Dr Vijay Darda Column: ಸೆಕ್ಸ್ ಮೂಲಕ ಭಾರತೀಯ ಸಂಸ್ಕೃತಿ ಮೇಲೆ ದಾಳಿ !
ಯೂಟ್ಯೂಬ್‌ನಂತಹ ಇಂಟರ್ನೆಟ್ ಪ್ಲಾಟ್-ರಮ್‌ಗಳು ತಮ್ಮಲ್ಲಿ ಪ್ರಸಾರವಾಗುವ ಕಂಟೆಂಟ್ ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯೂಟ್ಯೂಬ್‌ಗೆ ಹಾಗೂ ಅಲ್ಲಿ ಚಾನಲ್‌ಗಳನ್ನು ನಡೆಸು ವರಿಗೆ ಬೇಕಿರುವುದು ಹಿಟ್ಸ್, ಲೈಕ್, ಸಬ್‌ಸ್ಕ್ರೈಬರ್‌ಗಳು ಮತ್ತು ಶೇರ್‌ಗಳು. ಇವು ಗಳನ್ನು ಯಾರು ಚಾಚೂ ತಪ್ಪದೆ ಅನುಸರಿಸುತ್ತಾರೋ ಅವರ ಕಿಸೆ ಬೇಗ ತುಂಬುತ್ತದೆ!

ಹಿರಿಯ ಪತ್ರಕರ್ತ ಡಾ.ವಿಜಯ್ ದರಡಾ

ಸಂಗತ
ಡಾ.ವಿಜಯ್ ದರಡಾ
ನಮ್ಮ ಸಂಸ್ಕೃತಿಯ ಮೇಲೆ ಸೆಕ್ಸ್ ಮೂಲಕ ದಾಳಿ ನಡೆಯುತ್ತಿದೆ ಎಂದು ನಾನು ಹೇಳಿದರೆ ಅಯ್ಯೋ ಇವನೇನು ಬಡಬಡಿಸುತ್ತಿದ್ದಾನೆ ಎಂದು ನಿಮಗೆ ಅನ್ನಿಸಬಹುದು. ಅಥವಾ ಈ ಹೇಳಿಕೆ ನಿಮಗೆ ಆಶ್ಚರ್ಯವನ್ನೂ ತರಬಹುದು. ಕೆಲವರಿಗೆ ನನ್ನ ಮಾತು ಉತ್ಪ್ರೇಕ್ಷೆ ಯೆಂದು ತೋರಬಹುದು. ಆದರೆ ಇದು ವಾಸ್ತವ. ಖಂಡಿತ ಸೆಕ್ಸ್ ಮೂಲಕ ಭಾರತೀಯ ಸಂಸ್ಕೃತಿಯ ಮೇಲೆ ದಾಳಿ ನಡೆಯುತ್ತಿದೆ. ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾ ಆಡಿದ ನಾಚಿಕೆಗೇಡಿನ ಮಾತುಗಳೇ ಇದಕ್ಕೆ ಸಾಕ್ಷಿ. ಸಮಯ್ ರೈನಾ ಎಂಬುವರ ‘ಇಂಡಿ ಯಾಸ್ ಗಾಟ್ ಲೇಟೆಂಟ್’ ಹೆಸರಿನ ಯೂ ಟ್ಯೂಬ್ ಶೋನಲ್ಲಿ ರಣವೀರ್ ಅಲ್ಲಾಬಾದಿಯಾ ಆಡಿದ ಮಾತುಗಳು ದೊಡ್ಡ ಸಮಸ್ಯೆ ಯೊಂದರ ಮುಖವನ್ನು ಸಣ್ಣದಾಗಿ ಅನಾವರಣ ಮಾಡಿವೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಂದು ಇಂಟರ್ನೆಟ್ ಲೋಕವು ಅಶ್ಲೀಲತೆ, ಬೈಗುಳ, ಹಿಂಸಾಚಾರ, ಮಾನಸಿಕ ಕೊಳಕುತನವನ್ನು ಪ್ರದರ್ಶಿಸುವ ತಾಣವಾಗಿ ಮಾರ್ಪಟ್ಟಿ ರುವುದು ಎಲ್ಲರಿಗೂ ಗೊತ್ತಿದೆಯಷ್ಟೆ. ಮಾಹಿತಿ ಲೋಕದ ಕಸವನ್ನೆಲ್ಲಾ ತಂದು ಸುರಿಯುವ ಜಾಗ ಇಂಟರ್ನೆಟ್ ಆಗಿದೆ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವೊಂದು ಅಡಗಿದೆ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ನಮ್ಮ ಯುವಕರ ಮನಸ್ಸನ್ನು ಕೆಡಿಸುವ ಸಲುವಾಗಿಯೇ ಠಕ್ಕತನದಿಂದ ರೂಪಿಸಿದ ಕಾರ್ಯತಂತ್ರವೊಂದು ತೆರೆಯ ಮರೆಯಲ್ಲಿ ಕೆಲಸ ಮಾಡುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಾದಿದೆ.
