ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Aarama

ಕುರುಚಲು ಕಾಡಿನ ಮಡಿಲಲ್ಲಿ ಕಿತ್ತಳೆ ತುದಿ ಚಿಟ್ಟೆಗಳ ಪ್ರಣಯ

ಕುರುಚಲು ಕಾಡಿನ ಮಡಿಲಲ್ಲಿ ಕಿತ್ತಳೆ ತುದಿ ಚಿಟ್ಟೆಗಳ ಪ್ರಣಯ

ಸುತ್ತಲೂ ಹರಡಿದ್ದ ಪೊದೆಗಳ ನಡುವೆ, ಒಂದು ಸಣ್ಣ ಕಡ್ಡಿಯ ಮೇಲೆ ನಿಶ್ಚಲವಾಗಿ ಕುಳಿತಿದ್ದವು ಆ ಜೋಡಿಗಳು. ಅವು ಸಾಧಾರಣ ಹಾರಾಡುವ ಕೀಟಗಳಲ್ಲ; ಪ್ರೇಮದ ಪರಾಕಾಷ್ಠೆಯಲ್ಲಿದ್ದ ಕಿತ್ತಳೆ-ತುದಿ ಚಿಟ್ಟೆಗಳು. ಅವುಗಳ ರೆಕ್ಕೆಗಳ ಮೇಲಿನ ಆ ಕಿತ್ತಳೆ ಬಣ್ಣದ ವಿನ್ಯಾಸ, ಬಿಳಿಯ ಬಣ್ಣದೊಂದಿಗೆ ಬೆರೆತು ಪ್ರಕೃತಿಯ ಕುಸುರಿ ಕೆಲಸದಂತೆ ಕಾಣುತ್ತಿತ್ತು

ಮಣ್ಣಿನಿಂದ ಮಹಾತತ್ತ್ವದವರೆಗೆ ಮಹಾಗಣಪ

ಮಣ್ಣಿನಿಂದ ಮಹಾತತ್ತ್ವದವರೆಗೆ ಮಹಾಗಣಪ

ಇದೊಂದು ಸಾಮಾಜಿಕ ಸಾಮರಸ್ಯವನ್ನು ಮೂಡಿಸುವ ಹಬ್ಬವೂ ಹೌದು. ಇದು ಕೇವಲ ಆರಾಧ್ಯ ದೇವನಾದ ವಿಘ್ನವಿನಾಶಕನ ಪೂಜೆಯಷ್ಟೇ ಅಲ್ಲ; ಮಣ್ಣಿನಿಂದ ಮಹಾತತ್ತ್ವದವರೆಗೆ ಮನುಷ್ಯನ ಪಯಣವನ್ನು ನೆನಪಿಸುವ ಮಹಾಪರ್ವವೂ ಹೌದು. ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ಯಂದು ಮನೆ-ಮನಗಳಲ್ಲಿ ಗಣಪತಿಯ ಆಗಮನವಾಗುತ್ತದೆ.

ಮಣ್ಣಿನಲ್ಲಿ ಮೂಡುವ ಗಣಪತಿ: ಬದುಕು ಕಟ್ಟುವ ಕಂಬಾರ

ಮಣ್ಣಿನಲ್ಲಿ ಮೂಡುವ ಗಣಪತಿ: ಬದುಕು ಕಟ್ಟುವ ಕಂಬಾರ

ಕುಂಬಾರನ ಬದುಕು ಹೊರಗಿನಿಂದ ನೋಡಿದಷ್ಟು ಸುಲಭವಲ್ಲ. ಮಣ್ಣನ್ನು ಹುಡುಕಿ ತರುವುದು, ಅದನ್ನು ಹದ ಮಾಡುವುದು, ಕಲಸಿ ಮೂರ್ತಿ ರೂಪಿಸು ವುದು, ಒಣಗಿಸುವುದು, ಬಣ್ಣ ಹಚ್ಚುವುದು, ಅಲಂಕರಿಸುವುದು- ಪ್ರತಿಯೊಂದು ಹಂತದಲ್ಲೂ ಅವನ ಶ್ರಮ ಅಡಗಿದೆ. ಒಂದು ಮೂರ್ತಿ ಸಿದ್ಧವಾಗು ವಷ್ಟರಲ್ಲಿ ಅವನ ಕೈಗಳು ಮಣ್ಣಿನಿಂದ ತುಂಬಿರುತ್ತವೆ; ದೇಹ ಬೆವರಿನಿಂದ ತೋಯುತ್ತದೆ. ಆದರೆ ಆ ಮಣ್ಣಿನ ಅವನ ಬದುಕಿನ ಭರವಸೆಯೂ ಅಡಗಿರುತ್ತದೆ.

