ವೈದ್ಯರ ಭೇಟಿ ಅತೀ ಅವಶ್ಯಕ. ನಮ್ಮ ಬಾಯಿ ಎನ್ನುವುದು ‘ಫಿಸಿಷಿಯನ್ಸ್ ಮಿರರ್’ ಎಂದು ಕರೆಯ ಲಾಗುತ್ತದೆ. ಲಿವರ್ ಸಮಸ್ಯೆ, ರಕ್ತ ಹೀನತೆ, ಜಾಂಡಿಸ್, ಪ್ಲೇಟ್ಲೆಟ್ ಕೊರತೆ, ಡೆಂಗ್ಯುಜ್ವರ, ರಕ್ತದ ಕ್ಯಾನ್ಸರ್, ವಿಟಮಿನ್ ಸಿ ಕೊರತೆ, ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ, ಏಡ್ಸ್, ಹೆಪಟೈಟಿಸ್, ಮಧುಮೇಹ ರೋಗ, ಅಧಿಕ ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಶಿಲೀಂದ್ರಗಳ ಸೋಂಕು, ಗ್ಯಾಸ್ಟ್ರಿಕ್ ಸಮಸ್ಯೆ, ಶ್ವಾಸ ಕೋಶದ ಕೀವು, ರಕ್ತದ ಕಾಯಿಲೆಗಳು, ಔಷಧಿಗಳ ಅಡ್ಡ ಪರಿಣಾಮ, ಅಪಸ್ಮಾರ ರೋಗ, ವೈರಾಣು ಸೋಂ ಕು, ರಸದೂತಗಳ ಏರುಪೇರು, ನಿದ್ರಾಹೀನತೆ, ಚಿಕುನ್ಗುನ್ಯ ಜ್ವರ, ಥೈರಾಯ್ಡ್ ಸಮಸ್ಯೆ ಹೀಗೆ ಹತ್ತಾರು ರೋಗಗಳು ನಮ್ಮ ಬಾಯಿಯೊಳಗೆ ಬೇರೆ ಬೇರೆ ರೂಪಗಳಲ್ಲಿ ಪ್ರಕಟಗೊಳ್ಳುತ್ತದೆ.