ಇದನ್ನೂ ಓದಿ: Dr Vijay Darda Column: ಡೊನಾಲ್ಡ್ ಟ್ರಂಪ್ ದೌಲತ್ತಿನಿಂದ ಜಗತ್ತಿಗೆ ಆತಂಕ !
ಹಾಗಿದ್ದರೆ ಏನದು ಷಡ್ಯಂತ್ರ? ಅದನ್ನು ತಿಳಿದುಕೊಳ್ಳುವುದಕ್ಕೂ ಮುನ್ನ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋ ಬಗ್ಗೆ ತಿಳಿದುಕೊಳ್ಳೋಣ. ನಮಗೆಲ್ಲಾ ಜನಪ್ರಿಯ ಟೀವಿ ಶೋ ‘ಇಂಡಿಯಾ ಗಾಟ್ ಟ್ಯಾಲೆಂಟ್’ ಬಗ್ಗೆ ಗೊತ್ತು. ಅದರಲ್ಲಿರುವ ಟ್ಯಾಲೆಂಟ್ ಪದವನ್ನು ಲೇಟೆಂಟ್ ಎಂದು ಬದಲಾಯಿಸಿ ಸಮಯ್ ರೈನಾ ಎಂಬ ವ್ಯಕ್ತಿ ಬಹಳ ಚಾಣಾಕ್ಷತನದಿಂದ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಟ್ಯಾಲೆಂಟ್ ಅಂದರೆ ಎಲ್ಲರಿಗೂ ಗೊತ್ತು. ಅದರರ್ಥ ಬುದ್ಧಿವಂತಿಕೆ, ಜಾಣ್ಮೆ. ಆದರೆ ಲೇಟೆಂಟ್ ಪದದ ಅರ್ಥ ಎಲ್ಲರಿಗೂ ಗೊತ್ತಿಲ್ಲ.
ಲೇಟೆಂಟ್ ಅಂದರೆ ಗೌಪ್ಯವಾದ, ಮುಚ್ಚಿಟ್ಟ, ಅಡಗಿಸಿಟ್ಟ ಅಥವಾ ನಿಷ್ಕ್ರೀಯಗೊಂಡ ಎಂಬ ಅರ್ಥವಿದೆ. ಯಾವುದೋ ಒಂದು ವಸ್ತು ಅಥವಾ ಸಂಗತಿ ಅಸ್ತಿತ್ವದಲ್ಲಿದೆ, ಆದರೆ ಅದು ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬುದನ್ನು ಹೇಳುವಾಗ ಲೇಟೆಂಟ್ ಪದ ಬಳಸುತ್ತಾರೆ. ತುಂಬಾ ಬುದ್ಧಿವಂತಿಕೆಯಿಂದಲೇ ಸಮಯ್ ರೈನಾ ಈ ಪದ ಆಯ್ಕೆ ಮಾಡಿ ಕೊಂಡಿದ್ದಾರೆ. ಲೈಂಗಿಕತೆಗೆ ಸಂಬಂಧಿಸಿದ ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡಿದರೆ ಕಾನೂನಿನ ತೊಡಕಿಗೆ ಸಿಲುಕುವುದರಿಂದ ತಪ್ಪಿಸಿಕೊಳ್ಳುವುದಕ್ಕೆಂದೇ ಈ ದಾರಿಯನ್ನು ಅವರು ಹುಡುಕಿಕೊಂಡಿದ್ದಾರೆ.