Dr Sadhanashree Column: ಸ್ವಾಸ್ಥ್ಯವನ್ನು ಅಳೆಯುವ ಆಯುರ್ವೇದದ ಮಾನದಂಡಗಳು

ಸ್ವಾಸ್ಥ್ಯವನ್ನು ಅಳೆಯುವ ಆಯುರ್ವೇದದ ಮಾನದಂಡಗಳು

ರೋಗವು ಒಂದೇ ದಿನದಲ್ಲಿ ದೊಡ್ಡದಾಗುವುದಿಲ್ಲ. ಒಂದು ದೊಡ್ಡ ಮರ ಒಂದು ಸಣ್ಣ ಬೀಜದಿಂದ ಮೊಳಕೆ, ಸಸಿ, ಗಿಡ, ಮರ ಎಂಬ ಹಂತಗಳನ್ನು ದಾಟಿ ಹೆಮ್ಮರವಾಗುತ್ತದೆ. ರೋಗವೂ ಹಾಗೆಯೇ. ಅದು ಸಾಮಾನ್ಯವಾಗಿ ಒಂದು ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ವ್ಯಕ್ತವಾಗುವುದಿಲ್ಲ. ದೇಹದ ಸಹಜ ಸಮತೋಲನದಲ್ಲಿ ಸಣ್ಣ ಬದಲಾವಣೆಗಳು ಆರಂಭವಾಗುತ್ತವೆ.

ಮಾರ್ಗದರ್ಶಕ ಮುರಾರಿ

ಮಾರ್ಗದರ್ಶಕ ಮುರಾರಿ

ಶ್ರೀಕೃಷ್ಣ ಬದುಕು ಎಲ್ಲರಿಗೂ ಯಾವಾಗಲೂ ಸುಲಭವಾಗಿರುತ್ತೆ ಎಂದು ಉಪದೇಶಿಸಲಿಲ್ಲ. ಅವನ ಬದುಕಿನ ಮೂಲಕ ಮತ್ತು ಭಗವದ್ಗೀತೆಯ ಮುಖಾಂತರ ಎಲ್ಲ ಜೀವಿಗಳಿಗೂ ಕಷ್ಟ ಅನಿವಾರ್ಯ, ಆದರೆ ನಮ್ಮ ಆಂತರಿಕ ಶಕ್ತಿಗಳನ್ನು ಮತ್ತು ಜೀವನೋತ್ಸಾಹವನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸಾರಿದ್ದಾನೆ.

Vidyashankar Sharma Column: ಶ್ರೀಕೃಷ್ಣ ಹೇಳಿದ ಎರಡು ಉಪಾಯಗಳು

Vidyashankar Sharma Column: ಶ್ರೀಕೃಷ್ಣ ಹೇಳಿದ ಎರಡು ಉಪಾಯಗಳು

ಮನದ ನಿಯಂತ್ರಣ ಕಷ್ಟವೇ ಎನ್ನುವ ಜಗದ್ಗುರುವು ಅದಕ್ಕೆ ಉಪಾಯವೊಂದನ್ನು ಹೇಳುತ್ತಾನೆ. ಅಭ್ಯಾಸ ಮತ್ತು ವೈರಾಗ್ಯವೇ ಮನದ ಕುಣಿತವನ್ನು ತಡೆಯಬಲ್ಲುದು ಎಂದು ಕಿವಿಮಾತು ಹೇಳುತ್ತಾನೆ. ಶ್ರೀಕೃಷ್ಣನ ಈ ಮಾತುಗಳನ್ನು ಒಣವೇದಾಂತ ಎಂದು ಮೂಗುಮುರಿಯುವವರೇ ಹೆಚ್ಚು. ಆದರೆ ಸ್ವಲ್ಪ ಒಳಹೊಕ್ಕು ನೋಡಿದರೆ ಇದು ನಮ್ಮ ಅನುದಿನದ ಬದುಕಿಗೆ ಪೂರ್ಣವಾಗಿ ಹೊಂದಿಕೆಯಾಗುತ್ತದೆ ಎಂಬುದು ತಿಳಿಯುತ್ತದೆ

