ಹೊಳಪು ಕಳೆದುಕೊಳ್ಳುತ್ತಿರುವ ಕೇಂದ್ರ ಮುಂಗಡ ಪತ್ರ
ತಮಾಷೆಯ ಸಂಗತಿಯೆಂದರೆ, ಬಹುತೇಕರು ಮುಂಗಡ ಪತ್ರವನ್ನು ಪೂರ್ಣವಾಗಿ ಓದುವುದಿಲ್ಲ ಮತ್ತು ಮುಂಗಡ ಪತ್ರದ ಮಂಡಣೆಯಾಗುತ್ತಿದ್ದಂತೆ ಆರ್ಥಿಕ ತಜ್ಞರ ಸಲಹೆಯನ್ನು ಪಡೆಯುವ ಗೋಜಿ ಗೂ ಹೋಗದೆಯೇ ಪ್ರತಿಕ್ರಿಯೆಗಳನ್ನು ನೀಡತೊಡಗುತ್ತಾರೆ. ವಾಸ್ತವವೆಂದರೆ, ಇವರೆಲ್ಲರೂ ರಾಜಕೀಯ ಕಾರಣಗಳಿಗೆ ತಂತಮ್ಮ ಪಕ್ಷದ ನಿಲುವಿಗೆ ಅನುಸಾರವಾಗಿ ಟೀಕಿಸುವವರು ಅಥವಾ ಹಾಡಿ ಹೊಗಳು ವವರೇ! ಇಂಥವರಿಂದ ಪ್ರಬುದ್ಧ ಪ್ರತಿಕ್ರಿಯೆಯನ್ನು ನಿರೀಕ್ಷಿಸಲು ಸಾಧ್ಯವೇ?