ವಿವಾದ ಆದರೆ ಅಥವಾ ಆರೋಪ ಬಂದರೆ ‘ನಾವು ಚರ್ಚಿಸುವ ವಿಷಯಗಳು ಬಹಿರಂಗ ವಾಗಿ ಮಾತನಾಡುವಂಥದ್ದಲ್ಲದೇ ಇರಬಹುದು, ಆದರೆ ಅವು ಅಸ್ತಿತ್ವದಲ್ಲಿರುವ ವಿಚಾರ ಗಳೇ’ ಎಂದು ಅವರು ವಾದಿಸಬಹುದು! ಈ ಶೋನಲ್ಲಿ ಎಲ್ಲಾ ರೀತಿಯ ಅಶ್ಲೀಲ ವಿಚಾರ ಗಳನ್ನೂ ಚರ್ಚಿಸುತ್ತಾರೆ. ಮಹಿಳೆಯರ ದೇಹದ ಅಂಗಗಳು, ಪುರುಷರ ದೇಹದ ಅಂಗ ಗಳಿಂದ ಹಿಡಿದು, ಮಾಧ್ಯಮಗಳಲ್ಲಿ ಯಾವುದನ್ನು ಬಹಿರಂಗವಾಗಿ ಚರ್ಚಿಸುವುದಿಲ್ಲವೋ ಅವುಗಳ ಬಗ್ಗೆಯೆಲ್ಲಾ ಇಲ್ಲಿ ಚರ್ಚಿಸಲಾಗುತ್ತದೆ. ನಮ್ಮಂತಹ ಸಾಮಾನ್ಯ ಜನರಿಗೆ ಇದೆಲ್ಲವೂ ಅಶ್ಲೀಲ ಸಂಗತಿಗಳು. ಆದರೆ ರಣವೀರ್ ಅಲ್ಲಾಬಾದಿಯಾ ಹಾಗೂ ಸಮಯ್ ರೈನಾ ತರಹದ ವ್ಯಕ್ತಿಗಳಿಗೆ ಇದು ಹಣ ಮಾಡುವ ಮಾರ್ಗ.
ಅಶ್ಲೀಲ ಸರಕುಗಳನ್ನು ತೋರಿಸುವ ಅಥವಾ ಕೆಟ್ಟಾಕೊಳಕ ಮಾತುಗಳನ್ನಾಡುವ ಯೂಟ್ಯೂಬರ್‌ಗಳು ತಮ್ಮ ಪಾಡ್‌ಕಾಸ್ಟ್‌ಗಳ ಮೂಲಕ ಲಕ್ಷಾಂತರ ರೂಪಾಯಿ ದುಡಿಯು ತ್ತಾರೆ. ಇವರಿಗೆ ಲಕ್ಷಾಂತರ ಫಾಲೋವರ್‌ಗಳಿರುತ್ತಾರೆ. ಯೂಟ್ಯೂಬ್‌ನಂತಹ ಇಂಟರ್ನೆಟ್ ಪ್ಲಾಟ್ ಫಾರಮ್‌ಗಳು ತಮ್ಮಲ್ಲಿ ಪ್ರಸಾರವಾಗುವ ಕಂಟೆಂಟ್‌ಗಳ ಬಗ್ಗೆ ತಲೆಕೆಡಿಸಿ ಕೊಳ್ಳುವುದಿಲ್ಲ.
ಯೂಟ್ಯೂಬ್‌ಗೆ ಹಾಗೂ ಅಲ್ಲಿ ಚಾನಲ್‌ಗಳನ್ನು ನಡೆಸುವರಿಗೆ ಬೇಕಿರುವುದು ಹಿಟ್ಸ್, ಲೈಕ್, ಸಬ್‌ಸ್ಕ್ರೈಬರ್‌ಗಳು ಮತ್ತು ಶೇರ್‌ಗಳು. ಇವುಗಳನ್ನು ಯಾರು ಚಾಚೂ ತಪ್ಪದೆ ಅನುಸರಿಸು ತ್ತಾರೋ ಅವರ ಕಿಸೆ ಬೇಗ ತುಂಬುತ್ತದೆ! ಈ ಸಲ ವಾದ ಇನ್ನೂ ಕೋಪಕ್ಕೆ ಹೋಗಿದೆ. ವಾಸ್ತವವಾಗಿ ಇದು ಕೇವಲ ಕೊಳಕು ಭಾಷೆ ಅಥವಾ ದೇಹದ ಅಂಗಾಂಗಗಳ ಮತ್ತು ವೈಯಕ್ತಿಕ ಸಂಬಂಧಗಳ ಅಶ್ಲೀಲ ಚಿತ್ರಣವಾಗಿರಲಿಲ್ಲ.