G N Bhat Column: ಶ್ರೀಕೃಷ್ಣನ ಗೋಪೀವಿಲಾಸದ ಮರ್ಮ

G N Bhat Column: ಶ್ರೀಕೃಷ್ಣನ ಗೋಪೀವಿಲಾಸದ ಮರ್ಮ

‘ಮಲ್ಲರಿಗೆ ಸಿಡಿಲಾಗಿ, ನರರಿಗೆ ನರಶ್ರೇಷ್ಠನಾಗಿ, ಸ್ತೀಯರಿಗೆ ಸಾಕ್ಷಾತ್ ಮನ್ಮಥನಾಗಿ, ಗೋಪಾಲಕರಿಗೆ ತನ್ನವನಾಗಿ, ದುಷ್ಟರಾಜರಿಗೆ ಶಾಸಕನಾಗಿ, ತಂದೆ-ತಾಯಿಯರಿಗೆ ಮುದ್ದಿನ ಶಿಶುವಾಗಿ, ಕಂಸನಿಗೆ ಮೃತ್ಯು ವಾಗಿ, ಋಷಿ-ಮುನಿಗಳಿಗೆ ಪರತತ್ತ್ವವಾಗಿ, ವೃಷ್ಣಿಗಳಿಗೆ ಪರದೇವತೆಯಾಗಿ ಕಾಣಿಸಿಕೊಂಡ ಶ್ರೀಕೃಷ್ಣ ತನ್ನ ಅಣ್ಣ ಬಲರಾಮನೊಡನೆ ಯುದ್ಧವೇದಿಕೆಯನ್ನು ಹತ್ತಿದ’.

ಭಯ ಫೋಬಿಯಾ ಆಗದಿರಲಿ

ಭಯ ಫೋಬಿಯಾ ಆಗದಿರಲಿ

ಅಪಾಯವನ್ನು ಕಂಡಾಗ ಎಚ್ಚೆತ್ತುಕೊಳ್ಳುವುದು, ಅಪರಿಚಿತ ಪರಿಸ್ಥಿತಿಯಲ್ಲಿ ಹಿಂಜರಿಯುವುದು, ಪರೀಕ್ಷೆ ಅಥವಾ ಸಂದರ್ಶನದ ಮುನ್ನ ಆತಂಕ ಇವೆಲ್ಲ ಸಾಮಾನ್ಯ. ಕೆಲವೊಮ್ಮೆ ಅಪಾಯ ಹೊರಗಿ ರುವುದಿಲ್ಲ ನಮ್ಮ ಮನಸ್ಸು ಅದನ್ನು ಸೃಷ್ಟಿಸಿರುತ್ತದೆ. ಆದರೆ ಯಾವುದೇ ನಿಜವಾದ ಅಪಾಯವಿಲ್ಲ ದಿದ್ದರೂ ಒಂದು ನಿರ್ದಿಷ್ಟ ವಸ್ತು, ವ್ಯಕ್ತಿ, ಸ್ಥಳ, ಪ್ರಾಣಿ ಅಥವಾ ಪರಿಸ್ಥಿತಿಯ ಬಗ್ಗೆ ಅತಿಯಾದ, ನಿರಂತರ ಮತ್ತು ನಿಯಂತ್ರಿಸಲಾಗದ ಭಯ ಉಂಟಾದರೆ ಅದನ್ನು ಸಾಮಾನ್ಯ ಭಯ ಎಂದು ಹೇಳಲಾಗುವುದಿಲ್ಲ. ಇಂತಹ ಸ್ಥಿತಿಯನ್ನು ‘ಫೋಬಿಯಾ’ ಎಂದು ಕರೆಯಲಾಗುತ್ತದೆ.

Dr Sadhanashree Column: ಮರವೇ ನಮ್ಮ ಗುರು !: ಒಂದೊಂದು ವೃಕ್ಷಕ್ಕೂ ಒಂದೊಂದು ಪಾಠ !

ಮರವೇ ನಮ್ಮ ಗುರು !: ಒಂದೊಂದು ವೃಕ್ಷಕ್ಕೂ ಒಂದೊಂದು ಪಾಠ !

ಇಂದು ನಾವು ಆರೋಗ್ಯವನ್ನು ಆಸ್ಪತ್ರೆಗಳಲ್ಲಿ, ಔಷಧಿಗಳಲ್ಲಿ ಮತ್ತು ಪ್ರಯೋಗಾಲಯಗಳಲ್ಲಿ ಹುಡುಕು ತ್ತಿದ್ದೇವೆ. ಆದರೆ ಆರೋಗ್ಯದ ಮೂಲಭೂತ ತತ್ತ್ವಗಳನ್ನು ಪ್ರಕೃತಿಯು ಪ್ರತಿದಿನ ನಮ್ಮ ಕಣ್ಣೆದುರೇ ಬೋಧಿಸುತ್ತಿದೆ. ಒಂದು ಮರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆರೋಗ್ಯಕರ ಜೀವನಕ್ಕೆ ಬೇಕಾದ ಅನೇಕ ಪಾಠಗಳು ಅದರಲ್ಲಿ ಅಡಗಿವೆ.

