ್ಸಿಕೋ, ವೆನೆಜುವೆಲಾ ಮತ್ತು ಈಕ್ವೆಡಾರ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಹೂವನ್ನು ಎಲ್-ಸಾಲ್ವೆಡಾರ್ ದೇಶ ತನ್ನ ರಾಷ್ಟ್ರೀಯ ಹೂವಾಗಿ ಘೋಷಿಸಿದೆ. ಈ ಮರವನ್ನು ಹೆಚ್ಚಾಗಿ ಅಲಂಕಾರಿಕ ಮರವಾಗಿ ಬೆಂಗಳೂರಿನ ಕೆಲವು ಬೀದಿಗಳುದ್ದಕ್ಕೂ ಪಿಂಕ್ ಬಣ್ಣದ ಹೊಳೆಯೇ ಹರಿದಿದೆ! ಒಮ್ಮೆಗೇ ಅರಳಿನಿಂತ ಈ ದೊಡ್ಡ ಹೂವುಗಳ ಚಂದ ನೋಡುವುದೇ ಒಂದು ಮಧುರಾನುಭವ.
ಉದ್ಯಾನಗಳಲ್ಲಿ ಭಾಗವತ ಕಥೆಗಳನ್ನು ಏಕೆ ಓದಬೇಕು? ನೆಡಲಾಗುತ್ತದೆ. ಮಾರ್ಚ್ ತಿಂಗಳಿನಲ್ಲಿ, ವಸಂತ ಋತುವಿನಾಗಮನವಾದಂತೆ ಎಲೆಗಳು ಉದುರಿ ಹೂಗಳು ಅರಳಲು ಆರಂಭವಾಗುತ್ತವೆ. ಸುಮಾರು 30 ಮೀಟರು ಎತ್ತರದವರೆಗೆ ಬೆಳೆಯುವ ಇದು ಉಷ್ಣ ವಲಯದಲ್ಲಿ ಬೆಳೆಯುವ ಮರವಾಗಿದೆ. ಹೂವುಗಳು ನಸುಗುಲಾಬಿ, ಕಡು ಗುಲಾಬಿ, ನಸು ನೇರಳೆ ... ಹೀಗೆ ವಿವಿಧ ಛಾಯೆಯಲ್ಲಿರುತ್ತವೆ.
ಇನ್ನು ಇವು ಬೆಂಗಳೂರಿಗೆ ಬಂದದ್ದು ಹೇಗೆ? ದೇಶಕ್ಕೆ ಆಗ ತಾನೇ ಸ್ವಾತಂತ್ರ್ಯ ಬಂದಿತ್ತು. ಆ ಸಮಯದಲ್ಲಿ ನಮ್ಮ ತೋಟಗಾರಿಕಾ ತಜ್ಞರು ಬೆಂಗಳೂರಿನಲ್ಲಿ ವಿವಿಧ ಜಾತಿಯ ಹೂವು ಗಳು ಮತ್ತು ಸಸ್ಯಗಳನ್ನು ಬೆಳೆಯುವ ಬಗ್ಗೆ ಚರ್ಚಿಸಿ ಈ ಹೂವಿನ ಮರಗಳನ್ನು ಬೆಂಗ ಳೂರಿಗೆ ಉಡುಗೊರೆಯಾಗಿ ಕೊಟ್ಟರು. ಬೆಂಗಳೂರಿನ ಲಾಲ್‌ಬಾಗ್, ಜಯನಗರ 4 ನೇ ಬ್ಲಾಕ್, ಕಬ್ಬನ್ ಪಾರ್ಕ್‌ಗೆ ಹೋದರೆ ಟಬೆಬುಯಾ ಸೌಂದರ್ಯವನ್ನು ಸವಿಯಬಹುದು. ಅದಕ್ಕಿಂತ ಹೆಚ್ಚಾಗಿ, ನಗರದ ಅನೇಕ ಕಡೆ ರಸ್ತೆಗಳಲ್ಲಿ ಸಾಲಾಗಿ ಬೆಳೆಸಿದ ಟಬೆಬುಯಾ ಮರಗಳನ್ನು ನೋಡಬಹುದು. ಹೊರಗೆ ಹೋದಾಗ ಈ ಹೂಗಳನ್ನು ನೋಡುವುದೇ ಒಂದು ಕಾವ್ಯಾನುಭವ.
ಇಡೀ ಮರವೇ ಪಿಂಕ್ ಬಣ್ಣದ, ದೊಡ್ಡ ದೊಡ್ಡ ಹೂವುಗಳಿಂದ ತುಂಬಿರುವ ನೋಟವೇ ಚೆನ್ನ.ಒಮ್ಮೆ ಅತ್ತ ಕಣ್ಣು ಹಾಯಿಸಿ ನಿಮ್ಮ ಚಿಂತೆಯೆಲ್ಲ ಮರೆತುಬಿಡಿ. ಹಾಗೆಯೇ ಈ ಮರಗಳನ್ನು ನೆಡಿಸಿದವರಿಗೆ ನಮಿಸಿ. ಬಾ, ವಸಂತ ರಾಣಿಯೇ ಬಾ!