ಶೋದಲ್ಲಿ ಭಾಗವಸಿದ್ದ ಅಲ್ಲಾಬಾದಿಯಾ ಒಬ್ಬ ಸ್ಪರ್ಧಿಯ ಬಳಿ ಒಂದು ಪ್ರಶ್ನೆ ಕೇಳುತ್ತಾನೆ. ಅದು ಎಷ್ಟು ತುಚ್ಛವೂ, ಅನಾಗರಿಕವೂ ಆಗಿತ್ತೆಂದರೆ, ನಾನದನ್ನು ಇಲ್ಲಿ ಬರೆಯುವುದಕ್ಕೂ ಹೋಗುವುದಿಲ್ಲ. ಏಕೆಂದರೆ ನಮ್ಮ ಆತ್ಮ ಇನ್ನೂ ಶುದ್ಧವಾಗಿದೆ. ಆದರೂ ಓದುಗರ ಮಾತಿ ಗಾಗಿ ನಾನದನ್ನು ಸ್ವಲ್ಪ ಸಭ್ಯ ಭಾಷೆಯಲ್ಲಿ ಹೇಳಬೇಕು. ಅವನು ಸ್ಪರ್ಧಿಯೊಬ್ಬನ ಬಳಿ, ‘ನಿನ್ನ ಅಪ್ಪ -ಅಮ್ಮ ಸೆಕ್ಸ್ ಮಾಡುವುದನ್ನೇ ಜೀವನಪೂರ್ತಿ ನೋಡುತ್ತಾ ಇರುತ್ತೀಯಾ ಅಥವಾ ಒಂದು ಸಲವಾದರೂ ಅದರಲ್ಲಿ ಖುದ್ದಾಗಿ ಭಾಗವಹಿಸಿ ಕೆಲಸ ಮುಗಿಸುತ್ತೀಯಾ’ ಎಂದು ಕೇಳುತ್ತಾನೆ.
ಅದಕ್ಕೆ ಸ್ಪರ್ಧಿ ನಗುತ್ತಾನೆ. ಆದರೆ ಅದನ್ನು ನೋಡಿದಾಗ ನನಗೆ ರಕ್ತ ಕುದಿಯಿತು! ಇದೆಂಥ ‘ಲೇಟೆಂಟ್’ ಚರ್ಚೆ? ಲೈಂಗಿಕ ಸಂಬಂಧ ಅಥವಾ ಲೈಂಗಿಕ ಕ್ರಿಯೆಯೆಂಬುದು ನಿಸರ್ಗ ಸಹಜ ಪ್ರಕ್ರಿಯೆ ಎಂಬುದು ಯಾರಿಗೆ ತಾನೇ ಗೊತ್ತಿಲ್ಲ? ಭೂಮಿಯಲ್ಲಿ ಜೀವ ವಿಕಾಸ ಮುಂದುವರೆಯಲು ಲೈಂಗಿಕ ಕ್ರಿಯೆ ನಡೆಯುತ್ತಿರಬೇಕು. ಹಾಗಂತ ಅದನ್ನು ಸಾರ್ವಜನಿಕ ವಾಗಿ ಮಾಡಲು ಅಥವಾ ಎಲ್ಲರೆದುರು ಅಶ್ಲೀಲವಾಗಿ ಚರ್ಚಿಸಲು ಸಾಧ್ಯವೇ? ಇಂದು ಇಂಟರ್ನೆಟ್‌ನಲ್ಲಿ ಬಹುತೇಕ ವೆಬ್‌ಸೈಟುಗಳು ಅಶ್ಲೀಲ ಹಾಗೂ ಅಸಭ್ಯ ಬರಹ ಮತ್ತು ಚಿತ್ರಗಳನ್ನು ಹೊಂದಿರುತ್ತವೆ. ಅಲ್ಲಿ ಕೆಲವರು ಬಳಸುವ ಭಾಷೆ ಎಷ್ಟು ಕೊಳಕಾಗಿರುತ್ತದೆ