Dr Sadhanashree Column: ವ್ರತ ಮುಗಿದರೂ ಲಕ್ಷ್ಮೀ ಉಳಿಯಲಿ

ವ್ರತ ಮುಗಿದರೂ ಲಕ್ಷ್ಮೀ ಉಳಿಯಲಿ

ಅಷ್ಟಲಕ್ಷ್ಮಿಯನ್ನು ಕೇವಲ ಪೂಜಿಸುವ ಎಂಟು ರೂಪಗಳೆಂದು ನೋಡದೆ, ನಮ್ಮ ಬದುಕು ನಿಜವಾಗಿ ಸಮೃದ್ಧವಾಗಲು ಅಗತ್ಯವಿರುವ ಎಂಟು ಆಯಾಮಗಳೆಂದು ನೋಡಿದರೆ, ಅದರೊಳಗೆ ಆರೋಗ್ಯದ ಒಂದು ಅದ್ಭುತ ಸಂದೇಶ ಕಾಣಿಸುತ್ತದೆ. ಮೊದಲನೆಯದು ಧನಲಕ್ಷ್ಮಿ. ಸಂಪತ್ತು ಜೀವನಕ್ಕೆ ಅಗತ್ಯ. ಆದರೆ ಸಂಪತ್ತಿನ ಅರ್ಥ ಕೇವಲ ಹಣವಲ್ಲ. ನಮ್ಮ ಬದುಕಿಗೆ ಅಗತ್ಯವಾದ ಸಂಪನ್ಮೂಲಗಳು, ಸುರಕ್ಷತೆ, ಜೀವನವನ್ನು ಸುಗಮವಾಗಿ ನಡೆಸುವ ಸಾಮರ್ಥ್ಯ ಇವೆಲ್ಲವೂ ಧನದ ಭಾಗ

Dr Sadhanashree Column: ಇಲ್ಲಿದೆ ʼವಿರುದ್ದ ಆಹಾರʼವೆಂಬ ವಿಷದ ವಿಷಯ !

ಇಲ್ಲಿದೆ ʼವಿರುದ್ದ ಆಹಾರʼವೆಂಬ ವಿಷದ ವಿಷಯ !

ಇಲ್ಲಿ ಆಯುರ್ವೇದದ ಒಂದು ವಿಶಿಷ್ಟ ಸಿದ್ಧಾಂತ ನಮ್ಮ ಗಮನ ಸೆಳೆಯುತ್ತದೆ- ‘ಆಮ’ ಮತ್ತು ‘ಆಮವಿಷ’. ‘ಆಮ’ ಎಂದರೆ ಸಂಪೂರ್ಣವಾಗಿ ಪಕ್ವವಾಗದ, ಸರಿಯಾಗಿ ಜೀರ್ಣವಾಗಿರದ. ಆಹಾರವು ಜಠರಾಗ್ನಿಯಿಂದ ಸಮರ್ಪಕವಾಗಿ ಪಚನವಾಗದೆ ಉಳಿದಾಗ ಉಂಟಾಗುವ ಈ ಅಪಕ್ವ ಸ್ಥಿತಿಯನ್ನು ಆಯುರ್ವೇದ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಅದು ದೇಹದಲ್ಲಿ ಅಸಹಜವಾಗಿ ಉಳಿದು, ದೋಷಗಳೊಂದಿಗೆ ಸೇರಿ ರೋಗೋತ್ಪತ್ತಿಗೆ ಕಾರಣವಾಗುವ ಸ್ಥಿತಿಯನ್ನು ‘ಆಮವಿಷ’ದ ಮೂಲಕ ವಿವರಿಸುತ್ತದೆ.

ಇರುವೆಯ ಹಾದಿಯೇ ಮಾದರಿ

ಇರುವೆಯ ಹಾದಿಯೇ ಮಾದರಿ

ಇರುವೆ ಅತ್ಯಂತ ಚಿಕ್ಕ ಜೀವಿ. ನಮ್ಮ ಕಾಲಡಿಗೆ ಸಿಕ್ಕಿ ಕ್ಷಣ ಮಾತ್ರದಲ್ಲಿ ಪ್ರಾಣ ಕಳೆದುಕೊಳ್ಳುವಂತ ಹುದು. ಇರುವೆ ಚಿಕ್ಕದಾದರೂ ಅದು ನಮಗೆ ಹೇಳಿಕೊಡುವ ಪಾಠ ಬಹು ದೊಡ್ಡದು.‘ಗಚ್ಛನ್ ಪಿಪೀಲಿಕೋ ಯಾತಿ ಯೋಜನಾನಾಂ ಶತಾನ್ಯಪಿ | ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ’ ಎಂಬ ಮಾತಿದೆ.