ಅಂದರೆ ಅದನ್ನು ಕೇಳುವುದಕ್ಕೆ ಮುಜುಗರವಾಗುತ್ತದೆ. ಅದು ಸಮಾಜದ ಮೇಲೆ ಎಷ್ಟು ದುಷ್ಪರಿಣಾಮ ಬೀರುತ್ತಿದೆ ಗೊತ್ತಾ? ಸಣ್ಣ ಸಣ್ಣ ಹುಡುಗಿಯರು ಕೂಡ ಬಹಳ ಸಾಮಾನ್ಯ ಎಂಬಂತೆ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಪದಗಳನ್ನು ಮಾತಿನಲ್ಲಿ ಬಳಸತೊ ಡಗಿದ್ದಾರೆ. ದೇಹದ ಅಂಗಗಳ ಬಗ್ಗೆ ಚರ್ಚೆಯಂತೂ ಮೊಬೈಲ್ ಫೋನು, ಲ್ಯಾಪ್‌ಟಾಪ್ ಇತ್ಯಾದಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಗ್ಗೆ ನಡೆಯುವ ಚರ್ಚೆಯಂತೆ ರಾಜಾರೋಷವಾಗಿ ನಡೆಯುತ್ತಿದೆ. ಅದಕ್ಕೆ ತುಪ್ಪ ಸುರಿಯುವಂತೆ ಸ್ಟಾಂಡಪ್ ಕುಡಿಯನ್‌ಗಳು ಬರೀ ಸೆಕ್ಸ್‌ಗೆ ಸಂಬಂಧಿಸಿದ ಜೋಕ್‌ಗಳನ್ನೇ ಮಾಡಿ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.
ಅದನ್ನು ಕೇಳಲು ಜನರು ಸಾವಿರಾರು ರೂಪಾಯಿ ಟಿಕೆಟ್ ಖರೀದಿಸಿ ಹೋಗುತ್ತಿದ್ದಾರೆ. ಅಂತಹ ಶೋಗಳಿಗೆ ಹೋಗಲು ದುಡ್ಡಿಲ್ಲದವರಿಗೆ ಸೋಶಿಯಲ್ ಮೀಡಿಯಾ ಹಾಗೂ ಉಚಿತ ವೆಬ್‌ಸೈಟುಗಳಲ್ಲಿ ಕೊಳಕು ವಿಡಿಯೋಗಳು ದಂಡಿಯಾಗಿ ಸಿಗುತ್ತವೆ. ಈ ವಿಡಿಯೋ ಗಳಿಗೆ ಕೋಟ್ಯಂತರ ಲೈಕ್‌ಗಳು ಬರುತ್ತವೆ. ಅವುಗಳನ್ನು ಪೋಸ್ಟ್ ಮಾಡುವವರಿಗೆ ಯದ್ವಾತದ್ವಾ ಹಣ ಸಂಪಾದನೆಯಾಗುತ್ತಿದೆ!
ನಿಮಗೊಂದು ಷಯ ಗೊತ್ತೆ? ಒಬ್ಬ ಸಾಮಾನ್ಯ ಭಾರತೀಯ ಯುವಕ ಪ್ರತಿನಿತ್ಯ ಸರಾಸರಿ 2.5 ಗಂಟೆಯಷ್ಟು ಕಾಲವನ್ನು ವಿವಿಧ ಸೋಯಲ್ ಮೀಡಿಯಾಗಳಲ್ಲಿ ಕಳೆಯುತ್ತಾನೆ. ಅದರಲ್ಲಿ ಸರಾಸರಿ 40 ನಿಮಿಷವನ್ನು ರೀಲ್ಸ್ ನೋಡಲು ಬಳಸುತ್ತಾನೆ. ಎಲ್ಲಾ ರೀಲ್ಸ್ ಗಳೂ ಕೆಟ್ಟವು ಎಂದು ನಾನು ಹೇಳುವುದಿಲ್ಲ. ಒಳ್ಳೆಯ ಮಾಹಿತಿ ನೀಡುವ ರೀಲ್ಸ್‌ಗಳೂ ಇರುತ್ತವೆ. ಆದರೆ ಅವುಗಳಿಗಿಂತ ಹೆಚ್ಚಾಗಿ ಲೈಂಗಿಕತೆಯನ್ನು ಪ್ರಚೋದಿಸುವ ರೀಲ್ಸ್‌ಗಳೇ ಹರಿ ದಾಡುತ್ತವೆ.
ನಾನಿಲ್ಲಿ ಪೋರ್ನ್ ಸಿನಿಮಾಗಳನ್ನಾಗಲೀ ಅಥವಾ ಸೆಕ್ಸ್ ಕ್ಲಿಪ್‌ಗಳ ಬಗ್ಗೆಯಾಗಲೀ ಹೇಳು ತ್ತಿಲ್ಲ. ಪರೋಕ್ಷವಾಗಿ ಲೈಂಗಿಕತೆಯನ್ನು ವಿಜೃಂಭಿಸುವ ಕಂಟೆಂಟ್‌ಗಳ ಬಗ್ಗೆಯಷ್ಟೇ ಹೇಳುತ್ತಿದ್ದೇನೆ. ಇತ್ತೀಚೆಗೆ ಇಂಟರ್ನೆಟ್ ಉದ್ದಿಮೆಯ ಕುರಿತಾದ ಸಂಶೋಧನಾ ವರದಿ ಯೊಂದನ್ನು ಓದುತ್ತಿದ್ದೆ. ಅದರಲ್ಲಿ ಜಗತ್ತಿನಲ್ಲೇ ಭಾರತೀಯರು ಅತಿಹೆಚ್ಚು ಪೋರ್ನ್ ನೋಡುತ್ತಾರೆ ಎಂದು ಬರೆದಿತ್ತು!
ನನಗೆ ಶಾಕ್ ಆತು. ಎರಡನೇ ಸ್ಥಾನದಲ್ಲಿ ಅಮೆರಿಕ ಇದೆಯಂತೆ. ಈಗ ಕೆಲ ಭಾರತೀಯರು ಕೂಡ ಪೋರ್ನ್ ಸಿನಿಮಾಗಳನ್ನು ನಿರ್ಮಾಣ ಮಾಡಲು ಆರಂಭಿಸಿದ್ದಾರೆ. ಸಾಫ್ಟ್ ಪೋರ್ನ್ ಹೆಸರಿನಲ್ಲಿ ಲೈಂಗಿಕ ದೃಶ್ಯಗಳನ್ನು ಶೂಟ್ ಮಾಡುವ ಹಾಗೂ ಪ್ರಸಾರ ಮಾಡು ವ ಉದ್ದಿಮೆಯ ಜೊತೆಗೆ ಚಿತ್ರರಂಗದ ಕೆಲ ಪ್ರಸಿದ್ಧ ನಿರ್ಮಾಪಕ ಮತ್ತು ನಿರ್ದೇಶಕರ ಹೆಸರುಗಳು ಕೂಡ ಕೇಳಿಬರುತ್ತಿವೆ. ಹಳೆಯ ಕಾಲದಲ್ಲೂ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದ ಲೇಖನ, ಕತೆ, ಚಿತ್ರಗಳನ್ನು ಒಳಗೊಂಡ ಮ್ಯಾಗಜೀನ್‌ಗಳು ಬರುತ್ತಿದ್ದವು ಅಲ್ಲವೇ? ಅವೇ ಈಗ ವಿಡಿಯೋದ ರೂಪ ಪಡೆದುಕೊಂಡಿವೆ ಎಂದು ಕೆಲವರು ವಾದಿಸ ಬಹುದು. ಆದರೆ ಈ ವಾದವನ್ನು ನಾನು ಒಪ್ಪುವುದಿಲ್ಲ.