ಸ್ವಾತಂತ್ರ್ಯ ಕದನಕ್ಕೆ ಮುನ್ನುಡಿ ಬರೆದ ಮಂಗಲ್‌ ಪಾಂಡೆ

ಸ್ವಾತಂತ್ರ್ಯ ಕದನಕ್ಕೆ ಮುನ್ನುಡಿ ಬರೆದ ಮಂಗಲ್‌ ಪಾಂಡೆ

ಮಂಗಲ್ ಪಾಂಡೆ 1849ರಲ್ಲಿ ಸುಮಾರು 22ನೇ ವಯಸ್ಸಿನಲ್ಲಿ, ಈ ಇಂಡಿಯಾ ಕಂಪನಿಯ ಸೇನೆಗೆ ಸೇರಿದರು. 34ನೇ ಬೆಂಗಾಲ್ ನೆಟಿವ್ ಇನ್-ಫ್ಯಾಂಟ್ರಿಯಲ್ಲಿ ಸಿಪಾಯಿಯಾಗಿ ಸೇವೆ ಸಲ್ಲಿಸಿದರು. ಅವರು ಬ್ರಿಟಿಷರ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರೂ, ಭಾರತೀಯ ಸೈನಿಕರ ಧಾರ್ಮಿಕ ಭಾವನೆಗಳಿಗೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡುವ ನೀತಿಗಳ ಬಗ್ಗೆ ಅಸಮಾಧಾನ ಹೆಚ್ಚುತ್ತಿತ್ತು.

ಕು.ಪಾರ್ಕ್ಷಿತಾ ಭರತನಾಟ್ಯ ವೈಭವ

ಕು.ಪಾರ್ಕ್ಷಿತಾ ಭರತನಾಟ್ಯ ವೈಭವ

ಗಂಭೀರ ನಾಟ ರಾಗ, ಆದಿ ತಾಳದಲ್ಲಿ ಆರಂಭ ವಾದ ಪ್ರಾರ್ಥನಾ ರೂಪದ ನೃತ್ಯ ನಟರಾಜನಿಗೆ, ಗುರುಗಳಿಗೆ ಮತ್ತು ರಸಿಕರಿಗೆ ವಂದನೆಯಾಗಿ, ಶುದ್ಧ ನೃತ್ತದ ಚಲನೆಗಳಲ್ಲಿ ದೇವರ ಸಾನ್ನಿಧ್ಯ ಮತ್ತು ಗುರು ಕೃಪೆ ಎದ್ದು ಕಾಣುತ್ತಿತ್ತು. ಅವರ ಲಯಬದ್ಧತೆ ಮತ್ತು ಶಾಂತ ಮುಖಭಾವ ಪ್ರಾರಂಭದಿಂದಲೇ ವೇದಿಕೆಗೆ ಒಂದು ಪವಿತ್ರತೆಯನ್ನು ತಂದಿತು.

ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಸಂಗೊಳ್ಳಿ ರಾಯಣ್ಣ

ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಸಂಗೊಳ್ಳಿ ರಾಯಣ್ಣ

ಪ್ರತಿ ವರ್ಷ ಆಗ 15 ಸ್ವಾತಂತ್ರ್ಯ ದಿನ ಬರುತ್ತದೆ. ನಾವು ಎಂದಿನಂತೆ ಗಾಂಧಿ- ನೆಹರು ನೆನೆಸಿಕೊಂಡು ಆ ದಿನವನ್ನು ಆಚರಿಸುತ್ತೇವೆ. ಸ್ವಾತಂತ್ರ್ಯಕ್ಕೆ ಪ್ರಾಣ ಬಲಿದಾನ ಮಾಡಿದ ಇನ್ನೆಷ್ಟೋ ಮಹಾ ಪುರುಷರನ್ನು ಪರಿಚಯಿಸುವುದಿರಲಿ, ನೆನಪಿಸಿಕೊಳ್ಳುವುದೂ ಇಲ್ಲ. ಇದು ನಮ್ಮ ದೌರ್ಬಾಗ್ಯ. ಆ ಸಾಲಿನಲ್ಲಿ ಮೊದಲಿಗೆ ನಿಲ್ಲುವ ವರು ದೇಶಕಂಡ ಅಪ್ರತಿಮ ವೀರ ಸಂಗೊಳ್ಳಿ ರಾಯಣ್ಣ.

ಮತ್ತೊಂದು ಜೀವಕ್ಕೆ ಬೆಳಕಾಗುವ ಮಹಾದಾನ

ಮತ್ತೊಂದು ಜೀವಕ್ಕೆ ಬೆಳಕಾಗುವ ಮಹಾದಾನ

ನಮ್ಮಲ್ಲಿ ಪ್ರತಿಯೊಬ್ಬರಿಗೂ ಬದುಕು ಅಮೂಲ್ಯ. ಆದರೆ ಕೆಲವೊಮ್ಮೆ ಹೃದಯ, ಮೂತ್ರಪಿಂಡ, ಯಕೃತ್ತು, ಶ್ವಾಸಕೋಶ ಸೇರಿದಂತೆ ಪ್ರಮುಖ ಅಂಗಗಳು ವೈಫಲ್ಯಗೊಂಡಾಗ ಚಿಕಿತ್ಸೆ ಮಾತ್ರ ಸಾಕಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿಯ ದಾನ ಮಾಡಿದ ಅಂಗವೇ ಹೊಸ ಬದುಕಿನ ದಾರಿಯಾಗಬಹುದು.

Vijay Kumar Column: ನಾಲಗೆಯಿಂದ ಆದ ಗಾಯಕ್ಕೆ ಔಷಧವಿಲ್ಲ

Vijay Kumar Column: ನಾಲಗೆಯಿಂದ ಆದ ಗಾಯಕ್ಕೆ ಔಷಧವಿಲ್ಲ

ಒಂದು ಬಾರಿ ಆಡಿದ ಮಾತನ್ನು ಮರಳಿ ಪಡೆಯಲು ಆಗುವುದಿಲ್ಲ. ಆದರೆ ನಾವು ಕೋಪದಲ್ಲಿ ಒಂದು ಕ್ಷಣ ಮಾತನಾಡಿದ ಮಾತು, ಆ ವ್ಯಕ್ತಿಯ ಮನಸ್ಸಿನಲ್ಲಿ ವರ್ಷಗಳ ವರೆಗೆ ಉಳಿದುಕೊಳ್ಳ ಬಹುದು. ಕಟುವಾಗಿ ಮಾತನಾಡುವುದು ಕೂಡ ಒಂದು ರೀತಿಯ ಹಿಂಸೆಯೇ. ಏಕೆಂದರೆ ಹಿಂಸೆ ಎಂದರೆ ಕೇವಲ ದೇಹಕ್ಕೆ ನೋವು ಕೊಡುವುದಲ್ಲ; ಮತ್ತೊಬ್ಬರ ಮನಸ್ಸಿಗೆ ನೋವುಂಟು ಮಾಡುವುದೂ ಹಿಂಸೆಯೇ.

Dr Someshwara Column: ತಟ್ಟೆಯಲ್ಲಿ ನಾರು, ಲೋಟದಲ್ಲಿ ನೀರು, ಕಾಲನಲ್ಲಿ ಚಲನೆ, ಮನಸ್ಸಿನಲ್ಲಿ..

ತಟ್ಟೆಯಲ್ಲಿ ನಾರು, ಲೋಟದಲ್ಲಿ ನೀರು, ಕಾಲನಲ್ಲಿ ಚಲನೆ, ಮನಸ್ಸಿನಲ್ಲಿ..

ನಾಲಿಗೆಗೆ ದಾಸರಾದ ನಮ್ಮ ಪೂರ್ವಜರು, ಶರೀರದ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಪರಿಪೂರ್ಣ ಆಹಾರ ಸೇವಿಸುವುದರ ಬದಲು, ರುಚಿಗೆ ಆದ್ಯತೆ ನೀಡಿದರು. ಮಲಬದ್ಧತೆಯ ಸಮಸ್ಯೆ ಮತ್ತಷ್ಟು ಪ್ರಬಲವಾಯಿತು. ಜೊತೆಗೆ ಮನುಷ್ಯ ಕೆಲವು ಆಲೋಚನೆಗಳಿಗೆ ಸಾರ್ವಕಾಲಿಕವಾಗಿ ಕಟ್ಟು ಬಿದ್ದದ್ದು ಸಮಸ್ಯೆಯನ್ನು ಉಲ್ಭಣಿಸಿತು. ಒಬ್ಬ ಆರೋಗ್ಯವಂತ ಮನುಷ್ಯ ಪ್ರತಿದಿನವೂ ನಿಗದಿತ ಸಮಯಕ್ಕೆ ಸರಿಯಾಗಿ ಮಲವಿಸರ್ಜನೆ ಮಾಡಲೇಬೇಕು ಎಂಬ ನಿಲುವು.

Harsha Hegde Column: ಯೋಚಿಸದೇ ಸುಮ್ಮನಿರುವುದೂ ಒಂದು ಭಾಗ್ಯ !

ಯೋಚಿಸದೇ ಸುಮ್ಮನಿರುವುದೂ ಒಂದು ಭಾಗ್ಯ !