ಆ ಲೈಂಗಿಕ ಪುಸ್ತಕಗಳನ್ನು ಜನರು ಖಾಸಗಿಯಾಗಿ ಓದುತ್ತಿದ್ದರು ಮತ್ತು ಅವು ಖಾಸಗಿ ಯಾಗಿಯೇ ಪ್ರಸಾರವಾಗುತ್ತಿದ್ದವು. ಅವು ಯಾವುದೇ ರೀತಿಯಲ್ಲೂ ನಮ್ಮ ಸಂಸ್ಕೃ ತಿಯ ಮೇಲೆ ದಾಳಿ ನಡೆಸುತ್ತಿರಲಿಲ್ಲ. ಆದರೆ ಈಗಿನ ಬ್ಲೂಫಿಲಂಗಳು, ಲೈಂಗಿಕತೆಯನ್ನು ಮೆರೆಸುವ ರೀಲ್ಸ್‌ಗಳು, ಯೂಟ್ಯೂಬ್‌ನಲ್ಲಿ ಅಶ್ಲೀಲತೆಯನ್ನು ಹರಡುವ ಕಂಟೆಂಟ್‌ಗಳು ನಮ್ಮ ಸಮಾಜ ಹಾಗೂ ಸಂಸ್ಕೃತಿಯ ಮೇಲೆ ನೇರವಾಗಿ ಬಹುದೊಡ್ಡ ದುಷ್ಪರಿಣಾಮ ಬೀರುತ್ತಿವೆ.
ಇದಕ್ಕೆಲ್ಲ ಯಾರನ್ನು ದೂರಬೇಕು? ಗೊತ್ತಿಲ್ಲ. ಬಹುತೇಕ ಜನರು ಸೋಶಿಯಲ್ ಮೀಡಿ ಯಾಗಳನ್ನೂ ಸಾಮಾನ್ಯ ಮೀಡಿಯಾಗಳ ಸಾಲಿನಲ್ಲೇ ಸೇರಿಸಿ ದೂಷಿಸುತ್ತಾರೆ. ಅದರಿಂದ ಏನಾಗಿದೆ ಅಂದರೆ, ಸಾಂಪ್ರದಾಯಿಕ ಮೀಡಿಯಾಗಳಂತೆಯೇ ಜನರು ಸೋಶಿಯಲ್ ಮೀಡಿಯಾವನ್ನೂ ಪರಿಗಣಿಸಲು ಆರಂಭಿಸಿದ್ದಾರೆ.
ಅಲ್ಲಾಬಾದಿಯಾನ ಶೋನಲ್ಲಿ ಕೆಲ ಪ್ರಮುಖ ರಾಜಕಾರಣಿಗಳು ಕೂಡ ಈ ಹಿಂದೆ ಕಾಣಿಸಿ ಕೊಂಡಿದ್ದರು. ಆ ಎಪಿಸೋಡ್‌ಗಳಲ್ಲಿ ಲೈಂಗಿಕತೆಯ ವಿಚಾರಗಳು ಇರಲಿಲ್ಲ ಎಂಬು ದೇನೋ ನಿಜ. ಆದರೆ, ಪ್ರಶ್ನೆಯೇನೆಂದರೆ, ಈ ರೀತಿಯ ವಿಡಿಯೋಗಳನ್ನು ಮಾಡು ವವರಿಗೆ ಪ್ರೋತ್ಸಾಹ ನೀಡಿ, ಅವರನ್ನು ಮುಖ್ಯವಾನಿಯ ಕಂಟೆಂಟ್ ಕ್ರಿಯೇಟರ್‌ಗಳು ಎಂದು ಪರಿಗಣಿಸುವುದು ಏಕೆ? ಒಂದು ಹಳೆಯ ಮಾತಿದೆ.