ನಾವೆಲ್ಲರೂ ಯೋಚಿಸುವುದಕ್ಕೆ ಸರ್ವಥಾ ಅರ್ಹರು. ಪ್ರಕೃತಿ ನಮಗೆ ನೀಡಿರುವ ಅತ್ಯಂತ ಸುಂದರವಾದ ವರಗಳಲ್ಲಿ ಯೋಚನಾ ಶಕ್ತಿಯೂ ಒಂದು. ಕೇವಲ ಒಂದು ಸಂಗತಿಯ ಕುರಿಯಾದ ಯೋಚನೆಯಲ್ಲ, ಯೋಚನೆಗಳ ಜಾಲವನ್ನೇ ನಾವು ಸೃಷ್ಟಿಸಬವು. ಅಷ್ಟು ಅದ್ಭುತ ವಾದ ಶಕ್ತಿಯನ್ನು ನಿಸರ್ಗ ನಮ್ಮ ಪಾಲಿಗೆ ದಯ ಪಾಲಿಸಿದೆ.

Dr N Someshwara Column: ಎರಡು ಹುಚ್ಚುನಾಯಿಗಳು ಹಾಗೂ ಅವುಗಳ ನಿಯಂತ್ರಣ !

ಎರಡು ಹುಚ್ಚುನಾಯಿಗಳು ಹಾಗೂ ಅವುಗಳ ನಿಯಂತ್ರಣ !

ಒಂದು ಹುಚ್ಚು ನಾಯಿ ಅಟ್ಟಿಸಿಕೊಂಡು ಬಂದಿತು ಎಂದು ಭಾವಿಸೋಣ. ಅದು ಎಲ್ಲಿ ಕಚ್ಚಿ ಬಿಡುತ್ತದೆ ಯೋ ಎಂಬ ಭಯವು ನಮ್ಮನ್ನು ಕಾಡುತ್ತದೆ. ಈಗ ನಮ್ಮ ಮುಂದೆ ಇರುವುದು ಎರಡೇ ದಾರಿ. ಒಂದು ಕೆಳಗೆ ಬಿದ್ದಿರುವ ಕಲ್ಲನ್ನು ಕೈಗೆ ತೆಗೆದುಕೊಂಡು, ಧೈರ್ಯವಾಗಿ ನಾಯಿಯನ್ನು ಎದುರಿಸ ಬೇಕು. ಇಲ್ಲವೇ ನಾಯಿಯ ಬಾಯಿಗೆ ಸಿಗದ ಹಾಗೆ ಮಿಂಚಿನ ವೇಗದಲ್ಲಿ ಓಡಿ ಹೋಗಬೇಕು. ನಮ್ಮ ನಿರ್ಧಾರವನ್ನು ಕಾರ್ಯರೂಪಕ್ಕೆ ತರಬೇಕಾದರೆ ನಮ್ಮ ದೇಹದಲ್ಲಿ ಅಗತ್ಯ ಸಿದ್ಧತೆ ಗಳು ನಡೆಯಬೇಕಾಗುತ್ತದೆ.

ಗುರು: ಭಾರತೀಯ ಸಂಸ್ಕೃತಿಯ ಜೀವನಾಡಿ

ಗುರು: ಭಾರತೀಯ ಸಂಸ್ಕೃತಿಯ ಜೀವನಾಡಿ

ಗುರು-ಶಿಷ್ಯ ಪರಂಪರೆಯ ವೈಭವ ವೇದೋಪನಿಷತ್ತುಗಳಂತಹ ಅಮೂಲ್ಯ ಜ್ಞಾನಸಂಪತ್ತು ಸಾವಿರಾರು ವರ್ಷಗಳಿಂದ ಗುರು-ಶಿಷ್ಯ ಪರಂಪರೆಯ ಮೂಲಕವೇ ಸಂರಕ್ಷಿತವಾಗಿ ಇಂದಿಗೂ ಉಳಿದು ಬಂದಿದೆ. ವಿದ್ಯೆಯನ್ನು ಅರಸುವ ಶಿಷ್ಯನು ಗುರುಕುಲಕ್ಕೆ ತೆರಳಿ ಸೇವೆ, ಶ್ರದ್ಧೆ ಹಾಗೂ ಸಾಧನೆಯ ಮೂಲಕ ವಿದ್ಯೆಯನ್ನು ಸಂಪಾದಿಸಿ ಸಮಾಜಕ್ಕೆ ಹಂಚುತ್ತಿದ್ದ. ಮುಂದೆ ಗುರಿಯಿರ ಬೇಕು, ಹಿಂದೆ ಗುರು ವಿರಬೇಕು ಎಂಬ ನುಡಿ ಜೀವನದ ಮಹತ್ವದ ಸತ್ಯವನ್ನು ತಿಳಿಸುತ್ತದೆ.

Dr Maithri Bhat Column: ಕಾಡುವ ಹೆಪಟೈಟಿಸ್: ಜಾಗೃತಿಯೇ ಜೀವ ರಕ್ಷಕ

ಕಾಡುವ ಹೆಪಟೈಟಿಸ್: ಜಾಗೃತಿಯೇ ಜೀವ ರಕ್ಷಕ

ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದ ಕಾರಣ ಇದನ್ನು ಮೌನ ಹಂತಕ ಎಂದೇ ಕರೆಯಲಾಗುತ್ತದೆ. ಪ್ರತೀ ವರ್ಷ ಜುಲೈ 28ರಂದು ‘ವಿಶ್ವ ಹೆಪಟೈಟಿಸ್ ದಿನ’ವನ್ನು ಆಚರಿಸ ಲಾಗುತ್ತದೆ. ಈ ದಿನದ ಉದ್ದೇಶ ಕೇವಲ ಆಚರಣೆಯಷ್ಟೇ ಅಲ್ಲ; ಜನರಲ್ಲಿ ಅರಿವು ಮೂಡಿಸುವುದು, ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವುದು ಮತ್ತು ಸಮಯಕ್ಕೆ ಸರಿಯಾಗಿ ತಪಾಸಣೆ ಹಾಗೂ ಚಿಕಿತ್ಸೆಯ ಮಹತ್ವವನ್ನು ತಿಳಿಸುವುದಾಗಿದೆ.

Dr Sadhanashree Column: ಡಾಕ್ಟರ್, ಯಾವ ಮಾತ್ರೆ ಕೊಡ್ತೀರಾ?

Dr Sadhanashree Column: ಡಾಕ್ಟರ್, ಯಾವ ಮಾತ್ರೆ ಕೊಡ್ತೀರಾ?

ರೋಗಗಳ ಕಾರಣಗಳು ವಿಭಿನ್ನವಾಗಿದ್ದರೆ ಚಿಕಿತ್ಸೆಯೂ ವಿಭಿನ್ನವಾಗಬೇಕು. ಆಯುರ್ವೇದದಲ್ಲಿ ಚಿಕಿತ್ಸೆ ಯನ್ನು ಕೇವಲ ಔಷಧಿ ನೀಡುವುದೆಂದು ಪರಿಗಣಿಸಲಾಗುವುದಿಲ್ಲ. ರೋಗ ಯಾವ ಕಾರಣದಿಂದ ಉಂಟಾಗಿದೆ ಎಂಬುದನ್ನು ಸೂಕ್ಷ ವಾಗಿ ವಿಶ್ಲೇಷಿಸಿ, ಅದಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ಆಯ್ಕೆ ಮಾಡಬೇಕು ಎಂದು ಆಚಾರ್ಯರು ಹೇಳಿzರೆ. ಅದಕ್ಕಾಗಿಯೇ ಆಯುರ್ವೇದದಲ್ಲಿ ತ್ರಿವಿಧ ಚಿಕಿತ್ಸೆಯನ್ನು ವಿವರಿಸಲಾಗಿದೆ.

Adigas Yatra celebrates 32nd Anniversary: ಪ್ರವಾಸಿಗರ ಮೆಚ್ಚಿನ ಅಡಿಗಾಸ್‌ ಯಾತ್ರಾಗೆ 32ರ ಸಂಭ್ರಮ !

ಪ್ರವಾಸಿಗರ ಮೆಚ್ಚಿನ ಅಡಿಗಾಸ್‌ ಯಾತ್ರಾಗೆ 32ರ ಸಂಭ್ರಮ !

ಹೊಸ ಹೆಜ್ಜೆ ಹೊಸ ಹಾದಿ ಮುಂದೆ ವಿದ್ಯಾಭ್ಯಾಸ ಮುಗಿಸಿದ ಅಡಿಗರು ಹೊಸದೊಂದು ಪ್ರಯತ್ನಕ್ಕೆ ಮುಂದಾದರು. ಆ ಕಾಲಕ್ಕೆ ಉಡುಪಿಯವರ ವ್ಯವಹಾರ ವೆಂದರೆ ಹೋಟೆಲ್ ಉದ್ಯಮ ಅನ್ನುವ ಕಾಲಕ್ಕೆ ಎಲ್ಲರಿಗಿಂತ ಭಿನ್ನವಾಗಿ ಅಡಿಯಿಟ್ಟ ಅಡಿಗರು 1994ರಲ್ಲಿ ಟ್ರಾವೆಲ್ಸ್ ಉಧ್ಯಮವನ್ನು ಆರಂಭಿಸಿದರು. ಪ್ರವಾಸವೆಂದರೆ ಬರಿ ತೀರ್ಥಕ್ಷೇತ್ರಗಳಿಗೆ ಸೀಮಿತವಾಗಿದ್ದ ಕಾಲವದು. ಮೊದಲು, ನೇಪಾಳ ಪ್ರವಾಸಕ್ಕೆ ಉತ್ತರ ಕರ್ನಾಟಕ ದಿಂದ 22 ಜನರನ್ನು ಕರೆದೊಯ್ದಿದ್ದು ಒಂದು ಸಾಹಸ.

Loading...