‘ದೇಶವನ್ನು ನಾಶ ಮಾಡಬೇಕು ಅಂದರೆ ಮೊದಲು ಅದರ ಸಂಸ್ಕೃತಿಯನ್ನು ನಾಶ ಮಾಡಿ.’ ಈಗ ಆಗುತ್ತಿರುವುದು ಅದೇ.ಇತ್ತೀಚೆಗೆ ನಾನು ಗಮನಿಸಿದ ಇನ್ನೂ ಒಂದು ವರದಿಯ ಬಗ್ಗೆ ಇಲ್ಲಿ ಹೇಳಬೇಕು. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ತನ್ನೊಳಗೇ ಇನ್ನೊಂದು ಭಾಗ ವನ್ನು ಸ್ಥಾಪಿಸಿದೆ. ಅದರ ಹೆಸರು ಇಂಟರ್‌ನ್ಯೂಸ್ ನೆಟ್‌ವರ್ಕ್. ಅದು 9000ಕ್ಕೂ ಹೆಚ್ಚು ಸೋಕಾಲ್ಡ್ ಪತ್ರಕರ್ತರನ್ನು 30 ದೇಶಗಳಲ್ಲಿ ತರಬೇತುಗೊಳಿಸಿದೆ. ಕಳೆದ ನಾಲ್ಕು ವರ್ಷ ಗಳಿಂದ ‘ಪ್ರಜಾಪ್ರಭುತ್ವವನ್ನು ಜೀವಂತವಾಗಿಡುವ’ ಹೆಸರಿನಲ್ಲಿ ಇದು ನಡೆಯು ತ್ತಿದೆ. ಈ ಪತ್ರಕರ್ತರಲ್ಲಿ 7500ಜನರು ಭಾರತೀಯರು!
ಅವರಿಗೆ ಸಾಕಷ್ಟು ಹಣ ಹರಿದುಬರುತ್ತಿದೆ. ಈ ವಿಷಯವನ್ನು ಕೇಳಿದಾಗ ನಿಮ್ಮ ಮನಸ್ಸಿ ನಲ್ಲಿ ಅನುಮಾನ ಮೂಡುತ್ತದೆಯೋ ಇಲ್ಲವೋ? ಭಾರತದ ಪತ್ರಕರ್ತರಿಗೆ ಅಮೆರಿಕ ಏಕೆ ಹಣ ಕೊಡಬೇಕು? ಭಾರತೀಯ ಸಂಸ್ಕೃತಿಯ ಮೇಲೆ ಸೆಕ್ಸ್ ವಿಷಯವನ್ನು ಬಳಸಿ ದಾಳಿ ನಡೆಸಲು ಯಾರು ಮುಂದಾಗಿದ್ದಾರೆ ಎಂಬುದು ಈಗ ತಿಳಿಯಿತೇ? ಭಾರತ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು! ಭಾರತದ ಬೆಳವಣಿಗೆಯನ್ನು ನೋಡಿ ಖಂಡಿತ ಕೆಲ ದೇಶಗಳಿಗೆ ಕಸಿವಿಸಿ ಆಗಿರುತ್ತದೆ.
ನಮ್ಮಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ದೇಶಿ ಪ್ರಜೆಗಳು ಬಂದು ಹಿಂದೂ ಧರ್ಮವನ್ನು ಸ್ವೀಕರಿಸುತ್ತಿರುವುದನ್ನು ನೋಡಿ ಯಾರ‍್ಯಾರಿಗೋ ಉರಿದಿರುತ್ತದೆ. ಹೀಗಾಗಿ ಭಾರತೀಯ ಸಂಸ್ಕೃತಿಯ ಘನತೆಯನ್ನು ಕೆಡಿಸುವುದರಲ್ಲಿ ಯಾರಿಗೆ ಏನೇನು ಲಾಭಗಳಿವೆಯೋ ಯಾರಿಗೆ ಗೊತ್ತು. ಅದು ಅವರ ಹಣೆಬರಹ. ಆದರೆ ನಾವು ಸುಮ್ಮನಿರಲು ಆದೀತೇ? ಇದನ್ನೆಲ್ಲ ರೋಧಿಸಿ ಗೆಲ್ಲಬೇಕು. ಆದರೆ ನಾವು ಮಾಡುತ್ತಿರುವುದು ಏನು? ಕುರುಡಾಗಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಾ ನಮ್ಮ ದೇಶದ ಸಂಸ್ಕೃತಿಯನ್ನು ದಹಿಸಿ ಮೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದೇವೆ. ದೇವರೇ ಕಾಪಾಡಬೇಕು.